Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
Ebola Virus : ಕೊರೊನಾವೈರಸ್ ಜೊತೆಗೆ ಮತ್ತೆ ಕಾಡಿದ ಎಬೋಲಾ ಭೀತಿ
ಇಡೀ ವಿಶ್ವವೇ ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗುನಿಂದ ತ್ತರಿಸುತ್ತಿರುವಾಗಲೇ ಈ ಹಿಂದೆ ಕಾಣಿಸಿಕೊಂಡು ಸಾವಿಗಟ್ಟಲೆ ಜನರ ಬಲಿಪಡೆದಿದ್ದ ಮತ್ತೊಂದು ಸಾಂಕ್ರಾಮಿಕ ಪಿಡುಗು ಎಬೋಲಾದ ಭಯ ಶುರುವಾಗಿದೆ.

ಮಧ್ಯಪ್ರದೇಶದ ಕಾಂಗೋದಲ್ಲಿ ಏಪ್ರಿಲ್ 10ರಷ್ಟರಲ್ಲಿ 3456 ಜನರಲ್ಲಿ ರೋಗ ಕಂಡು ಬಂದಿದ್ದು, 2276 ಜನರು ಸಾವನ್ನಪ್ಪಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಎಬೋಲಾ ಎಂದರೇನು?:
ಈ ಮಹಾಮಾರಿ 1976ರಲ್ಲಿ ಕಾಂಗೋದ ಎಬೋಲಾ ನದಿ ತೀರದ ಪ್ರದೇಶದಲ್ಲಿ ಪತ್ತೆಯಾದ ವೈರಾಣು ಆದ ಕಾರಣ ಇದಕ್ಕೆ ಎಬೋಲಾ ಎಂಬ ಹೆಸರು ಬಂತು. ಪೀಟರ್ ಪೈಯೋಟ್ ಎಂಬವರು ಎಬೋಲಾ ವೈರಸನ್ನು ಪತ್ತೆ ಹಚ್ಚಿದ್ದರು. ಎಬೋಲಾವನ್ನು ಅತ್ಯಂತ ಅಪಾಯಕಾರಿಯಾಗಿರುವ ವೈರಸ್ ಎಂದು ಹೇಳಲಾಗಿತ್ತು, ಈಗ ಅದರ ಜೊತೆಗೆ ಕೊರೊನಾ ವೈರಸ್ ಕೂಡ ಸೇರ್ಪಡೆಯಾಗಿದೆ . ಎಬೋಲಾ ವೈರಸ್ ರೋಗವು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಮತ್ತು ಸಸ್ತನಿಗಳಲ್ಲಿ ಗಂಭೀರ ಸ್ಥಿತಿಯನ್ನುಂಟುಮಾಡುವ ಮಾರಕ ಸ್ಥಿತಿಯಾಗಿದೆ. ಇದರಲ್ಲಿ ಕೊರೊನಾವೈರಸ್‌ಗಿಂತ ಸಾವಿನ ಪ್ರಮಾಣ ಅಧಿಕ.
ಎಬೋಲಾ ಎಂಬ ಸೋಂಕು ತಗುಲಿದವರಿಗೆ ರಕ್ತಸ್ರಾವದಿಂದ ಕೂಡಿದ ಜ್ವರ ಕಾಣಿಸಿಕೊಳ್ಳುವುದು. ಇದು ಫಿಲೋವಿರಿಡೆ ಕುಟುಂಬದ ವೈರಸ್ ಸೋಂಕಿನಿಂದ ಉಂಟಾಗುತ್ತದೆ ಎಂದು ಹೇಳಲಾಗಿದೆ. ಎಬೋಲಾ ವೈರಸ್ ಕುಟುಂಬಕ್ಕೆ ಸೇರಿದ್ದು ಎಂದು ಹೇಳಲಾಗುವುದು. ಎಬೋಲಾ ಸೋಂಕಿನ ಪ್ರಾಣವು ಆಯಾಸವನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ. ಉದಾಹರಣೆಗೆ: ಎಬೋಲಾ ಝೈರ್ ಪ್ರತಿಶತ 90ರಷ್ಟು ಮಾರಣಾಂತಿಕ ಅಪಾಯವನ್ನು ತರುವುದು. ಅದೇ ಎಬೋಲಾ ರೆಸ್ಟನ್ ಎನ್ನುವ ಸೋಂಕಿನಿಂದ ಬರುವ ಜ್ವರವು ಮರಣವನ್ನು ಉಂಟುಮಾಡುವುದಿಲ್ಲ ಎಂದು ಅಂದಾಜಿಸಲಾಗಿದೆ.
ಇದು ಕೋತಿ, ಗೊರಿಲ್ಲಾ, ಚಿಂಪಾಂಜಿ, ಬಾವಲಿಗಳ ಮೂಲಕ ಹರಡುವ ರೋಗ.

ಎಬೋಲಾ ರೋಗದ ಲಕ್ಷಣಗಳೇನು
- ತೀವ್ರ ತಲೆನೋವು
- ಗಂಟಲು ಕೆರೆತ
- ಸ್ನಾಯುಗಳಲ್ಲಿ ನೋವು
- ತೀವ್ರ ಜ್ವರ
- ಹೊಟ್ಟೆನೋವು
- ದೇಹದಲ್ಲಿ ಗುಳ್ಳೆಗಳು
- ಕಾಯಿಲೆ ಉಲ್ಬಣಗೊಂಡಾಗ ಕಿವಿ, ಮೂಗಿನ ಮೂಲಕ ರಕ್ತ ಸೋರಿಕೆಯಾಗುತ್ತದೆ
- ಕಣ್ಣು ಕೆಂಪಾಗುವುದು
- ಕೆಮ್ಮು
- ಎದೆ ನೋವು
- ತೀವ್ರ ಉಸಿರಾಟದ ತೊಂದರೆ
- ಎಂಜಲು ನುಂಗಲು ತೊಂದರೆ
- ಇದು ಕೊರೊನಾವೈರಸ್ ರೀತಿಯಲ್ಲಿಯೇ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುತ್ತದೆ.
- ಕಾಯಿಲೆ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಆ ಮೂಲಕ ಹರಡುತ್ತದೆ.
- ಸೋಂಕಿತ ರೋಗಿಯ ರಕ್ತ, ಬೆವರು, ವಾಂತಿ, ಮೂತ್ರ, ವೀರ್ಯದ ಸಂಪರ್ಕದಿಂದ ಕೂಡ ಈ ಮಹಾಮಾರಿ ಹಬ್ಬುವುದು.
- ರೋಗಿ ಇರುವ ಕೋಣೆಯನ್ನು ಕ್ರಿಮಿನಾಶಕಗಳಿಂದ ಸ್ಯಾನಿಟೈಸ್ ಮಾಡಬೇಕು ಹಾಗೂ ಸತ್ತ ಮೇಲೆ ಆ ಕೋಣೆ, ಆಸ್ಪತ್ರೆಗೆ ಕ್ರಿಮಿನಾಶಕ ಸಿಂಪಡಿಸಬೇಕು.
- ಅವರಿಗೆ ಬಳಸಿದ ಸೂಚಿ ಮತ್ತಿತರ ವಸ್ತುಗಳನ್ನುಸ ರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು.
- ಕೊರೊನಾವೈರಸ್ ಹಾಗೆಯೇ ಇದು ಸಂಪರ್ಕಕದಲ್ಲಿರುವ ವ್ಯಕ್ತಿಗೆ ಹರಡುವುದರಿಂದ ಅವರನ್ನು ಕೂಡ ಐಸೋಲೇಷನ್‌ನಲ್ಲಿ ಇಡಬೇಕು.
- ಈ ರೋಗ ಆಸ್ಪತ್ರೆಗೆ ಸಿಬ್ಬಂದಿಗೂ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಅವರು ಸಂಪೂರ್ಣ ರಕ್ಷಾ ಕವಚ ಧರಿಸಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಕೆಲವು ರೋಗಿಗಳು ಈ ರೀತಿಯ ಲಕ್ಷಣಗಳನ್ನು ಅನುಭವಿಸಬಹುದು:

ಹರಡುವ ರೀತಿ

ಸಾವಿನ ಸಂಖ್ಯೆ
ಕೊರೊನಾವೈರಸ್‌ನಲ್ಲಿ ಸಾವಿನ ಸಂಖ್ಯೆ ಶೇ. 3-4 ರಷ್ಟಾದರೆ, ಎಬೋಲಾ ಬಂದ 10 ವ್ಯಕ್ತಿಗಳಲ್ಲಿ 9 ವ್ಯಕ್ತಿಗಳು ಸಾವನ್ನಪ್ಪುವ ಸಾಧ್ಯತೆ ಇದೆ. ಆದ್ದರಿಂದಲೇ ಇದು ಅತ್ಯಂತ ಅಪಾಯಕಾರಿ ವೈರಸ್ ಆಗಿದೆ. ಈ ವೈರಸ್ ವ್ಯಕ್ತಿಯ ದೇಹ ಸೇರಿದ 2ರಿಂದ 21 ದಿನಗಳ ಒಳಗೆ ರೋಗ ಲಕ್ಷಣಗಳು ಕಂಡು ಬರುತ್ತದೆ, ಅದಾಗಿ 16 ದಿನದ ಒಳಗೆ ಸಾವು ಸಂಭವಿಸುವುದು. ಈ ರೋಗ ಹರಡದಿರಲು ಕೂಡ ಐಸೋಲೇಷನ್ ಅಂದರೆ ರೋಗಿಯನ್ನು ಪ್ರತ್ಯೇಕವಾಗಿರಿಸಬೇಕು.
ರೋಗಿ ಸತ್ತರೂ ವೈರಾಣುಗಳು ಜೀವಿಸುತ್ತದೆ
ಈ ಕಾಯಿಲೆ ಬಂದ ವ್ಯಕ್ತಿ ಸತ್ತು 7 ದಿನಗಳವರೆಗೆ ಆತನ ದೇಹದಲ್ಲಿ ವೈರಾಣು ಜೀವಂತವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವ್ಯಕ್ತಿಯನ್ನು ಸುಟ್ಟರೂ ರೋಗಾಣು ಹರಡುವ ಸಾಧ್ಯತೆ ಇದೆ. ಆದ್ದರಿಂದ ಸತ್ತ ವ್ಯಕ್ತಿಯ ಅಂತಿಮ ಸಂಸ್ಕಾರ ಮಾಡುವಾಗ ಔಷಧಿ ಸಿಂಪಡಿಸಿ, ತುಂಬಾ ಜಾಗ್ರತೆವಹಿಸಿ ಮಾಡಲಾಗುವುದು.

ಎಬೋಲಾಗೆ ಚಿಕಿತ್ಸೆ ಇದೆಯೇ?
ಎಬೋಲಾಗೆ ಕೂಡ ಪ್ರಸ್ತುತ ಯಾವುದೇ ಪರವಾನಗಿ ಪಡೆದ ಲಸಿಕೆ ಲಭ್ಯವಿಲ್ಲ.ಹಲವರು ಲಸಿಕೆಗಳನ್ನು ಪರೀಕ್ಷೆಗೆ ಒಳಪಡಿಸಿದ್ದರೂ ಆದರೆ ಪ್ರಸ್ತುತವಾಗಿ ಯಾವುದೂ ಕ್ಲಿನಿಕಲ್ ಬಳಕೆಗೆ ಲಭ್ಯವಿಲ್ಲ.
ಎಬೋಲಾ ತಡೆಗಟ್ಟುವುದು ಹೇಗೆ?
ಎಲ್ಲಾ ಆರೋಗ್ಯ ಕಾರ್ಯಕರ್ತರು ರಕ್ಷಣಾತ್ಮಕ ಉಡುಪುಗಳನ್ನು ಧರಿಸಬೇಕು.
ಯಾರಿಗೆ ಅಪಾಯ ಹೆಚ್ಚು?
ಎಬೋಲಾ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಬೇಗನೆ ದಾಳಿ ಮಾಡುತ್ತದೆ. ಮೂತ್ರ ಪಿಂಡ, ಪಿತ್ತ ಜನಕಾಂಗ, ವೈಫಲ್ಯ, ಹೆಚ್‌ಐವಿ ಇವರಿಗೆ ಈ ರೋಗ ಬೇಗನೆ ಹರಡುತ್ತದೆ.
ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿಇದು ಪ್ರಾಣಿಗಳಿಂದ ಕೂಡ ಹರಡುವುದರಿಂದ ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು.



Click it and Unblock the Notifications
