Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಗಡ್ಡ ಬೆಳೆಸಿದ ಹರ್ನಾಮ್ ಕೌರ್ ಯಾರು..? ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಆಗೋದ್ಯಾಕೆ?
ಈ ಹಿಂದೆ ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಪ್ರಾಚಿ ನಿಗಮ್ ಪ್ರಕರಣ ನಿಮಗೆ ನೆನಪಿದ್ಯಾ? ಆಕೆ ಪರೀಕ್ಷೆಯಲ್ಲಿ ಟಾಪರ್ ಆಗಿರುವಾಗ ಆಕೆಯ ಫೋಟೋ ಭಾರೀ ವೈರಲ್ ಆಗಿತ್ತು. ಆಕೆಯ ಮುಖದ ಮೇಲಿನ ಕೂದಲಿನ ಕಾರಣಕ್ಕೆ ಆಕೆ ಸುದ್ದಿಯಾದಳು., ಕಾಎ 98.50ರಷ್ಟು ಅಂಕಗಳಿಸಿದ್ದ ಕುರಿತಾಗಿ ಯಾರು ಸಹ ಮಾತನಾಡಲಿಲ್ಲ. ಬದಲಿಗೆ ಆಕೆಯ ಮುಖದಲ್ಲಿನ ಕೂದಲಿನ ಕುರಿತಾಗಿ ಎಲ್ಲರೂ ಟ್ರೋಲ್ ಮಾಡಿದ್ದರು. ಇದಾದ ಬಳಿಕ ಆಕೆಯ ಸುದ್ದಿ ಭಾರೀ ವೈರಲ್ ಸಹ ಆಗಿತ್ತು. ಅಪಹಾಸ್ಯ ಮಾಡಲಾಗಿತ್ತು.
ಆದ್ರೆ ಇಲ್ಲೊಬ್ಬಾಕೆ ತನ್ನ ಗಡ್ಡದ ಕಾರಣದಿಂದಾಗಿಯೇ ಫೇಮಸ್ ಆಗಿದ್ದಾಳೆ. ಹಾಗೆ ಆಕೆ ಇದನ್ನು ಗೌರವದಿಂದ ಹೇಳಿಕೊಳ್ಳುವ ಮೂಲಕ ಎಲ್ಲರಲ್ಲು ಜಾಗೃತಿ ಮೂಡಿಸಲು ಮುಂದಾಗಿರುವುದು ಮೆಚ್ಚುಗೆಗೆ ಕಾರಣವಾಗಿದೆ. ಯುಕೆ ಮೂಲದ ಹರ್ನಾಮ್ ಕೌರ್ ವಿಶೇಷ ವೈದ್ಯಕೀಯ ಸಮಸ್ಯೆಯಿಂದ ಬಳಲಿದ್ದಾರೆ. ಹೀಗಾಗಿ ಅವರ ಮುಖದಲ್ಲಿ ಪುರುಷರಂತೆ ಗಡ್ಡ ಬಂದಿರುವುದರಿಂದ ಸುದ್ದಿಯಾಗಿದ್ದಾರೆ.

ಹಾಗಾದ್ರೆ ಮುಖದಲ್ಲಿ ಕೂದಲು ಬೆಳೆಯುವ ಈ ಸಮಸ್ಯೆಗೆ ಕಾರಣವೇನು?, ಹರ್ನಾಮ್ ಕೌರ್‌ಗೆ ಕಾಡಿದ ಸಮಸ್ಯೆ ಆದರೂ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹರ್ನಾಮ್ ಕೌರ್ ತನ್ನ 11ನೇ ವಯಸ್ಸಿನಲ್ಲಿ ಅಪಸಾಮಾನ್ಯ ಋತುಚಕ್ರಕ್ಕೆ ಒಳಗಾಗಬೇಕಾಯಿತಂತೆ. ಬಳಿಕ ಆಕೆ ವೈದ್ಯಕೀಯ ಚಿಕಿತ್ಸೆಗೆ ಒಳಗಾದಾಗ ಆಕೆಗೆ ಪಿಸಿಒಎಸ್ ಎಂಬ ಸಮಸ್ಯೆ ಇರುವುದು ದೃಢವಾಯಿತು. ಅಂದರೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದು ಕರೆಯುವ ಈ ಸಮಸ್ಯೆಗೆ ಆಕೆ ಗುರಿಯಾಗಿರುವುದು ಕಂಡುಬಂದಿತು. ಇದು ಅತ್ಯಧಿಕ ಕೂದಲು ಬೆಳವಣಿಗೆಯ ಸಮಸ್ಯೆ ತರುವ ವಿಭಿನ್ನ ಹಾಗೂ ಅಪರೂಪದ ಕಾಯಿಲೆ ಎಂದು ತಿಳಿದುಬಂದಿದೆ.
ಆರಂಭದಲ್ಲಿ ಕೌರ್ ಸಹ ಅಪಹಾಸ್ಯಕ್ಕೊಳಗಾಗುತ್ತಿದ್ದಳು, ಆದ್ರೆ ಅದೆಲ್ಲವನ್ನು ಆಕೆ ಸಹಿಸಿಕೊಂಡಳು, ಹಾಗೆ ಹಲವು ಬಾರಿ ಆಕೆಗೆ ಬೆದರಿಕೆ ಕರೆಗಳು ಬಂದವು. ಆಕೆ ಹೊರಬರುವಾಗ ಗಡ್ಡವನ್ನು ಮರೆ ಮಾಚಬೇಕಾಯಿತು. ಮುಖದ ತುಂಬ ಬಟ್ಟೆ ಹಾಕಬೇಕಾಯಿತು. ಆದ್ರೆ ಒಮ್ಮೆ ಆಕೆ ಅದನೆಲ್ಲಾ ಮೀರಿ ನಿಲ್ಲುವ ನಿರ್ಧಾರ ಮಾಡಿದಳು. ಆಕೆ ಸಮಾಜದ ಎದುರಿಗೆ ತನ್ನ ಉದ್ದವಾದ ಗಡ್ಡವನ್ನು ಬಿಟ್ಟು ಓಡಾಡಲು ಹಾಗೆ ಅದನ್ನು ಎಂದಿಗೂ ಶೇವ್ ಮಾಡದೆ ಇರಲು ನಿರ್ಧರಿಸಿದಳು.
ಪಿಸಿಓಎಸ್ ಅನಾರೋಗ್ಯ ಸಮಸ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪಣ ತೊಟ್ಟಿದ್ದಾಳೆ. ಹಲವು ಕಡೆಗಳಲ್ಲಿ ಹತ್ತಾರು ವೇದಿಕೆ ಮೇಲೆ ತನ್ನ ಮುಕ್ತ ಸಮಸ್ಯೆ ಹಂಚಿಕೊಂಡಿದ್ದಾಳೆ. ಕೌರ್ 2020 ರಲ್ಲಿ ಗ್ಲಾಮರ್ ಯುಕೆ ಮುಖಪುಟದಲ್ಲಿಯೂ ಕಾಣಿಸಿಕೊಂಡಿದ್ದಾಳೆ.
ಹಿರ್ಸುಟಿಸಮ್ ಎನ್ನುವುದು ಪುರುಷರು ಸಾಮಾನ್ಯವಾಗಿ ಕೂದಲು ಬೆಳೆಯುವ ಪ್ರದೇಶಗಳಲ್ಲಿ, ಮುಖ, ಎದೆ, ಹೊಟ್ಟೆ ಮತ್ತು ಬೆನ್ನಿನಂತಹ ಭಾಗದಲ್ಲಿ ಮಹಿಳೆಯಲ್ಲಿ ಕೂದಲು ಬೆಳೆಯುವ ಅಪಸಾಮಾನ್ಯ ಬೆಳವಣಿಗೆಯಾಗಿದೆ. ಮಹಿಳೆಯರಲ್ಲಿ ಈ ಸಮಸ್ಯೆಗೆ ಹಾರ್ಮೋನ್‌ನಲ್ಲಿನ ಅಸಮತೋಲನವೇ ಕಾರಣವಾಗಲಿದೆ. ಆದರಲ್ಲೂ ಪುರುಷರ ಆಂಡ್ರೋಜಿನ್ ಹಾರ್ಮೋನ್ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬಂದರೆ ಈ ಸಮಸ್ಯೆ ಕಾಣಿಸಲಿದೆ. ಇದಿಷ್ಟೇ ಅಲ್ಲ
ಇದು ಆನುವಂಶಿಕವಾಗಿರಬಹುದು ಅಥವಾ ಸ್ಟೀರಾಯ್ಡ್‌ಗಳು, ಹಾರ್ಮೋನ್ ಚಿಕಿತ್ಸೆಗಳು ಕೆಲವು ಔಷಧಿಗಳಿಂದ ಉಂಟಾಗಬಹುದು.
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ರೋಗದಿಂದ ಯಾವ ಸಮಸ್ಯೆ ಉಂಟಾಗಬಹುದು
ಬಂಜೆತನ
ಮೊಡವೆ
ತೂಕ ಹೆಚ್ಚಾಗುವುದು
ಅನಿಯಂತ್ರಿತ ಬೊಜ್ಜು
ಇನ್ಸುಲಿನ್ ಪ್ರತಿರೋಧ
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಲಕ್ಷಣವೇನು?
ಎದೆ, ಹೊಟ್ಟೆ, ಬೆನ್ನು, ಮುಖದ ಮೇಲೆ ಕೂದಲು ಬೆಳೆಯುವುದು
ಕೂದಲು ಉದುರಲು ಆರಂಭವಾಗುವುದು
ಋತುಚಕ್ರದಲ್ಲಿ ಏರುಪೇರು ಸಾಧ್ಯತೆ
ಕುತ್ತಿಗೆ ಅಥವಾ ತೋಳು ಸಂಧಿಯಲ್ಲಿ ಹೆಚ್ಚುವರಿ ಚರ್ಮದ ತುಂಡು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications