For Quick Alerts
ALLOW NOTIFICATIONS  
For Daily Alerts

ಈ 5 ಕಷಾಯಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು, ಕೆಮ್ಮು, ಶೀತ ಇಲ್ಲವಾಗುವುದು

|

ಆರೋಗ್ಯವೇ ಭಾಗ್ಯ ಎಂಬ ಮಾತು ನೂರಕ್ಕೆ ನೂರಷ್ಟು ಸತ್ಯ. ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ ಅಲ್ಲವೇ. ಆರೋಗ್ಯವಾಗಿರಬೇಕೆಂದರೆ ಮೊದಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು.

Herbal Decoctions To Boost Your Immunity

ಕೆಲವರು ನನಗೆ ರೋಗ ನಿರೋಧಕ ಶಕ್ತಿ ಸ್ವಲ್ಪ ಕಡಿಮೆ ಇದೆ ಅಂತಾರೆ. ಆದರೆ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಇನ್ನು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳು, ಬೇರುಗಳು, ಕಾಳುಗಳು ಇವೆ. ಅವುಗಳನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಕೋವಿಡ್ 19 ಕಾಯಿಲೆ ಬಂದಾಗಿನಿಂದ ಈ ಕಾಯಿಲೆಯಿಂದ ಪಾರಾಗಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಿಸಬಹುದು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಇಲ್ಲಿ ನಾವು ಕೆಲವೊಂದು ಕಷಾಯಗಳ ಬಗ್ಗೆ ಹೇಳಿದ್ದೇವೆ. ಇದು ಕೆಮ್ಮು, ಶೀತ, ಜ್ವರ ಇಂಥ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಇತರ ರೋಗಾಣುಗಳ ವಿರುದ್ಧ ಹೋರಾಡಲೂ ಸಹಕರಿ, ಬನ್ನಿ ಆ ಕಷಾಯಗಳಾವುವು ಎಂದು ನೋಡೋಣ:

1. ಅರಿಶಿಣ ಮತ್ತು ಹಾಲು

1. ಅರಿಶಿಣ ಮತ್ತು ಹಾಲು

ಕೆಮ್ಮು, ಗಂಟಲು ಕೆರೆತವಿದ್ದಾಗ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುತ್ತಿದ್ದರೆ ಗಂಟಲು ಕೆರೆತ ಕಡಿಮೆಯಾಗುವುದು ಹಾಗೂ ಕೆಮ್ಮು ಕೂಡ ಇಲ್ಲವಾಗುವುದು. ಇದನ್ನು ಪ್ರತಿತಿತ್ಯ ತೆಗೆದುಕೊಳ್ಳುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅರಿಶಿಣ ಕ್ಯಾನ್ಸರ್‌ನಂಥ ರೋಗವನ್ನು ತಡೆಗಟ್ಟುವ ಸಾಮಾರ್ಥ್ಯ ಹೊಂದಿದೆ. ಇದನ್ನು ಕುಡಿಯುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

ಹಾಲಿಗೆ ಅರಿಶಿಣ ಹಾಕಿ ಕುಡಿಯಲು ರುಚಿಕರವಾಗಿರಬೇಕೆಂದರೆ ಹಾಲಿಗೆ ಸ್ವಲ್ಪ ಶುಂಠಿ,ಅ ರಿಶಿಣ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯಿರಿ. ಜೇನಿನಲ್ಲಿ ಕೂಡ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

2. ತುಳಸಿ ಮತ್ತು ಕಾಳು ಮೆಣಸು

2. ತುಳಸಿ ಮತ್ತು ಕಾಳು ಮೆಣಸು

ಕೋವಿಡ್‌ 19 ಭಯ ಇರುವ ಈ ಸಂದರ್ಭದಲ್ಲಿ ತುಳಸಿ ಕುಡಿಯುವ ನೀರಿಗೆ ಹಾಕಿ ಬಳಸುವುದು ಒಳ್ಳೆಯದು. 2 ಲೀಟರ್‌ ನೀರಿಗೆ 5-6 ತುಳಸಿ ಎಲೆ, 3-4 ಕಾಳು ಮೆಣಸು ಹಾಕಿ ಕುದಿಸಿ ಕುಡಿಯಿರಿ. ಇನ್ನು ಸಾಮಾನ್ಯ ಕೆಮ್ಮು ಇದ್ದರೆ ತುಳಸಿ, ಕಾಳು ಮೆಣಸು, ಶುಂಠಿ ಇದನ್ನು ಹಾಕಿ ಎರಡು ಲೋಟ ನೀರು ಹಾಕಿ ಕುದಿಸಿ, ಅದು ಅರ್ಧ ಲೋಟಕ್ಕೆ ಬಂದ ಮೇಲೆ ಸೋಸಿ ಕುಡಿದರೆ ಸಾಕು, ಕೆಮ್ಮು ಕಡಿಮೆಯಾಗುವುದು.

3. ಏಲಕ್ಕಿ, ಕಾಳು ಮೆಣಸು, ನಿಂಬೆರಸ

3. ಏಲಕ್ಕಿ, ಕಾಳು ಮೆಣಸು, ನಿಂಬೆರಸ

ನಿಂಬೆರಸದಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಏಲಕ್ಕಿ, ಕಾಳು ಮೆಣಸು, ನಿಂಬೆರಸ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ... ಹೀಗೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಏಲಕ್ಕಿ, ಮತ್ತು ಕಾಳು ಮೆಣಸು ತುಂಬಾ ಬಳಸಬೇಡಿ, ಉಷ್ಣವಾಗುವುದು, ಮಿತಿಯಲ್ಲಿ ಬಳಸಿ, ಸಾಕು. ಇನ್ನು ನೀರಿಗೆ ಕಾಳುಮೆಣಸು, ಏಲಕ್ಕಿ, ನಿಂಬೆರಸ ಹಾಕಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಶೀತ ಇಲ್ಲವಾಗುವುದು.

4. ಅಶ್ವಗಂಧ ಮತ್ತು ಅಣಬೆ

4. ಅಶ್ವಗಂಧ ಮತ್ತು ಅಣಬೆ

ಅಶ್ವಗಂಧದಲ್ಲಿ ಅನೇಕ ರೋಗ ನಿರೋಧಕ ಗುಣಗಳಿರುವುದರಿಂದ ಇದನ್ನು ಆಯುರ್ವೇದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸಲು ಬಳಸುತ್ತಾರೆ. ಅಣಬೆ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ. ಅಣಬೆ ಸೂಪ್ ಹಾಗೂ ಅಶ್ವಗಂಧ ಹಾಕಿ ಸೂಪ್ ಮಾಡಿ ಕುಡಿಯುರಿ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು.

5. ಪುದೀನಾ ಮತ್ತು ರೋಸ್‌ಮೆರಿ

5. ಪುದೀನಾ ಮತ್ತು ರೋಸ್‌ಮೆರಿ

ಪುದೀನಾಗೆ ಕೂಡ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಗುಣವಿದೆ. ಇವರೆಡನ್ನು ಮಿಶ್ರ ಮಾಡಿ ಬಳಸುವುದರಿಂದ ಹವಾಮಾನ ಬದಲಾದಂತೆ ಕಾಣಿಸುವ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಇನ್ನು ಪುದೀನಾವನ್ನು ಅಡುಗೆಯಲ್ಲಿ ಬಳಸಿ. ಪುದೀನಾ ಹಾಕಿದ ಬ್ಲ್ಯಾಕ್‌ ಟೀ ಕುಡಿಯಿರಿ.

English summary

Herbal Tea Recipes To Boost Your Immunity

To mention, a decoction is a plant-based liquor usually prepared by boiling parts of a plant (roots, leaves, flower, seeds or fruit) in water. Take a look at a few herbal decoctions which help boost immunity during a pandemic
X
Desktop Bottom Promotion