Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಹೆಚ್ಚು ಹೊತ್ತು ಕೆಲಸ ಮಾಡಿದರೆ ಆಯುಸ್ಸು ಕಡಿಮೆಯಾಗುವುದು: WHO
ಉದ್ಯೋಗಿಗಳಿಗೆ ಕೆಲಸದ ಅವಧಿ 8 ಗಂಟೆ ಅಂತ ಇರುತ್ತದೆ, ಆದರೆ ಎಷ್ಟೋ ಉದ್ಯೋಗಿಗಳನ್ನು ನಾವು ನೋಡಬಹುದು 10 ಗಂಟೆಗಿಂತಲೂ ಅಧಿಕ ಸಮಯ ಕೆಲಸ ಮಾಡುತ್ತಾರೆ. ಹೆಚ್ಚಿದ ಟಾರ್ಗೆಟ್, ಇನ್ನೂ ಹೆಚ್ಚು ಗಳಿಸಬೇಕೆಂಬ ಆಸೆ, ಹೆಚ್ಚು ದುಡಿಯದಿದ್ದರೆ ಬಾಸ್ ಎಲ್ಲಿ ಅತೃಪ್ತರಾಗುತ್ತಾರೆ ಎಂಬ ಭಯ ಹೀಗೆ ನಾನಾ ಕಾರಣಗಳಿಂದ ಓವರ್ ಟೈಮ್ ಕೆಲಸ ಮಾಡುವವರನ್ನು ನೋಡುತ್ತೇವೆ.
ಆದರೆ ಯಾರು ಹೀಗೆ ಓವರ್ ಟೈಮ್ ಕೆಲಸ ಮಾಡುತ್ತಾರೋ ಅವರ ಜೀವನ ಅಪಾಯದಲ್ಲಿದೆ. ಹೌದು ಹಣ ಕೂಡಿಡಬೇಕು, ಮುಂದೆ ಚೆನ್ನಾಗಿ ಬಾಳಬೇಕು, ಕೆಲಸದಲ್ಲಿ ಮತ್ತಷ್ಟು ಉನ್ನತ್ತಿ ಸ್ಥಾನಕ್ಕೇರಬೇಕು ಎಂಬ ಆಸೆಯಿಂದ ತುಂಬಾ ಹೊತ್ತು ದುಡಿಯುತ್ತೇವೆ, ಆದರೆ ಆ ರೀತಿಯ ದುಡಿತದಿಂದಾಗಿ ಸಾವಿಗೆ ಸಮೀಪವಾಗುತ್ತೇವೆ. ಹೌದು ಈ ಎಚ್ಚರಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ.

ಅಧಿಕ ಹೊತ್ತು ಕೆಲಸ ಮಾಡುವುದರಿಂದ ಪಾರ್ಶ್ವವಾಯು ಹಾಗೂ ಹೃದಯಾಘಾತದ ಅಪಾಯ
ಅಧಿಕ ಹೊತ್ತು ಕೆಲಸ ಮಾಡುವುದರಿಂದ 2016ರಲ್ಲಿ 745 000 ಜನರು ಪಾರ್ಶ್ವವಾಯು ಹಾಗೂ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ. 2000ಕ್ಕೆ ಹೋಲಿಸಿದರೆ ಶೇ. 29ರಷ್ಟು ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೆಲಸಕ್ಕೆ ಸಂಬಂಧಿಸಿದಂತೆ ಒತ್ತಡ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ
ಸಾಮಾನ್ಯವಾಗಿ ಮನೆಯ ಆರ್ಥಿಕ ಅಗ್ಯತವನ್ನು ನಿಭಾಯಿಸುವ ಜವಾಬ್ದಾರಿ ಪುರುಷರಿಗೆ ಅಧಿಕವಿರುತ್ತದೆ. ಆ ಕಾರಣಕ್ಕೆ ಅವರು ಹೆಚ್ಚು ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುತ್ತಾರೆ. ವಾರದಲ್ಲಿ 55 ಗಂಟೆಗಿಂತ ಅಧಿಕ ಕೆಲಸ ಮಾಡುವ 45-74 ವರ್ಷದವರಲ್ಲಿ ಪಾರ್ಶ್ವವಾಯು, ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ
ಅಧಿಕ ಹೊತ್ತು ಕೆಲಸ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ, ಇದರಿಂದಾಗಿ ದೈಹಿಕ ಆರೋಗ್ಯ ಹಾಳಾಗುತ್ತಿದೆ.
ವಿಶ್ವದ ಒಟ್ಟು ಜನ ಸಂಖ್ಯೆಯಲ್ಲಿ ಶೇ.9ರಷ್ಟು ಜನರು ಅಧಿಕ ಹೊತ್ತು ಕೆಲಸ ಮಾಡುತ್ತಿದ್ದಾರೆ. ಇದು ಕೆಲಸಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಲು ಹಾಗೂ ಮನುಷ್ಯ ಬೇಗ ಸಾವನ್ನಪ್ಪಲು ಕಾರಣವಾಗಿದೆ.

ಅಧ್ಯಯನ ವರದಿ
ಯಾರು ವಾರದಲ್ಲಿ 55 ಗಂಟೆಗಿಂತ ಅಧಿಕ ಸಮಯ ಕೆಲಸ ಮಾಡುತ್ತಾರೋ ಅವರಲ್ಲಿ ಶೇ.35ರಷ್ಟು ಜನರಿಗೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿದರೆ ಶೇ. 17ರಷ್ಟು ಜನರಿಗೆ ನ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿದೆ. ಈ ಸಂಖ್ಯೆಯೂ ಯಾರು ವಾರದಲ್ಲಿ 35-40 ಗಂಟೆ ಕೆಲಸ ಮಾಡುತ್ತಾರೋ ಅವರಿಗೆ ಹೋಲಿಸಿದರೆ ತುಂಬಾನೇ ಅಧಿಕವಾಗಿದೆ.

ಕೋವಿಡ್ 19 ಸಾಂಕ್ರಾಮಿಕ ಕೆಲಸದ ಅವಧಿ ಹೆಚ್ಚಿಸಿದೆ
ಕೋವಿಡ್ 19 ಬಂದ ಮೇಲೆ ಜನರು ಕೆಲಸ ಮಾಡುವ ಕಾರ್ಯ ವೈಖರಿಯೇ ಬದಲಾಗಿದೆ. ಹೆಚ್ಚಿನವರು ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಕೆಲವರು ಕೆಲಸವನ್ನು ಕಳೆದು ಕೊಂಡಿದ್ದಾರೆ. ಇದನ್ನು ನೋಡಿದಾಗ ಕೆಲಸದಲ್ಲಿ ಇರುವವರು ತಮ್ಮ ಕೆಲಸಕ್ಕೆ ಎಲ್ಲಿ ಕುತ್ತು ಬರುತ್ತದೋ ಎಂಬ ಭಯದಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುತ್ತಿದ್ದಾರೆ.

ಕೊನೆಯದಾಗಿ
ಕೆಲಸ ಉಳಿಯಬೇಕು, ಆರ್ಥಿಕ ಸ್ಥಿತಿ ಚೆನ್ನಾಗಿರಬೇಕೆಂದು ಶ್ರಮಪಟ್ಟು ಅಧಿಕ ಹೊತ್ತು ಕೆಲಸ ಮಾಡುತ್ತೇವೆ, ಆದರೆ ಕೊನೆಗೆ ಆರೋಗ್ಯವನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ಕೆಲಸದ ಜೊತೆಗೆ ಆರೋಗ್ಯಕ್ಕೂ ಗಮನ ನೀಡಿ.



Click it and Unblock the Notifications











