Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಏಡ್ಸ್ ರೋಗಿಯನ್ನು ಗುಣಪಡಿಸಿದ ಕರುಳ ಬಳ್ಳಿ ರಕ್ತ ಕಸಿ ಚಿಕಿತ್ಸೆ: ಹೇಗೆ?
ಏಡ್ಸ್ ರೋಗದಿಂದ ಪ್ರಪಂಚದಲ್ಲಿ ಗುಣಮುಖವಾಗಿರುವುದು ಇದುವರೆಗೆ ಮೂರೇ ಮೂರು ಜನರು, ಅದರಲ್ಲೊಬ್ಬರು ಮಹಿಳೆ. ಅವರು ಗುಣಮುಖವಾಗಿರುವ ರೀತಿ ಜಗತ್ತಿಗೆ ಅಚ್ಚರಿ ಮೂಡಿಸಿದೆ ಜೊತೆಗೆ ಏಡ್ಸ್ ರೋಗ ಗುಣಪಡಿಸಲು ಒಂದು ಹೊಸ ವಿಧಾನ ತಿಳಿಸಿಕೊಟ್ಟಿದೆ.
ಯುಎಸ್ ಏಡ್ಸ್ ರೋಗಿಯೊಬ್ಬರು ಆ ಭಯಾನಕ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರಿಗೆ 2017ರಲ್ಲಿ ಲುಕೆಮಿಯಾ ಕ್ಯಾನ್ಸರ್ ಬಂದಿತ್ತು ಆಗ ಅವರಿಗೆ ದಾನಿಯೊಬ್ಬರಿಂದ ಅಂಬ್ಲಿಕಲ್ ಕಾರ್ಡ್ ಬ್ಲಡ್ ಟ್ರಾನ್ಸ್‌ಪ್ಲ್ಯಾಂಟ್ ಆಗುತ್ತೆ, ಆ ಚಿಕಿತ್ಸೆಯ ಬಳಿಕ ಏಡ್ಸ್ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಏಡ್ಸ್ ವೈರಸ್ ತಗುಲಿದಾಗ ಉಂಟಾದಾಗ ಏನಾಗುತ್ತೆ?
HIV ಅಥವಾ Human immunodeficiency virus ಮನುಷ್ಯನ ದೇಹ ಸೇರಿದಾಗ ಅದು ರೋಗನಿರೋಧಕ ಕಣವಾದ CD4 ಅನ್ನು ನಿಧಾನಕ್ಕೆ ನಾಶ ಮಾಡುತ್ತಾ ಹೋಗುತ್ತದೆ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುವುದು. ಇದರಿಂದಾಗಿ ಯಾವುದೇ ವೈರಸ್ ಆದರೂ ಇವರಿಗೆ ಬೇಗನೆ ತಗುಲುವುದು.
ರಕ್ತ, ವೀರ್ಯಾಣು, ಜನನೇಂದ್ರೀಯದ ದ್ರವ, ಎದೆಹಾಲು ಇವುಗಳ ಮೂಲಕ ವೈರಸ್ ಏಡ್ಸ್ ವೈರಸ್ ಹರಡುವುದು. ಅಸುರಕ್ಷಿತ ಲೈಂಗಿಕ ಕ್ರಿಯೆ, ಏಡ್ಸ್ ರೋಗಿಗೆ ಚುಚ್ಚಿದ ಸೂಜಿ ಬಳಸಿದಾಗ ಅಥವಾ ಏಡ್ಸ್ ರೋಗಿಗಳ ರಕ್ತ ಪಡೆಯುವುದರಿಂದ ಏಡ್ಸ್ ರೋಗ ಹರಡುವುದು.

ಏಡ್ಸ್ ರೋಗದಿಂದ ಗುಣಮುಖರಾದ ಮಹಿಳೆ
2013ರಲ್ಲಿ ಅಮೆರಿಕದಲ್ಲಿ ನೆಲೆಸಿರುವ ಮಹಿಳೆಯೊಬ್ಬರಿಗೆ ಏಡ್ಸ್ ರೋಗ ಪತ್ತೆಯಾಗಿತ್ತು, ಅಲ್ಲಿಂದ ಅವರು ಏಡ್ಸ್ ವೈರಸ್ ಪ್ರಮಾಣ ತಗ್ಗಿಸುವ ಆ್ಯಂಟಿವೈರಲ್ ಡ್ರಗ್ ತೆಗೆದುಕೊಳ್ಳುತ್ತಿದ್ದರು. ಅದಾಗಿ ನಾಲ್ಕು ವರ್ಷದ ಬಳಿಕ ಅವರಿಗೆ ಲುಕೆಮಿಯಾ ಕ್ಯಾನ್ಸರ್ ಕೂಡ ಬಂತು. ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ಅಬ್ಲಿಕಲ್ ಕಾರ್ಡ್ ಬ್ಲಡ್ ಟ್ರಾನ್ಸ್‌ಪ್ಲ್ಯಾಂಟ್ ಮಾಡಲಾಯಿತು.
ಇದೀಗ ಅವರಲ್ಲಿ HIV ವೈರಸ್ ಉತ್ಪತ್ತಿಯಾಗುವುದು ಸಂಪೂರ್ಣ ನಿಂತು ಹೋಗಿದೆ.
ತಜ್ಞರ ಪ್ರಕಾರ ಈ ಹೊಸ ವಿಧಾನ ಏಡ್ಸ್ ರೋಗಿಗಳಿಗೆ ಸ್ವಲ್ಪ ರಿಸ್ಕಿಯಾಗಿದೆ.

ಏಡ್ಸ್‌ನಿಂದ ಒಟ್ಟು 3 ಜನ ಗುಣಮುಖರಾಗಿದ್ದಾರೆ
ಇದಕ್ಕಿಂತ ಮೊದಲು ಗುಣಮುಖರಾದ ಇಬ್ಬರು ಏಡ್ಸ್ ರೋಗಿಗಳಿಗೆ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್ ಮಾಡಲಾಗಿತ್ತು. ಆದರೆ ಈ ರೀತಿ ಚಿಕಿತ್ಸೆ ಸರಿಯಾದ ಮ್ಯಾಚ್ ಸಿಗಬೇಕಾಗಿತ್ತು. ಅಲ್ಲದೆ ಸ್ಟೆಮ್‌ಸೆಲ್ ದಾನಿಗಳು ದೊಡ್ಡವರಾಗಿರಬೇಕು. ಆದರೆ ಆದರೆ ಈ ಮಹಿಳೆಗೆ ಕರುಳ ಬಳ್ಳಿಯ ರಕ್ತ ಟ್ರಾನ್ಸ್‌ಪ್ಲ್ಯಾಂಟ್ ಮಾಡಲಾಗುವುದು. ಇದಕ್ಕೆ ಸ್ವಲ್ಪ ಮ್ಯಾಚ್ ಆದರೆ ಸಾಕು. ಅಲ್ಲದೆ ಅಂಬ್ಲಿಕಲ್ ಕಾರ್ಡ್ ಬ್ಲಡ್ ಸಿಗುವುದು ಕಷ್ಟವೇನಲ್ಲ. ಇದೀಗ ಅಮೆರಿಕದ ಏಡ್ಸ್ ರೋಗಿ ಮಹಿಳೆ ಅಂಬ್ಲಿಕಲ್ ಕಾರ್ಡ್ ಬ್ಲಡ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆ ಮೂಲಕ ಗುಣಮುಖರಾದ ಮೊದಲ ವ್ಯಕ್ತಿಯಾಗಿದ್ದಾರೆ.



Click it and Unblock the Notifications
