ಆಯುರ್ವೇದ ಫ್ರೋಜನ್ ಫುಡ್ ಗಳನ್ನು ಸೇವಿಸ ಬಾರದೆಂದು ಏಕೆ ಹೇಳುತ್ತದೆ? ನೀವೇ ನೋಡಿ

ಇಂದಿನ ತರಾತುರಿಯ ಜೀವನದಲ್ಲಿ ಎಲ್ಲರಿಗೂ ಸಮಯದ ಅಭಾವ. ಗಡಿಬಿಡಿಯಲ್ಲೇ ವಿಧವಿಧವಾದ ಅಡುಗೆಗಳನ್ನು ತಯಾರಿಸಬೇಕು.ಅದಕ್ಕೆ ಹೆಚ್ಚಿ, ಬಿಡಿಸಿ ತುರಿದಿಟ್ಟಿರುವ ಅನೇಕ ರೀತಿಯ ಆಹಾರ ಪದಾರ್ಥಗಳು ರೆಡಿಯಾಗಿ ಕೈಗೆಟುಕುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಈ ರೀತಿ ಶಾರ್ಟ್ ಕಟ್ ಹುಡುಕುವಾಗ ಎಲ್ಲರಿಗೂ ಫ್ರೋಜನ್ ಫುಡ್ ಗಳ ಮೇಲೆ ಕಣ್ಣು ಹರಿಯುತ್ತದೆ.

123

ಕಷ್ಟಪಡದೆ,ಮೈಕೈ ನೋವಿಲ್ಲದೆ ಕೈಗೆಟುಕುವ ಬೆಲೆಯಲ್ಲಿ ಸುಲಭವಾಗಿ ದೊರಕುತ್ತಿರುವ, ಫ್ರೀಜರ್ ನಲ್ಲಿ ಶೇಖರಣೆ ಮಾಡಿ ಇಟ್ಟಿರುವಂತಹ ಈ ಫ್ರೋಜನ್ ಫುಡ್ ಗಳು ನಿಜಕ್ಕೂ ಆರೋಗ್ಯಕರವೇ? ತಾಜಾ ಆಹಾರಗಳಷ್ಟೇ ಪೋಷಕಾಂಶಗಳು ಇದರಿಂದಲೂ ಸಿಗುತ್ತವೆಯೇ? ಎಂದು ಚಿಂತಿಸ ಬೇಕಾಗಿರುವುದು ಅತ್ಯಾವಶ್ಯಕವಾಗಿದೆ.

ಸಿಗುತ್ತವೆಯೇ?

ಸಿಗುತ್ತವೆಯೇ?

ಎಂದು ಚಿಂತಿಸ ಬೇಕಾಗಿರುವುದು ಅತ್ಯಾವಶ್ಯಕವಾಗಿದೆ.

ನುರಿತ ಆಯುರ್ವೇದ ತಜ್ಞರಾದ ಡಾಕ್ಟರ್ ಅಲ್ಕ ವಿಜಯನ್ ಪ್ರಕಾರ ಫ್ರೋಜನ್ ಮತ್ತು ತಾಜಾ ತರಕಾರಿಗಳು ಎರಡಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಯಾವುದೇ ದುಷ್ಪರಿಣಾಮಗಳು ಉಂಟಾಗದಂತೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ.

ಫ್ರೋಜನ್ ಮತ್ತು ತಾಜಾ ತರಕಾರಿಗಳು ಒಂದೇ ರೀತಿಯೇನೊ ಕಾಣಬಹುದು. ನುರಿತ ಆರೋಗ್ಯ ತಜ್ಞರಾದ ಡಾಕ್ಟರ್ ವಿಜಯನ್ ಪ್ರಕಾರ ಫ್ರೋಜನ್ ಆಹಾರಗಳಲ್ಲಿ ರುಚಿ ಮತ್ತು ಪೌಷ್ಟಿಕಾಂಶತೆ ಕೊರತೆ ಇರುತ್ತದೆ. ಅವು ಪರ್ಯೂಷಿತ ಅಂದರೆ ಜೀವ ಕಳೆದುಕೊಂಡ ನಿಸ್ತೇಜ ಆಹಾರಗಳಾಗಿರುತ್ತವೆ.

ಹೇಗೆ ಅಂತೀರಾ?

ಹೇಗೆ ಅಂತೀರಾ?

*ಅವುಗಳಲ್ಲಿ ಚೈತನ್ಯ ಅಥವಾ ಓಜಸ್ಸು ಕಳಚಿಹೋಗಿರುತ್ತದೆ.

*ಫ್ರೀ ಜಿಂಗ್ ಕಾರ್ಯ ವಿಧಾನದಿಂದ ಅವುಗಳು ಸಾತ್ವಿಕ ಗುಣಮಟ್ಟಗಳನ್ನು ಕಳೆದುಕೊಂಡಿರುತ್ತವೆ.

ಅಂತಹ ತರಕಾರಿಗಳಿಂದ ಈ ಕೆಳಕಂಡ ಸಮಸ್ಯೆಗಳು ತಲೆದೋರಬಹುದು.....

*ಕರುಳಿನ ವ್ಯವಸ್ಥೆ ಅಥವಾ ಅಗ್ನಿ ಯಲ್ಲಿ ಏರುಪೇರು

*ಅಮ ಅಥವಾ ಟಾಕ್ಸಿನ್ಸ್ ದೇಹದಲ್ಲಿ ಬೆಳೆಯಬಹುದು

*ಜೀವಕೋಶಗಳಲ್ಲಿ ಪೋಷಕಾಂಶಗಳ ನ್ಯೂನ್ಯತೆ ಉಂಟಾಗಬಹುದು

ಅದೇ ಸ್ಥಳೀಯವಾಗಿ ಬೆಳೆದ ತಾಜಾ ತರಕಾರಿಗಳಿಂದ

ಅದೇ ಸ್ಥಳೀಯವಾಗಿ ಬೆಳೆದ ತಾಜಾ ತರಕಾರಿಗಳಿಂದ

ಈ ಪ್ರಯೋಜನಗಳು ದೊರಕುತ್ತದೆ

*ಸುಲಭವಾಗಿ ಜೀರ್ಣವಾಗುತ್ತದೆ

*ರುಚಿಕರವಾಗಿರುತ್ತದೆ

*ಪ್ರತಿಯೊಂದು ಜೀವಕೋಶಗಳಿಗೂ ಹೊಸ ಚೈತನ್ಯವನ್ನು ನೀಡುತ್ತದೆ

ಫ್ರೋಜನ್ ಫುಡ್ ಗಳಿಂದ ವಿಟಮಿನ್ ಮತ್ತು ಫೈಬರ್ ಎಲ್ಲವೂ ದೊರಕುತ್ತಿದೆ ಎಂಬ ಭ್ರಮೆಯಿಂದ ಅದನ್ನು ಸೇವಿಸುತ್ತಿದ್ದಲ್ಲಿ ಅದನ್ನು ಮರೆತು ಬಿಡುವುದೇ ಕ್ಷೇಮ. ಏಕೆಂದರೆ,ಜೀವರಹಿತ ಪೋಷಕಾಂಶಗಳಿಂದ ವಂಚಿತವಾದ, ಜೀರ್ಣಿಸಿಕೊಳ್ಳಲು ಕಷ್ಟವಾದ, ಜೀರ್ಣವಾಗದೆ ಉಳಿದು ಚಯಾಪಚಯ ತ್ಯಾಜ್ಯ (ಟಾಕ್ಸಿನ್) ಗಳನ್ನು ಉಂಟುಮಾಡುವ, ಕರುಳು ಅಥವಾ ಅಗ್ನಿಯ ವ್ಯವಸ್ಥೆಗೆ ತೊಂದರೆ ಉಂಟು ಮಾಡುವ ಈ

ಫ್ರೋಜನ್ ಫುಡ್ ಗಳಿಂದ ಆರೋಗ್ಯಕ್ಕೆ ಯಾವ ಪ್ರಯೋಜನವೂ ಇಲ್ಲ ಬದಲಿಗೆ ದುಷ್ಪರಿಣಾಮಗಳೇ ಹೆಚ್ಚು.

ಲೂಧಿಯಾನದ ಸಂಜೀವಿನಿ ಆಯುರ್ವೇದ ಶಾಲೆ ಯ ಆಯುರ್ವೇದಚಾರ್ಯರಾದ ಡಾಕ್ಟರ್ ಅಂಶು ವತ್ಸ್ಯನ್, 5000 ವರುಷಗಳಿಂದ ಪ್ರಚಲಿತವಾಗಿರುವ ಆಯುರ್ವೇದ ಪದ್ಧತಿ ಯಲ್ಲಿ ಫ್ರೋಜನ್ ಫುಡ್ ಬಳಕೆ ಯ ಬಗ್ಗೆ ಅಂದಿನಿಂದಲೂ ಇಲ್ಲ,

ತಾಜಾ ಆಹಾರ ಪದಾರ್ಥಗಳು ಸ್ವಾದಿಷ್ಟವಾಗಿರುವುದಷ್ಟೇ ಅಲ್ಲದೆ ಆರೋಗ್ಯಕ್ಕೆ ಉತ್ತಮವಾಗಿದೆ. ತಾಜಾ ಆಹಾರಗಳು ಫಿಟ್ನೆಸ್ ಹೆಚ್ಚಿಸಲು ಸಹಕಾರಿ, ಅಷ್ಟೇ ಅಲ್ಲದೆ ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಸೂಕ್ತವಾದದ್ದು.

ಸ್ವಲ್ಪ ಕಷ್ಟವಾದರೂ ಚಿಂತೆ ಇಲ್ಲ ಸ್ಥಳೀಯವಾಗಿ ಬೆಳೆದ ತಾಜಾ ಆಹಾರ ಪದಾರ್ಥಗಳನ್ನು ತಂದು ಸೇವಿಸುವುದೇ ಉತ್ತಮ ಫ್ರೋಜನ್ ಪ್ಯಾಕೆಟ್ ಫುಡ್ ಗಳ ರಿಸ್ಕ್ ಏತಕ್ಕೆ?

ಆರೋಗ್ಯಕ್ಕಾಗಿ ಇಷ್ಟು ಚಿಕ್ಕ ಬದಲಾವಣೆ ಮಾಡಿಕೊಳ್ಳುವುದೇ ಸೂಕ್ತ. ತಾಜಾ ತರಕಾರಿಗಳೇ ಆರೋಗ್ಯಕ್ಕೆ ಭಾಗ್ಯ ಎಂಬುವುದನ್ನು ಮನಗಾಣಬೇಕು ಅಷ್ಟೇ.

English summary

Side effects of consuming frozen vegetables in kannada

Always we should consume fresh vegetables not frozen. According to Ayurveda consuming frozen foods impact our health badly.
X
Desktop Bottom Promotion