Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಜುಲೈ 15ರಿಂದ ಸಿಗಲಿದೆ ಫ್ರೀ ಬೂಸ್ಟರ್ ಲಸಿಕೆ: 18 ವರ್ಷ ಮೇಲ್ಪಟ್ಟವರು ಬೂಸ್ಟರ್ ಲಸಿಕೆಗೆ ಅರ್ಹರು
ದೇಶದಲ್ಲಿ ಕೊರೊನಾವೈರಸ್ ಹೆಚ್ಚಾಗುತ್ತಿರುವುದರಿಂದ ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಬೂಸ್ಟರ್ ನೀಡಲು ಮುಂದಾಗಿದೆ. ಈ ಬೂಸ್ಟರ್ ಡೋಸ್ ಅನ್ನು ಫ್ರೀಯಾಗಿ ನೀಡುವುದಾಗಿ ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಬೂಸ್ಟರ್ ಲಸಿಕೆ ಯಾವಾಗ ನೀಡಲಾಗುತ್ತಿದೆ, ಎಷ್ಟು ಸಮಯದವರೆ ಈ ಫ್ರೀ ಲಸಿಕೆ ನೀಡಲಾಗುವುದು ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ:

ಫ್ರೀ(ಉಚಿತ) ಬೂಸ್ಟರ್ ಲಸಿಕೆ ಯಾವಾಗ ದೊರೆಯಲಿದೆ?
ಭಾರತದಲ್ಲಿ ಫ್ರೀ ಬೂಸ್ಟರ್ ಲಸಿಕೆ ಜುಲೈ 15, 2022ರಿಂದ ಮುಂದಿನ 75 ದಿನಗಳವರೆಗೆ ದೊರೆಯಲಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಉಚಿತವಾಗಿ ಬೂಸ್ಟರ್ ಲಸಿಕೆ ಪಡೆಯಬಹುದಾಗಿದೆ.

ಆಜಾದಿ ಕಿ ಅಮೃತ್ ಮಹೋತ್ಸವ ಪ್ರಯೋಕ್ತ ಉಚಿತ ಬೂಸ್ಟರ್
ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ, ಸರ್ಕಾರದ ಆಜಾದಿ ಕಿ ಅಮೃತ್ ಮಹೋತ್ಸವ ಪ್ರಯೋಕ್ತ ಬೂಸ್ಟರ್ ಲಸಿಕೆಯನ್ನು ಉಚಿತವಾಗಿ ನೀಡಲು ಮುಂದಾಗಿದೆ.

77 ಕೋಟಿ ಜನರಿಗೆ ಲಸಿಕೆ ಸಿಗಲಿದೆ
ಸರ್ಕಾರವು 77 ಕೋಟಿ ಜನರಿಗೆ ಬೂಸ್ಟರ್ ಲಸಿಕೆ ನೀಡಲು ತೀರ್ಮಾನಿಸಿದ್ದು ಅದರಲ್ಲಿ 16 ಕೋಟಿ ಜನರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಸೆಕೆಂಡ್ ಡೋಸ್ ಬಳಿಕ ಬೂಸ್ಟರ್ ಡೋಸ್ ಯಾವಾಗ ತೆಗೆದುಕೊಳ್ಳಬೇಕು?
ಕೇಂದ್ರ ಆರೋಗ್ಯ ಇಲಾಖೆ ಸೆಕೆಂಡ್ ಡೋಸ್ ಬಳಿಕ ಬೂಸ್ಟರ್ ಡೊಸ್ ತೆಗೆದುಕೊಳ್ಳುವ ಅಂತರವನ್ನು 9 ತಿಂಗಳಿನಿಂದ 6 ತಿಂಗಳಿಗೆ ಇಳಿಸಿದೆ.

ಬೂಸ್ಟರ್ ಡೋಸ್ ಅವಶ್ಯಕ ಏಕೆ?
ICMR ಪ್ರಕಾರ ಸೆಕೆಂಡ್ ಡೋಸ್ ಲಸಿಕೆ ತೆಗೆದು 6 ತಿಂಗಳು ಕಳೆದ ಮೇಲೆ ಅದರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಕೊರೊನಾದ ಪಾಯ ಅದಿಕ, ಇದನ್ನು ತಡೆಗಟ್ಟಲು ಬೂಸ್ಟರ್ ಡೋಸ್ ಸಹಕಾರಿಯಾಗಿದೆ.



Click it and Unblock the Notifications
