3-4 ಮಕ್ಕಳ ತಾಯಿಗಿಂತ ಕಡಿಮೆ ಅಥವಾ ಹೆಚ್ಚು ಮಕ್ಕಳಿರುವ ತಾಯಿಗೆ ಬೇಗನೆ ವಯಸ್ಸಾಗುವುದು, ಏಕೆ?

ಸೃಷ್ಟಿಯ ಪ್ರತೀಕ ಹೆಣ್ಣು ಎಂದು ಹಿಂದಿನ ಪುರಾಣಗಳ ಕಾಲದಿಂದಲೂ ಹೇಳಿಕೊಂಡು ಬಂದಿದ್ದಾರೆ. ಹೆಣ್ಣನ್ನು ಜನ್ಮದಾತೆ ಎಂದು ಕರೆಯುವ ಉದ್ದೇಶ ಎಂದರೆ ಆಕೆ ತನ್ನ ದೇಹದ ಸಾರ ಸತ್ವಗಳ ಪ್ರತಿರೂಪವಾಗಿ ಹೊಸದೊಂದು ಜೀವಿಗೆ ಜನ್ಮ ನೀಡಿ ಭೂಮಿಗೆ ಕರೆ ತರುತ್ತಾಳೆ. ಇದು ನಿಸರ್ಗದ ಪ್ರತಿಯೊಂದು ಜೀವಿಯ ಕಥೆ. ಇನ್ನು ಮನುಷ್ಯರ ವಿಚಾರಕ್ಕೆ ಬರುವುದಾದರೆ ಒಬ್ಬ ಮಹಿಳೆ ಒಂದು ಮಗುವಿಗೆ ಜನ್ಮ ನೀಡಲು ಗರ್ಭಾವಸ್ಥೆಯ ಹಂತವನ್ನು ದಾಟಬೇಕಾಗಿರುತ್ತದೆ.

ಕೆಲವು ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದು ವರದಾನವಾದರೆ ಇನ್ನು ಕೆಲವು ಮಹಿಳೆಯರಿಗೆ ಶಾಪ ಎಂದು ತಿಳಿಯಲಾಗಿದೆ. ಏಕೆ ಹೀಗೆ ಎಂದರೆ ಗರ್ಭಾವಸ್ಥೆಯ ಸಂದರ್ಭಕ್ಕೆ ಪೂರಕವಾಗಿ ಒಬ್ಬ ಮಹಿಳೆಯ ದೇಹದಲ್ಲಿ ನಡೆಯುವ ಹಲವಾರು ನೈಸರ್ಗಿಕ ಕ್ರಿಯೆಗಳು. ಮುಟ್ಟಿನ ಅವಧಿ, ಋತುಬಂಧ ಮಹಿಳೆಯ ಆರೋಗ್ಯದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೇಕಾದರೂ ಬೀರಬಹುದಾದ ಸ್ವಭಾವವನ್ನು ಹೊಂದಿರುತ್ತವೆ.

ಒಂದು ಮಗುವಿಗೆ ಜನ್ಮ ನೀಡಲು ಒಬ್ಬ ಮಹಿಳೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತನ್ನನ್ನು ತಾನು ಸಾಕಷ್ಟು ತಯಾರು ಮಾಡಿಕೊಳ್ಳಬೇಕಾಗುತ್ತದೆ. ಪೌಷ್ಟಿಕಾಂಶ ಭರಿತ ಆಹಾರಗಳ ಸೇವನೆಯಿಂದ ಹಿಡಿದು ಅತ್ಯುತ್ತಮವಾದ ಕಾರ್ಯ ಚಟುವಟಿಕೆಯಿಂದ ಮತ್ತು ಗರ್ಭಾವಸ್ಥೆಯ ಸಂದರ್ಭದ ಪ್ರತಿ ದಿನವೂ ಎದುರಾಗುವ ಒಂದಿಲ್ಲೊಂದು ಆರೋಗ್ಯದ ಅಸ್ವಸ್ಥತೆಗಳನ್ನು ಮೆಟ್ಟಿ ನಿಂತು ಹೊಸ ಹುರುಪಿನಿಂದ ಹೊಸದೊಂದು ಜೀವಿಯ ಆಗಮನದ ನಿರೀಕ್ಷೆ ಇಟ್ಟುಕೊಂಡು ದಿನಗಳನ್ನು ಕಳೆಯಬೇಕಾಗಿರುತ್ತದೆ.
ಕೇವಲ ಒಂದು ಹೆರಿಗೆಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಒಬ್ಬ ಮಹಿಳೆ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಹಲವು ಹೆರಿಗೆಗಳನ್ನು ತಮ್ಮ ಜೀವನದಲ್ಲಿ ಕಂಡುಕೊಳ್ಳುವ ಮಹಿಳೆಯರು ಹಲವು ಬಾರಿ ಇಂತಹ ಪರಿಸ್ಥಿತಿಗಳಿಗೆ ತಮ್ಮನ್ನು ತಾವು ತಯಾರು ಮಾಡಿಕೊಳ್ಳಬೇಕಾಗಿರುತ್ತದೆ.

ಈಗ ಪ್ರಶ್ನೆ ಉದ್ಭವವಾಗುವುದು ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ. ಏನೆಂದರೆ ಒಂದು ಅಥವಾ ಎರಡು ಮಗುವಿಗೆ ಜನ್ಮ ನೀಡಿದ ಮಹಿಳೆಯ ಆರೋಗ್ಯಕ್ಕೆ ಹೋಲಿಸಿದರೆ ಏಳು ಅಥವಾ ಎಂಟು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರ ಆರೋಗ್ಯ ಅವರ ಜೀವಿತಾವಧಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು.

ಈ ಲೇಖನದಲ್ಲಿ ಇದೇ ವಿಚಾರವಾಗಿ ನಡೆದ ಕೆಲವು ಸಂಶೋಧನೆಗಳ ಅಧ್ಯಯನದ ವರದಿಗಳ ಆಧಾರದ ಮೇಲೆ ಮೂಡಿ ಬಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಡಲಾಗಿದೆ.

ಸಂಶೋಧನೆಗಳ ಅಧ್ಯಯನ ವರದಿಗಳು ಏನು ಹೇಳುತ್ತವೆ ?

ಸಂಶೋಧನೆಗಳ ಅಧ್ಯಯನ ವರದಿಗಳು ಏನು ಹೇಳುತ್ತವೆ ?

ಪ್ರಪಂಚದ ವಿವಿಧ ಸಂಶೋಧನೆಗಳು ಒಂದು ವಿಚಾರವನ್ನು ಸಾಬೀತು ಪಡಿಸಿವೆ. ಅದೇನೆಂದರೆ ಈ ಹಿಂದೆಯೂ ಕೂಡ ತಮ್ಮ ಜೀವನದಲ್ಲಿ ಹಲವು ಬಾರಿ ಹೆರಿಗೆಯಾದ ಹಲವಾರು ಮಹಿಳೆಯರಿಗೆ ಆಯಸ್ಸು ಕಡಿಮೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಅಂದರೆ ಎರಡು ಅಥವಾ ಮೂರು ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆಯರಿಗೆ ಹೋಲಿಸಿದರೆ ಆರು ಅಥವಾ ಏಳು ಮಕ್ಕಳಿಗೆ ಜನ್ಮ ಕೊಟ್ಟ ಮಹಿಳೆಯರು ತಮ್ಮ ಜೀವನದಲ್ಲಿ ಕಡಿಮೆ ವಯಸ್ಸಿಗೆ ಸಾವನ್ನಪ್ಪಿರುವ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ಕಾರಣ ಏನು ಎಂಬುದನ್ನು ನೋಡುವುದಾದರೆ ಸಂಶೋಧನೆಗಳು ತಮ್ಮ ಅಧ್ಯಯನದಲ್ಲಿ ತಿಳಿಸಿರುವ ಹಾಗೆ ಋತುಬಂಧದ ನಂತರದ ದಿನಗಳಲ್ಲಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮಹಿಳೆಗೆ ಬಹಳ ಬೇಗನೆ ವಯಸ್ಸಾಗುವಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಹಾಗಾಗಿ ಇತರರಿಗಿಂತ ಬಹಳ ಬೇಗನೆ ಸಾವನ್ನಪ್ಪುವ ಸಾಧ್ಯತೆ ಜಾಸ್ತಿ ಇರುತ್ತದೆ.

ಬೇರೆ ಸಂಶೋಧಕರ ಅಭಿಪ್ರಾಯದಲ್ಲಿ .......

ಬೇರೆ ಸಂಶೋಧಕರ ಅಭಿಪ್ರಾಯದಲ್ಲಿ .......

ಇನ್ನೊಂದು ಸಂಶೋಧನೆಯ ಮೂಲಗಳ ಮಾಹಿತಿಯ ಪ್ರಕಾರ ಗರ್ಭಾವಸ್ಥೆ ಮತ್ತು ಮಕ್ಕಳಾಗುವಿಕೆ ಪ್ರಕ್ರಿಯೆ ಕೆಲವು ಮಹಿಳೆಯರ ದೇಹದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ಕೆಲವು ವಯಸ್ಸಿನ ಅಂತರವನ್ನು ದಾಟಿದ ನಂತರ ಇದರ ಪ್ರಭಾವ ಅಷ್ಟಾಗಿ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ಈ ಹಿಂದೆ ನಡೆದಂತಹ ಹಲವಾರು ಸಂಶೋಧನೆಗಳು ಸಹ ತಾಯಂದಿರು ಎಷ್ಟು ಜನ ಮಕ್ಕಳಿಗೆ ಜನ್ಮ ನೀಡಿದ್ದಾರೆ, ಆ ಮಕ್ಕಳಲ್ಲಿ ಎಷ್ಟು ಜನ ಬದುಕುಳಿದಿದ್ದಾರೆ. ಹೆಚ್ಚು ಬಾರಿ ತಮ್ಮ ಹೆರಿಗೆ ಪ್ರಕ್ರಿಯೆಯಲ್ಲಿ ನಿರತವಾದ ತಾಯಂದಿರು ಬದುಕಿದ ವರ್ಷಗಳೆಷ್ಟು ಎಂಬ ಎಲ್ಲಾ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ನೀಡಿವೆ.

ಸಂಶೋಧನೆಯಲ್ಲಿ ಬಳಸಿಕೊಂಡ ಮಹಿಳೆಯರು ಮತ್ತು ಆರೋಗ್ಯ : -

ಸಂಶೋಧನೆಯಲ್ಲಿ ಬಳಸಿಕೊಂಡ ಮಹಿಳೆಯರು ಮತ್ತು ಆರೋಗ್ಯ : -

ಸಂಶೋಧಕರು 1999 ನೇ ಇಸವಿಯಿಂದ ಹಿಡಿದು 2010 ನೇ ಇಸವಿಯವರೆಗೆ ಸುಮಾರು 4418 ಮಹಿಳೆಯರನ್ನು ಸಂಶೋಧನೆಗೆ ಗುರಿ ಪಡಿಸಿ ಹೆಚ್ಚು ಮಕ್ಕಳಾಗಿರುವ ಮಹಿಳೆಯರ ಜೊತೆ ಒಂದು ಅಥವಾ ಎರಡು ಮಗುವಿಗೆ ಜನ್ಮ ನೀಡಿದ ಮಹಿಳೆಯರನ್ನು ಹೋಲಿಕೆ ಮಾಡಿ ನೋಡಿ ಕಂಡು ಬಂದಂತಹ ವಯಸ್ಸಿಗೆ ಅನುಗುಣವಾದ ಗುಣ - ಲಕ್ಷಣಗಳನ್ನು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡರು.

ಸಂಶೋಧಕರ ಉದ್ದೇಶ ಇದಷ್ಟೇ ಆಗಿತ್ತು. ಒಬ್ಬ ಆರೋಗ್ಯವಂತ ಮಹಿಳೆ ಹಲವು ಮಕ್ಕಳಿಗೆ ( ಅವಳಿ ಜವಳಿ ಆಗಿದ್ದರೂ ಸಹ ) ಜನ್ಮ ನೀಡಿದ ಬಳಿಕ ಬದುಕುಳಿಯುವ ಎಲ್ಲಾ ಮಕ್ಕಳು ತಾಯಿಯ ಆರೋಗ್ಯವನ್ನು ಕಾಪಾಡಿ ಆಯಸ್ಸು ಹೆಚ್ಚು ಮಾಡುತ್ತವೆಯೇ ಅಥವಾ ಮೃತ ಪಡುವ ಮಕ್ಕಳ ಸಂಖ್ಯೆ ತಾಯಿಯ ಹೆಚ್ಚಿನ ಆಯಸ್ಸಿಗೆ ಕಾರಣ ಆಗುತ್ತದೆಯೇ ಎಂಬ ವಿಚಾರವನ್ನು ಕಲೆ ಹಾಕಲು ಸಂಶೋಧಕರು ಅಧ್ಯಯನ ಕೈಗೊಂಡರು. ಇದಕ್ಕೆ ಸಂಬಂಧ ಪಟ್ಟಂತೆ ತಾಯಿಯ ಆರೋಗ್ಯದಲ್ಲಿ ಕಂಡು ಬರುವ ಹಲವಾರು ಲೋಪದೋಷಗಳನ್ನು ಗಮನದಲ್ಲಿಟ್ಟುಕೊಂಡು ಆಕೆಯ ದೇಹದ ಮೆಟಬಾಲಿಸಂ ಪ್ರಕ್ರಿಯೆ, ಮೂತ್ರ ಪಿಂಡಗಳ ಹಾಗೂ ಲಿವರ್ ನ ಕಾರ್ಯ ಚಟುವಟಿಕೆ, ಅನೀಮಿಯಾ ಸಮಸ್ಯೆ, ಕೆಂಪು ರಕ್ತ ಕಣಗಳ ಸದ್ಯದ ಸಂಖ್ಯೆ, ದೇಹದಲ್ಲಿನ ರೋಗ - ನಿರೋಧಕ ವ್ಯವಸ್ಥೆಯ ಕಾರ್ಯ - ಚಟುವಟಿಕೆ ಮತ್ತು ದೇಹದ ಉರಿಯೂತ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಕೈಗೊಂಡರು.

ಸಂಶೋಧಕರಿಗೆ ತಿಳಿದು ಬಂದ ವಿಚಾರ ಎಂದರೆ ಒಬ್ಬ ತಾಯಿಗೆ ತನ್ನ ಹೆರಿಗೆಯ ನಂತರ ಬದುಕುಳಿಯುವ ಹೆಚ್ಚು ಮಕ್ಕಳು ಕಂಡು ಬಂದರೆ ಆಕೆಯ ಆಯಸ್ಸು ಇತರ ಮಹಿಳೆಯರಿಗೆ ಹೋಲಿಸಿದರೆ ಕ್ಷೀಣಿಸುತ್ತಾ ಬರುತ್ತದೆ.

ಕೆಲವು ಸಂಶೋಧಕರು ಈ ವಿಚಾರದ ನಡುವೆ ತಮ್ಮ ಅಧ್ಯಯನಗಳ ಅನುಭವವನ್ನು ಅಭಿಪ್ರಾಯದ ಮೂಲಕ ಹೀಗೆ ಹಂಚಿಕೊಂಡಿದ್ದಾರೆ. ಅದೇನೆಂದರೆ ಮಕ್ಕಳಿಲ್ಲದ ಅಥವಾ ಒಂದರಿಂದ ಎರಡು ಮಕ್ಕಳು ಇರುವ ಮಹಿಳೆಯರಿಗೂ ಕೂಡ ಕೆಲವೊಮ್ಮೆ ಇದೇ ರೀತಿಯ ಪರಿಸ್ಥಿತಿ ಇರುತ್ತದೆ. ಅಂದರೆ ತುಂಬಾ ಕಡಿಮೆ ವಯಸ್ಸಿಗೆ ಇಂತಹ ಮಹಿಳೆಯರು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಹಾಗಾದರೆ ಇದಕ್ಕೆಲ್ಲಾ ಕಾರಣ ಏನಿರಬಹುದು ಎಂಬುದು ಅವರ ವಾದ.

ಆರೋಗ್ಯಕ್ಕೆ ಅನುವಂಶೀಯತೆ ಕೂಡ ಒಂದು ಸವಾಲು : -

ಆರೋಗ್ಯಕ್ಕೆ ಅನುವಂಶೀಯತೆ ಕೂಡ ಒಂದು ಸವಾಲು : -

ಹಲವು ಮಹಿಳೆಯರಿಗ ಅನುವಂಶೀಯ ಕಾರಣಗಳಿಂದ ಮಕ್ಕಳಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗೆಂದು ಅಂತಹ ಮಹಿಳೆಯರಿಗೆ ವಯಸ್ಸಾಗುವಿಕೆ ಪ್ರಕ್ರಿಯೆ ತಗ್ಗಿರುತ್ತದೆ ಎಂದೇನಿಲ್ಲ. ಏಕೆಂದರೆ ಕಡಿಮೆ ಮಕ್ಕಳಿರುವ ಅಥವಾ ಮಕ್ಕಳೇ ಇಲ್ಲದೆ ಇರುವ ಮಹಿಳೆಯರಿಗೆ ಸಾಮಾಜಿಕವಾಗಿ ಕೆಲವೊಮ್ಮೆ ಹೆಚ್ಚು ಮಕ್ಕಳು ಇರುವ ತಾಯಂದಿರಿಗೆ ಸಿಗುವ ರೀತಿ ಬೆಂಬಲ ಸಿಗದೇ ಇರಬಹುದು. ಇದು ಅವರ ಮಾನಸಿಕ ಒತ್ತಡವನ್ನು ಹೆಚ್ಚು ಮಾಡಬಹುದು. ಇದರಿಂದಲೂ ಸಹ ವಯಸ್ಸಾಗುವಿಕೆ ಪ್ರಕ್ರಿಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಹಾಗಾಗಿ ಗರ್ಭಾವಸ್ಥೆ ಮತ್ತು ಮಕ್ಕಳ ಜನನ ಕೇವಲ ಕೆಲವು ಮಹಿಳೆಯರಿಗೆ ಮಾತ್ರ ಆರೋಗ್ಯಕ್ಕೆ ಅನುಕೂಲವನ್ನು ಉಂಟು ಮಾಡಬಹುದು. ಆದರೆ ಹಲವಾರು ಮಹಿಳೆಯರಿಗೆ ಇದರಿಂದ ತೊಂದರೆಯೇ ಹೆಚ್ಚು ಎಂದು ಹೇಳಬಹುದು.

ಮಾನಸಿಕ ಒತ್ತಡ ಕಡಿಮೆಯಾದರೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಋತುಬಂಧದ ನಂತರದಲ್ಲಿ ಕಂಡು ಬಂದ ನಿದರ್ಶನಗಳು : -

ಋತುಬಂಧದ ನಂತರದಲ್ಲಿ ಕಂಡು ಬಂದ ನಿದರ್ಶನಗಳು : -

ಋತುಬಂಧಕ್ಕೆ ಮುಂಚಿನ ಮಹಿಳೆಯರಲ್ಲಿ ಸಂಶೋಧಕರು ಇದೇ ವಿಚಾರವಾಗಿ ಅಧ್ಯಯನ ನಡೆಸಿದರು. ಆದರೆ ಅವರಿಗೆ ಅತಿ ಹೆಚ್ಚು ಮಕ್ಕಳಿರುವ ಮಹಿಳೆಯರು ಸಾವನ್ನಪ್ಪಿರುವ ಯಾವುದೇ ಪ್ರಕರಣಗಳು ಸಿಗಲಿಲ್ಲ. ಹಾಗಾಗಿ ಋತುಬಂಧದ ಮುಂಚೆ ಹೆಚ್ಚು ಮಕ್ಕಳಿರುವ ಮಹಿಳೆಯರು ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಬಹಳ ಬೇಗನೆ ತಮ್ಮ ಜೀವನದಲ್ಲಿ ಕಂಡುಕೊಳ್ಳುತ್ತಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಇದಕ್ಕೆ ಮಹಿಳೆಯರ ಪಲವತ್ತತೆ ಕೂಡ ಕಾರಣವಾಗಿರಬಹುದು. ಅವರ ದೇಹ ಗರ್ಭಾವಸ್ಥೆಗೆ ಸಂಬಂಧ ಪಟ್ಟಂತೆ ಯಾವುದೇ ನಕಾರಾತ್ಮಕ ಪರಿಣಾಮಗಳಿಗೆ ಎಡೆ ಮಾಡಿಕೊಡದೆ ಇರಬಹುದು ಅಥವಾ ಸಂತಾನೋತ್ಪತ್ತಿಗೆ ಯಾವುದೇ ತೊಂದರೆ ಉಂಟು ಮಾಡದೆ ಇರಬಹುದು.

ಸಂತಾನೋತ್ಪತ್ತಿಯ ವಿಚಾರ ಬಂದಾಗ : -

ಸಂತಾನೋತ್ಪತ್ತಿಯ ವಿಚಾರ ಬಂದಾಗ : -

ಒಮ್ಮೆ ಇಂತಹ ಮಹಿಳೆಯರು ಸಂತಾನೋತ್ಪತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ದೇಹದ ಯಾವುದೇ ತಂತ್ರಗಳು ಫಲವತ್ತತೆಯ ಸಂದರ್ಭಕ್ಕೆ ತಕ್ಕಂತೆ ಉಂಟು ಮಾಡುವ ನಕಾರಾತ್ಮಕ ಪರಿಣಾಮಗಳು ಮಕ್ಕಳಾಗುವಿಕೆಯ ಪ್ರಭಾವದ ಮೇಲೆ ದೀರ್ಘ ಕಾಲದವರೆಗೆ ಕೆಲಸ ಮಾಡುವುದಿಲ್ಲ ಅಥವಾ ಋತುಬಂಧದ ನಂತರ ಕಡಿಮೆ ಪರಿಣಾಮಗಳನ್ನು ಹೊಂದಿರುತ್ತದೆ.

ಸಂಶೋಧನೆ ಹೇಳುವ ಪ್ರಕಾರ ಮಕ್ಕಳಾಗುವಿಕೆ ಮತ್ತು ವಯಸ್ಸಾಗುವಿಕೆ ಪ್ರಕ್ರಿಯೆಗೆ ಸಂಬಂಧ ಪಟ್ಟಂತೆ ನಿಜವಾದ ಕಾರಣಗಳು ಮತ್ತು ಅದರ ಪ್ರಭಾವಗಳು ತಿಳಿದು ಬಂದಿಲ್ಲ ಮತ್ತು ಅಧ್ಯಯನಗಳು ಅದನ್ನು ಸಾಬೀತು ಪಡಿಸಲು ಸಹ ಸಾಧ್ಯವಾಗಿಲ್ಲ.

ಕೆಲವು ಮಹಿಳೆಯರ ಆರೋಗ್ಯ ಇತರರ ಆರೋಗ್ಯವನ್ನು ಪ್ರತಿನಿಧಿಸುವುದಿಲ್ಲ : -

ಕೆಲವು ಮಹಿಳೆಯರ ಆರೋಗ್ಯ ಇತರರ ಆರೋಗ್ಯವನ್ನು ಪ್ರತಿನಿಧಿಸುವುದಿಲ್ಲ : -

ಹಾಗಾಗಿ ಕೆಲವು ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದ ಸಂದರ್ಭದಲ್ಲಿ ಪ್ರಪಂಚದ ಎಲ್ಲಾ ಮಹಿಳೆಯರನ್ನೂ ಅವರು ಪ್ರತಿನಿಧಿಸುತ್ತಾರೆ ಎಂದು ಹೇಳಲು ಬರುವುದಿಲ್ಲ. ಅದೂ ಅಲ್ಲದೆ ಒಬ್ಬ ವ್ಯಕ್ತಿಯ ಆರೋಗ್ಯ ಸಮಯಕ್ಕೆ ತಕ್ಕಂತೆ ಅಥವಾ ರೂಢಿಸಿಕೊಂಡು ಬಂದ ಜೀವನ ಶೈಲಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಅಧ್ಯಯನಗಳ ಅಂಶಗಳು ಸಾಮಾನ್ಯವಾಗಿ ಮಹಿಳೆಯರಲ್ಲಿ ಇರಬಹುದಾದ ಆರೋಗ್ಯದ ಪ್ರಭಾವಗಳ ಬಗ್ಗೆ ಬೆಳಕು ಚೆಲ್ಲುವ ಹಾಗಿರಬಹುದು. ಹಲವಾರು ಮಹಿಳೆಯರು ಇಂದಿಗೂ ಸಹ ತಮ್ಮ ಒಂದು ಅಥವಾ ಎರಡು ಮಕ್ಕಳ ಹೆರಿಗೆಯ ನಂತರ ಬಹಳ ಬೇಗನೆ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಅಧ್ಯಯನದ ಅಗತ್ಯತೆ ಇದೆ : -

ಋತುಬಂಧದ ನಂತರ ಮಹಿಳೆಯರ ಫಲವತ್ತತೆಯ ಆರೋಗ್ಯದ ವಿಚಾರವಾಗಿ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ವಯಸ್ಸಾಗುವಿಕೆಯ ಮೇಲೆ ಇದರ ಪ್ರಭಾವ ತಿಳಿದುಕೊಳ್ಳಲು ಬೇರೆ ಬೇರೆ ಪ್ರಾಂತ್ಯದ ಬೇರೆ ಬೇರೆ ವಯಸ್ಸಿನ ಮಹಿಳೆಯರನ್ನು ಅಧ್ಯಯನದಲ್ಲಿ ಬಳಸಿಕೊಳ್ಳಬೇಕಾಗಿದೆ ಎಂಬುದು ಒಂದು ವರ್ಗದ ಸಂಶೋಧಕರ ಮಾತು.

English summary

Women who have few or lots of kids may age faster

Women who have few or lots of kids may age faster than those who have 3 or 4, a study suggests, read on...
X
Desktop Bottom Promotion