Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಿಳುಪು ಹೆಚ್ಚಾಗಿ ಹೋಗುತ್ತಿದೆಯೇ? ಯಾವಾಗ ಸಹಜ, ಯಾವಾಗಲ್ಲ?
ಬಿಳುಪು ಹೋಗುವುದು ಸಹಜ, ಆದರೆ ಸ್ವಲ್ಪ ಹೆಚ್ಚೇ ಬಿಳುಪು ಹೋಗುತ್ತಿದೆ ಎಂದರೆ ಅದು ಸಹಜವೇ? ಬಿಳುಪು ಅಧಿಕ ಹೋಗುತ್ತಿರುವುದು ಏನಾದರು ಆರೋಗ್ಯ ಸಮಸ್ಯೆಯ ಲಕ್ಷಣವೇ? ಏಕೆ ಬಿಳುಪು ಹೆಚ್ಚು ಹೋಗುತ್ತದೆ, ಯಾವಾಗ ಈ ಸಮಸ್ಯೆಯನ್ನು ಮಹಿಳೆಯರು ನಿರ್ಲಕ್ಷ್ಯ ಮಾಡಬಾರದು ಎಂದು ನೋಡೋಣ ಬನ್ನಿ:

ಸಾಮಾನ್ಯವಾಗಿ ಬಿಳುಪು ಯಾವಾಗ ಹೆಚ್ಚಾಗಿ ಹೋಗುತ್ತದೆ?
ಓವ್ಯೂಲೇಷನ್
ಓವ್ಯೂಲೇಷನ್ ಅಂದರೆ ಅಂಡೋತ್ಪತ್ತಿಯ ಸಮಯ, ಮುಟ್ಟಾದ 13-14 ದಿನದಲ್ಲಿ ಓವ್ಯೂಲೇಷನ್ ಉಂಟಾಗುವುದು. ಸಂತಾನೋತ್ಪತ್ತಿಗೆ ಈ ಓವ್ಯೂಲೇಷನ್ ತುಂಬಾನೇ ಮುಖ್ಯ, ಈ ಸಮಯದಲ್ಲಿ ಮಾತ್ರ ಸ್ತ್ರೀ ಅಂಡಾಶಯದಲ್ಲಿ ಅಂಡಾಣುಗಳು ಉತ್ಪತ್ತಿಯಾಗುವುದು. ಅಂಡಾಣು ಉತ್ಪತ್ತಿಯಾದಾಗ ಈ ಅಂಡಾಣುವಿನ ಜೊತೆಗೆ ವೀರ್ಯಾಣು ಸಂಪರ್ಕಕ್ಕೆ ಬಂದಾಗ ಗರ್ಭಧಾರಣೆಯಾಗುವುದು. ಈ ಓವ್ಯೂಲೇಷನ್ ಸಮಯದಲ್ಲಿ ಬಿಳುಪು ಹೆಚ್ಚು ಹೋಗುತ್ತದೆ.
ಗರ್ಭಧಾರಣೆಯ ಸಮಯದಲ್ಲಿ
ಗರ್ಭಧಾರಣೆಯ ಸಮಯದಲ್ಲಿ ತುಂಬಾನೇ ಬಿಳುಪು ಹೋಗುವುದು, ಈ ರೀತಿ ಬಿಳುಪು ಹೋದರೆ ಭಯಪಡಬೇಕಾಗಿಲ್ಲ, ಮಗುವಿನ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಒಳಉಡುಪು ಬದಲಾಯಿಸಬೇಕಾಗುತ್ತದೆ, ಅಷ್ಟೊಂದು ಬಿಳುಪು ಹೋಗುವುದು. ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ಈ ರೀತಿ ಕಂಡು ಬರುವುದು.
ಲೈಂಗಿಕ ಆಸಕ್ತಿ ಉಂಟಾದಾಗ
ಲೈಂಗಿಕ ಕ್ರಿಯೆ ವೇಳೆ ದ್ರವ ರೂಪದಲ್ಲಿ ಬಿಳುಪು ಹೋಗುವುದು, ಇದು ಲ್ಯೂಬ್ರಿಕಾಂಟ್ ರೀತಿ ಇರುವುದರಿಂದ ಲೈಂಗಿಕ ಕ್ರಿಯೆ ವೇಳೆ ನೀವು ಕಡಿಮೆಯಾಗುವುದು.
ಗರ್ಭನಿರೋಧಕ ವಿಧಾನ ಅನುಸರಿಸಿದಾಗ
ಗರ್ಭ ನಿರೋಧಕ ವಿಧಾನ ಅನುಸರಿಸಿದಾಗ ಕೂಡ ಬಿಳುಪು ಹೋಗುವುದು.
ಮೆನೋಪಾಸ್ ಹಂತದಲ್ಲಿ
ಮೆನೋಪಾಸ್ ಹಂತದಲ್ಲಿ ಬಿಳುಪು ಹೋಗುವುದು ಸಹಜ. ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಈ ರೀತಿಯಾಗುವುದು. 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಈ ರೀತಿ ಕಂಡು ಬರುವುದು.
ಯಾವ ರೀತಿ ಬಿಳುಪು ಹೋದರೆ ಅದು ಸಹಜವಲ್ಲ
ಬಿಳುಪು ಚೀಸ್ ರೀತಿ ಹೋದಾಗ, ಬಿಳುಪು ದುರ್ವಾಸನೆ ಬೀರಿದಾಗ , ಆ ಭಾಗದಲ್ಲಿ ತುಂಬಾನೇ ತುರಿಕೆ ಉಂಟಾದಾಗ ಯೀಸ್ಟ್ ಸೋಂಕಿನಿಂದಾಗಿ ಆ ರೀತಿಯಾಗುವುದು. ಈ ಬಗೆಯ ಸಮಸ್ಯೆ ಕಂಡು ಬಂದಾಗ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆ ಪಡೆಯಿರಿ.
ಬ್ಯಾಕ್ಟಿರಿಯಾ ಸೋಂಕು
ಕಂದು ಬಣ್ಣದಲ್ಲಿ ಬಿಳುಪು ಹೋದರೆ ಅದು ಬ್ಯಾಕ್ಟಿರಿಯಾ ಸೋಂಕಿನಿಂದಾಗಿ ಆ ರೀತಿಯಾಗುವುದು. ಬ್ಯಾಕ್ಟಿರಿಯಾ ಸೋಂಕು ಉಂಟಾದಾಗ ತುಂಬಾ ತುರಿಕೆ ಕಂಡು ಬರುತ್ತದೆ, ಬಿಳುಪು ದುರ್ವಾಸನೆಯನ್ನು ಬೀರುವುದು. ಈ ರೀತಿಯಾದಾಗ ಆಂಟಿಬಯೋಟಿಕ್ಸ್ metronidazole ಅಥವಾ clindamycin ಮುಂತಾದ ಔಷಧಿಗಳನ್ನು ಸೂಚಿಸಲಾಗುವುದು. ನಿಮ್ಮ ಬಿಳುಪಿನಲ್ಲಿ ಈ ರೀತಿ ಏನಾದರು ವ್ಯತ್ಯಾಸ ಕಂಡು ಬಂದರೆ ನೀವು ವೈದ್ಯರನ್ನು ಭೇಟಿಯಾಗಲು ಹಿಂದೇಉ ಹಾಕಬೇಡಿ. ಈ ರೀತಿಯಾದಾಗ ಹಾಗೆಯೇ ಗುಣಮುಖವಾಗಲ್ಲ, ನೀವು ಸೂಕ್ತ ಔಷಧಿ ತೆಗೆದುಕೊಳ್ಳಬೇಕಾಗುವುದು.
ಲೈಂಗಿಕ ಸೋಂಕು
ಲೈಂಗಿಕ ಸೋಂಕು ಹರಡಿದಾಗ ಕೂಡ ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಉಂಟಾಗುವುದು. ಬಿಳುಪು ದುರ್ವಾಸನೆಯಿಂದ ಕೂಡಿರುತ್ತದೆ. ಈ ರೀತಿ ಸೋಂಕು ಉಂಟಾದಾಗ ಬಿಳುಪು ಕಂದು ಅಥವಾ ಹಸುಇರು ಬಣ್ಣದಲ್ಲಿ ಹೋಗುತ್ತದೆ. ಲೈಂಗಿಕ ಸೋಂಕು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಉಂಟಾಗುವುದು. ಲೈಂಗಿಕ ಸೋಂಕು ಉಂಟಾದಾಗ ಆ ಭಾಗದಲ್ಲಿ ತುರಿಕೆ, ಗುಳ್ಳೆಗಳು ಏಳುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಹಾರ್ಮೋನ್‌ಗಳ ಅಸಮತೋಲನದಿಂದ ಕೂಡ ಬಿಳುಪು ಹೆಚ್ಚಾಗಿ ಹೋಗುವುದು
ಹಾಗಾಗಿ ಬಿಳುಪು ಹೆಚ್ಚಾಗಿ ಹೋಗುತ್ತಿದ್ದರೆ ಆ ಬಿಳುಪು ದುರ್ವಾಸನೆ ಬೀರುತ್ತಿದ್ದರೆ, ಬಣ್ಣದಲ್ಲಿ ವ್ಯತ್ಯಾಸವಿದ್ದರೆ, ತುರಿಕೆ ಈ ಬಗೆಯ ಸಮಸ್ಯೆವಿದ್ದರೆ ಮಾತ್ರ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
