Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೊಸ ಉಪ ಒಮಿಕ್ರಾನ್ ವೈರಸ್ ಮತ್ತಷ್ಟು ಅಪಾಯಕಾರಿಯಾಗಿದೆ: ಲ್ಯಾಬ್ ಸ್ಟಡಿ
ಒಮಿಕ್ರಾನ್ ಇನ್ನೇನು ಕಡಿಮೆಯಾಗುತ್ತಿದೆ ಅಷ್ಟರಲ್ಲಿ ಒಮಿಕ್ರಾನ್‌ನ ಉಪ ರೂಪಾಂತರ BA.2 ಕಾಣಿಸಿಕೊಂಡಿದ್ದು ಇದು ಒಮಿಕ್ರಾನ್‌ಗಿಂತ ಮತ್ತಷ್ಟು ವೇಗವಾಗಿ ಹರಡುವುದು ಮಾತ್ರವಲ್ಲ ಅನೇಕ ಕಾಯಿಲೆಗಳನ್ನು ತರುವುದು ಎಂದು ಲ್ಯಾಬ್ ಅಧ್ಯಯನದಿಂದ ತಿಳಿದು ಬಂದಿದೆ.

ಒಮಿಕ್ರಾನ್ ರೂಪಾಂತರ ವೇಗವಾಗಿ ಹರಡುವುದು
ವಿಶ್ವ ಆರೋಗ್ಯ ಸಂಸ್ಥೆ BA.1ಗಿಂತ BA.2 ರೂಪಾಂತರ ತುಂಬಾ ವೇಗವಾಗಿ ಹರಡುವುದು ಎಂದು ಹೇಳಿದೆ. ಆದರೆ ಇದರ ಅಪಾಯದ ಬಗ್ಗೆ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದು ಕೋವಿಡ್ 19 ಟೆಕ್ನಿಕಲ್ ಮುಖ್ಯಸ್ಥರಾದ ಮರಿಯಾ ವ್ಯಾನ್ ಕೆರ್ಖೋವಾ ಹೇಳಿದ್ದಾರೆ.
ಒಮಿಕ್ರಾನ್ ಉಪ ರೂಪಾಂತರ BA.2 ಈಗಾಗಲೇ ಯುಕೆ, ಡೆನ್ಮಾರ್ಕ್ ಮುಂತಾದ ದೇಶಗಳಲ್ಲಿ ಕಂಡು ಬಂದಿದೆ.
BA.2 ವೈರಸ್ BA.1ಗಿಂತ ಹೇಗೆ ಭಿನ್ನವಾಗಿದೆ?
BA.2 ವೈರಸ್ BA.1ಕ್ಕಿಂತ ತುಂಬಾನೇ ವ್ಯತ್ಯಾಸವಾಗಿದೆ. BA.2 ಉಪ ಒಮಿಕ್ರಾನ್ ವೈರಸ್ ಮೊದಲು ಪತ್ತೆಯಾದ ಒಮಿಕ್ರಾನ್‌ಗಿಂತ ವೇಗವಾಗಿ ಹರಡುತ್ತದೆ ಅಲ್ಲದೆ ಇದು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಒಮಿಕ್ರಾನ್ BA.1 ಶ್ವಾಸಕೋಶಕ್ಕೆ ದಾಳಿ ಮಾಡುತ್ತಿರಲಿಲ್ಲ ಆದರೆ BA.2 ಶ್ವಾಸಕೋಶಕ್ಕೆ ನೇರವಾಗಿ ದಾಳಿ ಮಾಡುವುದು.
ಲಸಿಕೆ ಪಡೆದವರಿಗೆ ಒಮಿಕ್ರಾನ್ BA.2 ಅಪಾಯವಿದೆಯೇ?
ಮೂಲ ಒಮಿಕ್ರಾನ್‌ನಂತೆಯೇ BA.2 ಕೂಡ ಯಾರ ದೇಹದ ರಕ್ತದಲ್ಲಿ antibodies ಇದೆಯೋ ಅಂದರೆ ಕೋವಿಡ್ 19 ವಿರುದ್ಧ ಲಸಿಕೆ ಪಡೆದಿದ್ದಾರೋ ಅವರಿಗೆ ತಗುಲುವುದಿಲ್ಲ, ಒಂದು ವೇಳೆ ಸೋಂಕು ತಗುಲಿದರೂ ರೋಗ ಲಕ್ಷಣಗಳು ಗಂಭೀರವಾಗಲ್ಲ.
ಅಲ್ಲದೆ ಈ ಮೊದಲು ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ರೋಗ ನಿರೋಕ ಶಕ್ತಿ ಹೆಚ್ಚಿಸಿಕೊಂಡವರಲ್ಲಿಯೂ ಈ ವೈರಸ್ ಹೆಚ್ಚು ಪರಿಣಾ ಬೀರಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
