Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನಿರ್ಲಕ್ಷ್ಯ ಮಾಡದಿರಿ: ತ್ವಚೆ ಅಲರ್ಜಿ ಕೂಡ ಕೊರೊನಾವೈರಸ್ ಲಕ್ಷಣ
ನೋವೆಲ್ ಕೊರೊನಾವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಲಕ್ಷಣಗಳು ಕೂಡ ಇತರ ಕಾಯಿಲೆಯ ಲಕ್ಷಣಗಳಂತೆ ಕಾಣುವುದರಿಂದ ಜನರಿಗೆ ತಮಗೆ ಬಂದಿರುವುದು ಕೋವಿಡ್ 19 ಇರಬಹುದೇ ಅಥವಾ ಸಾಮಾನ್ಯ ಜ್ವರ ಇರಬಹುದೇ ಎಂಬ ಗೊಂದಲ ಕಾಡುವುದು ಸಹಜ.

ದೇಹದಲ್ಲಿ ಕಂಡು ಬಂದಿರುವ ಲಕ್ಷಣಗಳನ್ನು ನೋಡಿ ಕೊರೊನಾವೈರಸ್ ಇದೆ ಎಂದು ಹೇಳಲು ಸಾಧ್ಯವಿಲ್ಲ, ಅದಕ್ಕಾಗಿ ಸ್ಕ್ವ್ಯಾಬ್ ಟೆಸ್ಟ್ ಮಾಡಿಸಿ, ಪರೀಕ್ಷೆ ವರದಿ ಪಾಸಿಟಿವ್ ಬಂದರೆ ಕೋವಿಡ್ 19, ಇಲ್ಲದಿದ್ದರೆ ಬೇರೆ ಕಾಯಿಲೆ ಇರಬಹುದಾಗಿದ್ದು ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಬಹುದು.
ಮೊದಲಿಗೆ ಕೊರೊನಾವೈರಸ್ ಸೋಂಕಿದ್ದರೆ ಕಂಡು ಬರುವ ಲಕ್ಷಣಗಳೆಂದರೆ ಕೆಮ್ಮು, ಸೀನು, ಜ್ವರ ಎಂದು ಹೇಳಲಾಗಿತ್ತು. ಆ ನಂತರ ನಡೆಸಿದ ಅಧ್ಯಯನಗಳು ಬರೀ ಈ ಲಕ್ಷಣಗಳು ಮಾತ್ರವಲ್ಲ ಕೆಲವರಿಗೆ ವಾಸನೆ ಹಾಗೂ ರುಚಿ ಗ್ರಹಿಸುವ ಸಾಮಾರ್ಥ್ಯ ಇಲ್ಲವಾಗುವುದು, ಇನ್ನು ಕೆಲವರಿಗೆ ಕಾಲುಗಳಲ್ಲಿ ಗಂಟು ಬಂದು ನೋವು ಕಂಡು ಬರುವುದು ಈ ರೀತಿಯ ಲಕ್ಷಣಗಳು ಕಂಡು ಬರುವುದು. ಆದರೆ ಈ ಲಕ್ಷಣಗಳ ಜೊತೆ ತ್ವಚೆಗಳಲ್ಲಿ ಗುಳ್ಳೆಗಳು ಕೂಡ ಬರುವುದು ಕೂಡ ಕೊರೊನಾವೈರಸ್ ಲಕ್ಷಣವಾಗಿದ್ದು, ಇದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಹೊಸ ಅಧ್ಯಯನ ಹೇಳಿದೆ.

ಲಂಡನ್‌ನಲ್ಲಿ ನಡೆಸಿದ ಅಧ್ಯಯನ
ಲಂಡನ್‌ನ ಕಿಂಗ್ಸ್ ಕಾಲೇಜಿನ ಅಧ್ಯಯನ ವರದಿಯು ಕೋವಿಡ್ 19 ಸೋಂಕು ಇರುವವರಿಗೆ ಕೆಮ್ಮು, ಜ್ವರ, ಉಸಿರಾಟದಲ್ಲಿ ತೊಂದರೆ ಮಾತ್ರವಲ್ಲ ತ್ವಚೆ ಅಲರ್ಜಿ ಕೂಡ ಉಂಟಾಗುವುದು ಎಂದು ಹೇಳಿದೆ. ಕೆಲವರಲ್ಲಿ ತ್ವಚೆ ಅಲರ್ಜಿ ಮೊದಲಿಗೆ ಕಂಡು ಬರುವುದು. ಇವರು ಯುಕೆಯಲ್ಲಿ ಕೋವಿಡ್ ಆ್ಯಪ್ ಬಳಸಿ 336,000 ಕೋವಿಡ್ ಸೋಂಕಿತರನ್ನು ಅಧ್ಯಯನ ಮಾಡಲಾಯಿತು. ಈ ಸಮೀಕ್ಷೆಯಲ್ಲಿ ಶೇ. 8.8 ಸೋಂಕಿತರಿಗೆ ತ್ವಚೆಯಲ್ಲಿ ಅಲರ್ಜಿ ಉಂಟಾಗಿತ್ತು. ಶೇ. 8.2ರಷ್ಟು ರೋಗಿಗಳಲ್ಲಿ ಮೊದಲಿಗೆ ತ್ವಚೆ ಅಲರ್ಜಿ ಕಂಡು ಬಂತು, ನಂತರ ಕೋವಿಡ್ 19 ಲಕ್ಷಣಗಳಾದ ಕೆಮ್ಮು, ಜ್ವರ, ವಾಸನೆ ಗ್ರಹಿಸಲು ಸಾಧ್ಯವಾಗದಿರುವುದು ಈ ರೀತಿಯ ಲಕ್ಷಣಗಳು ಕಂಡು ಬಮತು ಎಂದು ಅಧ್ಯಯನ ವರದಿ ಹೇಳಿದೆ.

ಯಾವ ರೀತಿಯ ತ್ವಚೆ ಅಲರ್ಜಿ ಕೋವಿಡ್ 19 ಲಕ್ಷಣವಾಗಿದೆ?
ತ್ವಚೆಯಲ್ಲಿ ಉರಿ, ತುರಿಕೆ, ಚಿಕ್ಕ-ಚಿಕ್ಕ ಗುಳ್ಳೆಗಳು ಕಂಡು ಬರುವುದು ಇವೆಲ್ಲಾ ಕೂಡ ಕೋವಿಡ್ 19 ಲಕ್ಷಣಗಳಾಗಿರಬಹುದು. ರೋಗನಿರೋಧಕ ವ್ಯವಸ್ಥೆಯಲ್ಲಿ ಉಂಟಾಗುವ ಅಸಮತೋಲನದಿಂದಾಗಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.

ಪಾದಗಳಲ್ಲಿ ಕಂಡು ಬರುವ ವ್ಯತ್ಯಾಸ
ಕೊರೊನಾವೈರಸ್ ಸೋಂಕು ತಗುಲಿದಾಗ ಪಾದಗಳಲ್ಲಿ ರಕ್ತ ಹೆಪ್ಪುಗಟ್ಟುವುದು, ಊತ, ಉರಿ ಈ ರೀತಿಯ ಲಕ್ಷಣಗಳು ಕಂಡು ಬರುವುದು. ಈ ರೀತಿಯ ಲಕ್ಷಣಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲಾ ವಯಸ್ಸಿನವರಲ್ಲೂ ಕಂಡು ಬರುವುದಾಗಿ ಅಧ್ಯಯನ ವರದಿ ಹೇಳಿದೆ.

ಅಲರ್ಜಿ ನೋಡಲು ಹೇಗಿರುತ್ತದೆ
ಅಧ್ಯಯನ ಪ್ರಕಾರ ಕೋವಿಡ್ 19ನಿಂದ ತ್ವಚೆ ಅಲರ್ಜಿ ಉಂಟಾದಾಗ 3 ಬಗೆಯಲ್ಲಿ ಕಂಡು ಬರುತ್ತದೆ.
- ಇದ್ದಕ್ಕಿದ್ದಂತೆ ತ್ವಚೆಯಲ್ಲಿ ತುರಿಕೆ ಉಂಟಾಗುವುದು, ಕೆಂಪು-ಕೆಂಪು ಗುಳ್ಳೆಗಳು ಏಳುವುದು, ಇದು ಸ್ವಲ್ಪ ಹೊತ್ತಿನಲ್ಲಿ ಇಲ್ಲವಾಗುತ್ತದೆ.
- ಚಿಕನ್‌ಪಾಕ್ಸ್ ಉಂಟಾದಾಗ ಕಂಡು ಬರುವಂತೆ ತುಂಬಾ ತುರಿಕೆ ಉಂಟಾಗಿ ಅದು ಕಡಿಮೆಯಾಗುವುದೇ ಇಲ್ಲ.
- ಇನ್ನು ಪಾದಗಳಲ್ಲಿ ಕೆಂಪು ಗುಳ್ಳೆಗಳು ಏಳುವುದು, ಊತ, ನೋವು ಕಂಡು ಬರುವುದು.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು?
ಕೊರೊನಾವೈರಸ್ ಲಕ್ಷಣಗಳು ಇತರ ಸೋಂಕಿನ ಲಕ್ಷಣಗಳಂತೆಯೇ ಕಂಡು ಬರುವುದು, ಆದ್ದರಿಂದ ದೇಹದಲ್ಲಿ ಏನೇ ವ್ಯತ್ಯಾಸ ಉಂಟಾದರೆ ನಿರ್ಲಕ್ಷ್ಯ ಮಾಡಬೇಡಿ. ಆದ್ದರಿಂದ ಈ ಸಮಯದಲ್ಲಿ ಮೈಯಲ್ಲಿ ಅಲರ್ಜಿ ಕಂಡು ಬಂದರೂ ಮನೆಯವರಿಂದ ಅಂತರ ಕಾಯ್ದುಕೊಂಡು ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಿ.



Click it and Unblock the Notifications











