Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ನಿಮ್ಮ ಕೆಮ್ಮು ಕೊರೊನಾವೈರಸ್‌ನಿಂದ ಆಗಿರಬಹುದೇ, ಅಲ್ಲವೇ ಎಂದು ತಿಳಿಯುವುದು ಹೇಗೆ?
ಕೆಮ್ಮು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಕೆಲವೊಮ್ಮೆ ಇದು ಭಯಾನಕ ರೋಗದ ಲಕ್ಷಣವೂ ಆಗಿರಬಹುದು. ಇದೀಗ ಕೆಮ್ಮು ಬಂದ ತಕ್ಷಣ ಭಯ ಶುರುವಾಗುತ್ತದೆ. ಅದಕ್ಕೆ ಕಾರಣ ಕೋವಿಡ್-19 ಆತಂಕ.

ಕೆಮ್ಮು, ಜ್ವರ ಕೊರೊನಾವೈರಸ್ ಸೋಂಕಿರುವ ಲಕ್ಷಣವಾಗಿದೆ. ಇನ್ನು ಕೆಮ್ಮು ಅಲರ್ಜಿಯ ಲಕ್ಷಣವಾಗಿದೆ, ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣವಾಗಿದೆ. ಕೆಲವೊಮ್ಮೆ ಒಣ ಕೆಮ್ಮು ಏಕೆ ಉಂಟಾಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ, ಎಷ್ಟು ದಿನವಾದರೂ ಕಡಿಮೆಯಾಗುವುದೇ ಇಲ್ಲ. ಯಾವುದೇ ಔಷಧಿ ತೆಗೆದುಕೊಂಡರೂ ಕೆಮ್ಮು ಕಡಿಮೆಯಾಗುವುದಿಲ್ಲ, ನಂತರ ಕೆಲವು ದಿನಗಳ ನಂತರ ಮಾಯವಾಗುತ್ತದೆ.
ಆದ್ದರಿಂದಾಗಿ ನಿಮಗೆ ಬಂದಿರುವ ಕೆಮ್ಮು ಯಾವುದು, ಇದು ಅಪಾಯಕಾರಿ ರೊಗದ ಲಕ್ಷಣವೇ ಎಂದು ಕಂಡು ಹಿಡಿಯುವುದಾದರೂ ಹೇಗೆ? ಅಪರೂಪಕ್ಕೆ ಕೆಮ್ಮು ಬಂದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅದೇ ವಾರಕ್ಕೆ ಮೇಲ್ಪಟ್ಟು ಕೆಮ್ಮಿನ ಸಮಸ್ಯೆ ಕಾಡುತ್ತಿದ್ದರೆ, ಕಫದಲ್ಲಿ ಬಣ್ಣದ ವ್ಯತ್ಯಾಸ ಗೋಚರಿಸಿದರೆ, ಕಫದಲ್ಲಿ ರಕ್ತ, ತಲೆಸುತ್ತು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳ್ಳೆಯದು.

ಕೆಮ್ಮಿಗೆ ಸಂಬಂಧಿಸಿದ ಪ್ರಶ್ನೆಗಳು
ನೀವು ಕೆಮ್ಮಿಗೆ ಔಷಧಿ ತರಲು ಹೋದಾಗ ವೈದ್ಯರು ನಿಮ್ಮಿಂದ ಈ ಮಾಹಿತಿ ಬಯಸುತ್ತಾರೆ
- ಕೆಮ್ಮು ಶುರುವಾಗಿ ಎಷ್ಟು ಸಮಯವಾಯಿತು? ಎಷ್ಟು ದಿನಗಳಾಯಿತು?
- ಯಾವಾಗ ಕೆಮ್ಮು ಹೆಚ್ಚಾಗುತ್ತದೆ? ಬೆಳಗ್ಗೆ, ರಾತ್ರಿ ಅಥವಾ ದಿನವಿಡೀ ಇದೆಯೇ?
- ಕೆಮ್ಮಿದಾಗ ಶಬ್ದ ಹೇಗಿರುತ್ತದೆ? ಒಣಕೆಮ್ಮು, ಜೋರಾದ ಶಬ್ದ, ಮೆಲ್ಲನೆ ಕೇಳಿಸುವುದು ಅಥವಾ ಆಗಾಗ ಕೆಮ್ಮುವುದು
- ಕೆಮ್ಮಿದಾಗ ಕಫ ಬರುತ್ತದೆಯೇ?
- ಕೆಮ್ಮಿನಿಂದ ನಿಮ್ಮ ದಿನದ ಚಟುವಟಿಕೆಗೆ ತೊಂದರೆ ಉಂಟಾಗುತ್ತಿದೆಯೇ?

ಕೋವಿಡ್ 19ಗೆ ಸಂಬಂಧಿಸಿದ ಕೆಮ್ಮು
ಕೋವಿಡ್-19 ರೋಗಿಗಳಲ್ಲಿ ಅತಿಯಾಗಿ ಕಂಡು ಬರುವ ಲಕ್ಷಣವೆಂದರೆ ಜ್ವರ ಹಾಗೂ ಕೆಮ್ಮು, ಅದರಲ್ಲೂ ಒಣಕೆಮ್ಮು, ಕೆಲವರಿಗೆ ಮೈ ಚಳಿಯಾಗುವುದು.
ಕೋವಿಡ್ 19 ರೋಗಿಗಳಲ್ಲಿ ಗಂಟಲಿನಲ್ಲಿ ಕೆರೆತ ಉಂಟಾಗುತ್ತದೆ ಹಾಗೂ ತುಂಬಾ ಕೆಮ್ಮು ಇರುತ್ತದೆ ಅಲ್ಲದೆ ಉಸಿರಾಡಲು ತೊಂದರೆ ಉಂಟಾಗುವುದು ಹಾಗೂ ಸ್ನಾಯುಗಳಲ್ಲಿ ನೋವು ಉಂಟಾಗುವುದು.
ಕಾಯಿಲೆ ಹೆಚ್ಚಾದಂತೆ ಶ್ವಾಸಕೋಶದಲ್ಲಿ ದ್ರವ ತುಂಬಿಕೊಳ್ಳುತ್ತದೆ, ಇದರಿಂದಾಗಿ ಉಸಿರಾಡಲು ತೊಂದರೆ ಉಂಟಾಗುವುದು ಹಾಗೂ ದೇಹಕ್ಕೆ ಅಗ್ಯತವಾದ ಆಮ್ಲಜನಕ ದೊರೆಯದೆ ತೊಂದರೆ ಉಂಟಾಗುವುದು.

ಕಫ ಇರುವ ಕೆಮ್ಮು
ಕಫ ಇರುವ ಕೆಮ್ಮು ಇರುವವರಲ್ಲಿ ಉಬ್ಬಸ ತೊಂದರೆ ಕಾಣಿಸುವುದು ಹಾಗೂ ಕೆಮ್ಮಿದಾಗ ಬಾಯಲ್ಲಿ ಕಫ ಉಂಟಾಗುವುದು. ಅದೇ ಒಣ ಕೆಮ್ಮು ಉಂಟಾದಾಗ ಕಫ ಉಂಟಾಗುವುದಿಲ್ಲ, ಗಂಟಲಿನ ಒಳಗಿನಿಂದ ಉಂಟಾಗುವುದು ಹಾಗೂ ಕೆಮ್ಮಿದಾಗ ಹೆಚ್ಚು ಶಬ್ದ ಬರುವುದು. ಅಲ್ಲದೆ ಶ್ವಾಸಕೋಶದಲ್ಲಿ ಗಾಳಿ ಹೊರ ಹೋಗಲು ಅಡಚಣೆ ಉಂಟು ಮಾಡುವುದರಿಂದ ಆಗಾಗ ಕೆಮ್ಮು ಬರುವುದು.
ಮೂಗು ಹಾಗೂ ಗಂಟಲಿನ ಸೋಂಕಿನಿಂದ ಉಂಟಾಗುವ ಕೆಮ್ಮಿನಲ್ಲಿ ಗಂಟಲಿನಲ್ಲಿ ಕೆರೆತ ಹಾಗೂ ಒಣಕೆಮ್ಮು ಉಂಟಾಗುವುದು. ಇಂಥ ಕೆಮ್ಮು ಶೀತ ಹಾಗೂ ಜ್ವರ ಬಂದಾಗ ಉಂಟಾಗುವುದು. ಕೆಲವೊಮ್ಮೆ ಮೊದಲಿಗೆ ಒಣಕೆಮ್ಮು ಬಂದು ನಂತರ ಕಫ ಬರಬಹುದು.
ಉದಾಹರಣೆಗೆ ನ್ಯೂಮೋನಿಯಾ ಉಂಟಾದಾಗ ಒಣಕೆಮ್ಮು ಉಂಟಾಗಿ ನಂತರ ಉಸಿರಾಟದಲ್ಲಿ ತೊಂದರೆ ಉಂಟಾಗುವುದು. ಕಾಯಿಲೆ ಹೆಚ್ಚಾದಂತೆ ಗಂಟಲಿನಲ್ಲಿ ದ್ರವ ಹಾಗೂ ರಕ್ತ ತುಂಬುವುದು ನಂತರ ಕೆಮ್ಮಿದಾಗ ಕಫ ಬರಲು ಪ್ರಾರಂಭಿಸುತ್ತದೆ. ಈ ಹಂತದಲ್ಲಿ ಕಫ ತುಂಬಾ ಗಟ್ಟಿಯಾಗುವುದು ಹಾಗೂ ರಕ್ತವೂ ಕಂಡು ಬರುವುದು.

ವೂಫ್(ಗುಂಯಿ-ಗುಂಯಿ) ಕೆಮ್ಮು
ಈ ಕೆಮ್ಮು ಇರುವವರಲ್ಲಿ ಉಸಿರಾಡುವಾಗ ಗುಂಯಿ-ಗುಂಯಿ ಶಬ್ದ ಉಂಟಾಗುವುದು. ಇದು ಬ್ಯಾಕ್ಟಿರಿಯಾ ಸೋಂಕಿನಿಂದ ಉಂಟಾಗುತ್ತದೆ, ಇದು ಶ್ವಾಸಕೋಶದಲ್ಲಿ ಕೆರೆತ ಉಂಟು ಮಾಡುವುದು.
ಇದರಲ್ಲಿ ಕೆಮ್ಮಿದಾಗ ದೊಡ್ಡ ಶಬ್ದ ಉಂಟಾಗುವುದು, ತುಂಬಾ ಕೆಮ್ಮಿದಾಗ ಶ್ವಾಸಕೋಶಕ್ಕೆ ಹಾನಿಯುಂಟಾಗುವುದು ಆದ್ದರಿಂದ ಯಾವಾಗ ವೈದ್ಯರನ್ನು ಕಾಣಬೇಕು ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ಆದ್ದರಿಂದ ಕೆಮ್ಮು ಯಾವುದೇ ಆಗಿರಲಿ, ಒಂದೆರಡು ದಿನಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.



Click it and Unblock the Notifications
