Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಕೊರೊನಾವೈರಸ್‌ಗೆ ಪ್ಲಾಸ್ಮಾ ಥೆರಪಿ ಪರಿಣಾಮಕಾರಿಯೇ?
ಕೋವಿಡ್ 19 ಈ ಹೆಸರು ಕೇಳುತ್ತಿದ್ದಂತೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ವಿಶ್ವದ ಮನುಕುಲದಲ್ಲಿ ಒಂದು ಕರಾಳ ಅಧ್ಯಾಯವನ್ನೇ ಮೂಡಿಸಿರುವ ಕೊರೊನಾವೈರಸ್‌ಗೆ ಅಂತ್ಯ ಎಂದು ಎಂಬುವುದೇ ಯಾರಿಗೂ ತಿಳಿದಿಲ್ಲ. ಪರಿಸ್ಥಿತಿ ಕೈ ಮೀರದಂತೆ ಪ್ರತಿಯೊಂದು ರಾಷ್ಟ್ರವೂ ಮುನ್ನೆಚ್ಚರಿಕೆ ವಹಿಸುತ್ತಿದೆ.

ಭಾರತದಲ್ಲಿ 500 ಕೇಸ್‌ಗಳು ಪತ್ತೆಯಾಗುವ ಮುನ್ನವೇ ಲಾಕ್‌ಡೌನ್ ಮಾಡದ್ದರೂ 17,000 ಗಡಿ ದಾಟಿ ಮುನ್ನುಗ್ಗುತ್ತಿರುವುದು ನೋಡಿದರೆ ಲಾಕ್‌ಡೌನ್ ಇಲ್ಲದಿದ್ದರೆ ಪರಿಸ್ಥಿತಿ ಇನ್ನೇನು ಆಗುತ್ತಿತ್ತು ಎನ್ನುವುದು ಊಹಿಸಿದರೆ ಯಾರಿಗಾದರೂ ಭಯ ಉಂಟಾಗುವುದು.
ಕೊರೊನಾ ಜ್ವರದ ಹೊಡೆತಕ್ಕೆ ವಿಶ್ವದ ದೊಡ್ಡಣ್ಣ ಆಗಿದ್ದ ಅಮೆರಿಕ, ಶ್ರೀಮಂತ ರಾಷ್ಟ್ರಗಳಾದ್ದ ದುಬೈ, ಇಟಲಿ, ಸ್ಪೇನ್ ಆರ್ಥಿಕಕತೆಯಲ್ಲಿ ಮುನ್ನುಗ್ಗುತ್ತಿರುವ ಚೀನಾ ಮುಂತಾದ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಇದೇ ಮೊದಲ ಬಾರಿಗೆ ಇಡೀ ಜಗತ್ತೇ ಸ್ತಬ್ಧವಾಗಿದೆ.
ಕೊರೊನಾ ವೈರಸ್ ನಾಶಕ್ಕೆ ಔಷಧಿಗಳನ್ನ ಕಂಡು ಹಿಡಿಯಲಾಗಿದೆ ಎಂದು ಹೇಳಲಾಗಿದ್ದರೂ ಆ ಔಷಧಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಕೆಲವು ಕಡೆ ಏಡ್ಸ್ ರೋಗಕ್ಕೆ ನೀಡುತ್ತಿದ್ದ ಔಷಧಿ ನೀಡಿ ರೋಗಿಗಳನ್ನು ಗುಣ ಪಡಿಸುತ್ತಿದ್ದಾರೆ. ಇದರ ಜೊತೆಗೆ ಕೊರೊನಾಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏನಿದು ಪ್ಲಾಸ್ಮಾ ಥೆರಪಿ, ಇದು ಎಷ್ಟರ ಮಟ್ಟಿಗೆ ಕೊರೊನಾವೈರಸ್ ತಡೆಗಟ್ಟಲು ಸಹಕಾರಿ ಎಂಬುವುದನ್ನು ನೋಡೋಣ ಬನ್ನಿ:

ಪ್ಲಾಸ್ಮಾ ಥೆರಪಿ ಎಂದರೇನು?
ಇದೊಂದು ಹೊಸ ಬಗೆಯ ಚಿಕಿತ್ಸೆ ಆಗಿದೆ. ಕೊರೊನಾ ಪೀಡಿತ ರೋಗಿಗಳಿಗೆ ಈ ಚಿಕಿತ್ಸೆ ನೀಡಿ ಒಂದಿಷ್ಟು ಯಶಸ್ಸುಯಾಗಿರುವ ಉದಾಹರಣೆಗಳು ನಮ್ಮ ಮುಂದೆ ಇದೆ. ಕೋವಿಡ್ 19ನಿಂದ ಚೇತರಿಸಿಕೊಂಡ ವ್ಯಕ್ತಿಗಳ ರಕ್ತವನ್ನು ಈ ಪ್ಲಾಸ್ಮಾ ಥೆರಪಿಯಲ್ಲಿ ಬಳಸಲಾಗುವುದು.
ನಮ್ಮ ದೇಹದ ರಕ್ತನಾಳಗಳಲ್ಲಿ ಹರಿಯುವ ರಕ್ತದಲ್ಲಿ ಪ್ಲಾಸ್ಮಾ ಮತ್ತು ರಕ್ತಕಣಗಳು ಇರುತ್ತದೆ. ಈ ರಕ್ತಗಳನ್ನು ಬೇರ್ಪಡಿಸಿದಾಗ ಸಿಗುವ ದ್ರವವೇ ಪ್ಲಾಸ್ಮಾ ಆಗಿರುತ್ತದೆ. ಈ ಪ್ಲಾಸ್ಮಾದಲ್ಲಿ ಸಾಕಷ್ಟು ಆ್ಯಂಟಿಬಾಡಿಗಳಿರುತ್ತವೆ. ಒಬ್ಬ ವ್ಯಕ್ತಿಯಿಂದ ತೆಗೆದ ಪ್ಲಾಸ್ಮಾದಿಂದ 3-5 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬಹುದು.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಒಬ್ಬ ವ್ಯಕ್ತಿಯ ದೇಹಕ್ಕೆ ವೈರಾಣು ಸೇರಿದಾಗ ಅದು ಸಹಜವಾಗಿಯೇ ರಕ್ತವನ್ನು ಸೇರಿಕೊಳ್ಳುತ್ತದೆ. ದೇಹಕ್ಕೆ ಹೊರಗಿನ ಅಪರಿಚಿತ ವೈರಾಣು ಬಂದಾಗ ರೋಗ ನಿರೋಧಕ ಶಕ್ತಿಗಳು ಚುರುಕಾಗುತ್ತವೆ. ನಮ್ಮ ದೇಹದಲ್ಲಿ ಲಿಂಪೊಸೈಟ್ ಎಂಬ ಬಿಳಿ ರಕ್ತಕಣಗಳು ಆ್ಯಂಟಿಬಾಡಿಗಳನ್ನು ಉತ್ಪಾದಿಸಿ ವೈರಾಣುಗಳ ವಿರುದ್ಧ ಹೋರಾಡುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಮಾತ್ರ ವೈರಾಣು ತನ್ನ ಪ್ರಭಾವ ಬೀರುತ್ತವೆ.

ಈ ಕಲ್ಪನೆ ಹುಟ್ಟಿದ್ದು ಯಾವಾಗ?
ಫ್ಲಾಸ್ಮಾಥೆರಪಿ ಎಂಬ ಚಿಕಿತ್ಸಾ ವಿಧಾನವನ್ನು ಜರ್ಮನ್‌ನ ಡಾ. ಎಮಿಲ್‌ವಾನ್ ಬೆಹ್‌ರಿಂಗ್ ಎಂಬ ವೈದ್ಯ 1890ರಲ್ಲಿ ಕಂಡು ಹಿಡಿದರು. ಡಿಪ್ತೀರಿಯಾ ವಿರುದ್ಧ ಆ್ಯಂಟಿಬಾಡಿಗಳನ್ನು ಗುರುತಿಸಿದ ಈತ ಪ್ಲಾಸ್ಮಾ ಥೆರಪಿ ಮೂಲಕ ಮೊಲಗಳಿಗೆ ಡಿಫ್ತೀರಿಯಾ ಬರದಂತೆ ತಡೆದಿದ್ದ. ಇದಕ್ಕಾಗಿ ಈತನಿಗೆ ನೊಬೆಲ್ ಪ್ರಶಸ್ತಿ ಕೂಡ ಲಭಿಸಿದೆ.

ಯಾವ ಮಾರಕ ರೋಗಗಳಿಗೆ ಈ ಚಿಕಿತ್ಸೆ ಪರಿಣಾಮಕಾರಿಯಾಗಿವೆ?
- 1918ರಲ್ಲಿ ಸ್ಪಾನಿಷ್ ಪ್ಲೂ ಬಂತು ಆಗ ಈ ವಿಧಾನವನ್ನು ಚಿಕಿತ್ಸೆಯಲ್ಲಿ ಬಳಸಲಾಗಿತ್ತು.
- 1920ರಲ್ಲಿ ಡಿಫ್ತೀರಿಯಾ ಸಾಂಕ್ರಾಮಿಕ ರೋಗ ಬಂದಾಗಲೂ ಈ ಥೆರಪಿ ಬಳಸಿದ್ದು ಪ್ರಯೋಜನಕಾರಿಯಾಗಿತ್ತು.
- 2012ರಲ್ಲಿ ಕೊರೊನಾವೈರಸ್ ರೀತಿಯಲ್ಲಿ ಕಾಡಿದ MERS ರೋಗ ಚಿಕಿತ್ಸೆಗೂ ಇದು ಪರಿಣಾಮಕಾರಿಯಾಗಿತ್ತು.
- ಇನ್ನು ಅತ್ಯಂತ ಭಯಂಕರ ಸೋಂಕು ಆಗಿದ್ದ ಎಬೋಲಾ ಚಿಕಿತ್ಸೆಯಲ್ಲಿಯೂ ಈ ವಿಧಾನವನ್ನು ಬಳಸಲಾಗಿತ್ತು.

ಭಾರತದಲ್ಲಿ ಈ ತಂತ್ರಜ್ಞಾನ ಇನ್ನೂ ಬಂದಿಲ್ಲ
ಈ ಪ್ಲಾಸ್ಮಾ ಚಿಕಿತ್ಸಾ ವಿಧಾನವನ್ನು ಚೀನಾದಲ್ಲಿ ಮಾಡಿ ಯಶಸ್ವಿ ಕಂಡಿದ್ದರು. 10 ರೋಗಿಗಳಿಗೆ ಪ್ರಯೋಗಿಸಿದ್ದರು, ಅವರಲ್ಲಿನ 7 ರೋಗಿಗಳು ಗುಣಮುಖರಾದರು ಎಂದು ಅಧ್ಯಯನ ವರದಿಗಳು ಹೇಳಿವೆ. ಆದರೆ ಭಾರತದಲ್ಲಿ ಈ ತಂತ್ರಜ್ಞಾನವನ್ನೂ ಇನ್ನೂ ಬಳಸಿಲ್ಲ. ದೆಹಲಿ, ಗುಜರಾತ್, ಕೇರಳ, ಮಹಗಾರಾಷ್ಟ್ರ ಈ ಚಿಕಿತ್ಸೆ ಮಾಡಲು ರೋಗ ನಿಯಂತ್ರಣ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿವೆ. ಸದ್ಯಕ್ಕೆ ಕೇರಳ ರಾಜ್ಯಕ್ಕೆ ಅನುಮತಿ ಸಿಕ್ಕಿದೆ.
ಈ ಚಿಕಿತ್ಸೆ ಫಲಕಾರಿಯಾಗಿ ದೇಶದಲ್ಲಿ ಕೋವಿಡ್ 19 ಭಯ ಇಲ್ಲವಾಗಲಿ ಎಂದು ಬಯಸೋಣ....



Click it and Unblock the Notifications
