Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪಪ್ಪಾಯ ಯಾವಾಗಲು ಅಮೃತದಂತಲ್ಲ..! ವಿಷವಾಗಿಯೂ ಕಾಡಬಹುದು..!
ಹಣ್ಣುಗಳು ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ನೀವೆಲ್ಲಾ ತಿಳಿದಿರಬಹುದು. ಒಂದು ಸೇಬು ಹಣ್ಣು ಸವಿಯುವುದು ವೈದರನ್ನು ದೂರ ಇಡಲು ಸಹಕಾರಿಯಾಗಲಿದೆ ಎಂಬೆಲ್ಲಾ ಮಾತುಗಳ ನೀವು ಕೇಳಿರಬಹುದು. ಹಾಗೆ ಪ್ರತಿಯೊಂದು ಹಣ್ಣುಗಳಲ್ಲು ಒಂದೊಂದು ರೀತಿಯ ವಿಟಮಿನ್, ಪೋಷಕಾಂಶಗಳು, ಆರೋಗ್ಯಕರ ಅಂಶಗಳ ನಾವು ನೋಡಬಹುದು. ನಿಮ್ಮ ರೋಗ ನಿರೋಧಕ ಶಕ್ತಿಯಿಂದ ಹಿಡಿದು ಕೆಲವು ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳ ನಿವಾರಣೆಗೆ ಹಣ್ಣುಗಳೆ ಪರಿಹಾರ ನೀಡುವುದು ಕೂಡ ನಾವು ಗಮನಿಸಬಹುದು.
ಇನ್ನು ರೋಗ ನಿರೋಧಕ ಶಕ್ತಿ ಹಾಗೆ ಪ್ಲೇಟ್‌ಲೇಟ್ಸ್‌ಗಳ ಹಚ್ಚಿಸಿಕೊಳ್ಳಬೇಕು ಎಂದರೆ ಪಪ್ಪಾಯಿ ಹಣ್ಣುಗಳ ಸೇವನೆ ಮಾಡಬೇಕು. ಅದರ ಸಿಹಿಯಾದ ರುಚಿಯ ಜೊತೆಗೆ ಅದ್ಭುತ ಆರೋಗ್ಯಕರ ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ವರ್ಷದ ಎಲ್ಲಾ ದಿನಗಳಲ್ಲೂ ನಾವು ಪಪ್ಪಾಯ ನೋಡಬಹುದು. ಪಪ್ಪಾಯದಲ್ಲಿ ಹೆಚ್ಚಾಗಿ ನಾವು ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿರುವುದು ನೋಡಬಹುದು. ಅದ್ರಲ್ಲೂ ರೋಗ ನಿರೋಧಕ ಅಂಶಕ್ಕೆ ಪೂರಕವಾಗಿದೆ.

ಹಾಗೆ ಇದರಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ನಮ್ಮ ದೇಹವನ್ನು ಆರೋಗ್ಯಕರವಾಗಿಡುತ್ತದೆ. ಇದರಲ್ಲಿರುವ ವಿಶೇಷ ಕಿಣ್ವ ಪಪೈನ್ ಜೀರ್ಣಾಂಗ ವ್ಯವಸ್ಥೆಗೆ ವರದಾನದಂತೆ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿಯೇ ಅನೇಕ ಜನರು ತಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯಿಯನ್ನು ಸೇರಿಸುತ್ತಾರೆ. ಆದರೆ ಇಷ್ಟೊಂದು ಉತ್ತಮ ಅಂಶ ಹೊಂದಿದ್ದರೂ ಕೂಡ ಪಪ್ಪಾಯ ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮ ಬೀರುವ ಹಣ್ಣು ಕೂಡ ಹೌದು.
ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಂತಹ ಪ್ರತಿಷ್ಠಿತ ಸಂಸ್ಥೆಗಳ ಸಂಶೋಧನೆಯು ಪಪ್ಪಾಯಿಯನ್ನು, ವಿಶೇಷವಾಗಿ ಹಸಿಯಾಗಿ ಅಥವಾ ಹೆಚ್ಚಾಗಿ ಸೇವಿಸುವುದರಿಂದ ಹಲವರಿಗೆ ಗಂಭೀರ ಆರೋಗ್ಯ ಸಮಸ್ಯೆಗಳ ಉಂಟು ಮಾಡಲಿದೆ ಎಂದು ಎಚ್ಚರಿಸುತ್ತದೆ. ಹಾಗಾದ್ರೆ ಯಾವೆಲ್ಲಾ ಅಪಾಯ ಬರಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಭಯ
ನಿಮಗೆ ಈಗಾಗಲೇ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಇದ್ದರೆ ಪಪ್ಪಾಯ ಸೇವನೆಯನ್ನು ಬಹಳ ನಿಯಮಿತವಾಗಿ ಮಾಡಬೇಕಿದೆ. ಹಸಿ ಪಪ್ಪಾಯದಲ್ಲಿನ ವಿಟಮಿನ್ ಸಿ ದೇಹದಲ್ಲಿ ಆಕ್ಸಲೇಟ್ ಆಗಿ ಬದಲಾಗುತ್ತದೆ. ಆಕ್ಸಲೆಟ್ ಜೊತೆಗೆ ಕ್ಯಾಲ್ಸಿಯಂ ಸೇರಿದರೆ ಇದು ಕಲ್ಲುಗಳು ಮತ್ತಷ್ಟು ಗಟ್ಟಿಯಾಗಲು ಸಹಕಾರಿಯಾಗುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಆದ್ದರಿಂದ ಅದು ಎಷ್ಟೇ ಒಳ್ಳೆಯದಾಗಿದ್ದರೂ, ಅದನ್ನು ಮಿತವಾಗಿ ತಿನ್ನುವುದು ಉತ್ತಮ.
ಅಲರ್ಜಿಯ ಸಮಸ್ಯೆಗಳು
ಕೆಲವರು ಪಪ್ಪಾಯಿ ತಿಂದ ತಕ್ಷಣ ಸೀನುವಿಕೆ, ತುರಿಕೆ ಅಥವಾ ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದು ಪಪ್ಪಾಯಿಯಲ್ಲಿರುವ ಚಿಟಿನೇಸ್ ಎಂಬ ಕಿಣ್ವದಿಂದಾಗಿ. ವಿಶೇಷವಾಗಿ ಲ್ಯಾಟೆಕ್ಸ್ ಅಲರ್ಜಿ ಇರುವವರು ಹಸಿ ಪಪ್ಪಾಯಿಯನ್ನು ತಿನ್ನಬಾರದು. ಇದು ಕೆಲವೊಮ್ಮೆ ತೀವ್ರ ಅಲರ್ಜಿಗೆ ಕಾರಣವಾಗಬಹುದು ಮತ್ತು ವಾಯುಮಾರ್ಗಗಳಲ್ಲಿ ಊತವನ್ನು ಉಂಟುಮಾಡಬಹುದು.
ಗರ್ಭಿಣಿಯರಿಗೆ ಅತ್ಯಂತ ಅಪಾಯಕಾರಿ
ಗರ್ಭಾವಸ್ಥೆಯಲ್ಲಿ ಮಹಿಳೆಯರು ಹಸಿ ಪಪ್ಪಾಯಿಯಿಂದ ದೂರವಿದ್ದಷ್ಟೂ ಒಳ್ಳೆಯದು. ಹಸಿ ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಮತ್ತು ಪಪೈನ್ ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುತ್ತದೆ. ಇದು ಅಕಾಲಿಕ ಹೆರಿಗೆ ನೋವು ಮತ್ತು ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು. ಅದಕ್ಕಾಗಿಯೇ ಗರ್ಭಿಣಿಯರು ಪಪ್ಪಾಯಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಥೈರಾಯ್ಡ್ ಕಾರ್ಯದ ಮೇಲೆ ಅಡ್ಡ ಪರಿಣಾಮ
ಹೈಪೋಥೈರಾಯ್ಡಿಸಮ್‌ನಂತಹ ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಹಸಿ ಪಪ್ಪಾಯಿ ಸೇವಿಸುವಾಗ ಜಾಗರೂಕರಾಗಿರಬೇಕು. ಪಪ್ಪಾಯಿಯಲ್ಲಿರುವ ಕೆಲವು ಅಂಶಗಳು ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿರಲಿದೆ. ಇದು ದೇಹದಲ್ಲಿ ಅಯೋಡಿನ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಯಾಸ ಮತ್ತು ತೂಕ ಹೆಚ್ಚಾಗುವಂತಹ ಸಮಸ್ಯೆಗಳಿಗೆ ಕಾರಣವಾಗಲಿದೆ.



Click it and Unblock the Notifications
