For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಸೋಂಕಿನ ಲಕ್ಷಣಗಳೇನು? ಯಾವಾಗ ಪರೀಕ್ಷೆ ಮಾಡಿಸಬೇಕು?

|

ವಿಶ್ವದಲ್ಲಿ 170 ರಾಷ್ಟ್ರಗಳಲ್ಲಿ ಕೊರೊನಾವೈರಸ್‌ ಸೋಂಕು ಭಯಾನಕವಾಗಿ ಹಬ್ಬುತ್ತಿದೆ. ಸೋಂಕನ್ನು ನಿಯಂತ್ರಿಸುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಕಾಯಿಲೆ ಯಾರಿಗೆ ಇದೆ ಎಂಬುವುದೇ ಮೊದಲಿಗೆ ಹೇಳಲು ಸಾಧ್ಯವಾಗುವುದಿಲ್ಲ.

When One Can Tested Coronavirus Test In India

ಕೊರೊನಾವೈರಸ್ ದೇಹವನ್ನು ಹೊಕ್ಕಾಗ ಮೊದಲಿಗೆ ನೋಡಲು ಆರೋಗ್ಯವಂತರಾಗಿಯೇ ಕಾಣುತ್ತಾರೆ, ಸೋಂಕು ಹೊಕ್ಕವರಲ್ಲಿ ರೋಗದ ಲಕ್ಷಣಗಳು ಗೋಚರಿಸುವುದೇ 10-14 ದಿನಗಳ ಒಳಗೆ. ಅದರೊಳಗಾಗಿ ಆ ವ್ಯಕ್ತಿಯ ಸಂಪರ್ಕಕಕ್ಕೆ ಬಂದ ಅಷ್ಟೂ ಜನರಿಗೆ ಸೋಂಕು ತಗುಲಿರುತ್ತದೆ. ಅದು ಅವರಿಗೆ ತಿಳಿಯುವ ಮುಂಚೆಯೇ ಮತ್ತೊಂದಿಷ್ಟು ಜನರಿಗೆ ಸೋಂಕು ತಗುಲಿರುತ್ತದೆ. ಆದ್ದರಿಂದಲೇ ಈ ಸೋಂಕು ತಡೆಗಟ್ಟಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುತ್ತಾರೆ.

ಇನ್ನು ಕೊರೊನಾವೈರಸ್‌ ಸೋಂಕು ಬಂದಾಗಿನಿಂದ ಏನಾದರೂ ಸಾಮಾನ್ಯ ಜ್ವರ, ಶೀತ ಕಾಣಿಸಿದರೂ ಜನರು ಕೋವಿಡ್ 19 ಬಂದಿರಬಹುದೆಂದು ಭಯ ಬೀಳುತ್ತಿದ್ದಾರೆ. ಇನ್ನು ಕೆಲವರು ಈ ಸೋಂಕಿನ ಲಕ್ಷಣಗಳು ಕಂಡು ಬಂದರೂ ನಿರ್ಲಕ್ಷ್ಯ ಮಾಡಿ ತಮಗೂ ಅಪಾಯ ತಂದುಕೊಳ್ಳುವುದರ ಜೊತೆಗೆ ಮತ್ತೊಬ್ಬರಿಗೆ ಕಾಯಿಲೆ ಹರಡುತ್ತಿದ್ದಾರೆ.

ಕೋವಿಡ್ 19 ಕಾಯಿಲೆ ಬಂದಾಗ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ

ಕೋವಿಡ್ 19 ಕಾಯಿಲೆ ಬಂದಾಗ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ

ಕೊರೊನಾವೈರಸ್ ಸೋಂಕಿ 2-14 ದಿನಗಳ ಒಳಗಾಗಿ ಅದರ ಲಕ್ಷಣಗಳು ಕಂಡು ಬರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜ್ವರ, ತಲೆಸುತ್ತು, ಕೆಮ್ಮು(ಕಫ ಬರಬಹುದು, ಒಣಕೆಮ್ಮು ಕೂಡ ಆಗಿರಬಹುದು) ಮೂಗುಕಟ್ಟುವುದು, ತಲೆನೋವು ಕಂಎಉ ಬರುತ್ತದೆ. ಕೆಲವೊಂದು ರೋಗಿಗಳಲ್ಲಿ ಬೇಧಿ, ತಲೆಸುತ್ತು, ವಾಂತಿ ಕೂಡ ಕಂಡು ಬರುತ್ತದೆ.

ಇವುಗಳಲ್ಲಿ ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿದರೆ ವೈದ್ಯರನ್ನು ಸಹಾಯವಾಣಿ ಮೂಲಕ ಸಂಪರ್ಕಿಸಿ. ಸರಕಾರ ಕೂಡ ಸಣ್ಣ-ಪುಟ್ಟ ಸಮಸ್ಯೆ ಕಾಣಿಸಿದರೆ ಆಸ್ಪತ್ರೆಗೆ ಬರಲು ಹೋಗಬೇಡಿ, ಮನೆಯಲ್ಲಿಯೇ ಪ್ರತ್ಯೇಕವಾಗಿರಿ, ವೈದ್ಯರಿಗೆ ಮಾಹಿತಿ ನೀಡಿ ಎಂದಿದ್ದಾರೆ.

ಒಂದು ವೇಳೆ ತುಂಬಾ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿದಾಗ ವೈದ್ಯರಿಗೆ ತಕ್ಷಣವೇ ಮಾಹಿತಿ ತಿಳಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದೆ.

ಜನರು ಕೋವಿಡ್ 19 ಬಗ್ಗೆ ಅನಗ್ಯತವಾಗಿ ಭಯಪಡುವುದನ್ನು ತಪ್ಪಿಸಲು ಯಾರು, ಯಾವಾಗ ಕೋವಿಡ್ 19 ಪರೀಕ್ಷೆ ಮಾಡಿಸಬೇಕೆಂಬ ಸಲಹೆಗಳನ್ನು ಮಾರ್ಚ್‌ 20ಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ. ಅವುಗಳೆಂದರೆ:

ವರ್ಗ 1

ವರ್ಗ 1

ಈ ಸಮೀಪದ ದಿನಗಳಲ್ಲಿ ಅಂದರೆ ಕಳೆದ 14 ದಿನಗಳ ಹಿಂದೆ ಅಂಥವರು ಕ್ವಾರೆಂಟೈನ್‌ನಲ್ಲಿರಬೇಕು ಅಲ್ಲದೆ ಏನಾದರೂ ಕೋವಿಡ್ 19 ಲಕ್ಷಣಗಳಾದ ಕೆಮ್ಮು, ಜ್ವರ, ಸೀನು, ತಲೆನೋವು ಕಾಣಿಸಿದರೆ ಪರೀಕ್ಷೆ ಮಾಡಿಸಬೇಕು.

ವರ್ಗ 2

ವರ್ಗ 2

ಕೋವಿಡ್ 19 ಸೋಂಕಿತರ ಸಂಪರ್ಕಕಕ್ಕೆ ಬಂದವರಾಗಿದ್ದು, ಕೋವಿಡ್ 19 ಲಕ್ಷಣಗಳು ಕಾಣಿಸಿದರೆ ಪರೀಕ್ಷೆ ಮಾಡಿಸಬೇಕು. ಅವರು ಪ್ರಯಾಣಿಸಿದ ಗಾಡಿಯಲ್ಲಿ ಪ್ರಯಾಣಿಸಿದವರು, ಅವರ ಜೊತೆ ಬೆರೆತವರು ಇವರಿಗೆಲ್ಲಾ ಕೋವಿಡ್ 19 ಅಪಾಯವಿರುವುದರಿಂದ ಪರೀಕ್ಷೆಗೆ ಒಳಗಾಗಬೇಕು.

ವರ್ಗ 3

ವರ್ಗ 3

ಆಸ್ಪತ್ರೆ ಸಿಬ್ಬಂದಿವರ್ಗ 1ಗಳಾಗಿದ್ದರೆ ಏನಾದರೂ ಕೋವಿಡ್ 19 ಲಕ್ಷಣಗಳು ಕಾಣಿಸಿದರೆ ಪರೀಕ್ಷೆ ಮಾಡಿಸಬೇಕು. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವವರು ತುಂಬಾ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ಸೋಂಕಿನ ಲಕ್ಷಣಗಳು ಕಂಡು ಬಂದರೆ ಪರೀಕ್ಷೆಗೆ ಒಳಗಾಗಬೇಕು.

ವರ್ಗ 4

ವರ್ಗ 4

ಜ್ವರ, ಕೆಮ್ಮು, ತೀವ್ರ ಉಸಿರಾಟದ ತೊಂದರೆ ಕಾಣಿಸಿದರೆ ಕೋವಿಡ್ 19 ಪರೀಕ್ಷೆ ಮಾಡಿಸಬೇಕು. ಸಾಧಾರಣ ಜ್ವರ ಬಂದರೆ ಭಯ ಪಡಬೇಕಾಗಿಲ್ಲ. ಆದರೆ ಜ್ವರದ ಜೊತೆಗೆ ಉಸಿರಾಟದ ತೊಂದರೆ ಕೋವಿಡ್‌ನ ಲಕ್ಷಣವಾಗಿದೆ.

ವರ್ಗ 5

ವರ್ಗ 5

ಇನ್ನು ಯಾವುದೇ ಲಕ್ಷಣಗಳು ಕಂಡು ಬರದಿದ್ದರೂ ಕೋವಿಡ್ 19 ಇರುವ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರೆ ಪರೀಕ್ಷೆ ಮಾಡಿಸಬೇಕು. ಉದಾಹರಣೆಗೆ ಮನೆಯಲ್ಲಿ ಯಾರಿಗಾದರೂ ಕೋವಿಡ್ ಸೋಂಕು ತಗುಲಿದ್ದರೆ ಆಗ ನೀವೂ ಮಾಡಿಸಬೇಕು. ಇನ್ನು ಕೋವಿಡ್ 19 ಇದ್ದ ವ್ಯಕ್ತಿಯ ಜೊತೆಗೆ ಪ್ರಯಾಣಿಸಿದವರು ಅವರನ್ನು ಮುಟ್ಟುವುದು ಮಾಡಿದ್ದರೆ ಅವರು ಪರೀಕ್ಷೆಗೆ ಒಳಗಾಗಬೇಕು. ಇನ್ನು ರೋಗಿಯ ಬಟ್ಟೆ, ಪಾತ್ರೆಗಳನ್ನು ತೊಳೆಯುವುದು ಮಾಡಿದ್ದರೆ ಅಂಥವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕು.

English summary

When One Can Tested Coronavirus Test In India

People are being panic about coronavirus. If mild fever comes people get scares. But Not everyone is presently being covid 19 tested in India. The Union Health Ministry has issued testing guidelines to states and private hospitals.
Story first published: Monday, March 30, 2020, 16:13 [IST]
X
Desktop Bottom Promotion