Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೋವಿಡ್ 19ನಿಂದ ಸತ್ತವರಲ್ಲಿ ಶೇ.50ರಷ್ಟು ಧೂಮಪಾನಿಗಳು:WHO
ಮೇ.31 ವಿಶ್ವ ತಂಬಾಕು ರಹಿತ ದಿನ. ತಂಬಾಕು ಸೇವನೆಯಿಂದ ಉಂಟಾಗುವ ಅನಾರೋಗ್ಯದ ಕುರಿತು ಜನರಲ್ಲಿ ಜಾಗೃತ್ತಿ ಮೂಡಿಸಿ, ಜನರನ್ನು ತಂಬಾಕು ಚಟ ಬಿಡುವಂತೆ ಪ್ರೇರೇಪಿಸುವುದೇ ಈ ದಿನ ಉದ್ದೇಶವಾಗಿದೆ.
2019 ಡಿಸೆಂಬರ್‌ನಲ್ಲಿ ಈ ಜಗತ್ತಿನಲ್ಲಿ ಕೊರೊನಾ ಎಂಬ ಹೊಸ ವೈರಸ್ ಕಾಣಿಸಿಕೊಂಡಿತ್ತು, ಅಲ್ಲಿಂದ ಇದುವರೆಗೆ ಈ ವೈರಸ್‌ನಿಂದ ಪ್ರಾಣವನ್ನು ಕಳೆದುಕೊಂಡವರು ಲಕ್ಷಾಂತರ ಮಂದಿ. ಕೋಟ್ಯಾಂತರ ಮಂದಿಗೆ ಈ ಸೋಂಕು ತಗುಲಿದೆ.
ಕೋವಿಡ್ 19 ಸೋಂಕು ತಗುಲಿದವರಲ್ಲಿ ಧೂಮಪಾನಿಗಳಲ್ಲಿ ಗಂಭೀರವಾಗುತ್ತಿದೆ. ಕೋವಿಡ್ 19 ಸೋಂಕಿನ ಅಪಾಯ ಧೂಮಪಾನಿಗಳಿಗೆ ಶೇ.50ರಷ್ಟು ಅಧಿಕ ಎಂದು WHO ಹೇಳಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಧೂಮಪಾನಿಗಳಲ್ಲಿ ಕೋವಿಡ್ ಹಾಗೂ ಇತರ ಕಾಯಿಲೆಯ ಅಪಾಯ ಅಧಿಕ
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಕೋವಿಡ್ 19ನಿಂದ ಕಾಯಿಲೆ ಗಂಭೀರವಾಗಿ ಸಾವನ್ನಪ್ಪಿದವರಲ್ಲಿ ಶೇ. 50ರಷ್ಟು ಧೂಮಪಾನಿಗಳು ಎಂದು ಹೇಳಿದ್ದಾರೆ. ಧೂಮಪಾನ ಬಿಡುವುದರಿಂದ ಕೋವಿಡ್ 19 ಅಪಾಯ ಹಾಗೂ ಇತರ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದಿದ್ದಾರೆ.

ತಂಬಾಕು ಸೇವನೆಯಿಂದ ಬರುವ ಅನಾರೋಗ್ಯಗಳು
ತಂಬಾಕು ಸೇವನೆ ಮಾಡುವವರಲ್ಲಿ ಕ್ಯಾನ್ಸರ್‌ನಂಥ ಮಾರಕ ರೋಗ ಹೆಚ್ಚಾಗಿ ಕಂಡು ಬರುತ್ತಿದೆ, ಅದಲ್ಲದೆ ಹೃದಯ ಕಾಯಿಲೆ, ಉಸಿರಾಟದ ಸಮಸ್ಯೆ ಮುಂತಾದ ರೋಗ ಕಂಡು ಬರುತ್ತಿದೆ.
ಎಷ್ಟೋ ಜನರು ತಂಬಾಕು,ಧೂಮಪಾನ ಇವುಗಳನ್ನು ಬಿಡಬೇಕೆಂದು ಪ್ರಯತ್ನಿಸುತ್ತಿದ್ದಾರೆ, ಆದರೆ ಕಲಿತ ಚಟ ಅಷ್ಟು ಬೇಗೆ ಬಿಡಲು ಸಾಧ್ಯವಾಗುತ್ತಿಲ್ಲ. ನೀವು ಬಿಡಲೇ ಬೇಕೆಂದು ಬಯಸುತ್ತಿದ್ದರು ಈ ಟಿಪ್ಸ್ ಸಹಾಯಕ್ಕೆ ಬರುತ್ತವೆ...

ಧೂಮಪಾನ ಬಿಡಬೇಕೆಂದು ಬಯಸುವವರಿಗೆ
*ಮೊದಲಿಗೆ ಕಾರಣ ಕಂಡುಕೊಳ್ಳಿ: ಯಾವ ಕಾರಣಕ್ಕೆ ಸಿಗರೇಟ್ ಬಿಡಬೇಕೆಂದು ನಿರ್ಧರಿಸಿದ್ದೀರಿ? ಆರೋಗ್ಯಕರ ದೇಹ ಅಥವಾ ಕುಟುಂಬ ಹೀಗೆ ಸಿಗರೇಟ್ ಬಿಡಲು ಕಾರಣವೇನೆಂಬುವುದು ನಿಮಗೇ ಸ್ಪಷ್ಟವಾಗಿರಲಿ, ಇಲ್ಲದಿದ್ದರೆ ಬಿಟ್ಟು ಮತ್ತೆ ಪ್ರಾರಂಭಿಸಿಬಹುದು. ಕಾರಣಗಳು ಬಲವಾಗಿದ್ದರೆ ನಿರ್ಧಾರ ಕೂಡ ಬಲವಾಗುವುದು.
*ವೈದ್ಯರ ಸಲಹೆ ಪಡೆಯಿರಿ: ಒಮ್ಮೆ ಧೂಮಪಾನ ಅಭ್ಯಾಸವಾದರೆ ನಿಮ್ಮ ಮೆದುಳು ಆಗಾಗ ನಿಕೋಟಿನ್‌ಗೆ ಬೇಡಿಕೆ ಇಡುವುದರಿಂದ ಬಿಟ್ಟು ಇರಲು ಕಷ್ಟವಾಗುವುದು. ಇದಕ್ಕಾಗಿ ವೈದ್ಯರ ಸಲಹೆ ಪಡೆಯಿರಿ. ಅವರು ನಿಕೋಟಿನ್ ರೀಪ್ಲೇಸ್‌ಮೆಂಟ್ ಥೆರಪಿ ತಿಳಿಸಬಹುದು.
* ನಿಮಗೆ ಇಷ್ಟವಾದ ವಿಷಯದ ಕಡೆ ಒಲವು ಹೆಚ್ಚಿಸಿ: ಮನಸ್ಸನ್ನು ಆದಷ್ಟು ಬೇರೆ ಕಡೆ ಬದಲಾಯಿಸಿ, ಸಿಗರೇಟ್ ನೆನಪಿಗೆ ಬಾರದಂತೆ ನಿಮಗೆ ಇಷ್ಟವಾದ ಕೆಲಸ ಮಾಡುತ್ತಾ ಇರಿ.
* ಸಿಗರೇಟ್ ಆರಂಭದಲ್ಲಿ ಒತ್ತಡದ ಸನ್ನಿವೇಶ ತಪ್ಪಿಸಿ: ಸಿಗರೇಟ್ ಬಿಟ್ಟು ಸ್ವಲ್ಪ ಸಮಯದವರೆಗೆ ಮನಸ್ಸು ಸಂತೋಷವಾಗಿರಬೇಕು, ಒತ್ತಡಕ್ಕೆ ಒಳಗಾದರೆ ಮತ್ತೆ ಚಟ ಶುರುವಾಗುವ ಅಪಾಯವಿದೆ.
* ಧೂಮಪಾನ ಬಿಟ್ಟ ಮೇಲೆ ಮದ್ಯದ ಚಟ ಬೇಡ: ಕೆವರು ಧೂಮಪಾನ ಬಿಟ್ಟ ಮೇಲೆ ಮದ್ಯದ ಚಟಕ್ಕೆ ಬೀಳುತ್ತಾರೆ. ಎರಡೂ ಬೇಡ. ಊಟ ಬಳಿಕ ಸಿಗರೇಟ್ ಎಳೆಯುವ ಅಭ್ಯಾಸ ಇದ್ದರೆ ಚುಯ್ಯಿಂಗ್ ಗಮ್ ಅಗೆಯಿರಿ, ಫ್ರೆಂಡ್ಸ್‌ಗೆ ಕರೆ ಮಾಡಿ ಮಾತನಾಡಿ.
ಹೀಗೆ ಕಠಿಣ ನಿರ್ಧಾರ ಮಾಡಿ ಧೂಮಪಾನಕ್ಕೆ ಹೇಳಿ ಗುಡ್ ಬೈ....



Click it and Unblock the Notifications
