Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸ್ಕ್ ಬಳಕೆ, ಡಿಸ್‌ಪೋಸ್ ಹಾಗೂ ಮರು ಬಳಕೆ ಹೇಗಿರಬೇಕು?
ಇಡೀ ವಿಶ್ವವೇ ಕೊರೊನಾವೈರಸ್‌ನಿಂದಾಗಿ ನಲುಗಿದೆ. ಈ ವೈರಸ್ ತಡೆಗಟ್ಟಲು ಇದುವರೆಗೆ ಅಧಿಕೃತವಾದ ಯಾವುದೇ ಔಷಧಿ ಇಲ್ಲ. ದೇಹದಲ್ಲಿರುವ ಕೊರೊನಾವೈರಸ್ ನಾಶಪಡಿಸಲು ಅನೇಕ ಪ್ರಯೋಗಗಳು ನಡೆಯುತ್ತಿವೆ.

ಆಸ್ಟ್ರೇಲಿಯಾ ಕೊರೊನಾವೈರಸ್ 48 ಗಂಟೆಗಳಲ್ಲಿ ನಾಶ ಪಡಿಸುವ ಔಷಧಿ ಕಂಡು ಹಿಡಿದಿದೆ, ಆದರೆ ಅದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಭಾರತದಲ್ಲಿ ಹೆಚ್‌ಐವಿ ಹಾಗೂ ಮಲೇರಿಯಾ ಮಾತ್ರೆಗಳ ಮೂಲಕ ಕೊರೊನಾವೈರಸ್ ತಡೆಗಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆಂತಕ ಉಂಟು ಮಾಡಿದರೂ, ಸಾವಿನ ಸಂಖ್ಯೆಗಿಂತ ಅಧಿಕ ಮಂದಿ ಚೇತರಿಸಿಕೊಳ್ಳುತ್ತಿರುವುದು ಸಮಧಾನಕರವಾದ ಸಂಗತಿಯಾಗಿದೆ.
ಕೊರೊನಾವೈರಸ್ ಬಗ್ಗೆ ಸರಕಾರ ತುಂಬಾ ಜಾಗೃತಿ ಮೂಡಿಸುತ್ತಿದೆ. ಜನರು ತಮ್ಮ ರಕ್ಷಣೆಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಕೊರೊನಾವೈರಸ್ ತಡೆಗಟ್ಟಲು ಮತ್ತೊಂದು ಅಸ್ತ್ರ ನಮ್ಮ ಬಳಿ ಇರುವುದು ಎಂದರೆ ಮಾಸ್ಕ್.
ಜನರು ಹಲವಾರು ಬಗೆಯ ಮಾಸ್ಕ್ ಧರಿಸುತ್ತಿದ್ದಾರೆ. 8 ಗಂಟೆಗಳವರೆಗೆ ಮಾತ್ರ ಬಳಸಬಹುದಾದ ಮಾಸ್ಕ್ ಕೆಲವರು ಬಳಸಿದರೆ ಇನ್ನು ಕೆಲವರು N95 ಮಾಸ್ಕ್, ಬಟ್ಟೆಯ ಮಾಸ್ಕ್ ಬಳಸುತ್ತಿದ್ದಾರೆ. ಇಲ್ಲಿ ನಾವು ಆರೋಗ್ಯ ಇಲಾಖೆ ನೀಡಿರುವ ಸಲಹೆಯಂತೆ ಯಾವ ಮಾಸ್ಕ್ ಯಾವ ರೀತಿ ಬಳಸಬೇಕು, ಅದನ್ನು ಹೇಗೆ ವಿಲೇವಾರಿ ಮಾಡಬೇಕು (ಡಿಸ್‌ಪೋಸ್) ಹಾಗೂ ಮರು ಬಳಕೆಯ ಮಾಸ್ಕ್ ಬಳಸುವವರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅದನ್ನು ಯಾವಾಗ ಬಿಸಾಡಬೇಕು ಎಂಬ ಮಾಹಿತಿಯನ್ನು ಒಂದೊಂದಾಗಿ ವಿವರಿಸಿದ್ದೇವೆ ನೋಡಿ:

ಯಾರು ಯಾವ ಮಾಸ್ಕ್ ಧರಿಸಬೇಕು?
ಒಂದಂಶ ನೆನಪಿಟ್ಟುಕೊಳ್ಳಿ, ನೀವು ಆರೋಗ್ಯವಂತರಾಗಿದ್ದರೆ, ಮನೆಯಲ್ಲಿ ಯಾರಿಗೂ ಕಾಯಿಲೆ ಇಲ್ಲದಿದ್ದರೆ ಮನೆಯಲ್ಲಿರುವಾಗ ಮಾಸ್ಕ್ ಧರಿಸಬೇಕಾಗಿಲ್ಲ. ದಿನಸಿ ತರಲಿಕ್ಕೆ ಹೀಗುವಾಗ ಮಾತ್ರ ಬಳಸಿ.

ಬಟ್ಟೆಯ ಮಾಸ್ಕ್:
ರೋಗಿಗಳ ಆರೈಲಕೆ ಮಾಡುವವರು ಈ ಮಾಸ್ಕ್ ಬಳಸುವಂತಿಲ್ಲ. ಏಕೆಂದರೆ ಈ ಮಾಸ್ಕ್ ಸೋಂಕಾಣು ತಡೆಗಟ್ಟುವಲ್ಲಿ ಅಷ್ಟು ಪ್ರಯೋಜನಕಾರಿಯಲ್ಲ. ಆದರೆ HEPA ಫಿಲ್ಟರ್ ಬಳಸಿ ಬಳಸಬಹುದಾದರೂ ಉಸಿರಾಡಲು ತೊಂದರೆ ಉಂಟಾಗುವುದು. ಯಾವುದೇ ಮಾಸ್ಕ್ ಇಲ್ಲದಿದ್ದರೆ ಸ್ಕಾರ್ಫ್‌ನಿಂದ ಮುಖ ಮುಚ್ಚಿಕೊಳ್ಳಿ. ಕೆಮ್ಮು, ಸೀನು, ಕೋವಿಡ್ 19 ಲಕ್ಷಣಗಳಿದ್ದರೆ ಈ ಮಾಸ್ಕ್ ಧರಿಸಬೇಡಿ, ಆಗ ಸರ್ಜಿಕಲ್ ಮಾಸ್ಕ್ ಧರಿಸಿ.

ಸರ್ಜಿಕಲ್ ಮಾಸ್ಕ್
ಪಾಲಿಪ್ರೊಪೈಲೆನೆ( polypropylene)ಬಟ್ಟೆಯಿಂದ ಮಾಸ್ಕ್ ತಯಾರಿಸಲಾಗುವುದು. ಇದು ಉಗುಳು ಹಾಗೂ ಉಸಿರಾಟದಲ್ಲಿರುವ ಬ್ಯಾಕ್ಟಿರಿಯಾ ಹಾಗೂ ಸೋಂಕಾಣುಗಳು ಬಾಯಿ ಹಾಗೂ ಮೂಗಿನ ಮೂಲಕ ದೇಹದ ಒಳಗೆ ಸೇರುವುದನ್ನು ತಡೆಗಟ್ಟುತ್ತದೆ. ಇದರಲ್ಲಿ ತುಂಬಾ ಸೂಕ್ಷ್ಮವಾದ ಸೋಂಕಾಣುಗಳು ಸೋಂಕಿತ ವ್ಯಕ್ತಿ ಸಮೀಪದಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ ಹರಡಬಹುದು.
ಇದನ್ನು ಉಸಿರಾಟದ ತೊಂದರೆ, ಕೆಮ್ಮು, ಶೀತ, ಜ್ವರ ಇರುವ ವ್ಯಕ್ತಿಗಳ ಆರೈಕೆ ಮಾಡುವವರು ಧರಿಸಬೇಕು.

N95 ಮಾಸ್ಕ್
ಈ ಮಾಸ್ಕ್ ಸಾಮಾನ್ಯ ಬಳಕೆಗೆ ಇರುವುದಲ್ಲ ಇದನ್ನು ಪಾಲಿಪ್ರೊಪೈಲೆನೆ ಬಟ್ಟೆಯಿಂದ ಮಾಡಲಾಗುವುದು. ಇದು 99.9% ಸುರಕ್ಷತೆ ನೀಡುತ್ತದೆ. ಈ ಮಾಸ್ಕ್ 0.3 ಮೈಕ್ರೋನ್ಸ್ ಗಾತ್ರದ ಸೋಂಕಾಣು ಕೂಡ ತಡೆಗಟ್ಟುತ್ತದೆ.
ಇದನ್ನು ಯಾರು ಧರಿಸಬೇಕು?
- ಕೆಮ್ಮು, ಜ್ವರ, ಶೀತ ಇರುವ ಸೋಂಕಿತರನ್ನು ಚಿಕಿತ್ಸೆ ಮಾಡುವವರು ಧರಿಸಬೇಕು.
- ಕೋವಿಡ್ 19 ಸೋಂಕಿತರ ರೂಮ್‌ಗೆ ಹೀಗುವವರು ಧರಿಸಿರಬೇಕು.
- ಕೆಲವೊಂದು ವೈದ್ಯಕೀಯ ವಸ್ತುಗಳ ಸಪ್ಲೈಯಲ್ಲಿ ಹಾಗೂ ತುಂಬಾ ಅಪಾಯಕಾರಿ ಔಷಧಿ ಅಥವಾ ಇತರ ವಸ್ತುಗಳ ಸಂಪರ್ಕಕ್ಕೆ ಬರುವವರು ಬಳಸಬೇಕು.

ಬಳಸಿದ ಮಾಸ್ಕ್ ಡಿಸ್‌ಪೋಸ್ ಮಾಡುವುದು ಹೇಗೆ?
ಮಾಸ್ಕ್ ಬಳಸಿ ಹಾಗೇ ಎಸೆಯಬೇಡಿ, ಇದರಿಂದಲೂ ಸೋಂಕಾಣು ಹರಡಬಹುದು.ಇದನ್ನು ವೈದ್ಯಕೀಯ ವೇಸ್ಟ್ ಬಿಸಾಡುವಾಗ ಎಷ್ಟು ಮುನ್ನೆಚ್ಚರಿಕೆವಹಿಸುತ್ತಾರೋ ಹಾಗೆಯೇ ಡಿಸ್‌ಪೋಸ್ ಮಾಡಬೇಕು. ಇನ್ನು ಕಂಡಲ್ಲಿ ಬಿಸಾಡಬೇಡಿ ಹೀಗೆ ಮಾಡುವುದರಿಂದ ಕೆಲವರು ಅದನ್ನು ಬಳಸಿದರೆ ಇದರಿಂದ ಅಪಾಯ ಹೆಚ್ಚು. ಒಬ್ಬರು ಬಳಸಿದ ಮಾಸ್ಕ್ ಮತ್ತೊಬ್ಬರು ಬಳಸುವಂತಿಲ್ಲ. ಸೋಂಕಾಣುಗಳು ಗಾಳಿಯ ಮೂಲಕ ಹರಡುವುದರಿಂದ ಈ ರೀತಿಯ ಮುನ್ನೆಚ್ಚರಿಕೆವಹಿಸಿ. ಅಲ್ಲದೆ ಮಾಸ್ಕ್ ವಿಷಯದಲ್ಲಿ ನಿರ್ಲಕ್ಷ್ಯ ತೋರಬೇಡಿ. ಮಾಸ್ಕ್ ಧರಿಸುವ ಹಾಹೂ ತೆಗೆಯುವ ಮುನ್ನ ಕೈಗಳನ್ನು ತೊಳೆಯಿರಿ.

ಮಾಸ್ಕ್ ಡಿಸ್‌ಪೋಸ್
ಬಟ್ಟೆ ಮಾಸ್ಕ್ - ಇದನ್ನು ಮರು ಬಳಕೆ ಮಾಡಬಹುದಾಗಿದ್ದು, ಒಮ್ಮೆ ಬಳಸಿದ ಮೇಲೆ ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ.
ಸರ್ಜಿಕಲ್ ಮಾಸ್ಕ್: ಇದನ್ನು ಮುಖದ ಮುಂಭಾಗ ಮುಟ್ಟದೆ ಹಿಂಭಾಗದಿಮದ ಬಿಚ್ಚಿ ತೆಗೆಯಬೇಕು. ನಂತರ ಅದನ್ನು ಟಿಶ್ಯೂ ಪೇಪರ್‌ನಲ್ಲಿ ಹಾಕಿ ಮಡಚಿ ನಂತರ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ಕಸದ ಬುಟ್ಟಿಯ ಬಾಯಿ ಮುಚ್ಚಿ, ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಮಾಡಿ. ಇದನ್ನು 8 ಗಂಟೆಗಿಂತ ಹೆಚ್ಚು ಸಮಯ ಬಳಸುವಂತಿಲ್ಲ. ಕಂಡ-ಕಂಡಲ್ಲಿ ಬಿಸಾಡಬೇಡಿ. ಕೆಲವರು ಇದನ್ನು ತಂದು ಟೇಬಲ್ ಮೇಲೆ ಬಿಸಾಡುವುದು ಮಾಡುತ್ತಾರೆ. ಹಾಗೇ ಮಾಡುವುದರಿಂದ ನೀವೇ ರೋಗ ಹರಡುವಿರಿ. ಹುಷಾರ್!
N95 ಮಾಸ್ಕ್:
N95 ಮಾಸ್ಕ್ : ಇದನ್ನು ಮಾಸ್ಕ್‌ನ ಸ್ಟ್ರಾಪ್ ಎಡ್ಜ್‌ನಿಂದ ಮಿಚ್ಚಿ, ಯಾವುದೇ ಕಾರಣಕ್ಕೆ ಮಾಸ್ಕ್ ಮುಟ್ಟಬಾರದು. ಇದನ್ನು ತೆಗದು ಪ್ಲಾಸ್ಟಿಕ್ ಬ್ಯಾಗ್ ಅಥವಾ ಜಿಪ್‌ಲಾಕ್ ಬ್ಯಾಗ್‌ನಲ್ಲಿ ಹಾಕಿ. ಇದನ್ನು ಬಳಕೆಯ ನಡುವೆ ಪೇಪರ್ ಬ್ಯಾಗ್‌ನಲ್ಲಿ ಹಾಕಿಡಬಹುದು, ನಂತರ ಬ್ಯಾಗ್ ಜಿಪ್ ಹಾಕಿ. ಇದನ್ನು ಬಯೋಮೆಡಿಕಲ್ ವೇಸ್ಟ್ ಇರುವ ಕಡೆ ಇಡಿ. ಕೈಗಳನ್ನು ತೊಳೆಯದೆ ಮತ್ತೊಂದು ಮಾಸ್ಕ್ ಧರಿಸಬೇಡಿ.

ಮಾಸ್ಕ್ ಸ್ಟೆರ್‌ಲೈಸ್ ಮಾಡಿ ಬಳಸಬಹುದೇ?
ಸಾಮಾನ್ಯವಾಗಿ ಮಾಸ್ಕ್ ಒಂದು ಬಾರಿ ಬಳಕೆ ಮಾಡಬೇಕಷ್ಟೇ. ಇದನ್ನು ಕೆಲವೊಮ್ಮೆ ಮಾತ್ರ ಮರುಬಳಕೆ ಮಾಡಬಹುದು. ಇದನ್ನು ಮರುಬಳಕೆ ಮಾಡಬೇಕೆಂದರೆ ಅದನ್ನು ಡ್ರೈಯಾಗಿ(ಯಾವುದೇ ತೇವಾಂಶವಿಲ್ಲದಂತೆ ಇಡಬೇಕು) ಅಂದರೆ ಮಾತ್ರ ಬಳಸಬಹುದು.



Click it and Unblock the Notifications
