Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ದೇಹದಲ್ಲಿ ಹುಣ್ಣು ಕೂಡ ಕೊರೊನಾ ಲಕ್ಷಣವಾಗಿದೆ, ನಿರ್ಲಕ್ಷ್ಯ ಬೇಡ
ಕೊರೊನಾ ಬಂದಾಗಿನಿಂದ ಯಾವುದು ಕೊರೊನಾ, ಯಾವುದು ಕೊರೊನಾವಲ್ಲ ಎಂಬಷ್ಟರ ಮಟ್ಟಿಗೆ ಅದರ ಲಕ್ಷಣಗಳು ಕಂಡು ಬರುತ್ತಿವೆ, ಹೊಸ-ಹೊಸ ಲಕ್ಷಣಗಳು ಕಂಡು ಬರುತ್ತಲೇ ಇವೆ. ಮೊದಲಿಗೆ ಕೆಮ್ಮು, ಜ್ವರ, ಉಸಿರಾಟದಲ್ಲಿ ತೊಂದರೆಯಿದ್ದರೆ ಕೊರೊನಾ ಪರೀಕ್ಷೆ ಮಾಡಿಸುವಂತೆ ತಜ್ಞರು ಸೂಚಿಸಿದ್ದರು.
ನಂತರ ರುಚಿ, ವಾಸನೆ ಕಳೆದುಕೊಳ್ಳುವುದು, ಕಾಲುಗಳಲ್ಲಿ ಗುಳ್ಳೆ ಮುಂತಾದ ಲಕ್ಷಣಗಳು ಕೂಡ ಕೊರೊನಾ ಲಕ್ಷಣಗಳು ಎಂಬುವುದು ತಿಳಿದು ಬಂದು. ಇತ್ತೀಚೆಗೆ ಬಾಯಲ್ಲಿ ಹುಣ್ಣು ಬಂದರೆ ಕೂಡ ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರು ಎಚ್ಚರಿಸಿದ್ದರು. ಇದೀಗ ಗ್ಯಾಂಗ್ರೀನ್ ಲಕ್ಷಣ ಕೂಡ ಕೊರೊನಾ ಲಕ್ಷಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯಲ್ಲಿ ನಡೆಸಿದ ಸಂಶೋಧನೆಯಿಂದ ತ್ವಚೆಯಲ್ಲಿ ಗ್ಯಾಂಗ್ರೀನ್ ಕಂಡು ಬಂದರೆ ಅದು ಕೋವಿಡ್ 19 ಲಕ್ಷಣವಾಗಿದೆ ಎಂದು ತಿಳಿದು ಬಂದಿದೆ.

ಕೇಸ್ ಸ್ಟಡಿ
ಕೇಸ್ ಸ್ಟಡಿಯಲ್ಲಿ 65 ವರ್ಷ ವ್ಯಕ್ತಿಯೊಬ್ಬರು ಗ್ಯಾಂಗ್ರೀನ್ ಲಕ್ಷಣಗಳಿಂದ ಆಸ್ಪತ್ರೆಗೆ ಬಂದಿದ್ದರು, ಅವರಿಗೆ ಮಧುಮೇಹ, ಬಿಪಿ ಮುಂತಾದ ಇತರ ಆರೋಗ್ಯ ಸಮಸ್ಯೆಗಳೇನು ಇರಲಿಲ್ಲ. ಆದರೆ ಉಸಿರಾಟದ ಸಮಸ್ಯೆಯಿತ್ತು, ಪರೀಕ್ಷಿಸಿದಾಗ ಕೋವಿಡ್ 19 ದೃಢಪಟ್ಟಿತ್ತು.

ಕೋವಿಡ್ 19ನಿಂದ ಹುಣ್ಣುಗಳಾಗುವುದೇಕೆ?
ರಕ್ತ ಸಂಚಾರ ಕಡಿಮೆಯಾದಾಗ ಅಂಗಾಂಗಗಳ ತ್ವಚೆಯಲ್ಲಿ ಹುಣ್ಣುಗಳು ಬರಲಾರಂಭಿಸುತ್ತದೆ. ಮಯೋ ಕ್ಲೀನಿಕ್ 'ಇದರಲ್ಲಿ ತ್ವಚೆಯಲ್ಲಿ ಬದಲಾವಣೆ, ನೋವು, ಊತ, ಹುಣ್ಣಿನಲ್ಲಿ ಕೆಟ್ಟ ವಾಸನೆ ಬರುತ್ತದೆ ಎಂದು' ಹೇಳಿದ್ದಾರೆ.
ಅಂಗಾಂಗಗಳಲ್ಲಿ ಹುಣ್ಣು ಮಾತ್ರ ಇದರಿಂದ ಬಹು ಅಂಗಾಂಗ ವೈಫಲ್ಯ ಆಗುವ ಸಾಧ್ಯತೆ ಕೂಡ ಇದೆ.

ಲಕ್ಷಣಗಳೇನು?
65 ವರ್ಷದ ಆ ಸೋಂಕಿತನಲ್ಲಿ ಮೊದಲಿಗೆ ಸುಸ್ತು, ಹುಣ್ಣು ಕಂಡು ಬಂತು, ಈ ರೀತಿ 10 ದಿನವಿತ್ತು, 5ನೇ ದಿನದ ಬಳಿಕ ಕೆಮ್ಮು, ಜ್ವರ ಕಂಡು ಬಂತು, ಅದಾದ ಬಳಿಕ ಅವರಲ್ಲಿ ಉಸಿರಾಟದ ತೊಂದರೆ ಕಂಡು ಬಂತು.

ಕೊನೆಯದಾಗಿ
ಕೋವಿಡ್ 19 ಸೋಂಕು ತಗುಲಿದಾಗ ತ್ವಚೆಯ ಬಣ್ಣದಲ್ಲಿ ವ್ಯತ್ಯಾಸ, ನೋವು, ರಕ್ತ ಹೆಪ್ಪುಗಟ್ಟುವುದು ಹುಣ್ಣು ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಒಂದು ವೇಳೆ ಈ ರೀತಿಯ ಲಕ್ಷಣಗಳು ಬಂದರೆ ಕೊರೊನಾ ಪರೀಕ್ಷೆ ಮಾಡಿಸಿ. ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ರೋಗಸ್ಥಿತಿ ಗಂಭೀರವಾಗುವುದನ್ನು ತಪ್ಪಿಸಬಹುದು.



Click it and Unblock the Notifications
