Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕೋವಿಡ್ 19 & ಅಸ್ತಮಾ: ಅಸ್ತಮಾ ಉಲ್ಭಣವಾಗದಿರಲು ಏನು ಮಾಡಬೇಕು?
ಇಂದು ವಿಶ್ವ ಅಸ್ತಮಾ ದಿನ. ಪ್ರತಿವರ್ಷ ವಿಶ್ವ ಅಸ್ತಮಾ ದಿನವನ್ನು ಮೇ ತಿಂಗಳ ಮೊದಲ ಮಂಗಳವಾರದಂದು ಆಚರಿಸಲಾಗುವುದು. ಈ ವರ್ಷ ಮೇ.5ಕ್ಕೆ ಬಂದಿದೆ. ಈ ವರ್ಷದ ಅಸ್ತಮಾ ದಿನ ಥೀಮ್ ಅಂದರೆ ಅಸ್ತಮಾದಿಂದ ಸಾವು ಸಂಭವಿಸುವುದು ಸಾಕು ("Enough Asthma Deaths"). ಮೊದಲಿಗೆ ವಿಶ್ವ ಅಸ್ತಮಾ ದಿನವನ್ನು 35 ದೇಶಗಳು ಸೇರಿ ಆಚರಿಸಲಾಗಿತ್ತು.

ಅಸ್ತಮಾ ಎನ್ನುವುದು ಮಕ್ಕಳಿಂದ ಹಿಡಿದು ದೊಡ್ಡವರೆಗೆ ಕಂಡು ಬರುವ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಆಗಿದೆ. ಈ ಕಾಯಿಲೆ ಕೆಲವರಿಗೆ ವಂಶಪಾರಂಪರ್ಯವಾಗಿಯೂ ಬರುತ್ತದೆ. ಇಲ್ಲಿ ನಾವು ಅಸ್ತಮಾ ಎಂದರೇನು? ಈ ಕೋವಿಡ್ 19 ಸಮಯದಲ್ಲಿ ಅಸ್ತಮಾ ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಅಸ್ತಮಾ ಅಂದರೆ ಏನು ?
ಅಸ್ತಮಾ ಎನ್ನುವುದು ಉಸಿರಾಟಕ್ಕೆ ಸಂಬಂಧಪಟ್ಟ ಗಂಭೀರವಾದ ಸಮಸ್ಯೆಯಾಗಿದೆ. ಇದೊಂದು ಸಾಮಾನ್ಯ ಕಾಯಿಲೆಯಾಗಿದ್ದು ಪ್ರತಿದಿನ ಸುಮಾರು 40 ರೋಗಿಗಳು ಅಸ್ತಮಾ, ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದಾರೆ, ಅದರಲ್ಲೂ ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಶೇ, 60 ರಷ್ಟು ಪುರುಷರೇ ಆಗಿರುತ್ತಾರೆ.
ವಾಯುಮಾಲಿನ್ಯ, ಧೂಮಪಾನ, ಮಕ್ಕಳಲ್ಲಿ ಸರಿಯಾದ ಚಿಕಿತ್ಸೆ ನೀಡದಿರುವುದು, ಹವಾಮಾನ ವೈಫರೀತ್ಯದಿಂದ ಹರಡುವ ಜ್ವರ ಮತ್ತಿತರ ಕಾರಣಗಳಿಂದ ಅಸ್ತಮಾ ಬರುತ್ತದೆ. ಇನ್ನು ಕೆಲವರಲ್ಲಿ ಈ ಸಮಸ್ಯೆ ವಂಶಪಾರಂಪರ್ಯವಾಗಿ ಬರುತ್ತದೆ.

ಅಸ್ತಮಾ ಲಕ್ಷಣಗಳು
ಅಸ್ತಮಾ ಕಾಯಿಲೆ ಬಂದರೆ ಅದರಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿಲ್ಲ. ಆದರೆ ದೀರ್ಘಕಾಲದ ಚಿಕಿತ್ಸೆ ಮೂಲಕ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು.
ಇದರ ಲಕ್ಷಣಗಳು
- ಉಬ್ಬಸ
- ಕೆಮ್ಮು
- ಎದೆ ಬಿಗಿಯಾಗುವುದು ಅಥವಾ ನೋವು
- ಸರಾಗವಾಗಿ ಉಸಿರಾಡಲು ಕಷ್ಟವಾಗುವುದು

ಅಸ್ತಮಾ ಗುಣ ಪಡಿಸಲು ಸಾಧ್ಯವಿಲ್ಲ
ಎಲ್ಲರಿಗೆ ಗೊತ್ತಿರುವಂತೆ ಅಸ್ತಮಾ ಕಾಯಿಲೆ ಬಂದರೆ ಅದರಿಂದ ಸಂಪೂರ್ಣ ಗುಣಮುಕ್ತರಾಗಲು ಸಾಧ್ಯವಿಲ್ಲ. ಆದರೆ ಸರಿಯಾದ ಸಮಯಕ್ಕೆ ಸೂಕ್ತವಾದ ಚಿಕಿತ್ಸೆ ನೀಡಿದರೆ ರೋಗ ಉಲ್ಭಣವಾಗದಂತೆ ತಡೆಗಟ್ಟಬಹುದು. ಇನ್ಹೇಲರ್ ಅಥವಾ ದಿನನಿತ್ಯ ಔಷಧಿ ತೆಗೆದುಕೊಳ್ಳುವ ಮೂಲಕ ಸರಿಯಾಗಿ ಉಸಿರಾಡಬಹುದು. ಅಲ್ಲದೆ ತುಂಬಾ ದೂಳು ಹಾಗೂ ಹೊಗೆ ಇರುವ ಕಡೆ ಹೋಗಬಾರದು.
ಅಸ್ತಮಾ ಕಾಯಿಲೆಗೆ ಧೀರ್ಘಾವಧಿಯ ಚಿಕಿತ್ಸೆ ಅಗತ್ಯವಾಗಿದೆ. ಅನೇಕ ರೋಗಿಗಳು ಚೆನ್ನಾಗಿದ್ದೇವೆ ಎಂದು ಅನ್ನಿಸಿದರೆ ಇನ್ ಹೆಲರ್ ನಿಲ್ಲಿಸಿಬಿಡುತ್ತಾರೆ ಇದು ತುಂಬಾ ಅಪಾಯಕಾರಿಯಾದದ್ದು, ಇಂತಹ ರೋಗಿಗಳು ಎಲ್ಲಾದಕ್ಕೂ ವೈದ್ಯರ ಬಳಿ ಸಲಹೆ ಪಡೆದು ನಂತರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಇದೀಗ ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಅಸ್ತಮಾ ರೋಗಿಗಳು ತುಂಬಾ ಮುನ್ನೆಚ್ಚರಿಕೆವಹಿಸಬೇಕು.

1. ಅಲರ್ಜಿಯಿಂದ ದೂರವಿರಿ
ಅಲರ್ಜಿ ಹಾಗೂ ಅಸ್ತಮಾ ಸಮಸ್ಯೆಯಿದ್ದರೆ ನೀವು ಅಲರ್ಜಿ ಉಂಟು ಮಾಡುವ ವಸ್ತುಗಳಿಂದ ದೂರವಿರಬೇಕು. ಸಾಕು ಪ್ರಾಣಿಗಳ ಬಳಿ ಹೋಗಬೇಡಿ. ಅವುಗಳ ರೋಮ ಸಾಕು ಅಲರ್ಜಿಸಮಸ್ಯೆ ಹೆಚ್ಚಿಸಲು. ಇನ್ನು ದೂಳು, ಕೆಲವು ಹೂಗಳು ಇವೆಲ್ಲಾ ಅಲರ್ಜಿ ಉಂಟು ಮಾಡುತ್ತವೆ. ನಿಮಗೆ ಅಲರ್ಜಿ ತರುವ ವಸ್ತುಗಳಿಂದ ದೂರವಿರಿ.

2. ಹೊಗೆ ಇರುವ ಕಡೆ ಹೋಗಬೇಡಿ
ಅಸ್ತಮಾ ರೋಗಿಗಳು ಹೊಗೆ ಇರುವ ಕಡೆ ಹೀಗಬಾರದು, ಅದರಲ್ಲೂ ಸಿಗರೇಟ್ ಹೊಗೆ ಸೇವಿಸಲೇಬಾರದು. ಇನ್ನು ನೇಣದ ಬತ್ತಿ, ಅಗರಬತ್ತಿ, ಕಟ್ಟಿಗೆ ಹೊಗೆ ಇವುಗಳಿಂದಲೂ ದೂರವಿರಬೇಕು. ನೀವು ಧೂಮಪಾನ ಮಾಡಬಾರದು, ಮಾಡುವವರಿಂದಲೂ ದೂರವಿರಿ.

3. ಶೀತ, ಕೆಮ್ಮು ಇರುವವರಿಂದ ದೂರವಿರಿ
ಯಾರಿಗಾದರೂ ಶೀತ, ಕೆಮ್ಮು ಇದ್ದರೆ ಅವರಿಂದ ದೂರವಿರಿ. ಈಗ ಅಂತೂ ನೀವು ಮನೆಯಲ್ಲಿದ್ದರೂ ಮಾಸ್ಕ್ ಧರಿಸಿ, ಆಗಾಗ ಕೈಗಳನ್ನು ತೊಳೆಯುತ್ತಿರಿ. ಉಸಿರಾಟದ ತೊಂದರೆ ಇರುವವರಿಂದಲೂ ದೂರವಿರಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

4. ಮನೆ ಅಲರ್ಜಿ ಮುಕ್ತವಾಗಿರಲಿ
ನೀವೇ ಎಲ್ಲೇ ಇರಿ ಆ ಸ್ಥಳ ಅಲರ್ಜಿ ಮುಕ್ತವಾಗಿರಲಿ. ಇನ್ನು ರೆಸ್ಟೋರೆಂಟ್ ಆಹಾರಗಳಿಂದ ದೂರವಿರಿ. ನೀವು ಮಲಗುವ ದಿಂಬು, ಹಾಸಿಗೆ, ಹೊದಿಕೆ ಇವುಗಳು ಸ್ಪಾಂಜ್ ರೀತಿಯದ್ದು ಬಳಸಬೇಡಿ. ಮನೆ ದೂಳು ಮುಕ್ತವಾಗಿರಲಿ.

5. ಚುಚ್ಚುಮದ್ದು ಹಾಕಿಸಿಕೊಳ್ಳಿ
ಜ್ವರ, ಶೀತ ತಡೆಗಟ್ಟಲು ಪ್ರತಿವರ್ಷ ಚುಚ್ಚುಮದ್ದು ಹಾಕಿಸಿಕೊಲ್ಳಿ. ಕೆಮ್ಮು, ಶೀತ ಇವೆಲ್ಲಾ ಬಂದರೆ ಅಸ್ತಮಾ ಮತ್ತಷ್ಟು ಉಲ್ಭಣವಾಗುವುದು. ಅಸ್ತಮಾ ರೋಗಿಗೆ ಜ್ಬರ ಬಂದರೆ ನ್ಯೂಮೋನಿಯಾ ಬರುವ ಸಾಧ್ಯತೆ ಹೆಚ್ಚು. 19 ವರ್ಷ ಮೇಲ್ಪಟ್ಟವರು 5ರಿಂದ 10 ವರ್ಷಗಳಿಗೆ ಒಮ್ಮೆ ನ್ಯೂಮೋನಿಯಾ ತಡೆಗೆ ಚುಚ್ಚುಮದ್ದು ಹಾಕಿಸುವುದು ಒಳ್ಳೆಯದು.
ಇನ್‌ಹೇಲರ್ ಬಳಸಿ, ವೈದ್ಯರಿಗೆ ಕರೆ ಮಾಡಿ ನಿಮ್ಮ ಆರೋಗ್ಯ ಮಾಹಿತಿ ನೀಡಿ ಅವರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಿ. ಮುಂದಿನ ತಿಂಗಳು ಮಳೆಗಾಲ ಬೇರೆ ಶುರುವಾಗುವುದರಿಂದ ಅಸ್ತಮಾರೋಗಿಗಳು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಕೋವಿಡ್ 19 ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಹೋಗಲೇಬೇಡಿ.
ಬಿಸಿಬಿಸಿ ಆಹಾರ ಸೇವಿಸಿ, ವೈದ್ಯರ ಸಲಹೆ ಮೇರೆಗೆ ಉಸಿರಾಟದ ವ್ಯಾಯಾಮ ಮಾಡಿ ಇವೆಲ್ಲಾ ನಿಮ್ಮ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.



Click it and Unblock the Notifications
