Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೊರೊನಾ ವ್ಯಾಕ್ಸಿನ್: ಮೊದಲ ಡೋಸ್ ಬಳಿಕ ಕೊರೊನಾ ಬಂದ್ರೆ ಎರಡನೇ ಡೋಸ್ ಯಾವಾಗ ತೆಗೆಯಬಹುದು?
18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಲಭ್ಯವಾಗಿರುವುದರಿಂದ ದೇಶದ ಶೇ. 70 ರಷ್ಟು ಜನರಿಗೆ ವ್ಯಾಕ್ಸಿನ್ ಲಭಿಸುವಂತಾಗುವುದು. ಈ ಲಸಿಕೆ ಅರ್ಹರಾಗಿರುವ ಪ್ರತಿಯೊಬ್ಬರು ತೆಗೆದುಕೊಂಡರೆ ಈಗ ಕೊರೊನಾ ಆರ್ಭಟಿಸುತ್ತಿದ್ದರೂ ಕೆಲವೇ ದಿನದಲ್ಲಿ ಸೋಂಕು ಕಡಿಮೆಯಾಗುವ ಎಲ್ಲಾ ಸಾದ್ಯತೆ ಇದೆ.

ಕೊರೊನಾ ವ್ಯಾಕ್ಸಿನ್ ಅನ್ನು ಎರಡು ಡೋಸ್ ಆಗಿ ತೆಗೆಯಬೇಕು. ಒಂದು ಡೋಸ್ ಪಡೆದ ಬಳಿಕ 4 ವಾರಗಳ ನಂತರ ಮತ್ತೊಂದು ಡೋಸ್ ತೆಗೆದುಕೊಳ್ಳಬೇಕು. ಕೋವಿಶೀಲ್ಡ್ ತೆಗೆದುಕೊಂಡಿದ್ದರೆ ಮೊದಲ ಡೋಸ್ ತೆಗೆದುಕೊಂಡ 6-8 ವಾರಗಳಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು.
ಕೊರೊನಾವೈರಸ್ 2ನೇ ಅಲೆ ತುಂಬಾ ವೇಗವಾಗಿ ಹರಡುತ್ತಿರುವುದರಿಂದ ಮೊದಲ ಡೋಸ್ ಪಡೆದ ಕೆಲವರಲ್ಲಿಯೂ ಸೋಂಕು ಕಂಡು ಬರುತ್ತಿದೆ. ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್ ಕೊರೊನಾವ ವಿರುದ್ಧ ಸಮರ್ಥವಾಗಿ ಹೋರಾಡುವ ಲಸಿಕೆಗಳು ಆಗಿದ್ದರೂ, ಈ ಲಸಿಕೆ ಪಡೆದುಕೊಂಡರೆ ಸೋಂಕು ಬರುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ.

ಕೊರೊನಾ ಲಸಿಕೆ ಪಡೆದ ಬಳಿಕ ಕೊರೊನಾ ಬಂದ್ರೆ?
ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಲ್ಲಿ ಶೇ.4ರಷ್ಟು ಜನರಲ್ಲಿ ಸೋಂಕು ಬಂದಿದೆ. ಆದರೆ ಕೋವಿಡ್ 19 ಲಸಿಕೆ ಪಡೆದವರಲ್ಲಿ ಹಾಗೂ ಪಡೆಯದವರಲ್ಲಿ ಇರುವ ವ್ಯತ್ಯಾಸವೇನೆಂದರೆ ಈ ಲಸಿಕೆ ಪಡೆದುಕೊಂಡವರಲ್ಲಿ ರೋಗ ಲಕ್ಷಣಗಳು ಗಂಭೀರವಾಗುವುದಿಲ್ಲ, ಅಲ್ಲದೆ ಬೇಗನೆ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಬೇಕು.

ಕೋವಿಡ್ 19 ಪಾಸಿಟಿವ್ ಬಂದವರು ಲಸಿಕೆ ಪಡೆಯಬಹುದೇ?
ಕೋವಿಡ್ 19 ಪಾಸಿಟಿವ್ ಬಂದಾಗ ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವಂತಿಲ್ಲ. ಕೊರೊನಾದಿಂದ ಚೇತರಿಸಿದ 4-8 ವಾರಗಳ ಬಳಿಕ ತಿನ್ನಬೇಕು.

ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರು ಲಸಿಕೆ ತೆಗೆದುಕೊಂಡರೆ?
ಕೆಲವರಿಗೆ ಕೋವಿಡ್ 19 ಬಂದರೂ ಯಾವುದೇ ಲಕ್ಷಣಗಳಿರುವುದಿಲ್ಲ, ಹಾಗಾಗಿ ಅವರಿಗೆ ಸೋಂಕು ಬಂದಿರುವುದು ಗೊತ್ತಿರುವುದಿಲ್ಲ , ಅಂತ ಸಮಯದಲ್ಲಿ ಕೋವಿಡ್ 19 ಲಸಿಕೆ ತೆಗೆದುಕೊಂಡರೆ ಭಯ ಪಡಬೇಕಾಗಿಲ್ಲ, ಲಸಿಕೆಯೂ ನಿಮ್ಮ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.

ಕೋವಿಡ್ 19 ಬಂದಾಗ ಎರಡನೇ ಡೋಸ್ ಯಾವಾಗ ಪಡೆಯಬೇಕು?
ಮೊದಲ ಡೋಸ್ ಪಡೆದ ಬಳಿಕ ಕೋವಿಡ್ 19 ಬಂದಾಗ ಎರಡನೇ ಡೋಸ್ ಯಾವಾಗ ಪಡೆಯಬೇಕು? ಎಂಬ ಪ್ರಶ್ನೆ ಹಲವರಲ್ಲಿ ಇರುತ್ತದೆ. ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿರುವುದರಿಂದ ಕೊರೊನಾ ಸೋಂಕಿನಿಂದ ಬೇಗನೆ ಚೇತರಿಸಿಕೊಳ್ಳಬಹುದು. ಕೊರೊನಾದಿಂದ ಚೇತರಿಸಿದ ಬಳಿಕ 4 ವಾರಗಳನ್ನು ಕಳೆದ ಮೇಲೆ ಲಸಿಕೆ ಪಡೆಯಿರಿ.



Click it and Unblock the Notifications
