Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್!
NeoCov : ನಿಯೋಕೋವ್ ರೂಪಾಂತರ ವೈರಸ್: ಇದು ತಗುಲಿದರೆ ಸಾವಿನ ಸಂಖ್ಯೆ ಹೆಚ್ಚುವುದು
ಕೊರೊನಾವೈರಸ್ ಕೊನೆಯಾಗುವ ಸೂಚನೆ ಕಾಣುತ್ತಿಲ್ಲ, ಒಂದರ ನಂತರ ಮತ್ತೊಂದು ಎಂಬಂತೆ ಹೊಸ ತಳಿಗಳು ಬರುತ್ತಲೇ ಇವೆ. ಡೆಲ್ಟಾ ಬಳಿಕ ಬಂದ ಹೊಸ ರೂಪಾಂತರ ಒಮಿಕ್ರಾನ್ ವಿಶ್ವದಲ್ಲಿ ಮತ್ತೊಮ್ಮೆ ಕೋವಿಡ್ ಅಲೆ ಉಂಟಾಗಲು ಕಾರಣವಾಗಿದೆ, ಆದರೆ ಈ ಒಮಿಕ್ರಾನ್ ವೇಗವಾಗಿ ಹರಡುತ್ತಿದ್ದರೂ ಮಾರಣಾಂತಿಕವಾಗಿಲ್ಲ, ಇದರಿಂದ ಸಾವು-ನೋವು ಅತೀ ಕಡಿಮೆ ಸಂಭವಿಸಿದೆ. ಆದರೆ ವುಹಾನ್ ವಿಜ್ಞಾನಿಗಳು ಇದೀಗ ಆತಂಕಕಾರಿ ವಿಷಯವೊಂದನ್ನು ಹೆಳಿದ್ದಾರೆ.
ದಕ್ಷಿಣ ಆಫ್ರಿಕದಲ್ಲಿ ಇದೀಗ ಹೊಸದಾಗಿ ವೈರಸ್ ಪತ್ತೆಯಾಗಿದೆ. ಅದನ್ನು ನಿಯೋಕೋವ್ ಎಂದು ಕರೆಯಲಾಗಿದೆ. ಚೀನಾದ ವುಹಾನ್‌ನ ವಿಜ್ಞಾನಿಗಳು ಹೇಳುವ ಪ್ರಕಾರ ಈ ವೈರಸ್ ತುಂಬಾನೇ ಅಪಾಯಕಾರಿಯಾಗಿದೆ. ಈ ವೈರಸ್ ಹರಡುವ ವೇಗ ಹಾಗೂ ಸಾವಿನ ಸಂಖ್ಯೆ ಹೆಚ್ಚಿದೆಯಂದು ರಷ್ಯಾದ ನ್ಯೂಸ್ ಏಜೆನ್ಸಿ ಸ್ಪುಟ್ನಿಕ್ ವರದಿ ಮಾಡಿದೆ.

ನಿಯೋಕೋವ್ ಈ ಹಿಂದೆಯೂ ಕಂಡು ಬಂದಿತ್ತು
ವರದಿ ಪ್ರಕಾರ ನಿಯೋಕೋವ್ ವೈರಸ್ ಹೊಸದಲ್ಲ. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ 2012 ಮತ್ತು 2015ರಲ್ಲಿ ಕಂಡು ಬಂದಿತ್ತು, ಇದು ಕೊರೊನಾವೈರಸ್‌ಗೆ ಕಾರಣವಾದ SARS-CoV-2ನಂತದ್ದೇ ವೈರಸ್ ಆಗಿದೆ.
ಈ ಹಿಂದೆ ಕಂಡು ಬಂದ ನಿಯೋಕೋವ್ ಬಾವಲಿಗಳ ಗುಂಪು ಇರುವ ಕಡೆ ಬಂದಿತ್ತು, ಈ ವೈರಸ್ ಪ್ರಾಣಿಗಳಿಗೆ ಮಾತ್ರ ಹರಡುತ್ತಿತ್ತು. ಆದರೆ ಈಗ ಪತ್ತೆಯಾಗಿರುವ ನಿಯೋವೈರಸ್ ಮನುಷ್ಯರಿಗೂ ಹರಡಬಹುದು ಎಂದು ಹೇಳಲಾಗುತ್ತಿದೆ.
ವಿಜ್ಞಾನಿಗಳ ಪ್ರಕಾರ ಈ ವೈರಸ್ ಮನುಷ್ಯರಿಗೆ ಹರಡಲು ಒಂದೇ ಒಂದು ರೂಪಾಂತರ ಬೇಕಾಗಿರುವುದು, ಹಾಗಾದರೆ ಅದು ಮನುಷ್ಯರಿಗೆ ಹರಡುವುದು. ಹೀಗಾದರೆ ಕೊರೊನಾವೈರಸ್‌ಗಿಂತ ಹೆಚ್ಚಿನ ಅಪಾಯ ಉಂಟಾಗಲಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಈ ವೈರಸ್ ತಡೆಗಟ್ಟಬಹುದಾಗಿದೆ.

ಸಾವಿನ ಸಂಖ್ಯೆ ಹೆಚ್ಚಿದೆ
ನಿಯೋಕೋವ್ ವೈರಸ್ ತಗುಲಿದ ಮೂವರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಾರೆ, ಆದ್ದರಿಂದ ಈ ವೈರಸ್ ತುಂಬಾನೇ ಮಾರಣಾಂತಿಕವಾಗಿದೆ.

ಇನ್ನೂ ಮನುಷ್ಯರಿಗೆ ಹರಡಿಲ್ಲ
ಈ ನಿಯೋಕೋವ್ ವೈರಸ್ ಇನ್ನೂ ಮನುಷ್ಯರಿಗೆ ಹರಡಿಲ್ಲ, ಆದರೆ ಹರಡುವ ಸಾಧ್ಯತೆ ಇರುವುದರಿಂದ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.



Click it and Unblock the Notifications
