Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕೋವಿಡ್ 19 ಲಸಿಕೆಯ 2ನೇ ಡೋಸ್ ಪಡೆದ ಬಳಿಕ ಎಷ್ಟು ಜನರಿಗೆ ಕೊರೊನಾ ಬಂದಿದೆ? ಸರ್ಕಾರ ನೀಡಿದ ಅಂಕಿ ಅಂಶ ಇಲ್ಲಿದೆ
ಒಂದು ಕಡೆ ಕೊರೊನಾ 2 ಅಲೆಯ ಆರ್ಭಟ, ಮತ್ತೊಂದೆಡೆ ಕೊರೊನಾ ನಿಯಂತ್ರಿಸಲು ಲಸಿಕೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಬಗೆಯ ಕೊರೊನಾ ಲಸಿಕೆಗಳು ದೊರೆಯುತ್ತಿದ್ದು ಈ ಎರಡೂ ಲಸಿಕೆಗಳನ್ನು ಪಡೆಯುವುದರಿಂದ ಕೊರೊನಾ ವೈರಸ್ ಹೋರಾಡುವ ಸಾಮಾರ್ಥ್ಯ ನಮ್ಮ ದೇಹಕ್ಕೆ ಸಿಗುತ್ತದೆ ಎಂಬುವುದು ಅಧ್ಯಯನಗಳಿಂದ ಸಾಬೀತಾಗಿದೆ.
ಭಾರತದಲ್ಲಿ ಏಪ್ರಿಲ್ 19ರವರೆಗಿನ ಅಂಕಿ ಅಂಶಗಳನ್ನು ನೋಡಿದಾಗ ಮೊದಲನೇ ಡೋಸ್ ಅನ್ನು 109, 659, 181 ಜನರು ಪಡೆದಿದ್ದರೆ 17, 469, 932ರಷ್ಟು ಜನರು ಎರಡು ಡೋಸ್ ಪಡೆದಿದ್ದಾರೆ.
ಮೇ. 1ರಿಂದ 18 ವರ್ಷದ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಬಹುದಾಗಿರುವುದರಿಂದ ಭಾರತದ ಒಟ್ಟು ಮೊತ್ತದ ಜನ ಸಂಖ್ಯೆಯಲ್ಲಿ ಶೇ.80ಕ್ಕೂ ಅಧಿಕ ಜನರಿಗೆ ಲಸಿಕೆ ಸಿಗುವಂತಾಗುವುದು. ಆದರೆ ಕೊರೊನಾ ಲಸಿಕೆ ಎರಡು ಡೋಸ್ ಪಡೆದ ಮೇಲೆ ಕೊರೊನಾ ಬರುವುದೇ ಇಲ್ಲವೇ? ಎಂದು ನೋಡುವುದಾದರೆ ಎರಡು ಡೋಸ್ ಲಸಿಕೆ ಪಡೆದ ಬಳಿಕ ಕೂಡ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸರ್ಕಾರವೇ ಹೇಳಿದೆ.

ಕೊರೊನಾ ಡೋಸ್ ಪಡೆದವರಲ್ಲಿ ಎಷ್ಟು ಜನರಿಗೆ ಸೋಂಕು ಬಂದಿದೆ
ಅಂಕಿ ಅಂಶದ ಪ್ರಕಾರ ಎರಡು ಡೋಸ್ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಶೇ.0.03ರಷ್ಟು ಜನರಿಗೆ ಸೋಂಕು ತಗುಲಿದರೆ, ಕೊವಾಕ್ಸಿನ್ ಎರಡು ಡೋಸ್ ಪಡೆದವರಲ್ಲಿ ಶೇ.0.04ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿದೆ.
ಏಪ್ರಿಲ್ 21ರಂದು ಭಾರತ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಕೊರೊನಾ ಲಸಿಕೆ ಪಡೆದ ಬಳಿಕವೂ ಹಲವು ಜನರಿಗೆ ಕೊರೊನಾ ಸೋಂಕು ತಗುಲಿದೆ.
ಅಂಕಿ ಅಂಶದ ಪ್ರಕಾರ ಈವರೆಗೆ 21, 000 ಜನರಿಗೆ ಕೊರೊನಾ ಲಸಿಕೆ ಪಡೆದ ಬಳಿಕವೂ ಕೊರೊನಾ ಬಂದಿದೆ. ಅದರಲ್ಲಿ 5000 ಜನರಿಗೆ ಎರಡನೇ ಡೋಸ್ ಪಡೆದ ಬಳಿಕವೂ ಕೂಡ ಕೊರೊನಾ ಸೋಂಕು ತಗುಲಿದೆ.

ಕೋವಿಡ್ 19 ಲಸಿಕೆ ಪಡೆದ ಬಳಿಕ ತಗುಲಿದ ಸೋಂಕು
ಭಾರತ (ಏ.20ರವೆಗಿನ ಅಂಕಿಅಂಶ): ಕೋವಿಡ್ 19 ಲಸಿಕೆ ಪಡೆದ ಬಳಿಕ ಕೂಡ ಎಷ್ಟು ಜನರಿಗೆ ಸೋಂಕು ಬಂದಿದೆ ಎಂಬುವುದರ ಕುರಿತು ಸರ್ಕಾರ ನೀಡಿರುವ ಅಂಕಿ ಅಂಶ ಇಲ್ಲಿದೆ.

ಭಾರತದಲ್ಲಿ ತುರ್ತು ಸ್ಥಿತಿಯಲ್ಲಿ 3 ಲಸಿಕೆಗಳ ಬಳಕೆಗೆ ಅನುಮತಿ
ಭಾರತದಲ್ಲಿಯೇ ತಯಾರಾದ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಜೊತೆಗೆ ವಿದೇಶದಲ್ಲಿ ತಯರಾದ
ಸ್ಪುಟ್ನಿಕ್ ಲಸಿಕೆ ಬಳಸಲು ಸರ್ಕಾರವು ಅನುಮತಿ ನೀಡಿದೆ. ಸರ್ಕಾರದ ವೈದ್ಯಕೀಯ ಮೂಲದ ಪ್ರಕಾರ ಆಗಸ್ಟ್‌ನಲ್ಲಿ ಹೈದರಾಬಾದ್‌ನ ಬಯೋಲಾಜಿಕಲ್ ಇ ಇಂಡಿಜೀನಿಯಸ್ ಕೋವಿಡ್ 19 ಲಸಿಕೆ ಕೂಡ ಲಭ್ಯವಾಗುವ ಸಾಧ್ಯತೆ ಇದೆ. ಈ ಲಸಿಕೆಯ ಪ್ರಯೋಗವು ಮೂರನೇ ಹಂತದಲ್ಲಿದೆ.

ಮೊದಲನೇ ಅಲೆ ಜೊತೆ ಎರಡನೇ ಅಲೆಯ ಹೋಲಿಕೆ
ಕೋವಿಡ್ 19 ಮೊದಲನೇ ಅಲೆಯಷ್ಟೇ ಎರಡನೇ ಅಲೆಗೆ ಜನರು ಬಲಿಯಾಗುತ್ತಿದ್ದಾರೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡುತ್ತಾ 146 ಜಿಲ್ಲೆಗಳಲ್ಲಿ ಪಾಸಿಟಿವ್ ಸಂಖ್ಯೆ ಶೇ.15ರಷ್ಟು ಇದ್ದರೆ , 274 ಜಿಲ್ಲೆಯಲ್ಲಿ ಶೆ. 5-15ರಷ್ಟು ಇದೆ ಎಂದು ಹೇಳಿದ್ದಾರೆ.

ಸಲಹೆ:
ಕೊರೊನಾ ಲಸಿಕೆ ಕೊರೊನಾ ತಡೆಗ್ಟಟುವಲ್ಲಿ ಸಹಕಾರಿಯಾದರೂ ಕೊರೊನಾ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ ಎಂದು 2 ಡೋಸ್ ಲಸಿಕೆ ಪಡೆದ ಬಳಿಕ ಬಂದ ಕೇಸ್‌ಗಳಿಂದ ಸಾಬೀತಾಗಿದೆ. ಆದ್ದರಿಂದ ಮುನ್ನೆಚ್ಚರಿಕೆವಹಿಸುವುದು ನಮ್ಮ ಮುಂದೆ ಇರುವ ಪ್ರಮುಖ ಸುರಕ್ಷಿತಾ ಮಾರ್ಗವಾಗಿದೆ.



Click it and Unblock the Notifications
