Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಧ್ಯಯನ ವರದಿ: 30 ಸೆಕೆಂಡ್‌ನಲ್ಲಿ ಕೊರೊನಾವೈರಸ್ ಕೊಲ್ಲುತ್ತೆ ಮೌತ್‌ವಾಶ್
'ಮೌತ್‌ವಾಶ್' ಕೆಲ ವರ್ಷಗಳ ಹಿಂದೆ ಇದನ್ನು ಬಲಸುವವರ ಸಂಖ್ಯೆ ಕಡಿಮೆ ಇತ್ತು, ಪೇಸ್ಟ್ ಹಾಕಿ ಹಲ್ಲುಜ್ಜಿ ಟಂಗ್ ಕ್ಲೀನರ್‌ನಿಂದ ಸ್ವಚ್ಛ ಮಾಡಿದರೆ ಬಾಯಿ ಸ್ವಚ್ಛತೆ ಕೆಲಸ ಮುಗೀತು, ಆದರೆ ಈಗ ಮೌತ್ ವಾಶ್ ಇರಲೇಬೇಕು, ಇಲ್ಲದಿದ್ದರೆ ಬಾಯಿ ಸ್ವಚ್ಛತೆಯ ಫೀಲ್ ಬರುವ ಬರುವುದೇ ಇಲ್ಲ.
ಈ ಮೌತ್ ವಾಶ್ ಬಾಯಿ ಸ್ವಚ್ಛತೆಯಲ್ಲಿ ಎತ್ತಿದ ಕೈ ಎಂಬುವುದು ಗೊತ್ತು, ಆದರೆ ಮೌತ್ ವಾಶ್ ಕೊರೊನಾ ವೈರಸ್ ಕೂಡ ಕೊಲ್ಲುತ್ತದೆ, ಆ ಸಾಮಾರ್ಥ್ಯ ಮೌತ್‌ವಾಶ್‌ನಲ್ಲಿ ಇದೆಯೇ, ಈ ಕುರಿತು ಅಧ್ಯಯನಗಳು ಏನು ಹೇಳಿವೆ ಎಮದು ನೋಡೋಣ:

30 ಸೆಕೆಂಡ್ ಕೊರೊನಾವೈರಸ್ ಕೊಲ್ಲುವ ಮೌತ್‌ವಾಶ್
ಲ್ಯಾಬ್ ಪರೀಕ್ಷೆಯಲ್ಲಿ ಕೊರೊನಾವೈರಸ್ 30 ಸೆಕೆಂಡ್‌ನಲ್ಲಿ ಕೊರೊನಾವೈರಸ್ ಕೊಲ್ಲುವ ಸಾಮಾರ್ಥ್ಯ ಹೊಂದಿದೆ ಎಂದು ತಿಳಿದು ಬಂದಿದೆ. Cardiff University ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮೌತ್‌ವಾಶ್‌ನಲ್ಲಿ ಶೇ,. 0.07 ಸಿಪಿಸಿ (cetypyridinium chloride) ಅಂಶವಿದ್ದು ಇದು ಕೊರೊನಾವೈರಸ್ ವಿರುದ್ಧ ಹೋರಾಡುವಲ್ಲಿ ಶಕ್ತವಾಗಿದೆ.

ಎಂಜಲಿನಲ್ಲಿರುವ ಕೊರೊನಾವೈರಸ್ ಕೊಲ್ಲುವ ಮೌತ್‌ವಾಶ್
ಕಾರ್ಡಿಫ್‌ನ ವೇಲ್ಸ್‌ನಲ್ಲಿರುವ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಡೆಸಿದ ಕ್ಲಿನಿಕಲ್ ಅಧ್ಯಯನದಲ್ಲಿ ಕೊರೊನಾ ಸೋಂಕಿತರು ಮೌತ್‌ವಾಶ್ ಬಳಸಿದ ಬಳಿಕ ಅವರ ಸಲೈವಾ(ಎಂಜಲು)ನಲ್ಲಿ ಕೊರೊನಾವೈರಸ್ ನಾಶವಾಗಿರುವುದಾಗಿ 2020ರಲ್ಲಿ ನಡೆಸಿದ ಅಧ್ಯಯನ ವರದಿ ಹೇಳಿದೆ. 12 ವಾರಗಳವರೆಗೆ ಈ ಅಧ್ಯಯನ ನಡೆಸಲಾಗಿತ್ತು.

2021ರಲ್ಲಿ ಫಲಿತಾಂಶದ ವರದಿ ಪ್ರಕಟ
ಮೌತ್‌ವಾಶ್ ಬಾಯಲ್ಲಿರುವ ಕೊರೊನಾವೈರಸ್ ಕೊಲ್ಲಲು ಹೇಗೆ ಸಹಕಾರಿ ಎಂಬ ಅಧ್ಯಯನ ನಡೆಸುತ್ತಿದ್ದು ಇದರ ಕುರಿತ ಹೆಚ್ಚಿನ ಮಾಹಿತಿ 2021ರ ಆರಂಭದಲ್ಲಿಯೇ ಪ್ರಕಟವಾಗಲಿದೆ ಎಂದು ಕಾರ್ಡಿಫ್ ಯೂನಿರ್ವಸಿಟಿಯ ಪ್ರೊಫೆಸರ್ ಡೇವಿಡ್ ಥೋಮಸ್ ತಿಳಿಸಿದ್ದಾರೆ.

ಸ್ಯಾನಿಟೈಸರ್‌ನಂತೆಯೇ ಮೌತ್‌ವಾಶ್ ಕೊರೊನಾಕೊಲ್ಲಲು ಸಹಕಾರಿ
ಕೊರೊನಾವೈರಸ್ ನಮ್ಮ ಮೂಗು ಹಾಗೂ ಬಾಯಿಯ ಮೂಲಕ ದೇಹವನ್ನು ಸೇರುತ್ತದೆ. ಆಗಾಗ ಕೈಗೆ ಸ್ಯಾನಿಟೈಸರ್ ಹಚ್ಚುವುದು ಅಥವಾ ಸೋಪು ಹಚ್ಚಿ ತೊಳೆಯುವುದರಿಂದ ಕೊರೊನಾವೈರಸ್ ತಡೆಯುವ ಒಂದು ಮಾರ್ಗವಾದರೆ ಮೌತ್‌ವಾಶ್ ಬಳಸುವ ಮೂಲಕ ಬಾಯಿಯ ಸ್ವಚ್ಛತೆ ಕಾಪಾಡುವುದು ಮತ್ತೊಂದು ಮಾರ್ಗವಾಗಿದೆ.
ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಮರೆಯದಿರಿ.



Click it and Unblock the Notifications
