Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕಾಲಿನಲ್ಲಿ ಊತ? ಕೊರೊನಾವೈರಸ್ ಲಕ್ಷಣವಾಗಿರಬಹುದು
ಕೊರೊನಾವೈರಸ್ ಈ ಪದ ಕೇಳುತ್ತಿದ್ದಂತೆ ಇಡೀ ವಿಶ್ವವೇ ಬೆಚ್ಚಿ ಬೀಳುತ್ತಿದೆ. ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಈ ವೈರಾಣು ಇದೀಗ ವಿಶ್ವದ ಎಲ್ಲೆಡೆ ವ್ಯಾಪಿಸಿದೆ. ಭಾರತದಲ್ಲಿ ಇದುವರೆಗೆ 13,835 ಜನರಿಗೆ ಕೋವಿಡ್ 19 ಕಾಯಿಲೆ ಬಾಧಿಸಿದ್ದು, ಸಾವಿನ ಸಂಖ್ಯೆ 450 ಆಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇರುವುದು ಆತಂಕ ಸೃಷ್ಟಿಸಿದೆ.

ಕೋವಿಡ್ 19 ಕಾಯಿಲೆ ಇರುವ ವ್ಯಕ್ತಿಗೆ ಪ್ರಾರಂಭದಲ್ಲಿ ಇದರ ಲಕ್ಷಣಗಳು ಗೋಚರಿಸದೇ ಇರುವುದೇ ಈ ಸೋಂಕು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಒಬ್ಬ ವ್ಯಕ್ತಿ ದೇಹಕ್ಕೆ ಕೊರೊನಾವೈರಸ್ ಸೇರಿದರೆ ಅದರ ಲಕ್ಷಣಗಳು ಕಂಡು ಬರಲು 2-14 ದಿನಗಳು ಬೇಕಾಗುವುದು. ಇದರೊಳಗೆ ಆ ಸೋಂಕಿತ ವ್ಯಕ್ತಿ ಮತ್ತೊಂದಿಷ್ಟು ಜನರಿಗೆ ಸೋಂಕು ಹರಡಿರುತ್ತಾನೆ.
ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ ಕಂಡು ಬರುವುದು ಕೊರೊನಾವೈರಸ್ ಸೋಂಕಿರುವ ಲಕ್ಷಣವಾಗಿದೆ. ಆದರೆ ದಿನಗಳು ಕಳೆಯುತ್ತಿದ್ದಂತೆ ಈ ವೈರಸ್ ಕುರಿತು ಇನ್ನು ಹಲವು ಮಾಹಿತಿಗಳು ದೊರೆಯುತ್ತಿದ್ದು ಕೊರೊನಾವೈರಸ್ ಸೋಂಕಿದರೆ ಪ್ರಾರಂಭದ ಹಂತದಲ್ಲಿ ಕಾಲುಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಕೋವಿಡ್ 19 ಲಕ್ಷಣಗಳು
ಕೊರೊನಾವೈರಸ್ ಸೋಂಕಿದಾಗ ಕೆಮ್ಮು, ಜ್ವರ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು, ಆದರೆ ಇತ್ತೀಚಿನ ಅಧ್ಯಯನ ವರದಿಗಳು ಕೆಲವೊಂದು ರೋಗಿಗಳ ಕಾಲಿನಲ್ಲಿ ವ್ಯತ್ಯಾಸ ಕಂಡು ಬರುವುದಾಗಿ ಹೇಳಿವೆ.
ಸ್ಪಾನಿಷ್ ಚರ್ಮರೋಗ ತಜ್ಞರ ಪ್ರಕಾರ ಕಾಲುಗಳಲ್ಲಿ ಊತ ಕೊರೊನಾವೈರಸ್‌ನ ಪ್ರಾರಂಭಿಕ ಲಕ್ಷಣವಾಗದೆ. ಸ್ಪೇನ್, ಫ್ರಾನ್ಸ್, ಇಟಲಿಯಲ್ಲಿ ಕೊರೊನಾವೈರಸ್ ಬಾಧಿತರಾದ ಚಿಕ್ಕ ಪ್ರಾಯದವರಲ್ಲೂ ಈ ಲಕ್ಷಣಗಳು ಕಂಡು ಬಂದಿರುವುದಾಗಿ ಅಧ್ಯಯನಗಳು ಹೇಳಿವೆ.
ಕೊರೊನಾವೈರಸ್ ಸೋಂಕಿದವರ ಪಾದಗಳಲ್ಲಿ ವ್ಯತ್ಯಾಸ ಕಂಡು ಬರುತ್ತವೆ. ಕೆಮ್ಮು-ಜ್ವರ ಕಾಣಿಸಿಕೊಳ್ಳುವ ಮೊದಲು ಪಾದಗಳಲ್ಲಿ ಊತ ಕಂಡು ಬರುವುದು. ಇದು ಕೊರೊನವೈರಸ್‌ನ ಪ್ರಾರಂಭಿಕ ಲಕ್ಷಣವಾಗಿದೆ.

ಕೇಸ್ ವರದಿ ಏನು ಹೇಳುತ್ತದೆ?
ದಿ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಪೋಡೋಲಾಜಿಸ್ಟ್‌ನ ವರದಿಯಲ್ಲಿ 13 ವರ್ಷದ ಬಾಲಕನಿಗೆ ಕಾಲುಗಳಲ್ಲಿ ಊತ ಕಂಡು ಬಂದಿತ್ತು, ನಂತರ ಕೊರೊನಾವೈರಸ್ ಲಕ್ಷಣಗಳು ಗೋಚರಿಸಿದೆವು ಎಂದು ಹೇಳಿದೆ.
ಹುಡುಗನಿಗೆ 38.5 °C ಜ್ವರವಿತ್ತು, ಸ್ನಾಯುಗಳಲ್ಲಿ ನೋವು, ತಲೆನೋವು, ತುರಿಕೆ, ಪಾದಗಳಲ್ಲಿ ನೋವು ಕಂಡು ಬಂದಿತ್ತು. ನಂತರ 6 ದಿನಗಳಲ್ಲಿ ಆತನಿಗೆ, ತಾಯಿಗೆ, ಸಹೋದರಿಗೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.
ಕೋವಿಡ್ 19 ಬಾಧಿತರಲ್ಲಿ ಚರ್ಮದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ.

ಅಧ್ಯಯನಗಳು ಏನು ಹೇಳಿವೆ?
ಇಟಲಿಯಲ್ಲಿ ಕೊರೊನಾವೈರಸ್ ಬಾಧಿತರಲ್ಲಿ 5ರಲ್ಲಿ ಒಬ್ಬ ರೋಗಿಯಲ್ಲಿ ಕಾಲುಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಕೊರೊನಾವೈರಸ್ ಸೋಂಕು ಇರುವವರಲ್ಲಿ ಶೇ. 20.5ರಷ್ಟು ಜನರಲ್ಲಿ ಈ ಲಕ್ಷಣಗಳು ಗೋಚರಿಸಿದ್ದೆವು. ಇವರಿಗೆಲ್ಲಾ ಕೋವಿಡ್ 19 ಲಕ್ಷಣಗಳು ಗೋಚರಿಸುವ ಮೊದಲೇ ಈ ಲಕ್ಷಣಗಳು ಗೋಚರಿಸಿದ್ದೆವು. ಅದರಲ್ಲೂ ಕಾಲುಗಳಲ್ಲಿ ಊತ ಕಂಡು ಬಂದಿದ್ದ ಶೆ,78ರಷ್ಟು ಜನರಲ್ಲಿ ಕಾಲುಗಳಲ್ಲಿ ಕೆಂಪು ಗುಳ್ಳೆಗಳು ಕಂಡು ಬಂದಿದ್ದೆವು.

ಪರಿಣಿತರ ಸಲಹೆ ಏನು?
ಕೊರೊನಾವೈರಸ್ ಸೋಂಕಿನ ಲಕ್ಷಣಗಳ ಕಡೆ ಪ್ರಾರಂಭದಲ್ಲಿಯೇ ಹೆಚ್ಚಿನ ಗಮನ ನೀಡಿದರೆ ಅಪಾಯ ಹೆಚ್ಚಾಗುವುದನ್ನು ತಪ್ಪಿಸಬಹುದು. ಆದ್ದರಿಂದ ಜನರು ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬೇಕು. ಕಾಲುಗಳಲ್ಲಿ ಊತ, ಮೈಕೈ ನೋವು ಕಮಡು ಬಂದರೂ ಅದು ಕೂಡ ಕೊರೊನಾ ವೈರಸ್ ಸೋಂಕು ಆಗಿರಬಹುದು.
ದೇಹದಲ್ಲಿ ವ್ಯತ್ಯಾಸ ಕೂಡಲೇ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿ. ಇದರಿಂದ ಕಾಯಿಲೆಯಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚು.

ಕೊರೊನಾವೈರಸ್ ತಡೆಗಟ್ಟಿ
ಕೊರೊನಾವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಬೇರೆಯವರ ಸಂಪರ್ಕದಿಂದ ಬೇರೆಯಾಗಿ ಪ್ರತ್ಯೇಕ ಕೋಣೆಯಲ್ಲಿದ್ದು, ಕೂಡಲೇ ವೈದ್ಯರಿಗೆ ಕರೆ ಮಾಡಿ ತಿಳಿಸಿ.
ಮಕ್ಕಳನ್ನು ಹೊರಗಡೆ ಆಡಲು ಬಿಡಬೇಡಿ, ಮನೆಗೆ ಯಾರನ್ನೂ ಆಹ್ವಾನಿಸಬೇಡಿ, ನೀವೂ ಎಲ್ಲೂ ಹೋಗಬೇಡಿ, ಎಲ್ಲರೂ ಒಟ್ಟಾಗಿ ಕೊರೊನಾವೈರಸ್ ಹರಡದಂತೆ ತಡೆಯೋಣ.



Click it and Unblock the Notifications











