Latest Updates
-
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ!
6 ಭಿನ್ನವಾದ ಕೊರೊನಾವೈರಸ್ ಲಕ್ಷಣಗಳಿವು
ಕೆಮ್ಮು, ಜ್ವರ, ಶೀತ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೋವಿಡ್ 19 ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಕೊರೊನಾವೈರಸ್ ಈ ಲಕ್ಷಣಗಳ ಜೊತೆಗೆ ಇನ್ನಿತರ ಕೆಲವೊಂದು ಲಕ್ಷಣಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕೊರೊನಾವೈರಸ್ ಲಕ್ಷಣ ಎಲ್ಲಾ ರೋಗಿಗಳಲ್ಲಿ ಒಂದೇ ರೀತಿ ಇಲ್ಲದಿರುವುದೇ ಈ ರೋಗ ಪತ್ತೆ ಹಚ್ಚು ಇರುವ ಪ್ರಮುಖ ತೊಂದರೆಯಾಗಿದೆ. ಕೆಲವರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ದರೂ ಕೋವಿಡ್ 19 ಇರುವುದು ದೃಢಪಟ್ಟಿದೆ.
ಇನ್ನು ಕೆಲವರಲ್ಲಿ ಜ್ವರ ಇರುವುದಿಲ್ಲ ಬದಲಿಗೆ ಮೈಯಲ್ಲಿ ಅಲರ್ಜಿ, ಕಾಲುಗಳಲ್ಲಿ ಗುಳ್ಳೆಗಳು ಎದ್ದು ನೋವು ಮುಂತಾದ ಲಕ್ಷಣಗಳು ಕಂಡು ಬಂದಿರುವುದಾಗಿ ಯುಕೆ ಮತ್ತು ಯುಎಸ್‌ನಲ್ಲಿ ನಡೆಸಿದ ಸಂಶೋಧನೆಗಳು ಹೇಳಿವೆ.
ತಲೆನೋವು, ಸ್ನಾಯುಗಳಲ್ಲಿ ನೋವು, ತಲೆಸುತ್ತು, ಬೇಧಿ, ಗೊಂದಲ, ಹಸಿವು ಇಲ್ಲದಿರುವುದು, ಉಸಿರಾಟದಲ್ಲಿ ತೊಂದರೆ ಇವೆಲ್ಲಾ ಕೂಡ ಕೊರೊನಾವೈರಸ್ ಲಕ್ಷಣವಾಗಿದೆ ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕರು ಹೇಳಿದ್ದಾರೆ.
ಕೊರೊನಾವೈರಸ್ ಲಕ್ಷಣಗಳನ್ನು ಸಂಶೋಧನೆ ಮಾಡಿದ ಸಂಶೋಧಕರು 6 ಭಿನ್ನ ಲಕ್ಷಣಗಳ ಬಗ್ಗೆ ಹೇಳಿದ್ದಾರೆ ನೋಡಿ:

1. ಫ್ಲೂ ಆದರೆ ಜ್ವರವಿರಲ್ಲ:
ತಲೆನೋವು, ಯಾವುದೇ ವಾಸನೆ ಗ್ರಹಿಸಲು ಸಾಧ್ಯವಾಗದೇ ಇರುವುದು, ಸ್ನಾಯುಗಳಲ್ಲಿ ತುಂಬಾ ನೋವು, ಗಂಟಲಿನಲ್ಲಿ ಕೆರೆತ, ಎದೆನೋವು ಲಕ್ಷಣಗಳಿರುತ್ತವೆ, ಆದರೆ ಜ್ವರವಿರುವುದಿಲ್ಲ.

2. ಜ್ವರ:
ಚಳಿ ಜ್ವರವಿರುತ್ತದೆ, ಯಾವುದೇ ವಾಸನೆ ಮೂಗಿಗೆ ಬಡೆಯುವುದಿಲ್ಲ, ಕೆಮ್ಮು, ಗಂಟಲು ಕೆರೆತ, ಹಸಿವು ಇಲ್ಲದಿರುವುದು, ಧ್ವನಿ ಒರಟಾಗುವುದು

3. ಹೊಟ್ಟೆ ಸಮಸ್ಯೆ:
ತುಂಬಾ ತಲೆನೋವು, ವಾಸನೆ ಗ್ರಹಿಸಲು ಸಾಧ್ಯವಾಗದೇ ಇರುವುದು, ಬೇಧಿ, ಹಸಿವು ಇಲ್ಲದೇ ಇರುವುದು, ಗಂಟಲು ಕೆರೆತ, ಎದೆ ನೋವು ಇರುತ್ತದೆ ಆದರೆ ಕೆಮ್ಮು ಇರುವುದಿಲ್ಲ.

4. ಗಂಭೀರವಾದ ಹಂತ 1, ತಲೆ ಸುತ್ತು:
ತಲೆನೋವು, ಯಾವುದೇ ವಾಸನೆ ಗ್ರಹಿಸಲು ಸಾಧ್ಯವಾಗುವುದಿಲ್ಲ, ಕೆಮ್ಮು ಇರುತ್ತದೆ, ಧ್ವನಿ ಒರಟಾಗುವುದು, ಎದೆನೋವು, ತಲೆಸುತ್ತು. ಈ ರೀತಿಯ ಲಕ್ಷಣಗಳು ಕಂಡು ಬಂದ ರೋಗಿಗೆ ಸ್ವಲ್ಪ ಹೆಚ್ಚಿನ ಆರೈಕೆ ಬೇಕಾಗುವುದು.

5. ಗಂಭೀರ ಹಂತ 2, ಗೊಂದಲ:
ಈ ಹಂತದಲ್ಲಿ ಕೊರೊನಾವೈರಸ್ ಸೋಂಕಿದ ರೋಗಿಗೆ ತುಂಬಾ ತಲೆನೋವು ಇರುತ್ತದೆ, ಹೊಟ್ಟೆ ಹಾಳಾಗಿರುತ್ತದೆ, ಕೆಮ್ಮು, ಜ್ವರ, ಗಂಟಲು ಕೆರೆತ, ಎದೆ ಬಿಗಿಯಾಗುವುದು, ಗೊಂದಲು, ಸ್ನಾಯುಗಳಲ್ಲಿ ನೋವು ಈ ಎಲ್ಲಾ ಲಕ್ಷಣಗಳಿರುತ್ತವೆ. ಈ ಹಂತದಲ್ಲಿ ರೋಗಿಗೆ ಎದ್ದು ಓಡಾಡಲು ಕಷ್ಟವಾಗುವುದು.

6. ಗಂಭೀರ ಹಂತ 3, ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆ:
ತಲೆನೋವು, ವಾಸನೆ ಗ್ರಹಿಸಲು ಸಾಧ್ಯವಾಗದೇ ಇರುವುದು, ಕೆಮ್ಮು, ಜ್ವರ, ಗಂಟಲು ಕೆರೆತ, ಧ್ವನಿಯಲ್ಲಿ ವ್ಯತ್ಯಾಸ, ಎದೆ ಬಿಗಿಯಾಗುವುದು ಅಥವಾ ಎದೆ ನೋವು, ತಲೆಸುತ್ತು, ಗೊಂದಲ, ಸ್ನಾಯುಗಳಲ್ಲಿ ನೋವು, ಉಸಿರಾಟಕ್ಕೆ ತೊಂದರೆ, ಬೇಧಿ, ಕೆಳಹೊಟ್ಟೆ ನೋವು ಇಷ್ಟು ಲಕ್ಷಣಗಳು ಕಂಡು ಬರುತ್ತದೆ. ಈ ರೋಗಿಯ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುವುದರಿಂದ ICU ಚಿಕಿತ್ಸೆ ಬೇಕಾಗುವುದು.
ಸಲಹೆ: ಕೋವಿಡ್ 19 ಗಂಭೀರ ಹಂತಕ್ಕೆ ತಲುಪುವುದು ಮೊದಲಿಗೆ ರೋಗ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಎಂದು ತಜ್ಞರು ಹೇಳುತ್ತಿದ್ದಾರೆ. ಇಲ್ಲಿ ಹೇಳಿರುವ ಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಬೇಗನೆ ಗುಣಮುಖರಾಗಬಹುದು. ಭಯಬಿದ್ದು ಪರೀಕ್ಷೆ ಮಾಡಿಸದೆ ರೋಗ ಗಂಭೀರವಾಗುವವರೆಗೆ ಕಾಯಬೇಡಿ.



Click it and Unblock the Notifications
