Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ತಡೆಯಲು ಪೂಲ್ಡ್ ಟೆಸ್ಟ್ ಸಹಕಾರಿ
ಕೊರೊನಾವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೇನು ಸ್ವಲ್ಪ ಕಡಿಮೆಯಾಯಿತು ಎಂದು ನಿಟ್ಟುಸಿರುವ ಬಿಡುವ ಬೆನ್ನಲೇ ಅಧಿಕ ಕೇಸ್‌ಗಳು ಪತ್ತೆಯಾಗುತ್ತಿವೆ. ಯಾರಿಗೆ ಕೊರೊನಾವೈರಸ್ ಇದೆ ಎಂದು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ.

ರೋಗ ಲಕ್ಷಣಗಳು ಗೋಚರಿಸಿದರೆ ಪ್ರಾರಂಭಿಕ ಹಂತದಲ್ಲಿ ಯಾರೂ ವೈದ್ಯರ ಬಳಿ ಬರುತ್ತಿಲ್ಲ ಹಾಗೂ ಕ್ವಾರೆಂಟೈನ್‌ನಲ್ಲಿಯೂ ಇರುವುದಿಲ್ಲ. ಇದರಿಂದಾಗಿ ಪರಿಸ್ಥಿತಿ ಕೈ ಮೀರುತ್ತಿದೆ. ಭಾರತದಲ್ಲಿ ಜನಸಂಖ್ಯೆ ಅಧಿಕ. ಇಲ್ಲಿ ವ್ಯಕ್ತಿಗಳಲ್ಲಿ ಕೊರೊನಾ ವೈರಸ್ ಪತ್ತೆಗಾಗಿ ಪೂಲಿಂಗ್ ಟೆಸ್ಟ್ ಒಳ್ಳೆಯದು ಐಸಿಎಂಆರ್ (The Indian Council of Medical Researc)ಸಲಹೆ ಸಮಿತಿ ಹೇಳಿದೆ.
ಈ ಪೂಲಿಂಗ್ ಟೆಸ್ಟ್ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ, ಇದರಿಂದ ಕೊರೊನಾವೈರಸ್ ಕೇಸ್‌ಗಳನ್ನು ಬೇಗನೆ ಪತ್ತೆಹಚ್ಚಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವೇ ಎಂದು ನೋಡೋಣ ಬನ್ನಿ:

ಏನಿದು ಪೂಲ್ಡ್ ಟೆಸ್ಟ್?
ಇದರಲ್ಲಿ ಹೆಚ್ಚಿನ ಜನರ ಸ್ವಾಬ್ ಸಂಗ್ರಹಿಸಿ ಒನ್ ರಿಯಲ್ ಟೈಮ್ ಪಾಲಿಮಿಯರ್ಸ್ ಚೈನ್ ರಿಯಾಕ್ಷನ್ (RT-PCR)ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ಪರೀಕ್ಷೆಗೆ ಒಳ ಪಡಿಸಿದ ಗುಂಪಿನ ರಿಸಲ್ಟ್ ನೆನೆಗಟಿವ್ ಬಂದರೆ ಕೆಲಸ ಸುಲಭವಾಯಿತು. ಒಂದು ವೇಳೆ ಪಾಸಿಟಿವ್ ಬಂದರೆ ಅದರಲ್ಲಿ ಒಬ್ಬೊಬ್ಬರನ್ನೇ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.
ಈ ಪರೀಕ್ಷೆ ಮಾಡುವುದರಿಂದ ಸಮುದಾಯ ಮಟ್ಟದಲ್ಲಿ ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಬಹುದು.

ಪೂಲ್ಡ್ ಪರೀಕ್ಷೆ ಎಲ್ಲಿ ಮಾಡಬಹುದು?
ಕೋವಿಡ್ 19 ಕೇಸ್ ಶೇ.5ಕ್ಕಿಂತ ಕಡಿಮೆ ಇರುವ ಪ್ರದೇಶದಲ್ಲಿ ಈ ಪೂಲ್ಡ್ ಟೆಸ್ಟ್ ಸಹಾಯಕ್ಕೆ ಬರುತ್ತದೆ ಎಂದು ICMR ಹೇಳಿದೆ. ಇದರಲ್ಲಿ ಒಂದು ಬಾರಿಗೆ 5 ಜನರ ಸ್ವಾಬ್ ಅಷ್ಟೇ ಪರೀಕ್ಷೆಗೆ ಒಳಪಡಿಸಲಾಗುವುದು. ಹೆಚ್ಚು ಜನರದ್ದು ಬಳಸಿದ್ದರೆ ಕೆಲವೊಮ್ಮೆಸ್ವಲ್ಪ ಕೊರೊನಾಲಕ್ಷಣಗಳಿದ್ದರೆ ಪತ್ತೆಯಾಗದೆ ಹೋಗಬಹುದು.
ಈ ಪರೀಕ್ಷೆಯಿಂದ ಹಣ ಹಾಗೂ ಸಮಯದ ಉಳಿತಾಯವಾಗುವುದು ಹಾಗೂ ಅತೀ ಹೆಚ್ಚು ಜನರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಬಹುದು.

ಈ ಪರೀಕ್ಷೆಯನ್ನು ದೇಶದಲ್ಲಿ ಎಲ್ಲೆಲ್ಲಿ ಮಾಡಲಾಗಿದೆ?
ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಮಾಡಲಾಗಿತ್ತು. ಅಲ್ಲಿ ಇದುವರೆಗೆ 16 ಕೇಸ್‌ಗಳಷ್ಟೇ ಪತ್ತೆಯಾಗಿವೆ. ನಂತರ ಉತ್ತರ ಪ್ರದೇಶದಲ್ಲಿ ಮಾಡಲಾಯಿತು, ಹರಿಯಾಣ ಕೂಡ ಈ ಪರೀಕ್ಷೆ ಮಾಡಿಸಿದೆ.

ಇತರ ದೇಶಗಳಲ್ಲಿ ಈ ಪರೀಕ್ಷೆ ಯಶಸ್ವಿಯಾಗಿದೆಯೇ?
ಜರ್ಮನಿ ಹಾಗೂ ಇಸ್ಪೇಲ್‌ನಲ್ಲಿ ಪೂಲ್ಡ್ ಪರೀಕ್ಷೆ ಮಾಡಲಾಗಿತ್ತು. ಯೂರೋಪ್‌ನಲ್ಲಿ ಜರ್ಮನಿಯಲ್ಲಿ ಕೋವಿಡ್ 19 ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಕಾಯಿಲೆ ಹರಡುವ ಮುನ್ನವೇ ಈ ರೀತಿ ಪರೀಕ್ಷೆ ನಡೆಸಿ ರೋಗ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಯಿತು.

ಈ ಪರೀಕ್ಷೆ ಮಾಡಿಸಲು ಇರುವ ಸವಾಲುಗಳೇನು?
ಪೂಲ್ಡ್ ಪರೀಕ್ಷೆ ಅತೀ ಹೆಚ್ಚು ಜನರ ಪರೀಕ್ಷೆ ಅತೀ ಕಡಿಮೆ ಅವಧಿಯಲ್ಲಿ ಮಾಡಲು ಸಹಕಾರಿ. ಆದರೆ ಒಬ್ಬೊಬ್ಬರಿಗೆ ಮಾಡಿಸಿದಷ್ಟು ನಿಖರ ವರದಿ ಈ ಪರೀಕ್ಷೆಯಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಪರೀಕ್ಷೆ ನಡೆಸುವ ಮುನ್ನ ಹಾಟ್ ಸ್ಪಾಟ್ ಹಾಗೂ ಕಡಿಮೆ ಅಪಾಯದ ಸ್ಥಳಗಳನ್ನು ಗುರುತಿಸಬೇಕು. ನಂತರವಷ್ಟೇ ಈ ಪರೀಕ್ಷೆ ಮಾಡಿಸಬೇಕು. ಈಗೀನ ಪರಿಸ್ಥಿತಿಯಲ್ಲಿ ಗ್ರೀನ್ ಝೋನ್‌ಗಳು ಹಾಟ್ ಸ್ಪಾಟ್‌ಗಳಾಗುತ್ತಿರುವುದರಿಂದ ಇದನ್ನು ಯಾವ ಪ್ರದೇಶದಲ್ಲಿ ಮಾಡಿಸಬೇಕೆಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಸಲಹೆ: ಪೂಲ್ಡ್ ಪರೀಕ್ಷೆ ಒಂದೋ-ಎರಡು ಕೇಸ್ ಪತ್ತೆಯಾದಲ್ಲಿ ಮಾಡಿದರೆ ಅಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.



Click it and Unblock the Notifications
