Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ನಿತ್ಯ ಬಿಸಿ ನೀರು ಕುಡಿದರೆ ಏನಾಗುತ್ತದೆ..! ನಿಮ್ಮ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ?
ನೀವು ಮನೆಯಲ್ಲಿ ತಣ್ಣೀರು ಕುಡಿಯಲು ಇಷ್ಟಪಡುತ್ತೀರೋ ಅಥವಾ ಬಿಸಿ ನೀರು ಕುಡಿಯಲು ಮುಂದಾಗುತ್ತೀರೋ? ಕೆಲವರು ತಣ್ಣೀರು ಕುಡಿಯಲು ಇಷ್ಟಪಟ್ಟರೆ ಮತ್ತೆ ಕೆಲವರ ಬಿಸಿ ನೀರು ಕುಡಿಯುತ್ತಾರೆ. ಕುದಿಸಿ ಆರಿಸಿದ ನೀರು ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಇದು ನಿಜವೂ ಹೌದು. ನೀರನ್ನು ಕುದಿಸುವುದರಿಂದ ವೈರಾಣುಗಳು ಸಾಯುತ್ತವೆ ಇದರಿಂದ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹಾಗೆ ಕೆಲವರು ಬೆಳಗ್ಗೆ ಎದ್ದು ಬಿಸಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಉಗುರು ಬೆಚ್ಚಗಿನ ನೀರು ಕುಡಿದ ಬಳಿಕವೇ ಅವರ ನಿತ್ಯದ ಕೆಲಸ ಆರಂಭಿಸುತ್ತಾರೆ. ಹಾಗೆ ನಿತ್ಯ ನೀವು ಬಿಸಿ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ಕುರಿತು ನಿಮಗೆ ತಿಳಿದಿದ್ಯಾ? ಬಿಸಿ ನೀರು ಕುಡಿಯೋದ್ರಿಂದ ಆರೋಗ್ಯಕ್ಕೆ ಉತ್ತಮ ಎಂಬುದು ತಿಳಿದಿದೆ. ಆದ್ರೆ ಅದರಿಂದ ದೇಹದಲ್ಲಿ ಆಗುವ ಬದಲಾವಣೆ ಏನು ಎಂಬುದು ನಿಮಗೆ ಗೊತ್ತಾ?

ಬಿಸಿ ನೀರು ಜೀರ್ಣಕ್ರಿಯೆ ಸೇರಿ ಕೆಲವೊಂದು ಮುಖ್ಯ ಆರೋಗ್ಯಕರ ಅಂಶಗಳ ಹೊಂದಿದೆ, ಆದ್ರೆ ನಿತ್ಯ ಬಿಸಿನೀರು ಕುಡಿಯೋದ್ರಿಂದ ನಿಮ್ಮ ದೇಹದಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಇದು ಉತ್ತಮ
ನೀವು ನಿತ್ಯ ಬಿಸಿ ನೀರು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ. ಆಹಾರವು ಬಹುಬೇಗ ಕರಗುವುದು ಅಥವಾ ಜೀರ್ಣವಾಗಲು ಬಿಸಿನೀರು ಬಹಳ ಮುಖ್ಯವಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗುವ ಕಿಣ್ವಗಳನ್ನು ಉತ್ತೇಜಿಸಲು ಸಹಕಾರಿಯಾಗುತ್ತದೆ. ಹಾಗೆ ಇದು ದೇಹವು ಪೋಷಕಾಂಶ ಹೀರಿಕೊಳ್ಳಲು ಸುಲಭವಾಗುತ್ತದೆ. ಮಲಬದ್ದತೆಯನ್ನು ಕೂಡ ನಿವಾರಿಸಲಿದೆ. ಹೀಗಾಗಿ ನಿಮ್ಮ ದೇಹವು ಜೀರ್ಣಕ್ರಿಯೆಗೆ ಹೆಚ್ಚು ಶ್ರಮ ವಹಿಸುವ ಅವಶ್ಯಕತೆ ಇರುವುದಿಲ್ಲ. ಇದು ನಿಮ್ಮ ದೈನಂದಿನ ಆರೋಗ್ಯಕ್ಕೆ ಬಹಳ ಉತ್ತಮವಾಗಲಿದ.
ರಕ್ತ ಪರಿಚಲನೆಗೆ ಸಹಕಾರಿ
ಬಿಸಿ ನೀರು ನಿಮ್ ದೇಹದಲ್ಲಿನ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ಇದು ಆಮ್ಲಜನಕ ಹಾಗೂ ಪೋಷಕಾಂಶಗಳು ಜೀವಕೋಶಗಳು ಹೆಚ್ಚಿ ಪರಿಣಾಮಕಾರಿಯಾಗಿ ದೇಹದ ವಿವಿಧ ಭಾಗಕ್ಕೆ ತಲುಪಲು ಅನುವು ಮಾಡಿಕೊಡುತ್ತದೆ. ಹಾಗೆ ದೇಹದಲ್ಲಿನ ವಿಷಕಾರಿ ಅಂಶಗಳು ಬೆವರು ಹಾಗೂ ಮೂತ್ರದ ಮೂಲಕ ಹೊರಹಾಕಲು ಬಿಸಿ ನೀರು ಬಹಳ ಉಪಯುಕ್ತ ಆಗಿದೆ. ಮೂತ್ರಪಿಂಡದ ಕಾರ್ಯವನ್ನು ಸುಲಭವಾಗಿಸಲು ಇದು ಉಪಕಾರಿಯಾಗುತ್ತದೆ. ಇದರಿಂದ ದೇಹದ ಸಮತೋಲನ ಹಾಗೂ ಮೂತ್ರಪಿಂಡ ಆರೋಗ್ಯಕ್ಕೆ ಇದು ಬಹಳ ಸಹಕಾರಿ.
ತೂಕ ಇಳಿಸಲು ಬಿಸಿ ನೀರು ಬೆಸ್ಟ್
ನೀವು ತೂಕ ಇಳಿಸಲು ಇಚ್ಛಿಸಿದ್ದರೆ ನಿತ್ಯ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ದೇಹದ ಚಯಾಪಚಯ ಕ್ರಿಯೆಗೆ ಈ ಬಿಸಿ ನೀರು ಬಹಳ ಸಹಕಾರಿಯಾಗಿದೆ. ನೀವು ಸೇವಿಸುವ ಒಟ್ಟಾರೆ ಕ್ಯಾಲೋರಿಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತೆ. ಬಿಸಿ ನೀರು ಜೀರ್ಣಕ್ರಿಯೆ ಜಲಸಂಚಯನವನ್ನು ಸಹ ಸುಧಾರಿಸಲಿದೆ.
ಒತ್ತಡ ಕಡಿಮೆ ಮಾಡಲಿದೆ
ಬಿಸಿ ನೀರು ಕುಡಿಯುವುದು ಮನದಲ್ಲಿ ಶಾಂತಿ ಹಾಗೂ ಒತ್ತಡ ನಿವಾರಣೆಗೂ ಸಹಕಾರಿಯಾಗಿದೆ. ಸ್ನಾಯುಗಳಿಗೆ ಇದು ವಿಶ್ರಾಂತಿದಾಯಕ ಸ್ಥಿತಿ ನೀಡುವುದರಿಂದ ನಿಮ್ಮ ಒತ್ತಡ ನಿವಾರಣೆಗೂ ಸಹಕಾರಿಯಂತೆ. ಇದು ಆರಾಮದಾಯಕ ಸ್ಥಿತಿಯೊಂದಿಗೆ ಸಂಬಂಧ ಹೊಂದಿದ್ದು, ನಿದ್ರೆಯನ್ನು ಉತ್ತೇಜಿಸಲಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications