ಕೊರೊನಾ ನಾಶಕ್ಕೆ WHO ನೀಡಿದ ಹ್ಯಾಂಡ್‌ ಸ್ಯಾನಿಟೈಸರ್‌ ಫಾರ್ಮುಲಾ ಇದು

ಕೊರೊನಾವೈರಸ್‌ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದನ್ನು ತಡೆಗಟ್ಟಲು ಮಾಸ್ಕ್‌ ಧರಿಸುವಂತೆ, ಆಗಾಗ ಕೈ ತೊಳೆಯುವಂತೆ, ಹ್ಯಾಂಡ್‌ ಸ್ಯಾನಿಟೈಸರ್ ಹಾಗೂ ಮನೆಯಲ್ಲಿಯೇ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Studyb Says WHO Hand Sanitiser Formula Can Disable Coronavirus

ಆದರೆ ಈಗಾಗಲೇ ಹ್ಯಾಂಡ್‌ ಸ್ಯಾನಿಟೈರಸ್‌ಗೆ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಕೊರತೆ ಎದುರಿಸುತ್ತಿದೆ. ಮೆಡಿಕಲ್ ಶಾಪ್‌ಗಳಲ್ಲಿ ಇವುಗಳು ಲಭ್ಯವಾಗುತ್ತಿಲ್ಲ. ಮನೆಯಲ್ಲಿ ಆದರೆ ಸೋಪ್‌ ಬಳಸಿ ಕೈ ತೊಳೆದರೆ ಸಾಕು.ಆದರೆ ಹೊರಗಡೆ ಹೋಗುವಾಗ ಹ್ಯಾಂಡ್‌ ಸ್ಯಾನಿಟೈಸರ್‌ ನಮ್ಮ ಬಳಿ ಇರಲೇಬೇಕು. ಏಕೆಂದರೆ ನಾವು ಮುಟ್ಟುವ ವಸ್ತುಗಳಲ್ಲಿ ಸೋಂಕಾಣು ಇದ್ದರೆ ಅವುಗಳನ್ನು ಮುಟ್ಟಿ, ನಂತರ ಬಾಯಿ, ಮೂಗು ಕಣ್ಣು ಮುಟ್ಟುವುದರಿಂದ ಕೊರೊನಾವೈರಸ್‌ ದೇಹವನ್ನು ಸೇರುವುದು. ಇದನ್ನು ತಡೆಯಬೇಕೆಂದರೆ ಹ್ಯಾಂಡ್‌ ಸ್ಯಾನಿಟೈಸರ್ ಬಳಸಬೇಕು.

ಹ್ಯಾಂಡ್‌ ಸ್ಯಾನಿಟೈರಸ್ ಬಳಸಿದ 30 ಸೆಕೆಂಡ್‌ಗಳಲ್ಲಿ ರೋಗಾಣುಗಳು ಸಾಯುತ್ತವೆ. ಆದರೆ ಹ್ಯಾಂಡ್‌ ಸ್ಯಾನಿಟೈಸರ್ ಸಿಗುತ್ತಿಲ್ಲವೆಂದು ಕೆಲವರು ತಾವೇ ಹ್ಯಾಂಡ್‌ ಸ್ಯಾನಿಟೈಸರ್‌ ಮಾಡಲು ಮುಂದಾಗಿ ಅದಕ್ಕಾಗಿ ಸ್ಪಿರಿಟ್ ಬಳಸಿ, ಕೈಗಳು ಬೊಬ್ಬೆ ಎದ್ದ ಪ್ರಕರಣಗಳು ಕೇಳಿ ಬಂದಿದ್ದೆವು.

ಇದೀಗ ಈ ಸಮಸ್ಯೆಗೆ ಪರಿಹಾರ ಕೂಡ ಸಿಕ್ಕಿದೆ. ಹೌದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ CDC ಹ್ಯಾಂಡ್‌ ಸ್ಯಾನಿಟೈಸರ್‌ ಫಾರ್ಮುಲಾ ನೀಡಿದೆ. ಅದರಂತೆ ಸ್ಯಾನಿಟೈಸರ್ ತಯಾರಿಸಿದರೆ ಸೋಂಕಾಣುಗಳು ಸಾಯುತ್ತವೆ, ಕೈಗಳಿಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬನ್ನಿ ಹ್ಯಾಂಡ್‌ ಸ್ಯಾನಿಟೈಸರ್ ಫಾರ್ಮುಲಾ ಬಗ್ಗೆ ತಿಳಿಯೋಣ:

ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಕೈಗಳ ಶುಚಿತ್ವ ಮುಖ್ಯ

ಕೊರೊನಾ ಸೋಂಕು ಹರಡುವುದನ್ನು ತಡೆಯುವಲ್ಲಿ ಕೈಗಳ ಶುಚಿತ್ವ ಮುಖ್ಯ

ಕೋವಿಡ್ 19 ಗುಣಪಡಿಸಲು ಅಧಿಕೃತವಾದ ಯಾವುದೇ ಔಷಧಗಳು ಸಿಕ್ಕಿಲ್ಲ. ಆದರೆ ಇದನ್ನು ಮುನ್ನೆಚ್ಚರಿಕೆಕ್ರಮಗಳಿಂದ ತಡೆಗಟ್ಟಲು ಸಾಧ್ಯ ಎಂಬುವುದು ಸಾಬೀತಾಗಿದೆ. ಮುನ್ನೆಚ್ಚರಿಕೆ ಕ್ರಮಗಳಲ್ಲಿ ಪ್ರಮುಖವಾದದು ಕೈಗಳ ಶುಚಿತ್ವದ ಕಡೆಗೆ ಗಮನ ನೀಡುವುದು.

ಸೋಪ್ ಹಚ್ಚಿ 20 ನಿಮಿಷ ಕೈಗಳನ್ನು ತಿಕ್ಕಿ ತೊಳೆಯಬೇಕು. ಬೆರಳು ಸಂದುಗಳಲ್ಲಿ, ಕೈ ಮೇಲ್ಭಾಗದಲ್ಲಿ ಸೋಪ್ ಹಚ್ಚಿ ತಿಕ್ಕಬೇಕು. ಕಡಿಮೆಯೆಂದರೂ 20 ಸೆಕೆಂಡ್ ಕೈಗಳಿಗೆ ಸೋಪ್ ಹಚ್ಚಿ ತಿಕ್ಕಬೇಕು.

ಆಗಾಗ ಕೈ ತೊಳೆಯಲು ಕೊರೊನಾ ವಾರಿಯರ್ಸ್ ಎಂದರೆ ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಸಾಧ್ಯವಿಲ್ಲ. ಅಂಥವರು ಹ್ಯಾಂಡ್‌ ಸ್ಯಾನಿಟೈಸರ್ ಬಳಸಿ ಕೈಗಳ ಶುಚಿತ್ವ ಕಾಪಾಡಬಹುದು. ಆಸ್ಪತ್ರೆಗಳಲ್ಲೂ ಹ್ಯಾಂಡ್‌ ಸ್ಯಾನಿಟೈಸರ್ ಕೊರತೆ ಉಂಟಾಗಿತ್ತು. ಅದನ್ನು ಪರಿಹರಿಸುವ ಟಿಪ್ಸ್ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

WHO ನೀಡಿರುವ ಹ್ಯಾಂಡ್‌ ಸ್ಯಾನಿಟೈಸರ್ ಫಾರ್ಮುಲಾ

WHO ನೀಡಿರುವ ಹ್ಯಾಂಡ್‌ ಸ್ಯಾನಿಟೈಸರ್ ಫಾರ್ಮುಲಾ

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಹ್ಯಾಂಡ್‌ ಸ್ಯಾನಿಟೈಸರ್ ಕೊರೊನಾವೈರಸ್‌ ನಾಶಪಡಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಈ ಕುರಿತು ನಡೆಸಿರುವ ಅಧ್ಯಯನ ವರದಿಗಳು ಹೇಳಿವೆ. ಈ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಿದ 30 ಸೆಕೆಂಡ್‌ಗಳಲ್ಲಿ ಕೈಗಳಲ್ಲಿರುವ ಯಾವುದೇ ಸೋಂಕಾಣು ಆಗಲಿ ನಾಶವಾಗುವುದು..

ಪಾರ್ಮುಲಾ

ಈಥೇನಾಲ್ (Ethanol) 80%

ಗ್ಲಿಸರಿನ್ ಅಥವಾ ಗ್ಲೈಸೆರೋಲ್ (glycerine or glycerol) 1.45%

ಹೈಡ್ರೋಜಿನ್ ಪೆರಾಕ್ಸೈಡ್ (hydrogen peroxide)0.125%

ಐಸೋಪ್ರಾನೋಲ್ ಅಥವಾ ಐಸೋಪ್ರೊಪೈಲ್ ಆಲ್ಕೋಹಾಲ್ (hydrogen peroxide)0.125%

ಗ್ಲಿಸರಿನ್ (glycerine) 1.45%)

ಹೈಡ್ರೋಜಿನ್ ಪೆರಾಕ್ಸೈಡ್ (hydrogen peroxide)0.125%

ಇಷ್ಟು ರಾಸಾಯನಿಕಗಳನ್ನು ಹೇಳಿರುವ ಪ್ರಮಾಣದಲ್ಲಿ ಮಿಶ್ರ ಮಾಡಿದರೆ ಸ್ಯಾನಿಟೈಸರ್ ರೆಡಿ. ಈ ಹ್ಯಾಂಡ್‌ ಸ್ಯಾನಿಟೈಸರ್‌ ಕೈಗೆ ಹಾಕಿ 30 ಸೆಕೆಂಡ್‌ಗಳಲ್ಲಿ ವೈರಸ್‌ಗಳು ನಾಶವಾಗುತ್ತವೆ.

ಇದರ ಫಲಿತಾಂಶ ಏನು ಹೇಳುತ್ತಿದೆ?

ಇದರ ಫಲಿತಾಂಶ ಏನು ಹೇಳುತ್ತಿದೆ?

ಇದರಲ್ಲಿ ಬಳಸಿರುವ ಈಥೇನಾಲ್ ಅಥವಾ ಐಸೋಪ್ರೊಪೈಲ್ ಇವುಗಳನ್ನು ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ತಿಳಿದು ಬಂದಿದ್ದು ಏನೇಂದರೆ ಇದರ ಶೇ. 30ರಷ್ಟು ಸಾಕು SARS-CoV-2 ಕೊರೊನಾ ವೈರಸ್‌ ನಾಶವಾಗುತ್ತದೆ.

ಮೆಡಿಕಲ್ ಶಾಪ್‌ಗಳಲ್ಲಿ ದೊರೆಯುವ ಹ್ಯಾಂಡ್‌ ಸ್ಯಾನಿಟೈಸರ್‌ಗಳಲ್ಲಿ ಶೇ. 60ರಷ್ಟು ಆಲ್ಕೋಹಾಲ್ ಅಂಶವಿರುತ್ತದೆ. ಇವುಗಳು ಕೈಗಳಲ್ಲಿರುವ ಕೊರೊನಾವೈರಸ್‌ ನಾಶಪಡಿಸುವ ಸಾಮಾರ್ಥ್ಯ ಹೊಂದಿರುತ್ತದೆ. ಮನೆಯಲ್ಲಿ ಮಾಡುವ ಹ್ಯಾಂಡ್‌ ಸ್ಯಾನಿಟೈಸರ್‌ ಮೆಡಿಕಲ್‌ ಶಾಪ್‌ಗಳಲ್ಲಿ ದೊರೆಯುವಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ ಹ್ಯಾಂಡ್ ಸ್ಯಾನಿಟೈಸರ್ ಫಾರ್ಮುಲಾ ನೀಡಿದೆ. ಅವುಗಳನ್ನು ಬಳಸಿ ಸ್ಯಾನಿಟೈಸರ್ ತಯಾರಿಸಿದರೆ ಕೊರೊನಾವೈರಸ್‌ ನಾಶವಾಗುವುದು.

ಆಸ್ಪತ್ರೆಗಳಿಗೆ ಸಹಕಾರಿಯಾಗಿದೆ ಈ ಫಾರ್ಮುಲಾ

ಆಸ್ಪತ್ರೆಗಳಿಗೆ ಸಹಕಾರಿಯಾಗಿದೆ ಈ ಫಾರ್ಮುಲಾ

ಎಷ್ಟೋ ಆಸ್ಪತ್ರೆಗಳಲ್ಲಿ ಹ್ಯಾಂಡ್‌ ಸ್ಯಾನಿಟೈಸರ್ ಕೊರತೆ ಉಂಟಾಗಿತ್ತು. ಇದೀಗ ಈ ಫಾರ್ಮುಲಾ ನೀಡಿರುವುದು ಕೋವಿಡ್ 19 ರೋಗಿಗಳ ಆರೈಕೆ ಮಾಡುವವರ ಜೀವ ರಕ್ಷಣೆಗೆ ಸಹಕಾರಿಯಾಗಿದೆ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಕೊರತೆಯೂ ಎದುರಿಸಬೇಕಾಗಿಲ್ಲ.

 ಸೂಚನೆ:

ಸೂಚನೆ:

ಹ್ಯಾಂಡ್‌ ಸ್ಯಾನಿಟೈಸರ್ ಬಳಸಿದಾಗ 30 ಸೆಕೆಂಡ್‌ಗಳಲ್ಲಿ ಕೊರೊನಾವೈರಸ್ ನಿಶ್ಚಲವಾಗುವುದು, ಅದರ ಚಟುವಟಿಕೆ ಇಲ್ಲವಾಗುವುದು. ಅಂದರೆ ಕೊರೊನಾವೈರಸ್‌ ಕೈಯಲ್ಲಿ ಉಳಿದರೂ ಅದು ಸತ್ತಿರುತ್ತದೆ, ಆದ್ದರಿಂದ ಕೊರೊನಾವೈರಸ್ ಅಪಾಯ ನಿಮ್ಮನ್ನು ಬಾಧಿಸುವುದಿಲ್ಲ.

ಕೊನೆಯದಾಗಿ ಹೇಳುವುದೆಂದರೆ

ಕೆಲವರು ಹ್ಯಾಂಡ್‌ ಸ್ಯಾನಿಟೈಸರ್‌ ಮಾಡಲು ವೋಡ್ಕಾ ಬಳಸಿದ್ದರು. ಆದರೆ ವೋಡ್ಕಾ ಸ್ಯಾನಿಟೈಸರ್ ಮಾಡಲು ಸೂಕ್ತವಲ್ಲ. ಈ ಹ್ಯಾಂಡ್‌ ಸ್ಯಾನಿಟೈಸರ್ ಕೊರೊನಾವೈರಸ್‌ ನಾಶ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗೂ ಕೈಗಳಿಗೂ ಒಳ್ಳೆಯದಲ್ಲ. ಆದ್ದರಿಂದ ಹ್ಯಾಂಡ್‌ ಸ್ಯಾನಿಟೈಸರ್ ಮಾಡುವುದಾದರೆ ಮೇಲೆ ಹೇಳಿದ ಫಾರ್ಮುಲಾ ಮಾಡಿಸಿ ಮಾಡುವುದು ಒಳ್ಳೆಯದು.

English summary

Study Finds, WHO Hand Sanitiser Formula Can Disable Coronavirus

A recent study published in the journal Emerging Infectious Diseases has confirmed that two hand sanitizer formulations recommended by the World Health Organization (WHO) are effective in disabling the virus that causes coronavirus disease
Story first published: Friday, April 24, 2020, 18:15 [IST]
X
Desktop Bottom Promotion