Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಕೋವಿಡ್ 19 ಲಾಕ್‌ಡೌನ್ ಎಫೆಕ್ಟ್: ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದ 85,000 ಜನರಿಗೆ ಬಂದಿದೆ ಏಡ್ಸ್!
ಕೋವಿಡ್ 19 ಲಾಕ್‌ಡೌನ್ ಮನುಷ್ಯರ ಮೇಲೆ ಹಲವು ರೀತಿಯಲ್ಲಿ ಕೆಟ್ಟ ಪರಿಣಾಮ ಬೀರಿದೆ. ಬೇರೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಕೆಲವರಿಗೆ ಒಬೆಸಿಟಿ, ಬಿಪಿ, ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಯ್ತು. ನಿಯಮಿತ ವ್ಯಾಯಾಮ ಇಲ್ಲದಿರುವುದರಿಂದ ಸಮಸ್ಯೆ ಹೆಚ್ಚಾಗಿತ್ತು. ಆದರೆ ಈಗ ಅಧ್ಯಯನದಲ್ಲಿ ಬರೀ ಈ ರೀತಿಯ ಸಮಸ್ಯೆಗಳಷ್ಟೇ ಅಲ್ಲ ಲೈಂಗಿಕ ಕಾಯಿಲೆಯಾದ ಏಡ್ಸ್ ಕೂಡ ಹೆಚ್ಚಾಗಿದೆ ಎಂಬ ಅಂಶ ತಿಳಿದು ಬಂದಿದೆ.

ಲಾಕ್‌ಡೌನ್ ವೇಳೆ ಕೆಲವರು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿರುವುದರಿಂದ ದೇಶದಲ್ಲಿ ಲೈಂಗಿಕ ಸೋಂಕು ಹೆಚ್ಚಿದೆ ಎಂಬ ಆಘಾತಕಾರಿ ವಿಷಯ ತಿಳಿದು ಬಂದಿದೆ. ಸುಮಾರು 85,000 ಜನರಿಗೆ ಲೈಂಗಿಕ ಸೋಂಕು ತಗುಲಿದೆಯಂತೆ. ಅದರಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ, ಅಲ್ಲಿಯ 10, 498 ಜನರಿಗೆ ಏಡ್ಸ್ ರೋಗ ತಗುಲಿದೆ.
ಆಂಧ್ರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಸುಮಾರು 9,521 ಜನರಿಗೆ ಲೈಂಗಿಕ ಸೋಂಕು ತಗುಲಿದೆ. ಕರ್ನಾಟಕದಲ್ಲಿ 8,947 ಜನರಿಗೆ ಹೆಚ್‌ಐವಿ ವೈರಸ್ ತಗುಲಿದೆ. ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ 3, 037 ಮತ್ತು 2,757 ಕೇಸ್‌ಗಳು ಕಂಡು ಬಂದಿರುವುದಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿದೆ.
ಅಫೀಷಿಯಲ್ ಡಾಟಾ ಪ್ರಕಾರ ಭಾರತದಲ್ಲಿ ಕಳೆದ 10 ವರ್ಷಗಳಿಂದ ಸುಮಾರು 17 ಲಕ್ಷ ಏಡ್ಸ್ ಸೋಂಕಿತರಿದ್ದಾರೆ, ಏಡ್ಸ್ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿತ್ತು. ಆದರೆ ಲಾಕ್‌ಡೌನ್ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಏಡ್ಸ್ ರೋಗಿಗಳು ಹೆಚ್ಚಾಗಿದ್ದಾರೆ.
2020ರ ಅಂಕಿ ಅಂಶದ ಪ್ರಕಾರ 23, 18, 731 ಏಡ್ಸ್ ಸೋಂಕಿತರಿದ್ದಾರೆ. ಅದರಲ್ಲಿ 81,430 ಮಕ್ಕಳಿದ್ದಾರೆ.
ಹೆಚ್‌ಐವಿ ವೈರಸ್ ಮನುಷ್ಯನ ಶರೀರವನ್ನು ಸೇರಿದಾಗ ಅದು ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕಡಿಮೆ ಮಾಡುತ್ತೆ. ಹೆಚ್‌ಐವಿ ಸೋಂಕು ಅನೇಕ ರೀತಿಯಲ್ಲಿ ಹರಡುತ್ತದೆ. ಲೈಂಗಿ ವ್ಯಕ್ತಿಗೆ ಬಳಸಿದ ಸೂಜಿಯನ್ನು ಬಳಸುವುದರಿಂದ, ಹೆಚ್ಐವಿ ವ್ಯಕ್ತಿಯ ರಕ್ತವನ್ನು ದಾನ ಪಡೆದಾಗ(ಈ ರೀತಿಯಾಗಲ್ಲ, ಪರೀಕ್ಷೆ ಮಾಡಿ ನೀಡಲಾಗುತ್ತಿದೆ), ತಾಯಿಯಿಂದ ಮಗುವಿಗೆ ಹರಡುತ್ತದೆ. ಬಹುಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಹೆಚ್ಐವಿ ವೈರಸ್ ಹರಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
