Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
ಒಂದು ವರ್ಷ ಜನರನ್ನು ಹಿಂಡಿ-ಹಿಪ್ಪೆ ಮಾಡಿದ ಕೊರೊನಾ ಮಟ್ಟಹಾಕಲು ಲಸಿಕೆ ಸಿದ್ಧವಾಗಿದ್ದು, ಅದನ್ನು ಜನವರಿ 16ರಿಂದ ದೇಶದಲ್ಲಿ ನೀಡಲಾಗುತ್ತಿದೆ. ಈ ಲಸಿಕೆಗೆ ಚಾಲನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಲಿದ್ದು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆ ಲಭಿಸಲಿದೆ. ಈ ಲಸಿಕೆಯನ್ನು ಮೊದಲ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಹಾಗೂ ಇತರ ಕಾಯಿಲೆ(ಮಧುಮೇಹ, ಕ್ಯಾನ್ಸರ್ ಇತ್ಯಾದಿ) ಇರುವ 40 ವರ್ಷ ಕೆಳಗಿನವರಿಗೆ ಈ ಲಸಿಕೆ ನೀಡಲಾಗುವುದು.
ಈ ಲಸಿಕೆಯನ್ನು ಪಡೆಯಬೇಕೆಂದರೆ ರಿಜಿಸ್ಟ್ರೇಷನ್ (ನೋಂದಣಿ) ಮಾಡಬೇಕಾಗಿದ್ದು ಜನವರಿ 16ರಿಂದ ಭಾರತದಾದ್ಯಂತ ಲಸಿಕೆ ನೀಡಲಾಗುತ್ತಿದೆ.
ಭಾರತದ ಕೋವಿಡ್ 19 ಲಸಿಕೆ ಕುರಿತ ನೀವು ತಿಳಿಯಲೇಬೇಕಾದ ಅಂಶಗಳಿವು:

ಪ್ರಧಾನಿ ಮೋದಿಯವರಿಂದ ಚಾಲನೆ
1. ಕೋವಿಡ್ 19 ಲಸಿಕೆ ಕಾರ್ಯಕ್ರಮಕ್ಕೆ ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ.
2. ಇದೇ ದಿನ ಮೋದಿಯವರು CoWIN (ಕೋವಿಡ್ 19 ಇಂಟೆಲಿಜೆನ್ಸ್ ನೆಟ್‌ವರ್ಕ್) ಆ್ಯಪ್‌ಗೆ ಚಾಲನೆ ನೀಡಲಿದ್ದು, ಇದರ ಮೂಲಕ ಕೊರೊನಾವೈರಸ್ ಲಸಿಕೆ ವಿತರಣೆ ಕುರಿತು ನಿಗಾ ಇಡಲಾಗುವುದು.

ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ
* ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ 19 ಲಸಿಕೆ ನೀಡಲಾಗುತ್ತಿದ್ದು ಮೊದಲ ದಿನದಲ್ಲಿ ಔಷಧಿ ಲಭ್ಯವಿರುವ ಕಡೆ 100 ಜನರಿಗೆ ಲಸಿಕೆ ನೀಡಲಾಗುವುದು.
* ಇದರ ಜೊತೆಗೆ ಕೇಂದ್ರದಿಂದ ಕರಪತ್ರ ಕೂಡ ನೀಡಲಾಗುತ್ತಿದ್ದು ಅದರಲ್ಲಿ ಲಸಿಕೆ ಕುರಿತು ಏನು ಮಾಡಬೇಕು, ಏನು ಮಾಡಬಾರದು ಎಂಬ ಮಾಹಿತಿ ಇದೆ. ಕೋವಿಡ್ ಶೀಲ್ಡ್ ಹಾಗೂ ಕೊವಾಕ್ಸಿನ್ ಎರಡೂ ಲಸಿಕೆಗೂ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಮಾಹಿತಿ ಇದರಲ್ಲಿ ಇರುತ್ತದೆ.

ಕರಪತ್ರದಲ್ಲಿ ಯಾವೆಲ್ಲಾ ಅಂಶ ಹೇಳಲಾಗಿದೆ
* ಈ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಬೇಕು.
* ಗರ್ಭಿಣಿಯರು, ಗರ್ಭಧಾರಣೆ ನಿರೀಕ್ಷೆಯಲ್ಲಿರುವವರು ಹಾಗೂ ಎದೆ ಹಾಲುಣಿಸುವ ತಾಯಂದಿರಿಗೆ ಈ ಲಸಿಕೆ ನೀಡಬಾರದು.
* ಕೋವಿಡ್ 19 ಲಸಿಕೆ ಡೋಸ್‌ಗಳನ್ನು 14 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕು.
* ಮೊದಲ ಡೋಸ್‌ನಲ್ಲಿ ಯಾವ ಲಸಿಕೆ ನೀಡಲಾಗಿದೆಯೋ ಅದೇ ಲಸಿಕೆಯನ್ನು ಎರಡನೇ ಡೋಸ್‌ನಲ್ಲಿ ನೀಡಬೇಕು.
* ಕೋವಿಡ್ 19 ಲಸಿಕೆ ಬದಲಾಯಿಸಬಾರದು (ಅಂದರೆ ಮೊದಲು ಕೋವಿಡ್ ಶೀಲ್ಡ್ ಕೊಟ್ಟು ನಂತರ ಡೋಸ್ ಕೊಡುವಾಗ ಕೊವಾಕ್ಸಿನ್ ಕೊಡುವುದು ಮಾಡಬಾರದು)

ವೈದ್ಯರು, ನರ್ಸ್‌ಗಳು ಮಾತ್ರವಲ್ಲದೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ದೊರೆಯಲಿದೆ
* ಆರೋಗ್ಯ ಕಾರ್ಯಕರ್ತರೆಂದರೆ ವೈದ್ಯರು, ನರ್ಸ್‌ಗಳು ಮಾತ್ರವಲ್ಲದೆ ಆಶಾ ಕಾರ್ಯಕರ್ತರು, ಆಂಬ್ಯೂಲೆನ್ಸ್ ಡ್ರೈವರ್‌ಗಳು, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಹೀಗೆ ಆಸ್ಪತ್ರೆಗೆ ಸಂಬಂಧಿಸಿದಂತೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು.
* ರಾಜ್ಯ ಸರಕಾರಗಳು ಆರೋಗ್ಯ ಕಾರ್ಯತರ ಕುರಿತು ನೀಡಿ ಮಾಹಿತಿ ಡಾಟಾದ ಅನುಸಾರ ಲಸಿಕೆ ದೊರೆಯಲಿದೆ.

ಮೊದಲ ಹಂತದಲ್ಲಿ 1.65 ಕೋಟಿ ಕೋವಿಡ್ 19 ಲಸಿಕೆ
* ಆ್ಯಪ್‌ನಲ್ಲಿ ಲಸಿಕೆ ಕುರಿತ ಪ್ರಶ್ನೆಗಳಿಗೆ ಉತ್ತರವೂ ದೊರೆಯಲಿದೆ.
* ಆರೋಗ್ಯ ಇಲಾಖೆಯು ರಾಜ್ಯಗಳಿಗೆ 5000ಕ್ಕೂ ಅಧಿಕ ಲಸಿಕೆ ಕೇಂದ್ರಗಳನ್ನು ತೆರೆಯಲು ಸೂಚಿಸಿದೆ.
* ಮೊದಲಿಗೆ 1.65 ಕೋಟಿ ಕೋವಿಡ್ 19 ಲಸಿಕೆ ದೇಶದಲ್ಲಿ ಮೊದಲ ಹಂತದಲ್ಲಿ ನೀಡಲಾಗುತ್ತಿದೆ.



Click it and Unblock the Notifications
