Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಯಾವ ಇಡ್ಲಿ ಕ್ಯಾನ್ಸರ್‌ಕಾರಕ? ಹೋಟೆಲ್‌ನಿಂದ ಇಡ್ಲಿ ಸೇವಿಸುವುದಾದರೆ ಈ ಬಗ್ಗೆ ನಿರ್ಲಕ್ಷ್ಯ ಬೇಡ
ಇಡ್ಲಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಹುಷಾರಿಲ್ಲದಿದ್ದಾಗ ವೈದ್ಯರು ಇಡ್ಲಿ ತಿನ್ನುವ ಸಲಹೆ ನೀಡುತ್ತಾರೆ, ಮಕ್ಕಳು ಆಹಾರ ತಿನ್ನಲಾರಂಭಿಸಿದಾಗ ಮಕ್ಕಳಿಗೆ ಇಡ್ಲಿ ಕೊಡುತ್ತೇವೆ, ಅಲ್ಲದೆ ಹೊರಗಡೆ ಕರೆದುಕೊಂಡು ಹೋದಾಗ ಅವರ ಹೊಟ್ಟೆ ತುಂಬಲು ನಾವು ಇಡ್ಲಿ ಕೊಟ್ಟರೆ ಒಳ್ಳೆಯದು ಎಂದು ಯೋಚಿಸುತ್ತೇವೆ, ಆದರೆ ಈ ಇಡ್ಲಿ ನಾವು ಎಲ್ಲಿಂದ ಖರೀದಿ ಮಾಡಿ ತಿನ್ನುತ್ತಿದ್ದೇವೆ ಎಂದು ಗಮನಿಸದೆ ಹೋದರೆ ಕ್ಯಾನ್ಸರ್‌ನಂಥ ಮಾರಕಕಾಯಿಲೆ ಬರುವುದು.

ಬಹುತೇಕ ಹೋಟೆಲ್‌ಗಳಲ್ಲಿ ತಯಾರಾಗುತ್ತಿರುವ ಆಹಾರ ಆರೋಗ್ಯಕರವಲ್ಲ
ಎಷ್ಟೋ ಜನ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಹೋಟೆಲ್‌ಗೆ ಹೋಗಿ ಇಡ್ಲಿ ಸೇವಿಸಿ ಹೋಗುತ್ತಾರೆ. ಇಡ್ಲಿ ತಿಂದರೆ ಕಡಿಮೆ ಹಣದಲ್ಲಿ ಹೊಟ್ಟೆ ತುಂಬುವುದು ಅಲ್ಲದೆ ನಮ್ಮ ಮನಸ್ಸಿಗೆ ಇಡ್ಲಿ ಅಲ್ವಾ ಹೆಚ್ಚು ಎಣ್ಣೆಯಂಶವಿಲ್ಲ, ಆರೋಗ್ಯಕರ ಆಹಾರ ತಿನ್ನುತ್ತಿದ್ದೇವೆ ಎಂಬ ಸಮಧಾನ. ಆದರೆ ಆಘಾತಕಾರಿ ಅಂಶವೆಂದರೆ ನಾವು ತಿನ್ನುವ ಆಹಾರ ಆರೋಗ್ಯಕರವಾಗಿ ತಯಾರಿಯಾಗುತ್ತಿದೆಯೇ ಎಂದು ಖಾತರಿಪಡಿಸಿಕೊಳ್ಳುವುದು ಒಳ್ಳೆಯದು. ಬೆಂಗಳೂರಿನಲ್ಲಿಯೇ ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ ಆರೋಗ್ಯಕರವಾಗಿ ತಯಾರಿಯಾಗುವ ಬದಲಿಗೆ ಅನಾರೋಗ್ಯಕರವಾಗಿ, ಕ್ಯಾನ್ಸರ್‌ಕಾರಕವಾಗಿ ತಯಾರಾಗುತ್ತಿದೆ.
ಪ್ಲಾಸ್ಟಿಕ್‌ನಲ್ಲಿ ಇಡ್ಲಿ ರೆಡಿಯಾಗುತ್ತಿದೆ
ಬಹುತೇಕ ಹೋಟೆಲ್‌ಗಳಲ್ಲಿ ಇಡ್ಲಿ ತಟ್ಟೆಗೆ ಪ್ಲಾಸ್ಟಿಕ್ ಹಾಕಿ ಅದರ ಮಲೆ ಇಡ್ಲಿ ಹಿಟ್ಟು ಹಾಕಿ ಬೇಯಿಸುತ್ತಿರುವುದನ್ನು ಕಾಣಬಹುದು. ಪ್ಲಾಸ್ಟಿಕ್ ಹಾಕಿ ಬೇಯಿಸುವುದರಿಂದ ಹೋಟೆಲ್‌ನವರಿಗೆ ಇಡ್ಲಿ ತೆಗೆಯಲು ಸುಲಭವಾಗುವುದು, ಅಲ್ಲದೆ ಇಡ್ಲಿ ಹಿಟ್ಟು ತಟ್ಟೆಗೆ ಅಂಟುವುದಿಲ್ಲ ಹಾಗಾಗಿ ತಟ್ಟೆ ತೊಳೆಯವುದು ಕೂಡ ಸುಲಭ, ಈ ಕಾರಣಕ್ಕೆ ಇಡ್ಲಿಯನ್ನು ಪ್ಲಾಸ್ಟಿಕ್‌ನಲ್ಲಿ ಮಾಡಲಾಗುತ್ತಿದೆ. ಹೀಗೆ ಪ್ಲಾಸ್ಟಿಕ್‌ನಲ್ಲಿ ಬೆಂದ ಇಡ್ಲಿಯನ್ನು ತಿನ್ನುತ್ತಿದ್ದರೆ ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕ ದೇಹವನ್ನು ಸೇರುತ್ತದೆ, ಇಂಥ ಆಹಾರ ನಮ್ಮ ಶರೀರದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೆಂಗಳೂರಿನ ಹೋಟೆಲ್‌ಗಳು ಸುರಕ್ಷಿತವಲ್ಲ
ಬೆಂಗಳೂರಿನ ಹಲವು ಹೋಟೆಲ್‌ಗಳಿಂದ ಇಡ್ಲಿಯನ್ನು ತಂದು ಪರೀಕ್ಷೆಗೆ ಒಳಪಡಿಸಲಾಯ್ತು, ಆವಾಗ 35ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಅಂಶ ಬೆಳಕಿಗೆ ಬಂದಿದೆ.
ಇಡ್ಲಿ, ದೋಸೆ ಪ್ಯಾಕ್ ಮಾಡಲು ಕೂಡ ಈ ಪ್ಲಾಸ್ಟಿಕ್ ಬಳಸುತ್ತಾರೆ
ಎಷ್ಟೋ ಕಡೆ ದೋಸೆ, ಇಡ್ಲಿ ಪ್ಯಾಕ್ ಮಾಡುವಾಗ ಪ್ಲಾಸ್ಟಿಕ್ ಇಟ್ಟು ಅದರ ಮೇಲೆ ಬಿಸಿ- ಬಿಸಿ ಇಡ್ಲಿ , ದೋಸೆ ಇಟ್ಟು ಪಾರ್ಸಲ್ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ನಲ್ಲಿ ಸುತ್ತಿ ತಂದ ಆಹಾರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಬೃಹತ್ ಬೆಂಗಳೂರು ಹೋಟೆಲ್‌ನ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಸುಬ್ರಹ್ಮಣ್ಯ ಹೊಳ್ಳ ಎಸ್ ನಗರದ ಶೇ. 90ರಷ್ಟು ಹೋಟೆಲ್‌ಗಳು ಪ್ಲಾಸ್ಟಿಕ್ ಬಳಕೆ ಮಾಡುತ್ತಿಲ್ಲ, ಕೆಲ ಚಿಕ್ಕ-ಪುಟ್ಟ ಹೋಟೆಲ್‌ಗಳಷ್ಟೇ ಪ್ಲಾಸ್ಟಿಕ್ ಬಳಕೆ ಮಾಡುತ್ತಿವೆ ಎಂದಿದ್ದಾರೆ.
ಈಗ ಬಹುತೇಕ ಹೋಟೆಲ್‌ಗಳಲ್ಲಿ ಹಿಂದಿನಂತೆ ಬಟ್ಟೆ ಬಳಕೆ ಮಾಡುತ್ತಿದ್ದಾರೆ. ಬಟ್ಟೆ ಕೂಡ ಅಷ್ಟೇ ಶುಚಿಯಾದ ಬಟ್ಟೆ ಬಳಸಬೇಕು. ಬಳಸಿದ ಬಟ್ಟೆಯನ್ನು ಚೆನ್ನಾಗಿ ತೊಳೆದು ಒಣಗಿಸಬೇಕಾಗುತ್ತದೆ. ಬಟ್ಟೆ ಸರಿಯಾಗಿ ತೊಳೆಯದೆ ಇದ್ದರೆ ಅಂಥ ಬಟ್ಟೆ ಮೇಲೆ ಮಾಡಿದ ಇಡ್ಲಿಯಿಂದ ಕೂಡ ಆರೋಗ್ಯ ಸಮಸ್ಯೆ ಉಂಟಾಗುವುದು.
ಹೋಟೆಲ್‌ನವರು ಗ್ರಾಹಕರ ಆರೋಗ್ಯ ಸುರಕ್ಷತೆ ಕಡೆಗೆ ಎಷ್ಟು ಗಮನಹರಿಸುತ್ತಾರೆ ಎಂಬುವುದು ಕೂಡ ಮುಖ್ಯವಾಗಿರುತ್ತದೆ
ಹೋಟೆಲ್‌ನವರು ಬ್ಯುಸ್‌ನೆಸ್ ಬಗ್ಗೆ ಮಾತ್ರವಲ್ಲ, ಆಹಾರ ಸುರಕ್ಷತೆ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಬಟ್ಟೆಗಿಂತ ಬಾಳೆ ಎಲೆ ಬಳಸಿ ಮಾಡಿದರೆ ಇನ್ನೂ ಒಳ್ಳೆಯದು, ಬಾಳೆ ಎಲೆಯಾದರೆ ತಟ್ಟೆ ತೊಳೆಯುವುದು ಕೂಡ ಸುಲಭವಾಗುವುದು, ಆರೋಗ್ಯಕ್ಕೂ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
