Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಿಪಿ ಹೆಚ್ಚಾದಾಗ ಕಾಡುವ ತಲೆನೋವು: ಇದಕ್ಕೆ ಪರಿಹಾರವೇನು?
ಅಧಿಕ ರಕ್ತದೊತ್ತಡ ಅಥವಾ ಬಿಪಿ ಇದು ಹೆಚ್ಚಿನವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ವೈದ್ಯರು ಪರೀಕ್ಷೆ ಮಾಡಿ 'ನಿಮಗೆ ಬಿಪಿ ಇದೆ' ಎಂದಾಗ ಅಚ್ಚರಿ ಉಂಟಾಗುವುದು ಸಹಜ. ಏಕೆಂದರೆ ಹೆಚ್ಚಿನವರಿಗೆ ಇದರ ಲಕ್ಷಣಗಳೇ ಕಂಡು ಬಂದಿರುವುದಿಲ್ಲ.

ಕೆಲವರಿಗಷ್ಟೇ ತಲೆನೋವಿನ ಸಮಸ್ಯೆ ಕಂಡು ಬಂದಿರುತ್ತದೆ, ಅದೂ ರಕ್ತದೊತ್ತಡ ಅಪಾಯದ ಮಟ್ಟವನ್ನು ತಲುಪಿದಾಗ ಮಾತ್ರ ತಲೆನೋವಿನ ಸಮಸ್ಯೆ ಕಂಡು ಬಂದಿರುತ್ತದೆ. ರಕ್ತದೊತ್ತಡ ಹೆಚ್ಚಾದರೆ ಹೃದಯ ಸಮಸ್ಯೆ, ಹೃದಯಾಘಾತ, ಪಾರ್ಶ್ವವಾಯು ಆಗುವ ಅಪಾಯ ಹೆಚ್ಚು. ಆದ್ದರಿಂದ ವರ್ಷದಲ್ಲಿ ಒಂದು ಬಾರಿಯಾದರೂ ರಕ್ತದೊತ್ತಡ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅವಶ್ಯಕ.

ಯಾವಾಗ ಅಧಿಕ ರಕ್ತದೊತ್ತಡ ಇದೆ ಎಂದು ಹೇಳಬಹುದು?
ರಕ್ತದೊತ್ತಡ ಪರೀಕ್ಷೆ ಮಾಡಿಸಿದಾಗ 120/80 mm Hgಗಿಂತ ಕಡಿಮೆಯಿದ್ದರೆ ಸಹಜ ರಕ್ತದೊತ್ತಡ ಎಂದು ಹೇಳಬಹುದು. ಹಾಗಂತ 100/80mm Hgಗಿಂತ ಕಡಿಮೆಯಿದ್ದರೂ ಅಪಾಯವೇ.
ರಕ್ತದೊತ್ತಡ 130/80 mm Hgಗಿಂತ ಅಧಿಕವಿದ್ದರೆ ಅಧಿಕ ರಕ್ತದೊತ್ತಡವಿದೆ ಎಂದು ಹೇಳಬಹುದು. ಯಾವುದೇ ಲಕ್ಷಣ ಕಂಡ ಬಳಿಕ ಪರೀಕ್ಷೆ ಮಾಡಿಸುತ್ತೇವೆ ಎಂಬುವುದು ಅಪಾಯಕಾರಿ ಎಂಬುವುದು ತಜ್ಞರ ಸಲಹೆಯಾಗಿದೆ.
ಅಧಿಕ ರಕ್ತದೊತ್ತಡದಿಂದ ಉಂಟಾಗುವ ಸಮಸ್ಯೆಗಳು
ರಕ್ತದೊತ್ತಡ 180/120 mm Hg ಇದ್ದರೆ ಎದೆನೋವು, ಬೆನ್ನುನೋವು, ಕಣ್ಣು ಮಂಜಾಗುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಅಧಿಕ ರಕ್ತದೊತ್ತಡ ಇದ್ದಾಗ ಕಂಡು ಬರುವ ಲಕ್ಷಣಗಳು
*ತಲೆನೋವು
* ಉಸಿರಾಟಕ್ಕೆ ತೊಂದರೆ
* ಮೂಗಿನಲ್ಲಿ ರಕ್ತ ಸೋರುವುದು
* ತೀವ್ರ ಮಾನಸಿಕ ಒತ್ತಡ

ಅಧಿಕ ರಕ್ತದೊತ್ತಡದಿಂದ ಕಾಡುವ ತಲೆನೋವು ಹೇಗಿರುತ್ತೆ,
ಅಧಿಕ ರಕ್ತದೊತ್ತಡದಿಂದ ಕಾಡುವ ತಲೆನೋವು ಹೇಗಿರುತ್ತೆ, ಇದರ ನಿವಾರಣೆ ಹೇಗೆ?
ಅಧಿಕ ರಕ್ತದೊತ್ತಡದಿಂದ ನೆತ್ತಿಯ ಎರಡೂ ಬದಿಯಲ್ಲಿ ಅಸಾಧ್ಯ ನೋವುಂಟಾಗುವುದು. ಈ ತಲೆನೋವು ಕಡಿಮೆಯಾಗಬೇಕಾದರೆ ರಕ್ತದೊತ್ತಡ ಸಹಜ ಸ್ಥಿತಿಗೆ ಬರಬೇಕು.
ಅಧಿಕ ರಕ್ತದೊತ್ತಡ ಕಡಿಮೆಯಾಗಲು ವೈದ್ಯರು ನೀಡಿರುವ ಔಷಧಿಯನ್ನು ತೆಗೆದುಕೊಂಡರೆ ಈ ತಲೆನೀವು ಕಡಿಮೆಯಾಗುವುದು.

ಅಧಿಕ ರಕ್ತದೊತ್ತಡಕ್ಕೆ ಹಾಗೂ ಮೈಗ್ರೇನ್‌ಗೆ ಸಂಬಂಧವಿದೆಯೇ?
ಮೈಗ್ರೇನ್ ತಲೆನೋವು ಹಾಗೂ ಅಧಿಕ ರಕ್ತದೊತ್ತಡ ಎರಡೂ ಒಬ್ಬ ವ್ಯಕ್ತಿಗೆ ಇರಬಹುದು. ಆದರೆ ಮೈಗ್ರೇನ್‌ಗೂ ಅಧಿಕ ರಕ್ತದೊತ್ತಡಕ್ಕೂ ನೇರ ಸಂಬಂಧವಿಲ್ಲ ಎಂದು Hartford Healthcare Headache Centerನಿರ್ದೇಶಕ ಎಂ, ಗ್ರಾಸ್‌ಬೆರ್ಗ್ ಹೇಳಿದ್ದಾರೆ. ಆದರೆ ಅಧಿಕ ಮೈಗ್ರೇನ್ ಇದ್ದಾಗ ಅದು ರಕ್ತದೊತ್ತಡ ಮತ್ತಷ್ಟು ಅಧಿಕವಾಗಲು ಕಾರಣವಾಗಬಹುದು.
ಮೈಗ್ರೇನ್ ಮತ್ತು ಅಧಿಕ ರಕ್ತದೊತ್ತಡ ಒಂದೇ ಸಮಯದಲ್ಲಿ ಇದ್ದಾಗ ಮೈಗ್ರೇನ್‌ಗೆ ತೆಗೆದುಕೊಳ್ಳುವ ಟ್ರಿಪ್ಟಾನ್ಸ್ ಔಷಧಿ ತೆಗೆದುಕೊಳ್ಳಬಾರದು, ಏಕೆಂದರೆ ಇದು ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಕ್ತದೊತ್ತಡ ಅಧಿಕವಿದ್ದಾಗ ಮೈಗ್ರೇನ್‌ಗೆ ಔಷಧ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಗ್ರಾಸ್‌ಬೆರ್ಗ್ ಹೇಳಿದ್ದಾರೆ.

ತಲೆನೋವು ಹೋಗಲಾಡಿಸುವುದು ಹೇಗೆ?
ವಿಪರೀತ ತಲೆನೋವು ಕಾಡಿದಾಗ ನೋವು ಕಡಿಮೆಯಾಗಲು ನೋವು ನಿವಾರಕ ಮಾತ್ರೆ ತೆಗದುಕೊಳ್ಳುವುದು ಸೂಕ್ತವಲ್ಲ, ಪ್ರತ್ಯೇಕವಾಗಿ ಅಧಿಕ ರಕ್ತದೊತ್ತಡ ಇರುವವರು. ಯಾವುದೇ ಔಷಧ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
ಈ ಆಹಾರಗಳು ತಲೆನೋವು ಕಡಿಮೆ ಮಾಡಲು ಸಹಕಾರಿಯಾಗಿವೆ:
* ಸೆಲೆರಿ
*ಬೀಟ್‌ರೂಟ್
* ಬ್ಲೂಬೆರ್ರಿ
* ಅಗಸೆಬೀಜ

ತಲೆನೋವು ನಿವಾರಣೆಗೆ ಇತರ ಪರಿಹಾರ
ಪೆಪ್ಪರ್‌ಮೀಟ್ ಅಥವಾ ಲ್ಯಾವೆಂಡರ್ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆನೋವು ಸ್ವಲ್ಪ ಶಮನವಾಗುವುದು.
ಹೆಚ್ಚು ಕೆಫೀನ್ ವಸ್ತುಗಳನ್ನು ಸೇವಿಸಬೇಡಿ
ಹೆಚ್ಚು ಕೆಫೀನ್ ವಸ್ತುಗಳನ್ನು ಸೇವಿಸಿದರೆ ತಲೆನೋವು ಹೆಚ್ಚಾಗುವುದು. ಆದ್ದರಿಂದ ಟೀ, ಕಾಫಿ ಕುಡಿಯಬೇಡಿ.



Click it and Unblock the Notifications