Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಕೋವಿಡ್-19 ಮಕ್ಕಳಲ್ಲಿ ಕಂಡು ಬರುತ್ತಿದೆ ಭಿನ್ನ ಲಕ್ಷಣಗಳು
ಕೊರೊನಾವೈರಸ್ ಬಗ್ಗೆ ಹೆಚ್ಚೆಚ್ಚು ಅರಿಯಲು ಹೋದೆಷ್ಟು ಆ ವೈರಸ್ ಮತ್ತಷ್ಟು ನಿಗೂಢವಾಗಿಯೇ ಕಾಣುತ್ತಿದೆ. ಕೊರೊನಾವೈರಸ್‌ನಿಂದ ಬರುವ ಕೋವುಡ್-19 ಎಂಬ ಪಿಡುಗು ವೈದ್ಯಕೀಯ ಲೋಕವನ್ನು ಕಾಡುತ್ತಿದೆ. ಇದರಿಂದಾಗಿ ವಿಶ್ವದಲ್ಲಿ ಸಾವಿರಾರು ಸಾವು-ನೋವು ಸಂಭವಿಸಿದ್ದು, ಇನ್ನೂ ಇದರ ಆತಂಕ ಕಡಿಮೆಯಾಗಿಲ್ಲ. ಇದು ಸೋಂಕಿತ ವ್ಯಕ್ತಿಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೆಮ್ಮು, ಜ್ವರ, ಸೀನು ಇವು ಕೊರೊನಾವೈರಸ್‌ನ ಪ್ರಾರಂಭಿಕ ಲಕ್ಷಣಗಳು, ನಂತರ ರೋಗಿಯಲ್ಲಿ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಆದರೆ ಎಲ್ಲಾ ಕೋವಿಡ್-19 ರೋಗಿಗಳಲ್ಲಿ ಈ ಲಕ್ಷಣಗಳೇ ಕಂಡು ಬರುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ. ಕೆಲವರಲ್ಲಿ ಕೆಮ್ಮು ಕಾಣಿಸಿಕೊಳ್ಳುವ ಮುನ್ನ ಕಾಲುಗಳಲ್ಲಿ ಊತ ಕಂಡು ಬಂದು ಕಾಲುಗಳು ಕೆಂಪಾಗಿದ್ದೆವು. ಇನ್ನು ಕೆಲವರಲ್ಲಿ ಇದಾವುದೇ ಲಕ್ಷಣಗಳು ಕಂಡು ಬರದಿದ್ದರೂ ಅವರ ಸ್ವ್ಯಾಬ್ ಪರೀಕ್ಷೆ ಮಾಡಿದಾಗ ಕೊರೊನಾವೈರಸ್ ಇರುವುದು ಪತ್ತೆಯಾಗಿದೆ.
ಕೊರೊನಾವೈರಸ್ ದೇಹವನ್ನು ಸೇರಿದಾ 2-14 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಆದರೆ ಇನ್ನು ಕೆಲವು ಕೇಸ್‌ಗಳಲ್ಲಿ 21 ದಿನಗಳ ಬಳಿಕ ಸೋಂಕು ಪತ್ತೆಯಾಗಿರುವುದೂ ಇದೆ. ಹೀಗಾಗಿ ಕೊರೊನಾವೈರಸ್ ಲಕ್ಷಣಗಳು ಹೀಗೆ ಇರುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯವಾಗಿ ಕೆಮ್ಮು, ಸೀನು, ಜ್ವರ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಕೊರೊನಾಸೋಂಕು ಇರಬಹುದೆಂದು ಸಂಶಯಿಸಿ ಸ್ವ್ಯಾಬ್ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದರೆ ಕೋವಿಡ್ -19 ಇದೆಯೆಂದು ದೃಢಪಡಿಸಲಾಗುವುದು.

ಮಕ್ಕಳನ್ನೂ ಕಾಡುತ್ತಿರುವ ಕೊರೊನಾವೈರಸ್
ಈ ಕೊರೊನಾವೈರಸ್ ಪುಟ್ಟ ಮಕ್ಕಳನ್ನೂ ಬಿಡುತ್ತಿಲ್ಲ, ಅವರಿಗೂ ಕಾಡುತ್ತಿದೆ ಆದರೆ ಮಕ್ಕಳಲ್ಲಿ ಕೊರೊನಾವೈರಸ್ ವಯಸ್ಕರಲ್ಲಿ ಕಂಡು ಬರುವುದಕ್ಕಿಂತ ಸ್ವಲ್ಪ ಭಿನ್ನವಾದ ಲಕ್ಷಣಗಳನ್ನು ತೋರಿಸುತ್ತಿವೆ ಎಂದು ಇತ್ತೀಚೆಗೆ ಬಂದ ವರದಿಗಳು ಹೇಳಿವೆ ಈ ಕುರಿತ ಸಂಶೋಧನೆ ವರದಿಗಳು ಅಮೆರಿಕನ್ ಮೆಡಿಕಲ್ ಅಸೋಷಿಯೇಷನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಸಂಶೋಧನೆಯಲ್ಲಿ ಅಮೆರಿಕ, ಚೀನಾ, ಸಿಂಗಾಪುರ ದೇಶಗಳಲ್ಲಿ ಕೊರೊನಾವೈರಸ್ ಬಾಧಿತ ಮಕ್ಕಳನ್ನು ಪರಿಶೀಲಿಸಿ ಸಿದ್ಧ ಪಡಿಸಲಾಗಿದೆ.

ಪೋಷಕರಲ್ಲಿ ಹೆಚ್ಚಿಸಿದ ಆತಂಕ
ಪುಟಾಣಿಗಳಲ್ಲಿ ಕೊರೊನಾವೈರಸ್ ಪತ್ತೆಯಾಗುತ್ತಿರುವುದು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಅದರಲ್ಲಿ ಅಂತರರಾಷ್ಟ್ರೀಯ ವೈದ್ಯಕೀಯ ವರದಿಗಳ ಪ್ರಕಾರ ಕೊರೊನಾವೈರಸ್ ಪತ್ತೆಯಾದ ಮಕ್ಕಳಲ್ಲಿ ಭಿನ್ನವಾದ ಲಕ್ಷಣಗಳು ಕಂಡು ಬಂದಿವೆ. ಬ್ರಿಟನ್ ಸೇರಿ ಇತರ ದೇಶಗಳಲ್ಲಿ ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದಿರುವುದಾಗಿ ವರದಿಗಳು ಹೇಳಿವೆ.

ಮಕ್ಕಳಲ್ಲಿ ಕಂಡು ಬರುವ ಭಿನ್ನ ಲಕ್ಷಣ
ಕೆಲ ಕೋವಿಡ್ 19 ಮಕ್ಕಳಲ್ಲಿ ವಯಸ್ಕರಲ್ಲಿ ಕಂಡು ಬಂದತೆ ಕೆಮ್ಮು, ಜ್ವರ ಕಾಣಿಸಿಕೊಳ್ಳಲಿಲ್ಲ, ಬದಲಿಗೆ ಅವರಿಗೆ ಹೊಟ್ಟೆ ನೋವು, ಹೊಟ್ಟೆ ಉರಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಭಾರತೀಯ ಮೂಲದ ಬ್ರಿಟಿಷ್ ವೈದ್ಯ ಡಾ. ರಮೇಶ್ ಮೆಹ್ತಾ CN News18ಗೆ ಹೇಳಿದ್ದಾರೆ. ಆದರೆ ಮಕ್ಕಳ ರಕ್ತ ಪರೀಕ್ಷೆ ಮಾಡಿದಾಗ ಅದರ ಫಲಿತಾಂಶ ಕೋವಿಡ್-19 ನಿಂದ ಗಂಭೀರವಾದ ರೋಗಿಗಳಿಗೆ ರಕ್ತ ಪರೀಕ್ಷೆ ವರದಿಯಂತೆ ಇರುತ್ತದೆ ಎಂದಿದ್ದಾರೆ.

ತುಂಬಾ ಮಕ್ಕಳಲ್ಲಿ ಲಕ್ಷಣಗಳು ಗೋಚರಿಸುವುದು ಇಲ್ಲ
ಕೋವಿಡ್ 19 ಬಾಧಿತ ಸಾಕಷ್ಟು ಮಕ್ಕಳಲ್ಲಿ ಕೋವಿಡ್-19 ಲಕ್ಷಣಗಳೇ ಇರಲಿಲ್ಲ, ಮಕ್ಕಳಲ್ಲಿ ರೋಗದ ಪ್ರಮಾಣ ಕಡಿಮೆ ಇದ್ದು ಅವರು ಬೇಗನೆ ಚೇತರಿಸಿಕೊಳ್ಳುತ್ತಿರುವುದು ಸಮಧಾನಕರ ವಿಷಯವಾಗಿದೆ.
ಇನ್ನು ದೊಡ್ಡವರಿಗೆ ಹೋಲಿಸಿದರೆ ಮಕ್ಕಳು ವೆಂಟಿಲೇಟರ್‌ಗೆ ಹೋಗಿದ್ದು ತುಂಬಾ ವಿರಳ. ಕೆಲವು ಮಕ್ಕಳಲ್ಲಿ ಬೇಧಿ, ವಾಂತಿ ಕಂಡು ಬರುತ್ತದೆ ಆದರೆ ವಯಸ್ಕರಿಗೆ ಉಂಟಾಗುವಂತೆ ಪರಿಸ್ಥಿತಿ ಗಂಭೀರವಾಗುವುದಿಲ್ಲ. ಇದರಿಂದಾಗಿ ಮಕ್ಕಳು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ.

ಕೋವಿಡ್-19 ಮಕ್ಕಳಲ್ಲಿ ಹರಡುವುದು ತಡೆಯುವುದು
ಮಕ್ಕಳಿಗೆ ಪೋಷಕರಿಗೆ ಸೋಂಕಿದ್ದರೆ ಅಥವಾ ಸೋಂಕಿರುವವರು ಮಕ್ಕಳ ಸಂಪರ್ಕಕಕ್ಕೆ ಬಂದರೆ ಕೊರೊನಾವೈರಸ್ ಹರಡುತ್ತದೆ. ಮನೆಯಲ್ಲಿ ಯಾರಿಗಾದರೂ ಕೋವಿಡ್-19 ಲಕ್ಷಣಗಳಿದ್ದರೆ ಮಕ್ಕಳನ್ನು ಅವರಿಂದ ದೂರವಿಡಿ ಅಲ್ಲದೆ ಈ ಸಮಯದಲ್ಲಿ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೊರಗಡೆ ಆಡಲು ಬಿಡುವುದು ಕೂಡ ಅಷ್ಟು ಸುರಕ್ಷಿತವಲ್ಲ. ಅನವಶ್ಯಕವಾಗಿ ಹೊರಗಡೆ ಕರೆದುಕೊಂಡು ಹೋಗಬೇಡಿ. ಮಕ್ಕಳಿಗೆ ಮೆನಯೂಟ ನೀಡಿ. ಹಣ್ಣು-ತರಕಾರಿಗಳು ಅವರ ಆಹಾರದಲ್ಲಿರುವಂತೆ ನೋಡಿಕೊಳ್ಳಿ.
ಮಕ್ಕಳಿಗೆ ಶುಚಿತ್ವದ ಬಗ್ಗೆ ಮನವರಿಕೆ ಮಾಡಿ, ಆಗಾಗ ಸೋಪ್ ಹಚ್ಚಿ ಕೈತೊಳೆಯುವಂತೆ ಹೇಳಿ.



Click it and Unblock the Notifications