Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಪರೂಪದಲ್ಲಿ ಅಪರೂಪ ಹೃದಯ ಕ್ಯಾನ್ಸರ್: ಹೇಗೆ ಹರಡುತ್ತೆ ಗೊತ್ತಾ?
ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಕಾಡುತ್ತಿರುವ ಅನಾರೋಗ್ಯ ಸಮಸ್ಯೆಗಳ ಪೈಕಿ ಕ್ಯಾನ್ಸರ್ ಕೂಡ ಒಂದಾಗಿದೆ. ಅಮೆರಿಕ ಹಾಗೂ ಭಾರತದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಕ್ಯಾನ್ಸರ್‌ಗೆ ಹಲವು ರೀತಿಯ ಚಿಕಿತ್ಸೆಗಳು ಈಗ ಸಿಗುತ್ತಿದ್ದರೂ ಕೂಡ ಮರಣ ಪ್ರಮಾಣ ಕಡಿಮೆಯಾದಂತೆ ಕಾಣುತ್ತಿಲ್ಲ. ಹಾಗೆ ಕ್ಯಾನ್ಸರ್ ತಡೆಗಟ್ಟುವಿಕೆಗೆ ಸರ್ಕಾರದಿಂದ ಹಿಡಿದು ಸಂಘ ಸಂಸ್ಥೆಗಳು ಇಂದು ಕೆಲಸ ಮಾಡುತ್ತಲೇ ಇವೆ.
ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ನ ಗುರುತಿಸಿ ಚಿಕಿತ್ಸೆಗೆ ಒಳಗಾದರೆ ಅಪಾಯ ಕಡಿಮೆ ಮಾಡಬಹುದು. ಆದ್ರೆ ಚಿಕಿತ್ಸೆ ತಡವಾದರೆ ಜೀವಕ್ಕೆ ಇದು ಅಪಾಯ ತರಲಿದೆ. ಹಾಗೆ ಚಿಕಿತ್ಸೆಗಳು ಕೂಡ ನರಕಯಾತನೆ ತಂದಿಡಲಿವೆ. ಇನ್ನು ಕ್ಯಾನ್ಸರ್‌ನಲ್ಲೂ ಹತ್ತು ಹಲವು ಪ್ರಕಾರಗಳಿರುವುದು ನಾವು ನೋಡಬಹುದು. ಕೆಲವೊಂದು ಅಪರೂಪದಲ್ಲಿ ಅಪರೋಪದ ಕ್ಯಾನ್ಸರ್ ಆಗಿದ್ದರೆ ಮತ್ತೆ ಕೆಲವು ಸಾಮಾನ್ಯ ಹಾಗೂ ಅಪಾಯಕಾರಿಯಲ್ಲದ ಕ್ಯಾನ್ಸರ್‌ಗಳು ಕೂಡ ಇವೆ.

ಇನ್ನು ಶ್ವಾಸಕೋಶದ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಹೆಚ್ಚುತ್ತಿರುವ ಕ್ಯಾನ್ಸರ್‌ನ ಅಪಾಯಕಾರಿ ಪ್ರಕಾರಗಳಾಗಿವೆ. ಹಾಗೆ ಹೃದಯದ ಕ್ಯಾನ್ಸರ್ ಕೂಡ ಇತ್ತೀಚಿಗೆ ಕೇಳಿಬರುತ್ತಿರುವ ಅಪರೂಪದ ಕ್ಯಾನ್ಸರ್ ಆಗಿದೆ. ಹೃದಯ ಸಂಬಂಧಿ ಉಂಟಾಗುವ ಈ ಕ್ಯಾನ್ಸರ್ ಬಹಳ ಅಪರೂಪದ ಪ್ರಕಾರವಾಗಿದೆ ಎಂದು ತಿಳಿದುಬಂದಿದೆ.
ಆದ್ರೆ ಕ್ಯಾನ್ಸರ್ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ತಪ್ಪು ಕಲ್ಪನೆ ಕೂಡ ಇದೆ. ಆದ್ರೆ ಹೃದಯಕ್ಕೂ ಕ್ಯಾನ್ಸರ್ ಭಯವಿದೆ. ಕ್ಯಾನ್ಸರ್ ಕೋಶಗಳು ಹೃದಯದ ಬಳಿ ರೂಪುಗೊಂಡಾಗ ಆ ಗಡ್ಡೆಗಳು ಹೃದಯದ ಕೋಶಗಳಿಗೂ ಹಾನಿ ಉಂಟು ಮಾಡಲು ಆರಂಭಿಸುತ್ತದೆ ಇದು ಹೃದಯದ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ.
ಈ ಕ್ಯಾನ್ಸರ್ ನೇರವಾಗಿ ಹೃದಯದಲ್ಲಿ ಆರಂಭವಾಗುವುದಿಲ್ಲ. ಆದ್ರೆ ಬೇರೆ ಅಂಗದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುತ್ತವೆ. ಇದು ಹೃದಯದಕ್ಕೆ ಹರಡುತ್ತದೆ. ಆದ್ರೆ ಈ ಕೋಶಗಳನ್ನು ನೀವು ಕೀಮೋಥೆರಪಿ ಅಥವಾ ವಿಕಿರಣ ಚಿಕಿತ್ಸೆಯ ಮೂಲಕವು ಗುಣಪಡಿಸುವುದು ಕಷ್ಟವಾಗಲಿದೆಯಂತೆ. ಇದನ್ನು ಹೃದಯ ಗೆಡ್ಡೆ ಎಂದೂ ಕರೆಯಲಾಗುತ್ತದೆ, ಈ ಸ್ಥಿತಿಯು ಹೃದಯದಲ್ಲಿ ಸಾರ್ಕೋಮಾ ಎಂದು ಪ್ರಾರಂಭವಾಗುತ್ತದೆ - ಇದು ದೇಹದ ಮೃದು ಅಂಗಾಂಶಗಳಲ್ಲಿ ಹುಟ್ಟುವ ಒಂದು ರೀತಿಯ ಕ್ಯಾನ್ಸರ್ ಆಗಿದೆ.
ಹೃದಯದ ಕ್ಯಾನ್ಸರ್ ಸಂಭವಿಸುತ್ತದೆ?
ಹತ್ತಿರದ ಅಂಗದಲ್ಲಿನ ಕ್ಯಾನ್ಸರ್‌ನಿಂದ ಕ್ಯಾನ್ಸರ್ ಕೋಶಗಳು ನಿಮ್ಮ ಹೃದಯಕ್ಕೆ ಹರಡಿದಾಗ ಹೃದಯ ಕ್ಯಾನ್ಸರ್ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ದ್ವಿತೀಯಕ ಹೃದಯ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದು ಹೆಚ್ಚಾಗಿ ಸ್ತನ, ಅನ್ನನಾಳ, ಚರ್ಮ, ಶ್ವಾಸಕೋಶ ಮತ್ತು ಮೂತ್ರಪಿಂಡಗಳಿಂದ ನಿಮ್ಮ ಹೃದಯಕ್ಕೆ ಹರಡುತ್ತದೆ. ಇದು ನಿಮ್ಮ ಎದೆಯಲ್ಲಿನ ಥೈಮಸ್ ಗ್ರಂಥಿಯ ಕ್ಯಾನ್ಸರ್ ಅಥವಾ ರಕ್ತ ಮತ್ತು ದುಗ್ದರಸ ವ್ಯವಸ್ಥೆಯಿಂದಲೂ ಹರಡಬಹುದು.
ತಜ್ಞರ ಪ್ರಕಾರ ವಿಕಿರಣ ಮತ್ತು ಕೆಲವು ವಿಷಗಳಿಗೆ ಒಡ್ಡಿಕೊಳ್ಳುವುದು ಸಹ ಕ್ಯಾನ್ಸರ್ ಕೋಶಗಳ ಪ್ರಗತಿಗೆ ಕಾರಣವಾಗುತ್ತದೆ. ಹಾಗೆ ಕೆಲವರ ಜೀನ್‌ಗಳ ಕಾರಣದಿಂದಾಗಿಯೂ ಕೂಡ ಪ್ರಾಥಮಿಕ ಹೃದಯ ಕ್ಯಾನ್ಸರ್‌ಗೆ ಹೆಚ್ಚು ಒಳಗಾಗುತ್ತಾರೆ. ಹಾಗಾದ್ರೆ ಈ ಹೃದಯ ಕ್ಯಾನ್ಸರ್‌ನ ಲಕ್ಷಣಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
- ಆರ್ಹೆತ್ಮಿಯಾ, ಅಥವಾ ಅಸಹಜ ಹೃದಯ ಬಡಿತ
- ಎದೆ ನೋವು
- ಮೂರ್ಛೆ
- ಹೃದಯದ ಬಳಿ ನೀರು ತುಂಬುವುದು
- ತೂಕ ನಷ್ಟ
- ದೀರ್ಘಕಾಲದ ಬೆನ್ನು ನೋವು
- ರಕ್ತ ಕೆಮ್ಮುವುದು
- ಗೊಂದಲ ಅಥವಾ ನೆನಪಿನ ಸಮಸ್ಯೆಗಳು
ಈ ಹೃದಯದ ಕ್ಯಾನ್ಸರ್‌ಗೆ ಚಿಕಿತ್ಸೆಗಳು ಕೂಡ ಕಠಿಣ ರೀತಿಯಲ್ಲಿದೆ. ಅಪಾಯದ ಹಂತಕ್ಕೆ ತಿರುಗಿದರೆ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ತೆಗೆಯಬಹುದು. ಹಾಗೆ ಕೀಮೋಥೆರಪಿ, ವಿಕಿರಣ ಚಿಕಿತ್ಸೆಯನ್ನು ಕೂಡ ವೈದ್ಯರು ಶಿಫಾರಸು ಮಾಡಬಹುದು.



Click it and Unblock the Notifications











