Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೊವಿಶೀಲ್ಡ್ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಅಡ್ಡಪರಿಣಾಮ: ಸರ್ಕಾರ
ಕೊರೊನಾ ಲಸಿಕೆ ಕೊರೊನಾದಿಂದ ನಮ್ಮನ್ನು ರಕ್ಷಿಸುವುದಾದರೂ ಇದನ್ನು ತೆಗೆದುಕೊಂಡಾಗ ಕೆಲವರಲ್ಲಿ ಕೆಲವೊಂದು ಬಗೆಯ ಅಡ್ಡಪರಿಣಾಮ ಉಂಟಾಗುವುದುಂಟು. ಕೆಲವರಲ್ಲಿ ಲಸಿಕೆ ಚುಚ್ಚಿದ ಜಾಗದಲ್ಲಿ ಊತ, ಇನ್ನು ಕೆಲವರಲ್ಲಿ ಜ್ವರ ಈ ರೀತಿಯ ಅಡ್ಡಪರಿಣಾಮಗಳು ಕಂಡು ಬಂದಿದ್ದೆವು.
ಆದರೆ ಕೊವಿಶೀಲ್ಡ್ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿರುವುದಾಗಿ AEFI ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಭಾರತದಲ್ಲಿ ಲಸಿಕೆ ಪಡೆದ ಎಷ್ಟು ಜನರಿಗೆ ರಕ್ತ ಹೆಪ್ಪುಗಟ್ಟಿದೆ
ಭಾರತದಲ್ಲಿ ಕೊವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ನೀಡುತ್ತಿದ್ದು ಅದರಲ್ಲಿ ಕೊವಿಶೀಲ್ಡ್ ಪಡೆದವರಲ್ಲಿ ಶೇ. 0.61 ಜನರಲ್ಲಿ ಈ ರೀತಿ ಕಂಡು ಬಂದಿದೆ. ಇತರ ದೇಶಗಳಿಗೆ ಹೋಲಿಸಿದರೆ ಕೊರೊನಾ ಲಸಿಕೆಯಿಂದ ಈ ರೀತಿಯಾಗಿರುವುದು ಭಾರತದಲ್ಲಿ ತುಂಬಾ ಕಡಿಮೆ. ಯುಕೆ ಮತ್ತು ಜರ್ಮನ್ ದೇಶಗಳಲ್ಲಿ 1ಮಿಲಿಯನ್‌ನಲ್ಲಿ 10 ಜನರಿಗೆ ಹೀಗೆ ಅಡ್ಡ ಪರಿಣಾಮ ಬೀರಿವೆ.
ಭಾರತದಲ್ಲಿ ಇದುವರೆಗೆ 7.5 ಕೋಟಿ ಕೊವಿಶೀಲ್ಡ್ ಲಸಿಕೆ ನೀಡಲಾಗಿದೆ. ಅದರಲ್ಲಿ 700 ಜನರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗಿದೆ ಎಂದು AEFI ತನ್ನ ವರದಿಯಲ್ಲಿ ತಿಳಿಸಿದೆ.

ಕೊವಾಕ್ಸಿನ್‌ನಿಂದ ಈ ರೀತಿಯ ಅಡ್ಡಪರಿಣಾಮವಾಗಿಲ್ಲ
ನಮ್ಮಲ್ಲಿ ಕೊವಿಶೀಲ್ಡ್ ಹಾಗೂ ಕೊವಾಕ್ಸಿನ್ ಎಂಬ ಎರಡು ಬಗೆಯ ಲಸಿಕೆ ನೀಡಲಾಗುತ್ತಿದೆ, ಎರಡೂ ಲಸಿಕೆಗಳು ಕೊರೊನಾ ವಿರುದ್ಧ ಹೋರಾಡುವಲ್ಲಿ ಸಮರ್ಥವಾಗಿವೆ. ಎರಡೂ ಲಸಿಕೆಗಳೂ ಕೆಲವರಲ್ಲಿ ಅಡ್ಡ ಪರಿಣಾಮ ಉಂಟು ಮಾಡಿವೆ. ಆದರೆ ಕೊವಾಕ್ಸಿನ್ ಪಡೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟಿರುವುದು ವರದಿಯಾಗಿಲ್ಲ.

ಈ ರೀತಿ ಲಸಿಕೆ ಪಡೆದ ಬಳಿಕ ಯಾವಾಗ ಕಂಡು ಬರುತ್ತದೆ?
ಈ ರೀತಿ ರಕ್ತ ಹೆಪ್ಪು ಗಟ್ಟುವ ಸಮಸ್ಯೆ ಕೆಲವರಲ್ಲಿ ಕೊವಿಶೀಲ್ಡ್ ಮೊದಲ ಡೋಸ್ ಪಡೆದ ವಾರದ ಬಳಿಕ ಕಂಡು ಬರುತ್ತದೆ. ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವುದು ಕಂಡು ಬರುವುದು.

ರಕ್ತ ಹೆಪ್ಪುಗಟ್ಟಿದಾಗ ಕಂಡು ಬರುವ ಲಕ್ಷಣಗಳೇನು?
ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕ ತುಂಬಾ ತಲೆನೋವು, ತಲೆಸುತ್ತು, ವಾಂತಿ, ಹೊಟ್ಟೆ ನೋವು, ಉಸಿರಾಟಕ್ಕೆ ತೊಂದರೆ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರಿಗೆ ತಿಳಿಸಿ.
ಭಾರತದಲ್ಲಿ ಮಾರ್ಚ್ 31ರವರೆಗಿನ ಅಂಕಿ ಅಂಶದ ಪ್ರಕಾರ 700 ಜನರಲ್ಲಿ ಈ ರೀತಿಯ ಅಡ್ಡಪರಿಣಾಮ ಕಂಡು ಬಂದಿದೆ. ಅದರಲ್ಲಿ 617 ಜನರ ಸ್ಥಿತಿ ಗಂಭೀರವಾಗಿತ್ತು. 130 ಸಾವು ಸಂಭವಿಸಿದೆ.
ಭಾರತದಲ್ಲಿ ಮೇ 14ರವರೆಗೆ 18.4 ಕೋಟಿ ಜನರು ಲಸಿಕೆ ಪಡೆದಿದ್ದಾರೆ.

ರಷ್ಯಾದ ಸ್ಪುಟ್ನಿಕ್, ಭಾರತದ ZyCoV-D ಲಸಿಕೆ ಸಿಗಲಿದೆ
ರಷ್ಯಾದ ಸ್ಪುಟ್ನಿಕ್ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಆದರೆ ಇದನ್ನು ಮೊದಲಿಗೆ ಸ್ವಲ್ಪ ಜನರಿಗಷ್ಟೇ ನೀಡಲಾಗುವುದು. ಇನ್ನು ZyCoV-D ಲಸಿಕೆ ಭಾರತದಲ್ಲಿಯೇ ತಯಾರಾಗಿದ್ದು ಅನುಮತಿ ಸಿಕ್ಕರೆ ಜೂನ್‌ನಲ್ಲಿ ಲಭ್ಯವಾಗಲಿದೆ.
ಸಲಹೆ: ಅಡ್ಡಪರಿಣಾಮ ಕೆಲವೇ ಕೆಲವರಲ್ಲಿಷ್ಟೇ ಕಂಡು ಬಂದಿದೆ, ಆದರೆ ಲಸಿಕೆ ಪಡೆದವರು ಕೊರೊನಾ ಬಂದರೂ ಬೇಗನೆ ಚೇತರಿಸಿಕೊಂಡಿದ್ದಾರೆ ಎಂಬುವುದು ಸಾಬೀತಾಗಿದೆ. ಆದ್ದರಿಂದ ಲಸಿಕೆ ಪಡೆಯಿರಿ ಕೊರೊನಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ.



Click it and Unblock the Notifications











