Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ಒಮಿಕ್ರಾನ್ ತಗುಲದಿರಲು ತೆಗೆದುಕೊಳ್ಳಬೇಕಾದ ಸುರಕ್ಷಿತಾ ಕ್ರಮಗಳು
ಕೋವಿಡ್ 19 ಮೊದಲಿಗೆ ವಿಶ್ವವನ್ನು ವ್ಯಾಪಿಸಿದಾಗ ಓಡುತ್ತಿರುವ ಜಗತ್ತು ನಿಂತಂತೆ ಎಲ್ಲವೂ ಸ್ತಬ್ಧವಾಯಿತು. ಜನರು ಮನೆಯಿಂದ ಹೊರಗಡೆ ಕಾಲಿಡಲು ಎದುರುವಂಥ ಪರಿಸ್ಥಿತಿ ಉಂಟಾಯಿತು. ಅದರ ಹಿಂದೆಯೇ ಬಂದ ಎರಡನೇ ಅಲೆ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು, ಭಾರತದ ಮೇಲೆ 2ನೇ ಅಲೆ ತುಂಬಾ ಗಂಭೀರ ಸ್ವರೂಪ ಬೀರಿತ್ತು.
ಲಸಿಕೆ ನೀಡಲಾರಂಭಿಸಿದ ಮೇಲೆ ನಿಧಾನಕ್ಕೆ ಕೊರೊನಾ ಅಲೆ ತಗ್ಗುತ್ತಾ ಬಂದಿತು, ಕೆಲವು ಜಿಲ್ಲೆಗಳು ಕೊರೊನಾ ಮುಕ್ತವಾದೆವು, ಸಾವಿರಾರು ಸಂಖ್ಯೆಯಲ್ಲಿ ಕೇಳಿ ಬರುತ್ತಿದ್ದ ಕೊರೊನಾ ಕೇಸ್‌ಗಳು ಒಂದು ಅಂಕಿ ಸ್ಥಾನಕ್ಕೆ ಕುಸಿದೆವು, ಆಗ ಎಲ್ಲರಿಗೂ ಸಮಧಾನವಾಗಿತ್ತು, ಅಬ್ಬಾ ಈ ಕೊರೊನಾ ಕಾಟದಿಂದ ಮುಕ್ತಿ ಪಡೆದವು ಎಂದು ಅಂದುಕೊಳ್ಳುವಷ್ಟರಲ್ಲಿ ವಿಶ್ವಕ್ಕೆ ಕೋವಿಡ್ 19 ರೂಪಾಂತರ ಒಮಿಕ್ರಾನ್ ಕಂಟಕಪ್ರಾಯವಾಗಿ ಕಾಣುತ್ತಿದೆ. ಇದೀಗ ಕರ್ನಾಕದಲ್ಲಿಯೂ ಈ ಕೇಸ್ ಪತ್ತೆಯಾಗಿರುವುದು ಭಾರತದಲ್ಲಿ ಆತಂಕ ಹೆಚ್ಚಿಸುವುದು.
ಈ ಒಮಿಕ್ರಾನ್ ಎಂದರೇನು? ಇದನ್ನು ತಡೆಗಟ್ಟಲು ನಾವೇನು ಮಾಡಬೇಕು ಎಂಬುವುದರ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಒಮಿಕ್ರಾನ್ ಎಂದರೇನು?
ಕೋವಿಡ್ 19 ಈ ಹೊಸ ರೂಪಾಂತರ ತಳಿ B.1.1.529 ಮೊದಲಿಗೆ ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾಯಿತು, ಇದನ್ನು ಒಮಿಕ್ರಾನ್ ಎಂದು ಕರೆಯಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೆಸರಿಟ್ಟಿದೆ. ಒಮಿಕ್ರಾನ್‌ಗೆ ಮೊದಲು ಕಂಡು ಬಂದ ಕೋವಿಡ್ 19 ಡೆಲ್ಟಾ ಆಗಿದೆ.
ಒಮಿಕ್ರಾನ್ ಕೋವಿಡ್ 19 ಇತರ ರೂಪಾಂತರಗಳಿಗಿಂತ ತುಂಬಾ ವೇಗವಾಗಿ ಹರಡುವುದು ಎಂಬುವುದಾಗಿ ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಈ ವೈರಸ್ ಇದೀಗ ಇಸ್ರೇಲ್, ಯುಕೆ, ಬೆಲ್ಜಿಯಂ, ಬೋಟ್ಸ್ವಾನ, ಹಾಂಗ್‌ಕಾಂಕ್, ಭಾರತ ಹೀಗೆ ಅನೇಕ ದೇಶಗಳಲ್ಲಿ ಒಮಿಕ್ರಾನ್ ಪತ್ತೆಯಾಗಿದೆ.

ಒಮಿಕ್ರಾನ್ ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಒಮಿಕ್ರಾನ್ ವೈರಸ್ ಬಗ್ಗೆ ಹಲವಾರು ಮಾಹಿತಿಗಳು, ಕೆಲವೊಂದು ತಪ್ಪು ಕಲ್ಪನೆಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಈ ಒಮಿಕ್ರಾನ್ ವೇಗವಾಗಿ ಹರುಡುತ್ತಿದ್ದರೂ ಒಮಿಕ್ರಾನ್ ಲಸಿಕೆ ಪಡೆದವರ ಮೇಲೆ ತುಂಬಾ ಗಂಭೀರ ಪರಿಣಾಮ ಬೀರುತ್ತಿಲ್ಲ. ಒಮಿಕ್ರಾನ್ ತಗುಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರಲ್ಲಿ ಲಸಿಕೆ ಪಡೆಯದವರ ಸಂಖ್ಯೆ ಹೆಚ್ಚಿದೆ.
ಒಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಹೇಗೆ ಭಿನ್ನವಾಗಿದೆ?
ಕೋವಿಡ್ 19 ಡೆಲ್ಟಾ ರೂಪಾಂತರ ಮೊದಲಿಗೆ ಭಾರತದಲ್ಲಿ ಪತ್ತೆಯಾಯಿತು. ಭಾರತದಲ್ಲಿ ಎರಡನೇ ಅಲೆ ಉಂಟಾಗಲು ಕಾರಣವಾಗಿದ್ದೇ ಈ ಡೆಲ್ಟಾ ರೂಪಾಂತರ. ಅಧ್ಯಯನಗಳ ಪ್ರಕಾರ ಒಮಿಕ್ರಾನ್ ರೂಪಾಂತರ ಡೆಲ್ಟಾಗಿಂತ 6 ಪಟ್ಟು ಹೆಚ್ಚು ವೇಗವಾಗಿ ಹರಡುವುದು ಎಂಬುವುದು ತಿಳಿದು ಬಂದಿದೆ.
ಡೆಲ್ಟಾ ರೂಪಾಂತರ ತುಂಬಾ ಜನರಿಗೆ ತಗುಲಿತ್ತು ಹಾಗೂ ಈ ವೈರಸ್ ತುಂಬಾ ಜನರ ಸಾವಿಗೆ ಕಾರಣವಾಗಿದೆ. ಆದರೆ ಈಗ ಬಂದಿರುವ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದಾರೂ ಡೆಲ್ಟಾ ರೀತಿಯಲ್ಲಿ ಸಾವಿಗೆ ಕಾರಣವಾಗಿಲ್ಲ. ಆದರೆ ಈ ವೈರಸ್ ಬಗ್ಗೆ ಮತ್ತಷ್ಟು ವಿವರವಾಗಿ ತಿಳಿಯಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.

ಒಮಿಕ್ರಾನ್ ಲಕ್ಷಣಗಳೇನು?
* ಒಮಿಕ್ರಾನ್ ಲಕ್ಷಣಗಳು ಇತರ ಕೋವಿಡ್ 19ಗಿಂತ ಭಿನ್ನವಾಗಿಲ್ಲ, ಈ ಹಿಂದೆ ಕೋವಿಡ್ 19 ಲಕ್ಷಣಗಳೇ ಈ ವೈರಸ್ ತಗುಲಿದಾಗಲೂ ಕಂಡು ಬರುವುದು.
ಈ ವೈರಸ್ ತಗುಲಿದಾಗ ಕಂಡು ಬರುವ ಸಾಮಾನ್ಯ ಲಕ್ಷಣಗಳೆಂದರೆ
* ಜ್ವರ
* ಸುಸ್ತು
* ಗ್ರಹಿಸುವ ಸಮಸ್ಯೆ ಇಲ್ಲವಾಗುವುದು
* ಉಸಿರಾಟದಲ್ಲಿ ತೊಂದರೆ
* ಎದೆ ನೋವು
* ರುಚಿ ಇಲ್ಲದಿರುವದು
* ಗಂಟಲಿನಲ್ಲಿ ಕೆರೆತ
* ಕೆಮ್ಮು
* ಹೊಟ್ಟೆ ನೋವು
* ಬೇಧಿ

ಒಮಿಕ್ರಾನ್ ವೈರಸ್ ಮತ್ತೆಗೆ ಯಾವ ಪರೀಕ್ಷೆ ಮಾಡಲಾಗುವುದು?
* ಒಮಿಕ್ರಾನ್ ವೈರಸ್ ಅನ್ನು RT- PCR ಮೂಲಕ ಪತ್ತೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿದೆ ಈ ವೈರಸ್ ಪತ್ತೆಗೆ ಇನ್ನೇನಾದರೂ ಮಾರ್ಗಗಳಿವೆಯೇ ಎಂಬುವುದರ ಬಗ್ಗೆಯೂ ಅಧ್ಯಯನಗಳು ನಡೆಯುತ್ತಿವೆ.

ಒಮಿಕ್ರಾನ್ ಹರಡುವುದನ್ನು ತಡೆಗಟ್ಟುವುದು ಹೇಗೆ? ಒಮಿಕ್ರಾನ್ ತಗುಲಿದಿರಲು ಏನು ಮಾಡಬೇಕು?
ವಿಜ್ಞಾನಿಗಳು ಈ ವೈರಸ್ ವೇಗವಾಗಿ ಹರಡುವುದು ಹಾಗೂ ಡೆಲ್ಟಾ ವೈರಸ್‌ನಷ್ಟು ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ. ಈ ವೈರಸ್ ಹರಡದಿರಲು ಈ ನಿಯಮಗಳನ್ನು ಪಾಲಿಸುವುದು ಒಳ್ಳೆಯದು:
* ಎರಡು ಲಸಿಕೆ ಪಡೆಯಿರಿ (ನೀವು ಒಂದೂ ಡೊಸ್ ಕೂಡ ಪಡೆದಿಲ್ಲ ಎಂದಾದರೆ ಕೂಡಲೇ ಪಡೆಯಿರಿ)
* ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
* ಜನರ ಗುಂಪು ಇರುವ ಕಡೆ ಓಡಾಡಬೇಡಿ.
* ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ. ಅದರಲ್ಲೂ ಡಬಲ್ ಮಾಸ್ಕ್ ಧರಿಸಿ.
* ಸ್ವಚ್ಛತೆ ಕಡೆ ಗಮನ ನೀಡಿ, ಕೈಗಳಿಗೆ ಆಗಾಗ ಸೋಪ್ ಹಾಕಿ ತೊಳೆಯಿರಿ.
* ಅನಾರೋಗ್ಯದ ಲಕ್ಷಣಗಳನ್ನು ಕಡೆಗಣಿಸಬೇಡಿ (ಜ್ವರ, ಸುಸ್ತು, ಗಂಟಲು ಕೆರೆತ)
ಕೊನೆಯದಾಗಿ: ಈ ವೈರಸ್ ಕಡೆಗಣಿಸಬೇಡಿ, 2ನೇ ಅಲೆ ಬಂದಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಂತೆ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆವಹಿಸಿ. ಮುಖ್ಯವಾಗಿ ಜನರು ಗುಂಪು ಸೇರಿರುವ ಕಡೆ ಹೋಗಬೇಡಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ. ಮಾಸ್ಕ್ ಧರಿಸಿ ಗಲ್ಲದಲ್ಲಿಟ್ಟು ಓಡಾಡಬೇಡಿ. ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ.



Click it and Unblock the Notifications