Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
FabiSpray: ಕೊರೊನಾ ರೋಗಿಗಳನ್ನು ಬೇಗನೆ ಗುಣಪಡಿಸುತ್ತೆ ಈ ನಾಸಲ್ ಸ್ಪ್ರೇ, ಬೆಲೆಯೆಷ್ಟು?
ಕಳೆದ ಎರಡು ವರ್ಷಗಳಿಂದ ನಾವೆಲ್ಲಾ ನಿರಂತರವಾಗಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಇದನ್ನು ಮಣಿಸಲು ವಿಜ್ಞಾನಿಗಳು, ನಮ್ಮ ಆರೋಗ್ಯ ತಜ್ಞರು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ, ಅದರ ಮೊದಲ ಹೆಜ್ಜೆಯಾಗಿ ಭಾರತದಲ್ಲಿಯೇ ಕೊರೊನಾ ಲಸಿಕೆ ತಯಾರಿಸಲಾಯಿತು. ಇದೀಗ ಭಾರತದಲ್ಲಿ ನಾಸಲ್ ಸ್ಪ್ರೇ ಬಿಡುಗಡೆಯಾಗಿದೆ.
ನೋವೆಲ್ ನೈಟ್ರಿಕ್ ಆ್ಯಸಿಡ್ ನಾಸಲ್ ಸ್ಪ್ರೇ ಭಾರತದಲ್ಲಿ ಬುಧವಾರ (ಫೆಬ್ರವರಿ 9) ಬಿಡುಗಡೆ ಮಾಡಲಾಯಿತು. ಇದನ್ನು ಕೋವಿಡ್ 19 ಚಿಕಿತ್ಸೆಯಲ್ಲಿ ಬಳಸಲಾಗುವುದು. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಕೋವಿಡ್ 19 ನಾಸಲ್ ಸ್ಪ್ರೇ
ಕೊರೊನಾವೈರಸ್ ಮೂಗಿಗೆ ತಲುಪುತ್ತಿದ್ದಂತೆ ಅದನ್ನು ಕೊಲ್ಲಲು ಈ ನಾಸಲ್ ಸ್ಪ್ರೇ ಬಳಸಲಾಗುವುದು. ಈ ನಾಸಲ್ ಸ್ಪ್ರೇಯನ್ನು ದೊಡ್ಡವರಿಗೆ ಮಾತ್ರ ಬಳಸಲಾಗುತ್ತಿದೆ. ಯಾರಿಗೆ ಕೊರೊನಾ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇದೆಯೋ ಅದನ್ನು ತಡೆಗಟ್ಟಲು ಈ ನಾಸಲ್ ಸ್ಪ್ರೇ ಬಳಸಲಾಗುವುದು.

ಕೋವಿಡ್ 19 ನಾಸಲ್ ಸ್ಪ್ರೇ ಹೆಸರೇನು?
ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಹಾಗೂ ಕೆನಡಾದ ಔಷಧೀಯ ಕಂಪನಿ ಸ್ಯಾನೋಟೈಜ್ ಜೊತೆಯಾಗಿ ಸಂಶೋಧನೆ ನಡೆಸಿ ಈ ಸ್ಪ್ರೇ ಕಂಡು ಹಿಡಿಯಲಾಗಿದೆ ಇದಕ್ಕೆ ಭಾರತದಲ್ಲಿ ಫೆಬಿಸ್ಪ್ರೇ (FabiSpray) ಎಂದು ಹೆಸರಿಡಲಾಗಿದೆ. ಗ್ಲೆನ್‌ಮಾರ್ಕ್ ಕಂಪನಿಗೆ ತಯಾರಿಕೆಗೆ ಹಾಗೂ ಮಾರ್ಕೆಟಿಂಗ್‌ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿತ್ತು.

ಫೆಬಿಸ್ಪ್ರೇ ಬೆಲೆಯಷ್ಟು?
25 ml ಯೂನಿಟ್ ಸ್ಪ್ರೇಗೆ ರೂ. 850 ಇದೆ. ಇದನ್ನು ಖರೀದಿಸಬೇಕಾದರೆ ವೈದ್ಯರಿಂದ ಪ್ರಿಸ್ಕ್ರಿಪ್ಷನ್ ಬೇಕು.

ಈ ಸ್ಪ್ರೇ ಕ್ಲಿನಿಕಲ್ ಟ್ರಯಲ್ ಆಗಿದೆ
ಇದನ್ನು ಮೂರು ಕ್ಲಿನಿಕಲ್ ಟ್ರಯಲ್‌ಗೆ ಒಳಪಡಿಸಲಾಗಿದೆ. 306 ವಯಸ್ಕ ಕೋವಿಡ್ ರೋಗಿಗಳಿಗೆ ಭಾರತದ 20 ಕ್ಲಿನಿಕಲ್ ಸೈಟ್‌ಗಳಲ್ಲಿ ನೀಡಲಾಗಿತ್ತು. ಈ ಟ್ರಯಲ್ ಅನ್ನು ಆಗಸ್ಟ್ 2021-ಜನವರಿ 2022 ನಡುವೆ ನಡೆಸಲಾಯಿತು. ಆಸ್ಪತ್ರೆಗೆ ದಾಖಲಾಗದ ಹೋಂ ಐಸೋಲೇಷನ್‌ನಲ್ಲಿದ್ದು ಟ್ರೀಟ್ಮೆಂಟ್ ತೆಗೆದುಕೊಳ್ಳುವವರು ಇದನ್ನು ಪಡೆಯಬಹುದಾಗಿದೆ.

ಫೆಬಿಸ್ಪ್ರೇ ಎಷ್ಟು ಪರಿಣಾಮಕಾರಿ?
ಕೋವಿಡ್ 19 ರೋಗಿಗಳಲ್ಲಿ ಯಾರಿಗೆ ರೋಗ ಲಕ್ಷಣಗಳು ಉಲ್ಬಣವಾಗುವ ಸಾಧ್ಯತೆ ಇದೆಯೋ ಅಮದ್ರೆ ಲಸಿಕೆ ಪಡೆಯದಿರುವವರಿಗೆ, ವಯಸ್ಸಾದವರಿಗೆ, ಮಧ್ಯವಯಸಕರಿಗೆ ಅಥವಾ ಇತರ ಆರೋಗ್ಯ ಸಮಸ್ಯೆ ಇರುವವರಿಗೆ ಕಾಯಿಲೆ ಹೆಚ್ಚಾಗದಿರಲು ಈ ಸ್ಪ್ರೇ ಬಳಸಲಾಗುವುದು. ಈ ನಾಸಲ್ ಸ್ಪ್ರೇ ಚಿಕಿತ್ಸೆ ಜೊತೆಗೆ ರೋಗಿಗೆ ಸ್ಯಾಂಡರ್ಡ್ ಅರೈಕೆಯೂ ಬೇಕಾಗುವುದು.
ಅಧ್ಯಯನಗಳನ್ನು ನಡೆಸಿದಾಗ ಯಾರು ನಾಸಲ್ ಸ್ಪ್ರೇ ಬಳಸಿದ್ದಾರೋ ಅವರು ಇತರ ಕೋವಿಡ್ 19 ರೋಗಿಗಳಿಗಿಂತ ಬೇಗನೆ ಚೇತರಿಸಿಕೊಂಡಿರುವುದು ತಿಳಿದು ಬಂತು. ಸಂಶೋಧಕರ ಪ್ರಕಾರ ನಾಸಲ್ ಸ್ಪ್ರೇ ಹಾಕಿದರೆ ವೈರಸ್ ಶೇ. 94ರಷ್ಟು 24 ಗಂಟೆಗಳಲ್ಲಿ ಕಡಿಮೆಯಾಗುವುದು, ಶೇ. 98ರಷ್ಟು 48 ಗಂಟೆಗಳಲ್ಲಿ ಕಡಿಮೆಯಾಗುವುದು.
ಈ ಸ್ಪ್ರೇ ಬಳಸಿದರೆ ನಾಲ್ಕು ದಿನಗಳಲ್ಲಿಕೊರೊನಾ ವೈರಸ್ ನಾಶವಾಗುವುದು, ಇದು ಬಳಸದವರಲ್ಲಿ 8 ದಿನಗಳು ಬೇಕಾಗುವುದು. ಇದನ್ನು ಬಳಸಿದರೆ ರೋಗ ಗಂಭೀರವಾಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.



Click it and Unblock the Notifications











