Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಾವಸ್ಥೆಯಲ್ಲಿಯೇ ಮಗುವಿಗೆ ಡೌನ್ ಸಿಂಡ್ರೋಮ್ ಬರಲು ಕಾರಣವೇನು? ತಡೆಗಟ್ಟಬಹುದೇ?
ಡೌನ್ ಸಿಂಡ್ರೋಮ್ ಎಂಬುವುದು ಹುಟ್ಟುವ ಮಕ್ಕಳಲ್ಲಿ ಕ್ರೋಮೋಸೋಮ್ ಅಧಿಕವಿದ್ದಾಗ ಕಂಡು ಬರುವ ಸಮಸ್ಯೆಯಾಗಿದೆ. ಡೌನ್ ಸಿಂಡ್ರೋಮ್ ಇರುವ ಮಕ್ಕಳಲ್ಲಿ ಬುದ್ಧಿ ಶಕ್ತಿ ಬೆಳವಣಿಗೆಯಾಗುವುದಿಲ್ಲ, ಕೆಲವರಲ್ಲಿ ದೈಹಿಕವಾಗಿ ಹಲವಾರು ಸಮಸ್ಯೆಗಳಿರುತ್ತದೆ.

ಕೆಲ ಮಕ್ಕಳಲ್ಲಿ ಡೌನ್ ಸಿಂಡ್ರೋಮ್ ಅಲ್ಪ ಪ್ರಮಾಣದಲ್ಲಿ ಇದ್ದರೆ ಇನ್ನು ಕೆಲವರಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ.
ಡೌನ್ ಸಿಂಡ್ರೋಮ್ ಇರುವ ಎಲ್ಲರಲ್ಲೂ ಒಂದೇ ಲಕ್ಷಣ ಇರುವುದಿಲ್ಲ, ಆದರೆ ಕೆಲವರಲ್ಲಿ ಈ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತದೆ:
* ಅಗಲವಾದ ಮುಖ
* ಚಿಕ್ಕ ಕಣ್ಣುಗಳು
* ಗಿಡ್ಡ ಕುತ್ತಿಗೆ
* ನಾಲಗೆ ಹೊರಹಾಕುವುದು
* ಓರೆ ಕಣ್ಣು
* ಸ್ನಾಯುಗಳು ಬಲವಿಲ್ಲದಿರುವುದು
* ಕೈ-ಕಾಲುಗಳು ತುಂಬಾ ಮೃದುವಾಗಿರುವುದು
* ಪುಟ್ಟ ಬೆರಳುಗಳು
* ಪ್ಲೆಕ್ಸಿಬಿಲಿಟಿ ಅಧಿಕವಿರುತ್ತದೆ
* ಕುಳ್ಳಗೆ ಇರುತ್ತಾರೆ.
ಬುದ್ಧಿಶಕ್ತಿ ಕಡಿಮೆಯಾಗುವುದು
ಡೌನ್ ಸಿಂಡ್ರೋಮ್ ಇರುವ ಮಕ್ಕಳು ಮಾತನಾಡುವುದು ನಿಧಾನವಾಗುವುದು. ಇಂಥ ಮಕ್ಕಳಲ್ಲಿ ಬುದ್ದಿ ಶಕ್ತಿ ಕಡಿಮೆ ಇರುತ್ತದೆ.
ಡೌನ್ ಸಿಂಡ್ರೋಮ್‌ಗೆ ಕಾರಣವೇನು?
ಟ್ರಿಸೋಮಿ 21 (Trisomy 21) : ಕ್ರೋಮೋಸೋಮ್ 21ರ 3 ಕಾಪಿಗಳಿರುವ ವ್ಯಕ್ತಿಗಳಿಂದಾಗಿ ಅಂಡಾಣು ಹಾಗೂ ವೀರ್ಯಾಣು ಸೇರಿ ಫಲವತ್ತತೆಯಾದಾಗ ಅಸಹಜ ಬೆಳವಣಿಗೆಯಾಗುವುದು.
ಮೊಸಾಯಿಕ್ ಡೌನ್ ಸಿಂಡ್ರೋಮ್(Mosaic Down syndrome): ಇದು ತುಂಬಾ ಅಪರೂಪ. ವ್ಯಕ್ತಿಯಲ್ಲಿ ಕೆಲವೊಂದು ಕಣಗಳಲ್ಲಿ ಮಾತ್ರ ಕ್ರೋಮೋಸೋಮ್ 21 ಅಧಿಕವಿದ್ದಾಗ ಕೂಡ ಫಲವತ್ತತೆ ಸಮಯದಲ್ಲಿ ಮಗುವಿನ ಬೆಳವಣಿಗೆಯಲ್ಲಿ ಅಸಹಜತೆ ಉಂಟಾಗುವುದು.
ಟ್ರಾನ್ಸ್‌ಲೊಕೇಷನ್ ಡೌನ್ ಸಿಂಡ್ರೋಮ್: ಕ್ರೋಮೋಸೋಮ್ 21ರ ಕೆಲವೊಂದು ಭಾಗ ಮತ್ತೊಂದು ಕ್ರೋಮೋಸೋಮ್‌ಗೆ ಅಂಟಿಕೊಂಡಾಗ ವೀರ್ಯಾಣು-ಅಂಡಾಣು ಫಲವತ್ತತೆಯಾದಾಗ ಡೌನ್ ಸಿಂಡ್ರೋಮ್ ಉಂಟಾಗುವುದು.
ಇದು ವಂಶವಾಹಿಯಾಗಿ ಬರುವುದೇ?
ಸಾಮಾನ್ಯವಾಗಿ ಇದು ವಂಶವಾಹಿಯಾಗಿರುವುದಿಲ್ಲ. ಕ್ರೋಮೋಸೋಮ್‌ನ ವ್ಯತ್ಯಾಸದಿಂದಾಗಿ ಈ ರೀತಿ ಉಂಟಾಗುತ್ತದೆ.
ಯಾರಲ್ಲಿ ಈ ಬಗೆಯ ಮಕ್ಕಳು ಹುಟ್ಟುವ ಸಾಧ್ಯತೆ ಹೆಚ್ಚು?
* ತಡವಾಗಿ ಗರ್ಭಧಾರಣೆಯಾದರೆ: 35 ವರ್ಷ ದಾಟಿದ ಮೇಲೆ ಗರ್ಭಧಾರಣೆಯಾದರೆ ಡೌನ್ ಸಿಂಡ್ರೋಮ್ ಮಗು ಜನಿಸುವ ಸಾಧ್ಯತೆ ಇದೆ.
* ಮಗು ಡೌನ್ ಸಿಂಡ್ರೋಮ್‌ನಿಂದ ಜನಿಸಲು ಮಹಿಳೆ ಮಾತ್ರವಲ್ಲ ಕೆಲವೊಮ್ಮೆ ಪುರುಷರ ಕ್ರೋಮೋಸೋಮ್ ಕೂಡ ಕಾರಣವಾಗುವುದು.
* ಒಂದು ಮಗುವಿಗೆ ಡೌನ್ ಸಿಂಡ್ರೋಮ್ ಇದ್ದು ಮತ್ತೆ ಗರ್ಭಧಾರಣೆಯಾದರೆ ಆ ಮಗುವಿಗೂ ಡೌನ್ ಸಿಂಡ್ರೋಮ್ ಬರುವ ಸಾಧ್ಯತೆ ಇರುವುದರಿಂದ ಮತ್ತೊಂದು ಮಗುವಿಗೆ ಪ್ಲ್ಯಾನ್ ಮಾಡುವಾಗ ವೈದ್ಯರ ಸಲಹೆ ಸೂಚನೆ ಪಡೆಯಿರಿ.
ಡೌನ್ ಸಿಂಡ್ರೋಮ್ ತಡೆಗಟ್ಟಬಹುದೇ?
ಡೌನ್ ಸಿಂಡ್ರೋಮ್ ತಡೆಗಟ್ಟಲು ಸಾಧ್ಯವಿಲ್ಲ. ಒಂದು ಮಗುವಿಗೆ ಡೌನ್ ಸಿಂಡ್ರೋಮ್ ಇದ್ದರೆ ಮತ್ತೊಂದು ಮಗುವಿಗೆ ಪ್ಲ್ಯಾನ್ ಮಾಡುವುದಾದರೆ ವೈದ್ಯರ ಸಲಹೆ ಪಡೆದು ಆರೋಗ್ಯವಂತ ಮಗುವನ್ನು ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

