Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
ಬಂದಿದೆ ಒಮಿಕ್ರಾನ್ ಹೊಸ ತಳಿ: ಹಬ್ಬದ ಸಮಯದಲ್ಲಿ ವಹಿಸಿ ಎಚ್ಚರ!
ಎರಡು ವರ್ಷ ದೀಪಾವಳಿಯ ಸಂಭ್ರಮವನ್ನು ಕೊರೊನಾ ಕಸಿದುಕೊಂಡಿತ್ತು, ಈ ವರ್ಷ ಕಳೆದು ಹೋಗಿರುವ ಖುಷಿಯನ್ನು ಮರಳಿ ಪಡೆಯುವ ಸಂಭ್ರಮದಲ್ಲಿದ್ದರೆ ಜನರು. ಈಗಾಗಲೇ ದೀಪಾವಳಿ ಹಬ್ಬಕ್ಕೆ ಶಾಪಿಂಗ್ ಅಂತ ಓಡಾಟ ಶುರುವಾಗಿರುತ್ತದೆ, ಹೀಗೆ ಹೊರಗಡೆ ಓಡಾಡುವಾಗ ನಿಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸಲು ಮರೆಯದಿರಿ. ಹೌದು, ನೀವು ಕೊರೊನಾ ಕಾಟವಿಲ್ಲ ಎಂದು ಭಾವಿಸಿ ಓಡಾಡುತ್ತಿದ್ದರೆ ಭಾರತದಲ್ಲಿ ಕೊರೊನಾದ ಹೊಸ ತಳಿಯೊಂದು ಪತ್ತೆಯಾಗಿದೆ, ಒಮಿಕ್ರಾನ್‌ನ ಹೊಸ ರೂಪಾಂತರ ಪತ್ತೆಯಾಗಿದೆ.
ಈ ಹೊಸ ರೂಪಾಂತರ ದೀಪಾವಳಿ ಸಮಯವಷ್ಟರಲ್ಲಿ ಹೆಚ್ಚಾಗಿ ಹರಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಒಮಿಕ್ರಾನ್ ಯಾವುದು, ಇದರ ಲಕ್ಷಣಗಳೇನು ತಡೆಗ್ಟಟುವುದು ಹೇಗೆ ಎಂದು ನೋಡೋಣ ಬನ್ನಿ:

ಒಮಿಕ್ರಾನ್ ಹೊಸ ರೂಪಾಂತರ:
ಒಮಿಕ್ರಾನ್ ಹೊಸ ರೂಪಾಂತರವನ್ನು BA.5.1.7 ಮತ್ತು BF.7 ಎಂದು ಗುರುತಿಸಲಾಗಿದೆ. ಇದು ಮೊದಲಿಗೆ ಚೈನಾದ ಮಂಗೋಲಿಯಾದಲ್ಲಿ ಕಂಡು ಬಂದಿದ್ದು ಇದೀಗ ವಿಶ್ವದ ವಿವಿಧ ಬಾಗಗಳಲ್ಲಿ ಕಂಡು ಬರುತ್ತಿದೆ. ಭಾರತದಲ್ಲಿ ಈ ತಳಿಯನ್ನು ಮೊದಲಿಗೆ ಗುಜರಾತ್ ಬಯೋಟೆಕ್ನೋಲಾಜಿ ರಿಸರ್ಚ್ ಸೆಂಟರ್‌ನಲ್ಲಿ ಕಂಡು ಹಿಡಿಯಲಾಯಿತು.

ಹಬ್ಬದ ಸಮಯದಲ್ಲಿ ಎಚ್ಚರ
ಹಬ್ಬದ ಸಮಯದಲ್ಲಿ ನಾವು ಹೆಚ್ಚು ಓಡಾಡುತ್ತೇವೆ, ನೆಂಟರಿಷ್ಟರ ಮನೆಗಳಿಗೆ ಹೋಗುತ್ತೇವೆ, ಹೀಗೆ ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವಂತೆ ತಜ್ಞರು ಎಚ್ಚರಿಸಿದ್ದಾರೆ. ಇನ್ನು ರೋಗ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿಯೇ ಐಸೋಲೇಟ್ ಆಗಬೇಕು. ಮಕ್ಕಳು, ವಯಸ್ಸಾದವರು, ಕ್ಯಾನ್ಸರ್ ರೋಗಿಗಳು, ರೋಗ ನಿರೋಧಶಕ್ತಿ ಕಡಿಮೆ ಇರುವವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ.

BA.5.1.7 ಮತ್ತು BF.7 ತುಂಬಾ ಬೇಗನೆ ಹರಡುತ್ತಿದೆ
ಈ ಹೊಸ ತಳಿ ಇತರ ಕೊರೊನಾ ಉಪತಳಿಗಳಿಗಿಂತ ತುಂಬಾನೇ ವೇಗವಾಗಿ ಹರಡುವುದು. ಈ ವೈರಸ್ ಕೊರೊನಾ ಲಸಿಕೆ ಪಡೆದವರಲ್ಲೂ ಕಂಡು ಬರುವ ಸಾಧ್ಯತೆ ಇದೆ.
BA.5.1.7 ಮತ್ತು BF.7 ಲಕ್ಷಣಗಳು
ಈ ಕೊರೊನಾ ಲಕ್ಷಣಗಳು ಇತರ ಕೊರೊನಾ ಲಕ್ಷಣಗಳಿಗಿಂತ ತುಂಬಾ ಭಿನ್ನವಾಗಿಯೇನೂ ಇಲ್ಲ. ಆದರೆ ಕೆಲವರು ಇದರಿಂದ ಸೋಂಕು ತುಂಬಾನೇ ಇರುತ್ತದೆ ಎಂದು ಹೇಳಲಾಗುವುದು, ಆದರೆ ಇದರ ಬಗ್ಗೆ ಇನ್ನೂ ಖಚಿತ ಮಾಹಿತಿಯಿಲ್ಲ, ಈ ಕುರಿತು ಅಧ್ಯಯನಗಳು ನಡೆಯುತ್ತಿದ್ದು ಇನ್ನಷ್ಟೇ ತಿಳಿಯಬೇಕಾಗಿದೆ.
ದೀಪಾವಳಿಗೆ ಈ ಮುನ್ನೆಚ್ಚರಿಕೆವಹಿಸಿ
* ತುಂಬಾ ಗುಂಪು ಇರುವ ಕಡೆ ಸೇರಬೇಡಿ
* ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ.
ಯಾವುದೇ ಆತಂಕ ಬೇಡ, ಆದರೆ ಎಚ್ಚರವಾಗಿರಿ.



Click it and Unblock the Notifications
