Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Female Genital Mutilation: ಮಹಿಳೆಯರ ಜನನಾಂಗವನ್ನೇ ಕತ್ತರಿಸುವ ಕ್ರೂರ ಕೃತ್ಯವಿದು
ಮಹಿಳೆಯರ ಜನನಾಂಗವನ್ನೇ ಕತ್ತರಿಸುವ ಕ್ರೂರ ಕೃತ್ಯವಿದು..!
ಹುಟ್ಟಿನಿಂದಾನೇ ಮಹಿಳೆ ದುರ್ಬಲಳು ಎಂದು ಈ ಪುರುಷ ಪ್ರಧಾನ ವ್ಯವಸ್ಥೆ ನಿರ್ಧರಿಸಿದಂತಿದೆ. ಮಹಿಳೆಯರ ಹಕ್ಕು ಹೋರಾಟಕ್ಕಾಗಿ ದಶಮಾನಗಳಿಂದ ಹೋರಾಟಗಳು ನಡೆಯುತ್ತಿದ್ದರು ಕೂಡ
ಮಹಿಳೆಯರ ಮೇಲೆ ನಡೆಯುವ ಕ್ರೂರ ಹಿಂಸೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗಿಲ್ಲ.

ಇಂದು ಫೆಬ್ರವರಿ 6 ಈ ದಿನವನ್ನು ಮಹಿಳೆಯರ ಜನನಾಂಗ ಊನ (ಎಫ್‌ಜಿಎಂ) ವಿರೋಧಿ ದಿನ ಎಂದು ಆಚರಿಸಲಾಗ್ತಿದೆ. ಅಷ್ಟಕ್ಕು ಮಹಿಳಾ ಜನನಾಂಗ ಊನ ವಿರೋಧಿ ದಿನ ಎಂದರೇನು? ಯಾವ ರೀತಿ ಮಹಿಳೆಯರ ಜನನಾಂಗಳನ್ನು ಊನ ಮಾಡಲಾಗುತ್ತದೆ..? ಇದರಿಂದ ಮಹಿಳೆಯರ ಮೇಲಾಗುವ ದುಷ್ಪರಿಣಾಮಗಳು ಏನು ಎಂದು ತಿಳಿಯೋಣ ಬನ್ನಿ.
ಮಹಿಳಾ ಜನನಾಂಗ ಊನ ಪದ್ಧತಿ ಎಂದರೇನು..?
ಮಹಿಳಾ ಜನನಾಂಗ ಊನಾ ಪದ್ಧತಿ ಎಂದರೆ ಮಹಿಳೆಯರ ಬಾಹ್ಯ ಜನನಾಂಗಗಳನ್ನು(ಯೋನಿ) ಕತ್ತರಿಸುವುದು ಅಥವಾ ತೆಗೆದು ಹಾಕುವುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಕೆಟ್ಟ ಆಚರಣೆಯು ಮಹಿಳಾ ಬಾಹ್ಯ ಅಂಗಾಂಗವನ್ನು ಮೂಢ ನಂಬಿಕೆಗೆ ಕಟ್ಟು ಬಿದ್ದು ಕತ್ತರಿಸುವುದಾಗಿದೆ. ಇದರಿಂದಾಗಿ ಮಹಿಳೆಯರು ಅತೀವ ಹಿಂಸೆಯನ್ನ ಅನುಭವಿಸಬೇಕಾಗುತ್ತದೆ.
ಮಹಿಳೆಯ ಜನನಾಂಗ ಊನ ಮಾಡುವ ವಿಚಿತ್ರ ಪದ್ದತಿ ಜಗತ್ತಿನ ಹಲವು ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ. ಜಾಗತಿಕವಾಗಿ 20 ಕೋಟಿ ಯುವತಿಯರು ಈ ಅನಿಷ್ಟ ಪದ್ದತಿಯಿಂದ ತೊಂದರೆಗೀಡಾಗಿದ್ದಾರೆ.
ಸಾಮಾನ್ಯವಾಗಿ ಬಾಲ್ಯದಲ್ಲಿ ಅಂದರೆ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಈ ಪದ್ಧತಿಯನ್ನು ಮಾಡಲಾಗುತ್ತದೆ. ಈ ಕೆಟ್ಟ ಪದ್ಧತಿಯನ್ನೂ ಹೆಣ್ಣು ಮಕ್ಕಳು ವಿರೋಧಿಸುವಂತಿಲ್ಲ. ಹುಟ್ಟಿದ ಪ್ರತಿಯೊಬ್ಬ ಹೆಣ್ಣು ಮಗುವು ಈ ಪದ್ಧತಿಗೆ ಒಳಗಾಗಲೇಬೇಕು.
ಎಷ್ಟು ಕ್ರೂರವಾಗಿರುತ್ತೆ ಗೊತ್ತಾ ಈ ಆಚರಣೆ..?
ಇಲ್ಲಿ ಮಹಿಳೆಯರ ಹಕ್ಕುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹದಿಹರೆಯದ ಹೆಣ್ಣು ಮಕ್ಕಳ ಕೈ-ಕಾಲುಗಳನ್ನ ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಬಲವಂತವಾಗಿ ಬಾಹ್ಯ ಅಂಗಾಂಗಳನ್ನ ಕತ್ತರಿಸುತ್ತಾರೆ. ಅದೆಷ್ಟು ಕಾಡಿ, ಬೇಡಿ, ಚೀರಾಡಿದರೂ ಕೂಡ ಈ ಬಲವಂತದ ಆಚರಣೆ ಹೆಣ್ಣು ಮಕ್ಕಳಿಗೆ ತಪ್ಪಿದಲ್ಲ. ಇಲ್ಲಿ ಯಾವುದೇ ವೈದ್ಯಕೀಯ ವಿಧಾನಗಳನ್ನು ಅನುಸರಿಸೋದಿಲ್ಲ ಮತ್ತು ಇಲ್ಲಿ ನೈರ್ಮಲ್ಯತೆಯ ಪಾಲನೆಯೂ ಆಗುವುದಿಲ್ಲ. ಹದಿಹರೆಯದ ಹೆಣ್ಣು ಮಕ್ಕಳನ್ನ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಾರೆ.
ಇನ್ನೂ ಮಹಿಳಾ ಜನನಾಂಗ ಕತ್ತರಿಸಿದ ಮೇಲೆ ಯಾವುದೇ ರೀತಿಯ ಚಿಕಿತ್ಸೆ ಕೊಡಿಸೋದಿಲ್ಲ. ಅದರ ಬದಲಾಗಿ ಸಾಂಪ್ರದಾಯಿಕ ಔಷಧಿಯನ್ನ ಹಚ್ಚಿ ಕಳುಹಿಸುತ್ತಾರಂತೆ. ಇದರಿಂದ ಮುಂದೆ ಯಾವುದೇ ರೀತಿ ಸಮಸ್ಯೆ ಬಂದರೂ ಕೂಡ ಆ ಹೆಣ್ಣು ಮಗಳೇ ಎದುರಿಸಬೇಕಾಗುತ್ತದೆ. ಅನೇಕ ದೇಶಗಳಲ್ಲಿ ಇಂತಹದೊಂದು ಕೆಟ್ಟ ಆಚರಣೆ ಅಕ್ರಮವಾಗಿದ್ದರೂ ಕೂಡ ಜನ ಈ ಬಗ್ಗೆ ಕೇರ್ ಮಾಡೋದಿಲ್ಲ. ಹೆಣ್ಣು ಮಕ್ಕಳ ನೋವಿಗಿಂತ ಅವರ ಆಚರಣೆಯೇ ಅವರಿಗೆ ದೊಡ್ಡದು. ಆಫ್ರಿಕಾ, ಏಷ್ಯಾ, ಖಂಡದ ಕೆಲವು ದೇಶಗಳಲ್ಲೂ ಇನ್ನೂ ಈ ಆಚರಣೆಯನ್ನ ಜನ ಪಾಲಿಸ್ತಿದ್ದಾರೆ.
ಜನನಾಂಗ ಕತ್ತರಿಸಲು ನಾಲ್ಕು ವಿಧಾನ ಪಾಲಿಸಲಾಗುತ್ತದೆ
ವಿಧಾನ 1 :ಕ್ಲಿಟೋರಿಡೆಕ್ಟಮಿ (Clitoridectomy) : ಬಾಹ್ಯ ಜನನಾಂಗದ ಸುತ್ತಲಿನ ಚರ್ಮದ ಭಾಗವನ್ನು ಸಂಪೂರ್ಣ ಅಥವಾ ಭಾಹಶಃ ತೆಗೆದು ಹಾಕುವುದು
ವಿಧಾನ 2 : ಹೊರ ತೆಗೆಯುವಿಕೆ(Excision) : ಬಾಹ್ಯ ಜನನಾಂಗದ ಒಳಗಿನ ಚರ್ಮದ ಪದರವನ್ನು ತೆಗೆದು ಹಾಕುವುದು
ವಿಧಾನ 3 : ಇನ್ಫಿಬ್ಯುಲೇಷನ್(Infibulation) : ಜನನಾಂಗದ ಬಾಹ್ಯ ಭಾಗವನ್ನು ಹೊಲಿದು ಸ್ವಲ್ಪ ಭಾಗವನ್ನು ಮಾತ್ರ ತೆರೆದಂತೆ ಇಡಲಾಗುತ್ತದೆ. ಅವೈಜ್ಞಾನಿಕವಾಗಿ ಹೊಲಿಯುವುದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೊತೆಗೆ ಆಕೆಗೆ ಭವಿಷ್ಯದಲ್ಲಿ ಮಗು ಹುಟ್ಟುವಾಗ ಅಥವಾ ಮುಟ್ಟಾಗುವ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತದೆ.
ವಿಧಾನ 4 : ಈ ಮೂರು ವಿಧಾನಗಳಲ್ಲದೇ ಜನನಾಂಗವನ್ನು ಚುಚ್ಚುವ, ಕೆರೆಯುವ ಮತ್ತು ಹಲವಾರು ವಿಧಾನಗಳನ್ನು ಬಳಸಿ ಹಾನಿ ಮಾಡಲಾಗುತ್ತದೆ.
ಈ ಕೆಟ್ಟ ಆಚರಣೆ ಮಾಡೋದೇಕೆ..? ಇದರ ಪರಿಣಾಮಗಳೇನು..?
ಈ ಕೆಟ್ಟ ಆಚರಣೆಯ ಹಿಂದೆ ಒಂದು ಉದ್ದೇಶವಿದೆ. ಮಹಿಳೆಯರ ಕನ್ಯತ್ವವನ್ನು ರಕ್ಷಿಸಲು ಹಾಗೂ ಅವರು ವಿವಾಹಕ್ಕೆ ಯೋಗ್ಯ ಎಂದು ಘೋಷಿಸಲು ಈ ಪದ್ಧತಿ ಅನುಸರಿಸಲಾಗುತ್ತಂತೆ. ಈ ಆಚರಣೆ ಭವಿಷ್ಯದಲ್ಲಿ ಮಹಿಳೆಗೆ ಅಪಾಯವನ್ನು ತಂದೊಡ್ಡಲಿದೆ. ಆಕೆ ಪದೇ ಪದೇ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ ಮುಟ್ಟಿನ ಸಂದರ್ಭದಲ್ಲಿ, ಲೈಂಗಿಕ ಕ್ರಿಯೆ ನಡೆಸುವ ವೇಳೆ ಮತ್ತು ಹೆರಿಗೆಯ ವೇಳೆ ತೊಂದರೆ ಉಂಟಾಗಲಿದೆ.
21 ನೇ ಶತಮಾನದಲ್ಲೂ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಡುವುದು ನಿಂತಿಲ್ಲ. ಮೂಢ ನಂಬಿಕೆಗಳು, ಕೆಟ್ಟ ಆಚರಣೆಗಳು ಆಕೆಯನ್ನು ಕುಗ್ಗಿಸುತ್ತಲೇ ಇದೆ. ಈ ಆಚರಣೆಗಳನ್ನು ಸಂಪೂರ್ಣವಾಗಿ ತೊಲಗಿಸಲು ಕ್ರಮ ಕೈಗೊಂಡರೆ ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
