Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭಾರತದಲ್ಲಿ ಕೋವಿಡ್ 19 ಸೋಂಕಿತರಲ್ಲಿ ಸೈಟೊಮೆಗಾಲೊವೈರಸ್ ಪತ್ತೆ, ಇದರ ಲಕ್ಷಣಗಳೇನು?
ಭಾರತದಲ್ಲಿ ಇದೇ ಮೊದಲ ಬಾರಿಗೆ ಸೈಟೊಮೆಗಾಲೊವೈರಸ್ (CVM) ಅಂದ್ರೆ ಕೋವಿಡ್ 19ನಿಂದ ಗುದನಾಳದಲ್ಲಿ ರಕ್ತ ಸೋರುವ ಕಾಯಿಲೆ ಕಂಡು ಬಂದಿದೆ. ಕೋವಿಡ್ 19 ಹಲವಾರು ಲಕ್ಷಣಗಳು ಕಂಡು ಬಂದಿದ್ದೆವು, ಆದರೆ ಗುದನಾಳದಲ್ಲಿ ರಕ್ತಸ್ರಾವ ಲಕ್ಷಣಗಳು ಇದುವರೆಗೆ ಭಾರತದಲ್ಲಿ ಇರಲಿಲ್ಲ. ಇದೀಗ 5 ಸೋಂಕಿತರಲ್ಲಿ ಈ ಲಕ್ಷಣಗಳು ಕಂಡು ಬಂದಿದೆ ಎಂದು ದೆಹಲಿಯ ಶ್ರೀ ಗಂಗ ರಾಮ್ ಆಸ್ಪತ್ರೆ ಹೇಳಿದೆ.
ಈ ಲಕ್ಷಣಗಳು ರೋಗಿಗಳಲ್ಲಿ ಕೋವಿಡ್ 19 ಪಾಸಿಟಿವ್ ಬಂದ ಬಳಿಕವಷ್ಟೇ ಕಂಡು ಬಂದಿದೆ. ಈ ಲಕ್ಷಣಗಳು ಎರಡನೇ ಅಲೆಯಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ಕಂಡು ಬಂತು ಎಂದು ಆಸ್ಪತ್ರೆಯ ವರದಿಯಲ್ಲಿದೆ. ಈ ಸಮಸ್ಯೆ ಕಂಡು ಬಂದವರಲ್ಲಿ 20-30 ದಿನಗಳಾದರೂ ರಿಪೋರ್ಟ್ ಕೋವಿಡ್ 19 ಪಾಸಿಟಿವ್ ಇರುತ್ತಿದ್ದೆವು. ಇಬ್ಬರಲ್ಲಿ ತುಂಬಾ ರಕ್ತಸ್ರಾವ ಕಂಡು ಬಂದು ತೀವ್ರ ನಿಗಾ ಘಟಕದಲ್ಲಿ ಇಡಲಾಯಿತು, ಮತ್ತೊಬ್ಬರಿಗೆ ಸರ್ಜರಿ ಮಾಡಬೇಕಾಯಿತು, ಒಬ್ಬ ಸೋಂಕಿತ ರೋಗಿ ಅತ್ಯಧಿಕ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದರು ಎಂದು ವೈದ್ಯರು ಸೂಚಿಸಿದ್ದಾರೆ.

ಸೈಟೊಮೆಗಾಲೊವೈರಸ್ ಎಂದರೇನು?
ಸೈಟೊಮೆಗಾಲೊವೈರಸ್ ಅಥವಾ CVM ಎಂಬುವುದು ಸಾಮಾನ್ಯ ವೈರಸ್ ಆಗಿದೆ. ಮಯೋ ಕ್ಲೀನಿಕ್ ಪ್ರಕಾರ ಈ ವೈರಸ್ ಒಮ್ಮೆ ತಗುಲಿದರೆ ಆ ವ್ಯಕ್ತಿಯಲ್ಲಿ ಹಾಗೇ ಉಳಿದುಕೊಳ್ಳುತ್ತದೆ. ಆರೋಗ್ಯವಂತರಿಗೆ ಏನೂ ತೊಂದರೆಯಾಗಲ್ಲ. ಆದರೆ ಯಾರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೋ ಅವರಿಗೆ ಈ ವೈರಸ್ ಅಪಾಯ ಉಂಟು ಮಾಡುವುದು. ಈ ವೈರಸ್ ಎಂಜಲು, ರಕ್ತ, ಮೂತ್ರ ಅಥವಾ ದೇಹದ ಇತರ ದ್ರವ ಮೂಲಕ ಹರಡುವುದು. ಇದು ಹರ್ಪೀಸ್ ವೈರಸ್ ಸಂಬಂಧಿಸಿದ ಒಂದು ವೈರಸ್ ಆಗಿದೆ.

ಲಕ್ಷಣಗಳು
* ಆರೋಗ್ಯಕರ ವ್ಯಕ್ತಿಗೆ ಈ ವೈರಸ್ ತಗುಲಿದರೆ ಏನೂ ತೊಂದರೆಯಾಗುವುದಿಲ್ಲ, ಆದ್ದರಿಂದ ಗೊತ್ತೇ ಆಗುವುದಿಲ್ಲ.
* ಈ ವೈರಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮೊದಲಿಗೆ ಗಂಟಲು ನೋವು, ಮೈಕೈ ನೋವು, ತಲೆಸುತ್ತು, ಗ್ರಂಥಿಗಳಲ್ಲಿ ಊತ, ಜ್ವರ ಕಂಡು ಬರುವುದು. ಅಲ್ಲದೆ ಈ ವೈರಸ್ ಸುಲಭವಾಗಿ ಹರಡುವುದು.
* ಅದೇ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇದ್ದರೆ ಅಂದ್ರೆ ಅಂಗಾಂಗ ಕಸಿ ಮಾಡಿಸಿದವರಿಗೆ, ಗರ್ಭಿಣಿಯರಿಗೆ ಅಪಾಯಕಾರಿ. ಗರ್ಭಿಣಿಯರಿಗೆ ಈ ವೈರಸ್ ತಗುಲಿದರೆ ಮಗುವಿಗೂ ಬರುವ ಸಾಧ್ಯತೆ ಇದೆ.
* ಇದು ಶ್ವಾಸಕೋಶ, ಲಿವರ್, ಅನ್ನನಾಳ, ಹೊಟ್ಟೆ, ಕರುಳು, ಮೆದುಳಿಗೆ ಹಾನಿಯುಂಟು ಮಾಡುವುದು,

ಹೇಗೆ ಬರುತ್ತದೆ?
ಸೋಂಕಿತರ ಎಂಜಲು, ಮೂತ್ರ, ಬೆವರು, ಎದೆ ಹಾಲು, ವೀರ್ಯ, ಜನನಾಂಗದ ದ್ರವ ಇವುಗಳ ಮೂಲಕ ಮತ್ತೊಬ್ಬರಿಗೆ ಹರಡಬಹುದು.

ಪರೀಕ್ಷೆ
* ಇದನ್ನು ರಕ್ತ, ಮೂತ್ರ ಹಾಗೂ ಬಯೋಸ್ಪೈ ಮಾಡುವ ಮೂಲಕ ಪತ್ತೆ ಹಚ್ಚಲಾಗುವುದು.



Click it and Unblock the Notifications
