For Quick Alerts
ALLOW NOTIFICATIONS  
For Daily Alerts

ಒಣಕೆಮ್ಮು ಕೊರೊನಾವೈರಸ್ ಲಕ್ಷಣವಾಗಿರಬಹುದೇ?

|

ಕೊರೊನಾವೈರಸ್‌ ಎಂದರೇನು? ಇದರ ಲಕ್ಷಣಗಳ ಬಗ್ಗೆ ಈ ಹಿಂದಿನ ಅನೇಕ ಲೇಖನದಲ್ಲಿ ಹೇಳಲಾಗಿದೆ. ಆದರೂ ಸಾಧಾರಣ ಜ್ವರ, ಕೆಮ್ಮು, ಶೀತ ಬಂದರೂ ಕೊರೊನಾವೈರಸ್‌ ಇರಬಹುದು ಎಂಬ ಆತಂಕ ಕಾಡುವುದು ಸಹಜ.

Dry Cough Is The Symptoms Of Coronavirus

ಜ್ವರ, ಒಣ ಕೆಮ್ಮು, ಉಸಿರಾಟದಲ್ಲಿ ತೊಂದರೆ ಇವು ಕೊರೊನಾವೈರಸ್‌ನ ಪ್ರಮುಖ ಲಕ್ಷಣವಾಗಿದೆ. ಒಣ ಕೆಮ್ಮು ಮೂಲಕವೇ ಕೊರೊನವೈರಸ್ ಲಕ್ಷಣ ಕಂಡು ಹಿಡಿಯಬಹುದು. ಈ ಕೆಮ್ಮು ಕಫ ಕೆಮ್ಮುಗಿಂತ ಹೇಗೆ ಭಿನ್ನವಾಗಿರುತ್ತದೆ ಎಂದು ಹೇಳಲಾಗಿದೆ ನೋಡಿ.

ಒಣ ಕೆಮ್ಮು ಎಂದರೇನು?

ಒಣ ಕೆಮ್ಮು ಎಂದರೇನು?

ಒಣಕೆಮ್ಮು ಎಂದರೆ ಕೆಮ್ಮಿದಾಗ ಯಾವುದೇ ಕಫ ಉಂಟಾಗುವುದಿಲ್ಲ. ಇದು ಬಂದಾಗ ಗಂಟಲಿನಲ್ಲಿ ತುರಿಕೆ ಹಾಗೂ ಉರಿಯೂತ ಉಂಟಾಗುವುದು. ಇಂಥ ಕೆಮ್ಮು ಸಾಮಾನ್ಯವಾಗಿ ಅಸ್ತಮಾ, ಜಠರ ಹಿಮ್ಮುಖ ಹರಿವು ರೋಗ(GERD), ವೈರಲ್ ಸೋಂಕು, ಪೋಸ್ಟ್ನಾಸಲ್ ಡ್ರಿಪ್, ಶ್ವಾಸಕೋಶದ ಕ್ಯಾನ್ಸರ್, ಹೃದಯ ವೈಫಲ್ಯ ಇವೆಲ್ಲಾ ಒಣ ಕೆಮ್ಮಿಗೆ ಪ್ರಮುಖ ಕಾರಣಗಳು.

ಕೆಮ್ಮು ಮತ್ತು ಕಫ

ಕೆಮ್ಮು ಮತ್ತು ಕಫ

ಇದರಲ್ಲಿ ಎದೆ ಭಾಗದಲ್ಲಿ ಕಫ ಸಂಗ್ರಹವಾಗುತ್ತದೆ ಹಾಗೂ ಕೆಮ್ಮುವಾಗ ಕಫ ಕೂಡ ಬರುತ್ತದೆ. ಕಫ ತುಂಬಿದರೆ ಉಸಿರಾಟದ ಶಬ್ದದಲ್ಲಿಯೇ ತಿಳಿಯುತ್ತದೆ. ಈ ರೀತಿಯ ಕಫ ಬ್ಯಾಕ್ಟಿರಿಯಾ ವೈರಸ್, ಸಾಮಾನ್ಯ ಶೀತ, ಜ್ವರ, ಅಸ್ತಮಾ, ಸಿಸ್ಟಿಕ್ ಫಿಬ್ರೋಸಿಸ್ ಇರುವವರಿಗೆ ಕಂಡು ಬರುವುದು.

ಕೊರೊನಾ ವೈರಸ್ ಬಗ್ಗೆ ಅಧ್ಯಯನ ಏನು ಹೇಳುತ್ತದೆ?

ಕೊರೊನಾ ವೈರಸ್ ಬಗ್ಗೆ ಅಧ್ಯಯನ ಏನು ಹೇಳುತ್ತದೆ?

ಜರ್ನಲ್‌ ಆಫ್ ಲ್ಯಾನ್ಸಂಟ್‌ನಲ್ಲಿ ಪ್ರಕಟವಾದ ವರಸಿ ಪ್ರಕಾರ ಕೊರೊನಾವೈರಸ್ ಸೋಂಕಿತ 36 ಮಕ್ಕಳಲ್ಲಿ 13 ಮಕ್ಕಳಲ್ಲಿ ಜ್ವರ ಹಾಗೂ 7 ಮಕ್ಕಳಲ್ಲಿ ಒಣ ಕೆಮ್ಮು ಕಾಣಿಸಿಕೊಂಡಿತ್ತು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಫೆಬ್ರವರಿ 20ರವರೆಗೆ ಕೊರೊನಾವೈರಸ್ ಸೋಂಕಿತ 55924 ಜನರಲ್ಲಿ ಶೇ. 87.9ರಷ್ಟು ಜನರಲ್ಲಿ ಜ್ವರ ಮತ್ತು ಶೇ. 67.7ರಷ್ಟು ಜನರಲ್ಲಿ ಒಣ ಕೆಮ್ಮು ಕಾಣಿಸಿಕೊಂಡಿತ್ತು.

ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

ಯಾವಾಗ ವೈದ್ಯರನ್ನು ಭೇಟಿಯಾಗಬೇಕು?

ತುಂಬಾ ಒಣಕೆಮ್ಮು ಇದ್ದು ಉಸಿರಾಡಲು ತೊಂದರೆಯಾಗುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ. ಕೆಮ್ಮು ಬಂದ ತಕ್ಷಣ ಮುಖಕ್ಕೆ ಮಾಸ್ಕ್‌ ಧರಿಸಿ, ಅದು ಇತರರಿಗೆ ಹರಡದಂತೆ ತಡೆಗಟ್ಟಿ.

ಕೊರೊನಾವೈರಸ್ ಸದ್ಯದ ಪರಿಸ್ಥಿತಿ ಹೇಗಿದೆ?

ಕೊರೊನಾವೈರಸ್ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗಾಗಲೇ 3500ರ ಗಡಿ . ಸ್ವಲ್ಪ ದಿನ ಮನೆಯಲ್ಲಿಯೇ ಇರುವುದೇ ಈ ರೋಗವನ್ನು ತಡೆಯಲು ಇರುವ ಏಕೈಕ ದಾರಿಯಾಗಿದೆ.

English summary

Dry Cough Is The Symptoms Of Coronavirus

So much has been talked about the symptoms of coronavirus and their appearance. By now, you know that fever, shortness of breath and dry cough are the typical symptoms of novel coronavirus.
Story first published: Monday, April 6, 2020, 9:41 [IST]
X
Desktop Bottom Promotion