Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮಾರ್ಬರ್ಗ್ ವೈರಸ್ ಪತ್ತೆ: ಈ ಮಾರಾಣಾಂತಿಕ ವೈರಸ್ ಲಕ್ಷಣಗಳೇನು?
ಕೊರೊನಾ, ಮಂಕಿಪಾಕ್ಸ್ ವೈರಸ್ ಜೊತೆಗೆ ಮಾರ್ಬರ್ಗ್ ವೈರಸ್ ಆತಂಕ ಎದುರಾಗಿದೆ. ಇದೀಗ ಪಶ್ಚಿಮ ಆಫ್ರಿಕಾದ ಘಾನಾದಲ್ಲಿ ಎರಡು ಮಾರ್ಬರ್ಗ್ ವೈರಸ್ ಪ್ರಕರಣಗಳು ಕಂಡು ಬಂದಿದೆ, ಈ ವೈರಸ್ ಅಪಾಯಕಾರಿ ಏಕೆಂದರೆ ಇದು ಭಯಾನಕ ಎಬೋಲಾ ರೋಗದಂತೆಯೇ ಮಾರಾಣಾಂತಿಕವಾಗಿದೆ. ಈ ಎರಡು ವೈರಸ್ ಪ್ರಕರಣಗಳು ಅಕ್ರಾದ 250 ಕಿ. ಮೀ ದೂರದಲ್ಲಿ ಕಂಡು ಬಂದಿದೆ.
ಮಾರ್ಬರ್ಗ್ ವೈರಸ್ ಲಕ್ಷಣಗಳು ಕಡು ಬಂದಿರುವ ಇಬ್ಬರು ವ್ಯಕ್ತಿಗಳ ರಕ್ತವನ್ನು ತೆಗೆದು ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮಾರಾಣಾಂತಿಕ ವೈರಸ್ ಕುರಿತ ಹೆಚ್ಚಿನ ಮಾಹಿತಿ ತಿಳಿಯೋಣ:

ರೋಗಿಗಳ ಸಂಪರ್ಕಿತದಲ್ಲಿದ್ದವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ
ಮಾರ್ಬರ್ಗ್ ವೈರಸ್ ಇಬ್ಬರಲ್ಲಿ ಕಂಡು ಬಂದಿದ್ದರೂ ಅವರ ಸಂಪರ್ಕದಲ್ಲಿದ್ದ 34 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಮಾರ್ಬರ್ಗ್ ವೈರಸ್ ತಗುಲಿದವರಲ್ಲಿ ಕಂಡು ಬಂದಿರುವ ಲಕ್ಷಣಗಳೇನು?
ಈ ವೈರಸ್ ತುಲಿದವರಲ್ಲಿ ಜ್ವರ, ಬೇಧಿ, ವಾಂತಿ, ತಲೆಸುತ್ತು ಈ ಬಗೆಯ ಲಕ್ಷಣಗಳು ಕಂಡು ಬಂದಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.

ಮಾರ್ಬರ್ಗ್ ವೈರಸ್ ಎಂದರೇನು?
ಮಾರ್ಬರ್ಗ್ ವೈರಸ್ ತಗುಲಿದರೆ ಹೆಮರಾಜ್ ಜ್ವರ ಉಂಟಾಗುತ್ತದೆ. ಈ ವೈರಸ್ ತಗುಲಿದರೆ ಸಾವಿನ ಸಾಧ್ಯತೆ ಶೇ.88ರಷ್ಟು ಇರುವುದಿಂದ ಈ ವೈರಸ್ ತುಂಬಾನೇ ಡೇಂಜರಸ್ ಆಗಿದೆ. ಇದು ಜಗತ್ತು ಕಂಡಿರುವ ಅತ್ಯಂತ ಭಯಾನಕ ಕಾಯಿಲೆಯಾದ ಎಬೋಲಾ ಗುಂಪಿಗೆ ಸೇರಿದ ವೈರಸ್ ಆಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಗಣಿ ಪ್ರದೇಶದಲ್ಲಿ ಅಥವಾ ಗುಹೆಯಲ್ಲಿ ಕೆಲಸ ಮಾಡುವವರಿಗೆ ಬಾವಲಿಗಳಿಂದ ಅಪಾಯ ಬರುವ ಅಪಾಯ ಹೆಚ್ಚು. ಈ ವೈರಸ್ ತಗುಲಿದ ವ್ಯಕ್ತಿಯ ನೇರ ಸಂಪರ್ಕದಿಂದ ಒಬ್ಬರಿಂದ ಮತ್ತೊಬ್ಬರಿಎ ಹರಡುತ್ತದೆ. ಅವರ ರಕ್ತ, ಎಂಜಲು, ಬೆವರು, ದೇಹದಲ್ಲಿನ ದ್ರವ (ಮಲ, ಮೂತ್ರ) ಇವುಗಳ ಮೂಲಕವೂ ವೈರಸ್ ಹರಡುತ್ತದೆ.

ಮಾರ್ಬರ್ಗ್ ರೋಗದ ಲಕ್ಷಣಗಳು
* ತುಂಬಾ ತಲೆನೋವು
* ಜ್ವರ
* ಮೈಕೈ ನೋವು
* ಬೇಧಿ
* ಕಿಬ್ಬೊಟ್ಟೆ ನೋವು
* ಹೊಟ್ಟೆ ತುಂಬಾ ನೋವಾಗುವುದು
* ವಾಂತಿ
* ತಲೆಸುತ್ತು
* ಮೈ ಮೇಲ ಗುಳ್ಳೆಗಳು ಕಂಡು ಬರುವುದು.

ರೋಗ ಲಕ್ಷಣಗಳು ಹೆಚ್ಚಾದಾಗ ಕಂಡು ಬರುವ ಲಕ್ಷಣಗಳು
* ಮೂಗು, ಗುದನಾಳ, ವಸಡಿನಲ್ಲಿ ರಕ್ತಸ್ರಾವ
* ತುಂಬಾ ಜ್ವರ
* ಗೊಂದಲ
* ಅಸ್ವಸ್ಥತೆ
* ಕೋಪ
ಚಿಕಿತ್ಸೆ
ಈ ವೈರಸ್ ಪರಿಣಾಮಕಾರಿಯಾದ ಚಿಕಿತ್ಸೆಯಿಲ್ಲ, ರೋಗ ಲಕ್ಷಣಗಳನ್ನು ನೋಡಿ ಅದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು. ರೋಗ ಲಕ್ಷಣಗಳು ಗಂಭೀರವಾದರೆ ವ್ಯಕ್ತಿ ಬದುಕುವ ಸಾಧ್ಯತೆ ತುಂಬಾ ಕಡಿಮೆ.



Click it and Unblock the Notifications
