For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಾಡುವ ಬೆವರು ಕಜ್ಜಿಗೆ ಕಾರಣ, ಚಿಕಿತ್ಸೆ

|

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಂಡು ಬರುವುದು. ಇದನ್ನು ಬೆವರುಸಾಲೆಗಳು ಎಂದು ಕೂಡ ಕರೆಯುತ್ತಾರೆ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತವೆ. ಅವರ ತ್ವಚೆ ತುಂಬಾ ಸೂಕ್ಷ್ಮವಾಗಿರುವುದರಿಂದ ಬಿಸಿಲಿನ ತಾಪ ಹೆಚ್ಚಾದಂತೆ ಚರ್ಮದಲ್ಲಿ ವ್ಯತ್ಯಾಸ ಕಂಡು ಬರುವುದು.

heat-rash-symptoms-causes-and-treatment

ಮೈಯಲ್ಲಿ ಚಿಕ್ಕ-ಚಿಕ್ಕ ಕಜ್ಜಿಗಳು ಏಳುವುದು. ಈ ಬೆವರುಸಾಲೆಗಳು ಎದ್ದರೆ ಮೈ ತುರಿಸುವುದು, ಈ ಸಮಸ್ಯೆಗಳನ್ನು ತಂಪಾದ ಸ್ಥಳದಲ್ಲಿ ಇರುವ ಮೂಲಕ ತಡೆಗಟ್ಟಬಹುದಾಗಿದೆ. ಆದರೆ ಕೆಲವು ಕಡೆ ಬಿಸಿಲಿನ ತಾಪ 40 ಡಿಗ್ರಿ C ದಾಟಿರುವುದರಿಂದ ಫ್ಯಾನ್‌ ಗಾಳಿ ಬಿಸಿಲಿನ ತಾಪ ತಗ್ಗಿಸಲು ಸಾಕಾಗುವುದಿಲ್ಲ. ಇನ್ನು ಹೆಚ್ಚಿನವರ ಮನೆಗಳಲ್ಲಿ ಎಸಿ ಇರುವುದಿಲ್ಲ. ಆದ್ದರಿಂದಾಗಿ ಮೈ ಬೆವರಿ ಈ ಬೆವರು ಸಾಲೆಗಳ ಸಮಸ್ಯೆ ಉಂಟಾಗುವುದು.

ಇಲ್ಲಿ ನಾವು ಬೆವರು ಕಜ್ಜಿ/ಬೆವರು ಸಾಲೆಯ ವಿಧಗಳು, ಲಕ್ಷಣಗಳು, ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಬೆವರು ಕಜ್ಜಿಯ ವಿಧಗಳು

ಬೆವರು ಕಜ್ಜಿಯ ವಿಧಗಳು

1.ಚಿಕ್ಕ-ಚಿಕ್ಕ ಗುಳ್ಳೆಗಳು

2. ಕೆಂಪುಗುಳ್ಳೆಗಳು

3.ಕೀವು ತುಂಬಿದ ರೀತಿಯ ಗುಳ್ಳೆಗಳು

4. ದಪ್ಪವಾದ ಗುಳ್ಲೆಗಳು

ಬೆವರು ಸಾಲೆ ಹೆಚ್ಚಾಗಿ ಕಂಡು ಬರುವ ಸ್ಥಳಗಳು

ಬೆವರು ಸಾಲೆ ಹೆಚ್ಚಾಗಿ ಕಂಡು ಬರುವ ಸ್ಥಳಗಳು

  • ಮುಖ
  • ಕುತ್ತಿಗೆ
  • ಬೆನ್ನು
  • ಹೊಟ್ಟೆ
  • ಸ್ತನಗಳ ಕೆಳಭಾಗದಲ್ಲಿ
  • ಹಿಂಭಾಗದಲ್ಲಿ
  • ಮೊಣಕೈ ಭಾಗಗಳಲ್ಲಿ
  • ಯಾರಿಗೆ ಬೆವರು ಸಾಲೆ ಹೆಚ್ಚಾಗಿ ಕಾಣಿಸಿಕೊಳ್ಳುವುದು

    ಯಾರಿಗೆ ಬೆವರು ಸಾಲೆ ಹೆಚ್ಚಾಗಿ ಕಾಣಿಸಿಕೊಳ್ಳುವುದು

    • ಮಗುವಿಗೆ
    • ನಾಲ್ಕು ವರ್ಷಕ್ಕಿಂತ ಚಿಕ್ಕ ಮಕ್ಕಳಲ್ಲಿ
    • ಕ್ರೀಡಾಪಟುಗಳಲ್ಲಿ ಹಾಗೂ ಬಿಸಿಲಿನಲ್ಲಿ ಹೆಚ್ಚಾಗಿ ಇರುವವರಲ್ಲಿ
    • ಅಧಿಕ ಮೈ ತೂಕ ಹೊಂದಿವರಲ್ಲಿ
    • ಮಲಗಿದಲ್ಲಿಯೇ ಆದ ರೋಗಿಗಳಲ್ಲಿ
    • ಸೆಕೆ ಜಾಸ್ತಿಯಿದ್ದರೂ ಕಡಿಮೆ ಬೆವರುವವರಲ್ಲಿ
    • ಸೈನಿಕರಲ್ಲಿ
    • ಬೆವರುಸಾಲೆ ಕಂಡು ಬಂದರೆ ಪ್ರಾಥಮಿಕ ಚಿಕಿತ್ಸೆ

      ಬೆವರುಸಾಲೆ ಕಂಡು ಬಂದರೆ ಪ್ರಾಥಮಿಕ ಚಿಕಿತ್ಸೆ

      • ತಣ್ಣನೆಯ ನೀರಿನಲ್ಲಿ ಸ್ನಾನ
      • ಗಾಳಿ ಹೆಚ್ಚು ಬೀಸುವ ಕಡೆ ಕೂರಿ
      • ಎಸಿ ರೂಮ್‌ನಲ್ಲಿರುವುದು, ಎಸಿ ಇಲ್ಲಾಂದರೆ ಮೈಗೆ ಸ್ವಲ್ಪ ಒದ್ದೆ ಬಟ್ಟೆ ಧರಿಸಿ ಫ್ಯಾನ್‌ ಕೆಳಗಡೆ ಕೂರಿ (ಮಕ್ಕಳಿಗೆ ಹೀಗೆ ಮಾಡಬೇಡಿ)
      • ಹೊಟ್ಟೆ, ಸ್ತನಗಳಲ್ಲಿ ಬೆವರು ಸಾಲೆ ಎದ್ದರೆ ಕಾಟನ್ ಬಟ್ಟೆಯನ್ನು ಒದ್ದೆ ಮಾಡಿ ಒರೆಸಿ, ಪೌಡರ್ ಹಾಕಿ.
      • ಬೆವರುಸಾಲೆ ಎದ್ದರುವ ಜಾಗಕ್ಕೆ ಐಸ್‌ಪ್ಯಾಕ್ ಇಡಿ.
      • Hydrocortisone, triamcinolone ಈ ರೀತಿಯ ಕ್ರೀಮ್‌ಗಳನ್ನು ದಿನದಲ್ಲಿ ಎರಡು ಬಾರಿ ಹಚ್ಚಿದರೆ ಕಡಿಮೆಯಾಗುವುದು, ಇದು ಬಳಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
      • ಹತ್ತಿಯ ಬಟ್ಟೆ ಧರಿಸಿ. ಸ್ಲೀವ್‌ಲೆಸ್‌ ಟಾಪ್ , ಶಾರ್ಟ್ಸ್, ಪಂಚೆ, ಬನಿಯನ್ ಹೀಗೆ ಗಾಳಿಯಾಡುವ ಡ್ರೆಸ್‌ ಧರಿಸಿ. ಒಳ ಉಡುಪು ಧರಿಸದವರಲ್ಲಿ ಆ ಭಾಗದಲ್ಲಿ ಬೆವರು ನಿಂತು ಕಜ್ಜಿ ಉಂಟಾಗುವುದು, ಆದ್ದರಿಂದ ಒಳ ಉಡುಪು ಧರಿಸಬೇಕು.
      • ಸಾಕಷ್ಟು ನೀರು ಕುಡಿಯಬೇಕು.
      •  ಬೆವರುಸಾಲೆ ಸಮಸ್ಯೆ ಯಾವಾಗ ಹೆಚ್ಚಾಗುವುದು

        ಬೆವರುಸಾಲೆ ಸಮಸ್ಯೆ ಯಾವಾಗ ಹೆಚ್ಚಾಗುವುದು

        • ವಾತಾವರಣದಲ್ಲಿ ಶುಷ್ಕತೆ ಹೆಚ್ಚಾದಾಗ
        • ಅಧಿಕ ಉಷ್ಣತೆ
        • ಬಿಗಿಯಾದ ಒಳ ಉಡುಪು ಧರಿಸುವುದು
        • ಜ್ವರ
        • ಸನ್‌ ಬರ್ನ್
        •  ಯಾವಾಗ ವೈದ್ಯರನ್ನು ಕಾಣಬೇಕು?

          ಯಾವಾಗ ವೈದ್ಯರನ್ನು ಕಾಣಬೇಕು?

          ಜ್ವರ

          ತಲೆನೋವು

          ತಲೆಸುತ್ತು

          ವಾಂತಿ

          ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ.

          ಬೆವರುಸಾಲೆ ಬರದಂತೆ ತಡೆಯುವುದು ಹೇಗೆ?

          ಬೆವರುಸಾಲೆ ಬರದಂತೆ ತಡೆಯುವುದು ಹೇಗೆ?

          • ತಣ್ಣನೆ ವಾತಾವರಣದಲ್ಲಿರುವುದು (ಮನೆಯ ಸುತ್ತ-ಮುತ್ತ ಗಿಡ ಮರಗಳಿದ್ದರೆ ಮನೆ ತಂಪಾಗಿರುತ್ತದೆ. ನಗರ ಪ್ರದೇಶದಲ್ಲಾದರೂ ಸ್ವಲ್ಪ ಗಾರ್ಡನಿಂಗ್ ಮಾಡುವುದರಿಂದ ಸ್ವಲ್ಪವಾದರೂ ಗಾಳಿಯಾಡುವುದು)
          • ಎಸಿ
          • ಬಿಸಿಲಿನಲ್ಲಿ ಕೆಲಸ ಮಾಡುವುದು, ಓಡಾಡುವುದು ಮಾಡಬಾರದು
          • ಹತ್ತಿಯ ಬಟ್ಟೆ ಧರಿಸಿ
          • ಮಕ್ಕಳನ್ನು ತಂಪಾದ ಸ್ಥಳದಲ್ಲಿ ಮಲಗಿಸಿ, ಅವರು ಒದ್ದೆಯಾಗಿ ಇರದಂತೆ ನೋಡಿಕೊಳ್ಳಿ. ಡಯಾಪರ್ ಬಳಸಬೇಡಿ, ಸ್ವಚ್ಛವಾದ ಬಟ್ಟೆ ಬಳಸಿ.
          • ಮಲಗಿದ್ದಲ್ಲಿಯೇ ಇರುವ ರೋಗಿಯಾದರೆ ಆ ಸ್ಥಳ ತಂಪಾಗಿರುವಂತೆ ನೋಡಿ, ಮಲಗಿದ್ದಲಿಯೇ ಮಲಗಿಸುವುದಕ್ಕೆ ಬದಲು ಸಾಧ್ಯವಾದರೆ ಮೆಲ್ಲನೆ ಕೂರಿಸುವುದು, ಇಲ್ಲಾಂದರೆ ಮೆಲ್ಲನೆ ಒಂದು ಮಗ್ಗುಲ ಮಲಗಿಸುವುದು ಮಾಡಿ. ಅವರ ಕೋಣೆ ತಂಪಾಗಿರುವಂತೆ ನೋಡಿಕೊಳ್ಳಿ.
          • ಬೆವರುಸಾಲೆ ತಡೆಯಲು ಏನು ಮಾಡಬೇಕು?

            ಬೆವರುಸಾಲೆ ತಡೆಯಲು ಏನು ಮಾಡಬೇಕು?

            • ಬಿಸಿಲಿನಲ್ಲಿ ತುಂಬಾ ಹೊತ್ತು ಇರಬೇಡಿ.
            • ಸಡಿಲವಾದ, ಹತ್ತಿಯ ಬಟ್ಟೆ ಧರಿಸಿ
            • ಫ್ಯಾನ್, ಎಸಿ ಬಳಸಿ ಸೆಕೆ ಕಡಿಮೆ ಮಾಡಿಕೊಳ್ಳಿ
            • ದಿನಕ್ಕೆ 2 ಬಾರಿ ತಣ್ಣೀರು ಸ್ನಾನ ಮಾಡಿ
            • ಏನು ಮಾಡಬಾರದು?

              ಏನು ಮಾಡಬಾರದು?

              • ಪಾಲಿಸ್ಟರ್ ಬಟ್ಟೆ, ನೈಲಾನ್‌ ಬಟ್ಟೆ ಧರಿಸಬಾರದು, ಕಪ್ಪು ಬಟ್ಟೆ ಉಷ್ಣ ಹೀರಿಕೊಳ್ಳುವುದರಿಂದ ಕಪ್ಪು ಬಟ್ಟೆ ಧರಿಸಬೇಡಿ.
              • ಬೆವರಸಾಲೆಗಳನ್ನು ಆಯಿಂಟ್‌ಮೆಂಟ್‌ ಹಾಕಿ ಮುಚ್ಚುವುದು, ವ್ಯಾಸೆಲೈನ್, ತುಂಬಾ ಕ್ರೀಮ್ ಹಚ್ಚುವುದು ಮಾಡಬಾರದು.
              • ತುರಿಸುವುದು, ಆ ಗುಳ್ಳೆಗಳನ್ನು ಕೀಳುವುದು ಮಾಡುಬೇಡಿ.
              • ಬಿಸಿ ನೀರಿನಲ್ಲಿ ಸ್ನಾನ ಬೇಡ

ಬೆವರುಸಾಲೆಗೆ ಅತ್ಯುತ್ತಮವಾದ ಮನೆಮದ್ದು

English summary

Heat Rash Symproms, Causes and Treatment

Heat rash are very common problem in summer, Here we have given what causes heat rash, how to avoid it and what are the best treatment for that. Read on.
X
Desktop Bottom Promotion