Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೋಳಿ ಹಬ್ಬದಂದು ಕಣ್ಣಿನೊಳಗೆ ಬಣ್ಣ ಬಿದ್ದರೆ ತಕ್ಷಣ ಏನು ಮಾಡಬೇಕು..?
ದೇಶದ ಮೂಲೆ ಮೂಲೆಯಲ್ಲೂ ಹೋಳಿ ರಂಗು ಹರಡುತ್ತಿದೆ. ಹೋಳಿ ಅಂದರೇನೇ ಅಲ್ಲಿ ಬಣ್ಣಗಳೂ ಇರಲೇಬೇಕು. ಬಣ್ಣದ ಓಕುಳಿಯಲ್ಲಿ ಅಂದು ಜನ ಮಿಂದೇಳುತ್ತಾರೆ. ಮನೆ, ಆಫಿಸ್, ಕಾಲೇಜು ಸೇರಿ ರಸ್ತೆ ರಸ್ತೆಯಲ್ಲೂ ಹೋಳಿ ಆಡುತ್ತಾರೆ. ಹೀಗೆ ಬಣ್ಣಗಳನ್ನು ಒಬ್ಬರ ಮೇಲೆ ಮತ್ತೊಬ್ಬರು ಎರಚಿ ಹಬ್ಬ ಆಚರಿಸುತ್ತಾರೆ.
ಆದರೆ ಈ ಬಣ್ಣಗಳು ಅಷ್ಟೊಂದು ಒಳ್ಳೆಯದಲ್ಲ. ಹೀಗಾಗಿ ಇತ್ತೀಚಿಗೆ ನೈಸರ್ಗಿಕ ಬಣ್ಣ ಬಳಸುವಂತೆಯೇ ಪ್ರೇರೇಪಿಸಲಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ಬಣ್ಣಗಳೇ ತುಂಬಿ ಹೋಗಿವೆ. ಹೀಗಿರುವಾಗ ನಮ್ಮ ಆರೋಗ್ಯದ ದೃಷ್ಟಿಯಿಂದ ಹೋಳಿಯನ್ನು ಅತ್ಯಂತ ಜಾಗರೂಕತೆಯಿಂದ ಆಡುವುದು ಉತ್ತಮ.

ಇನ್ನು ಬಣ್ಣ ಎರಚುವಾಗ ಬಣ್ಣವು ನಮ್ಮ ಕಣ್ಣಿಗೆ ಬೀಳಬಹುದು. ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗ ಎಂದರೆ ಅದು ಕಣ್ಣು. ಕಣ್ಣಿಗೆ ರಾಸಾಯನಿಕ ಬಿದ್ದ ಕೂಡಲೆ ಪ್ರತಿಕ್ರಿಯೆ ಆರಂಭವಾಗುತ್ತದೆ. ಕಣ್ಣಿ ಬಿಡಲಾಗದ ಸ್ಥಿತಿ ತಲುಪುತ್ತೇವೆ. ಹಾಗಾದರೆ ಹೋಳಿ ಆಡುವಾಗ ಆಕಸ್ಮಿಕವಾಗಿ ಬಣ್ಣ ಕಣ್ಣಿನ ಒಳಗೆ ಹೋದರೆ ಏನು ಮಾಡಬೇಕು? ಕಣ್ಣಿಗೆ ಬಣ್ಣ ಬಿದ್ದ ತಕ್ಷಣ ಯಾವ ಪ್ರಥಮ ಚಿಕಿತ್ಸೆ ಮಾಡಬೇಕು ಎನ್ನುವುದನ್ನು ನಾವಿಂದು ನೋಡೋಣ.
ಹೋಳಿ ಬಣ್ಣಗಳು ಏಕೆ ಹಾನಿಕಾರಕ?
ಹೋಳಿಯನ್ನು ಪುರಾತನ ಕಾಲದಲ್ಲಿ ನೈಸರ್ಗಿಕ ಬಣ್ಣಗಳೊಂದಿಗೆ ಆಡಲಾಗುತ್ತಿತ್ತು, ಹೂವುಗಳಿಂದ ಹೊರತೆಗೆಯಲಾಗುತ್ತದೆ, ಇದು ಚರ್ಮದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳು ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ, ಅವುಗಳು ಮಾನವ ಚರ್ಮದ ಮೇಲೆ ಬಳಸಲು ಯೋಗ್ಯವೆಂದು ಪ್ರಮಾಣೀಕರಿಸಲ್ಪಟ್ಟಿಲ್ಲ. ಈ ಬಣ್ಣಗಳಲ್ಲಿ ಹೆಚ್ಚಿನವು, ವಿಶೇಷವಾಗಿ ಒಣ ಬಣ್ಣದ ಪುಡಿ, ಗುಲಾಲ್, ಸೀಸದ ಆಕ್ಸೈಡ್, ತಾಮ್ರದ ಸಲ್ಫೇಟ್, ಭಾರ ಲೋಹಗಳು, ಆಮ್ಲಗಳು, ಕ್ಷಾರಗಳು, ಮೈಕಾ, ಕಲ್ನಾರು, ಟಾಲ್ಕ್, ಸಿಲಿಕಾ ಮತ್ತು ಪುಡಿಮಾಡಿದ ಗಾಜಿನಂತಹ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ. ಎಲ್ಲಾ ರಾಸಾಯನಿಕಗಳು ಕಣ್ಣಿಗೆ ಬಿದ್ದರೆ, ಅಲರ್ಜಿಯ ಪ್ರತಿಕ್ರಿಯೆಗಳು, ಕಣ್ಣಿನ ಕಿರಿಕಿರಿ ಮತ್ತು ಕುರುಡುತನವನ್ನು ಉಂಟುಮಾಡಬಹುದು.
ಹೋಳಿ ಬಣ್ಣ ಕಣ್ಣಿನೊಳಗೆ ಹೋದರೆ ಏನು ಮಾಡಬೇಕು?
ಹೋಳಿ ಆಡುವಾಗ ಕಣ್ಣಿಗೆ ಗ್ಲಾಸ್ ಹಾಕಿಕೊಳ್ಳುವುದು ಉತ್ತಮ ಇದರಿಂದ ನಿಮ್ಮ ಕಣ್ಣಿಗೆ ರಕ್ಷಣೆ ಸಿಗುತ್ತದೆ. ಒಂದು ವೇಳೆ ನಿಮ್ಮ ಕಣ್ಣಿಗೆ ಬಣ್ಣ ಹೋದರೆ ತಕ್ಷಣವೇ ಶುದ್ಧವಾದ ನೀರಿನಿಂದ ತೊಳೆಯಿರಿ. ಹಾಗೆ ಕಣ್ಣನ್ನು ಉಜ್ಜಿಕೊಳ್ಳುವುದನ್ನು ಮಾಡಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ ಶುದ್ಧವಾದ ನೀರಿನಲ್ಲಿ ಕಣ್ಣನ್ನು ಅದ್ದಿ ಹಾಗೆ 2 ನಿಮಿಷ ಬಿಡಿ. ಬಳಿಕ ಸೌಮ್ಯವಾದ ಬಟ್ಟೆಯಿಂದ ಕಣ್ಣನ್ನು ಒರೆಸಿಕೊಳ್ಳಿ.
ಐ ಡ್ರಾಪ್ ಬಳಸಿ
ನಿಮ್ಮ ಕಣ್ಣಿಗೆ ರಾಸಾಯನಿಕ ಯುಕ್ತ ಬಣ್ಣ ಹೋದರೆ ಕಣ್ಣನ್ನು ತೊಳೆದ ಬಳಿಕ ವೈದ್ಯರ ಸಲಹೆ ಮೇರೆಗೆ ಕಣ್ಣಿಗೆ ಐ ಡ್ರಾಪ್ ಬಿಡುವುದು ಉತ್ತಮ. ಇದರಿಂದ ಕಣ್ಣಿನ ನರಕೋಶಗಳಲ್ಲಿ ಸೇರಿರುವ ರಾಸಾಯನಿಕ ಆಚೆ ಬರಲಿದೆ. ಅಲ್ಲದೆ ಉರಿ, ಹಾನಿಯೂ ತಪ್ಪುತ್ತದೆ. ಆದರೆ ನೀವು ಯಾವ ಡ್ರಾಪ್ ಬಳಸಬೇಕು ಎಂಬುದನ್ನು ವೈದ್ಯರು ನಿರ್ಧರಿಸಲಿ.
ವೈದ್ಯರ ಬಳಿ ತೆರಳಿ
ನಿಮ್ಮ ಕಣ್ಣಿಗೆ ಬಣ್ಣ ಹೋಗಿದ್ದು, ಈ ಮೇಲೆ ಹೇಳಲಾದ ಎಲ್ಲಾ ಕ್ರಮಗಳನ್ನು ನೀವು ಮಾಡಿದ ಬಳಿಕವೂ ಕಣ್ಣಿನಲ್ಲಿ ಉರಿ, ನೀರು ಬರುವುದು ಇಲ್ಲವೆ ಕಿರಿಕಿರಿ ಉಂಟಾಗುವ ಅನುಭವವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಏಕೆಂದರೆ ನಿಮ್ಮ ಕಣ್ಣಿನಲ್ಲಿರುವ ಕೋಶಗಳಿಗೆ ಹಾನಿಯಾಗುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಆದರೆ ಕಣ್ಣಿನಲ್ಲಿ ಬಣ್ಣ ಹೋಗಿದ್ದರೂ ಆ ಕಡೆ ನಿರ್ಲಕ್ಷ್ಯ ಮಾಡಿ ಮತ್ತಷ್ಟು ಹೋಳಿಯಲ್ಲಿ ಭಾಗಯಾಗಬೇಡಿ, ಇದು ನಿಮ್ಮಲ್ಲಿ ಶಾಶ್ವತ ಕುರುಡುತನಕ್ಕೆ ಕಾರಣವಾಗಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
