World Menstrual Hygiene Day: ಋತುಚಕ್ರ: ಪ್ರತಿಯೊಬ್ಬ ಸ್ತ್ರೀ ತಿಳಿದಿರಲೇಬೇಕಾದ ಸಂಗತಿಗಳಿವು

ಮೇ. 28ನ್ನು ವಿಶ್ವ ಋತುಚಕ್ರ ಶುಚಿತ್ವ ದಿನವನ್ನಾಗಿ ಆಚರಿಸಲಾಗುವುದು. ಋತುಚಕ್ರ ಹಾಗೂ ಮಹಿಳೆಯರ ಆರೋಗ್ಯಕ್ಕೆ ಒಂದಕ್ಕೊಂದು ಸಂಬಂಧವಿದೆ. ಋತುಚಕ್ರದ ಸಮಯದಲ್ಲಿ ಸ್ತ್ರೀ ಅಪವಿತ್ರಳು ಎಂದು ಅವಳನ್ನು ಒಂದು ಮೂಲೆಯಲ್ಲಿ ಕೂರಿಸುವ ಪದ್ಧತಿ ಭಾರತದಲ್ಲಿ ಇನ್ನು ಹಲವು ಕಡೆ ಜೀವಂತವಾಗಿದೆ. ಎಷ್ಟೋ ಕುಟುಂಬಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಆ ಸಮಯದಲ್ಲಿ ಆಕೆಯನ್ನು ಮನೆಯಿಂದ ಹೊರಗಡೆ ಕೂರಿಸಲಾಗುತ್ತಿದೆ.

ಇನ್ನು ಮುಟ್ಟಿನ ಸಮಯದಲ್ಲಿ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ನೀಡದೆ ಎಷ್ಟೋ ಮಹಿಳೆಯರು ಆರೋಗ್ಯ ಹಾಳು ಮಾಡುತ್ತಿದ್ದಾರೆ. ಬಡವರು-ಶ್ರೀಮಂತರು ಅಂತಿಲ್ಲ ಎಷ್ಟೋ ಮಹಿಳೆಯರು ತಮ್ಮ ನಿರ್ಲಕ್ಷ್ಯದಿಂದ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಮುಟ್ಟಾದಾಗ ಸ್ಯಾನಿಟರ್‌ ಪ್ಯಾಡ್‌ ಬಳಸುವ ಬದಲು ಬಟ್ಟೆಗಳನ್ನು ಬಳಸುತ್ತಾರೆ, ಬಟ್ಟೆಗಳನ್ನು ಬಳಸುವುದಾದರೆ ಶುಚಿಯಾದ ಬಟ್ಟೆಗಳನ್ನು ಬಳಸಬೇಕು, ಜೊತೆಗೆ ಬಟ್ಟೆಯ ಶುಚಿತ್ವ ಕಡೆಗೆ ತುಂಬಾನೇ ಗಮನ ನೀಡಬೇಕು.

ಇನ್ನು ಸ್ಯಾನಿಟರಿ ಪ್ಯಾಡ್‌ ಬಳಸುವವರು ದೀರ್ಘ ಸಮಯ ಒಂದೇ ಪ್ಯಾಡ್ ಬಳಸುವುದು ಅಂದರೆ ಅಧಿಕ ರಕ್ತಸ್ರಾವವಿಲ್ಲ ಸುಮ್ನೆ ಪ್ಯಾಡ್‌ ಏಕೆ ಬದಲಾಯಿಸಬೇಕು ಎಂದು ಯೋಚಿಸುವುದು, ಮೆನ್‌ಸ್ಟ್ರಲ್‌ ಕಪ್‌ ಬಳಸುವುದಾದರೆ ಅದನ್ನು ಶುಚಿಯಾಗಿ ತೊಳೆಯದೆ ಬಳಸುವುದು ಈ ರೀತಿಯೆಲ್ಲಾ ಮಾಡುವುದರಿಂದ ಇನ್‌ಫೆಕ್ಷನ್ ಸಾಧ್ಯತೆ ಹೆಚ್ಚು. ಅಷ್ಟು ಮಾತ್ರವಲ್ಲ ಸ್ಯಾನಿಟರಿ ಬಳಸಿ ಬಿಸಾಡುವಾಗ ಕೂಡ ಶುಚಿತ್ವ ಕಡೆಗೆ ಗಮನನೀಡಬೇಕು. ಈ ಕುರಿತೆಲ್ಲಾ ಹೆಚ್ಚಿನ ಜಾಗೃತಿ ಮೂಡಿಸಲು ವಿಶ್ವ ಋತುಚಕ್ರ ಶುಚಿತ್ವ ದಿನ ಆಚರಿಸಲಾಗುವುದು.

2022ರ ಥೀಮ್‌

2022ರ ಥೀಮ್‌

2030ರ ಹೊತ್ತಿಗೆ ಮುಟ್ಟು ಎಂಬುವುದು ಒಂದು ಸಹಜ ಸಂಗತಿಯನ್ನಾಗಿ ಮಾಡುವುದು (‘making menstruation a normal fact of life by 2030')

ಈ ಲೇಖನದಲ್ಲಿ ಪ್ರತಿಯೊಬ್ಬ ಮಹಿಳೆ ತಿಳಿದಿರಲೇಬೇಕಾದ ಕೆಲ ಸಂಗತಿಗಳಬಗ್ಗೆ ಹೇಳಿದ್ದೇವೆ ನೋಡಿ:

ಮುಟ್ಟಿನ ಸಮಯದಲ್ಲಿ ಪ್ರತ್ಯೇಕವಾದ ಅಂಡರ್‌ವೇರ್‌ ಧರಿಸಿ

ಮುಟ್ಟಿನ ಸಮಯದಲ್ಲಿ ಪ್ರತ್ಯೇಕವಾದ ಅಂಡರ್‌ವೇರ್‌ ಧರಿಸಿ

ಮುಟ್ಟಿನ ಸಮಯದಲ್ಲಿ ಬಳಸಲೆಂದೇ ಪ್ರತ್ಯೇಕವಾದ ಅಂಡರ್‌ವೇರ್‌ ಬಳಸುವುದು ಒಳ್ಳೆಯದು. ಅದರಲ್ಲಾದರೆ ಕೂಡಲೇ ಬದಲಾಯಿಸಿ ಬಿಸಿ ನೀರಿನಲ್ಲಿ ತೊಳೆದು ಹಾಕಿ. ಅಂಡರ್‌ವೇರ್‌ನಲ್ಲಿ ಲೀಕ್ ಆದಾಗ ಅದನ್ನು ಬದಲಾಯಿಸದೆ ಹೋದರೆ ದುರ್ವಾಸನೆ ಬೀರುವುದು ಅಲ್ಲದೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಸಮಯದಲ್ಲಿ ಪ್ಯಾಡ್‌ ಮಾತ್ರವಲ್ಲ ಅಂಡರ್‌ವೇರ್‌ ಕೂಡ ಒಂದು ಎಕ್ಸ್‌ಟ್ರಾ ಇಟ್ಟುಕೊಂಡು ಹೊರಗಡೆಗೆ ಅಥವಾ ಆಫೀಸ್‌ಗೆ ಹೋಗಿ.

ಸ್ಯಾನಿಟರಿ ಪ್ಯಾಡ್ ಪ್ರತಿ 4-5 ಗಂಟೆಗೆ ಬದಲಾಯಿಸಿ

ಸ್ಯಾನಿಟರಿ ಪ್ಯಾಡ್ ಪ್ರತಿ 4-5 ಗಂಟೆಗೆ ಬದಲಾಯಿಸಿ

ಪ್ಯಾಡ್‌ ಮೇಲೆ 24 ಗಂಟೆಗಳ ಸಂಪೂರ್ಣ ಸುರಕ್ಷತೆ ಎಂದು ಬರೆದಿದ್ದರೂ ಅಷ್ಟು ದೀರ್ಘ ಸಮಯ ಬಳಸಬೇಡಿ, ಇದರಿಂದ ತುರಿಕೆ, ಸೋಂಕು ಉಂಟಾಗಬಹುದು. ಒಂದು ಪ್ಯಾಡ್‌ 5 ಗಂಟೆಗಿಂತ ಅಧಿಕ ಸಮಯ ಬಳಸಲು ಹೋಗಬೇಡಿ. ಬ್ಲೀಡಿಂಗ್‌ ಹೆಚ್ಚಿಲ್ಲ ಎಂದು ತುಂಬಾ ಸಮಯ ಇಡಬೇಡಿ.

ಟಾಯ್ಲೆಟ್‌ ಬಳಸುವ ಮುನ್ನ ನಂತರ ಶುಚಿ ಗೊಳಿಸಿ

ಟಾಯ್ಲೆಟ್‌ ಬಳಸುವ ಮುನ್ನ ನಂತರ ಶುಚಿ ಗೊಳಿಸಿ

ಈ ಸಮಯದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಟಾಯ್ಲೆಟ್ ಬಳಸುವ ಮುನ್ನ ನೀರನ್ನು ಚೆನ್ನಾಗಿ ಫ್ಲಷ್‌ ಮಾಡಿ ಬಳಸಿದ ನಂತರ ಕೂಡ ಶುಚಿಗೊಳಿಸಿ, ನಿಮ್ಮ ರಕ್ತದ ಕಲೆ ಬೇರೆಯವರಿಗೆ ಮುಜುಗರ, ಹೇಸಿಗೆ ಉಂಟು ಮಾಡಿದಿರಲು ಶುಚಿತ್ವ ಕಡೆಗೆ ಗಮನ ಹರಿಸಿ.

ಸ್ಯಾನಿಟರಿ ಪ್ಯಾಡ್‌ ಸರಿಯಾದ ರೀತಿಯಲ್ಲಿ ಬಿಸಾಡಿ

ಸ್ಯಾನಿಟರಿ ಪ್ಯಾಡ್‌ ಸರಿಯಾದ ರೀತಿಯಲ್ಲಿ ಬಿಸಾಡಿ

ಕೆಲವು ಸ್ಕೂಲ್ ಹಾಗೂ ಆಫೀಸ್‌ನಲ್ಲಿ ಅದಕ್ಕೆ ಸೂಕ್ತವಾದ ವ್ಯವಸ್ಥೆ ಇರುತ್ತದೆ, ಪ್ಯಾಡ್‌ ಹಾಕಿದರೆ ಸುಟ್ಟು ಹೋಗುತ್ತದೆ, ಆದರೆ ಇನ್ನು ಕೆಲವು ಕಡೆ ಬಕೆಟ್‌ ಇಟ್ಟಿರುತ್ತಾರೆ. ಅದರಲ್ಲಿ ಪ್ಯಾಟ್‌ ಡೈರೆಕ್ಟ್ ಹಾಕಬೇಡಿ, ಬದಲಿಗೆ ಮತ್ತೊಂದು ಪೇಪರ್‌ ಅಥವಾ ನ್ಯೂಸ್‌ ಪೇಪರ್‌ನಲ್ಲಿ ಸುತ್ತಿ ಹಾಕಿ.

ಯಾವುದೇ ಕಾರಣಕ್ಕೆ ಟಾಯ್ಲೆಟ್‌ಗೆ, ಕಮೋಡ್‌ಗೆ ಹಾಕಬೇಡಿ, ಇದರಿಂದ ಬ್ಲಾಕ್ ಉಂಟಾಗುವುದು.

ಒಂದು ವಿಧಾನವಷ್ಟೇ ಬಳಸಿ

ಒಂದು ವಿಧಾನವಷ್ಟೇ ಬಳಸಿ

ಕೆಲವರು ಸ್ಯಾನಿಟರಿ ಪ್ಯಾಡ್‌ ಜೊತೆ ಬಟ್ಟೆ, ಟ್ಯಾಂಪೋನ್ ಜೊತೆ ಪ್ಯಾಡ್‌ ಬಳಸುತ್ತಾರೆ. ಹೀಗೆ ಮಾಡಬೇಡಿ , ಒಂದು ವಿಧಾನವಷ್ಟೇ ಬಳಸಿ, ಅದರಲ್ಲೂ ಬಟ್ಟೆ ಬಳಸಬೇಡಿ, ಬಳಸುವುದಾದರೂ ಅದನ್ನು ಇಸ್ತ್ರಿ ಹಾಕಿ ಬಳಸಿ, ನಂತರ ಮುಂದಿನ ಋತುಚಕ್ರಕ್ಕೂ ಅದೇ ಬಟ್ಟೆ ಬಳಸಬೇಡಿ.

ಪಿರೀಡ್‌ ಅಂಡರ್‌ವೇರ್‌ ಬಳಸಿ

ಮುಟ್ಟಾಗಬಹುದು ಅಥವಾ ಮುಟ್ಟಿನ ದಿನ ಸಮೀಪಿಸುತ್ತಿದೆ ಎಂದಾಗ ಹಾಗೂ ಕಡಿಮೆ ರಕ್ತಸ್ರಾವ ಇರುವ ದಿನಗಳಲ್ಲಿ ಪಿರೀಡ್‌ ಅಂಡರ್‌ವೇರ್ ಬಳಸಿ, ಇದನ್ನು ತೊಳೆಯುವುದು ಸುಲಭ, ಪದೇ-ಪದೇ ಬಳಸಬಹುದು.

English summary

World Menstrual Hygiene Day 2022: Theme, History, Significance and Quotes in Kannada

World Menstrual Hygiene Day 2022: Theme, History, Significance and Quotes in Kannada....
Story first published: Saturday, May 28, 2022, 12:45 [IST]
X
Desktop Bottom Promotion