Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಧ್ಯಯನ ವರದಿ: ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವ ಡಾರ್ಕ್ ಚಾಕೋಲೇಟ್, ಗ್ರೀನ್ ಟೀ
ಕೊರೊನಾ ಎಂಬ ಮಹಾಮಾರಿ ಮಣಿಸಲು ಚುಚ್ಚುಮದ್ದು ಬಂದಿರುವುದರಿಂದ ಜಗತ್ತು ಸ್ವಲ್ಪ ನಿಟ್ಟುಸಿರು ಬಿಟ್ಟಿದೆ. ಭಾರತದಲ್ಲಿ ಈ ಔಷಧ ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಕೊರೊನಾ ವೈರಸ್ ಮಣಿಸಲು ಆಯುರ್ವೇದದಲ್ಲೂ ಔಷಧಿಯನ್ನು ಸೂಚಿಸಲಾಗಿದೆ.

ಕೊರೊನಾವೈರಸ್ ನಾಶಪಡಿಲು ನೈಸರ್ಗಿಕವಾದ, ಗಿಡ ಮೂಲಿಕೆ ಚಿಕಿತ್ಸೆಯಿಂದ ಸಾಧ್ಯವಿದೆಯೇ ಎಂಬುವುದರ ಕುರಿತು ನಾರ್ಥ್ ಕ್ಯಾರೋಲಿನಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಂಶೋಧನೆ ಮಾಡಲಾಯಿತು. ಆಗ ಗ್ರೀನ್ ಟೀ, ಡಾರ್ಕ್ ಚಾಕೋಲೇಟ್, ದ್ರಾಕ್ಷಿ ಈ ರೀತಿಯ ಆಹಾರಗಳು ಕೊರೊನಾವೈರಸ್ ತಡೆಗಟ್ಟಲು ಸಹಕಾರಿಯಾಗಿದೆ ಎಂದು ತಿಳಿದು ಬಂದಿದೆ.

ಡಾರ್ಕ್ ಚಾಕೋಲೇಟ್, ಗ್ರೀನ್ ಟೀ, ದ್ರಾಕ್ಷಿ ಕೊರೊನಾವೈರಸ್ ತಡೆಗಟ್ಟಲು ಹೇಗೆ ಸಹಕಾರಿ?
ಚಾಕೋಲೇಟ್, ಗ್ರೀನ್ ಟೀ, ದ್ರಾಕ್ಷಿ ಇವುಗಳಲ್ಲಿ ಪೈಟೋನ್ಯೂಟ್ರಿಯಂಟ್ ಅಂಶವಿದ್ದು ಇದು ಕೊರೊನಾವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟುತ್ತದೆ.

ಹೇಗೆ?
ನಾರ್ಥ್ ಕ್ಯಾರೋಲಿನಾ ಸ್ಟೇಟ್ ಯೂನಿರ್ವಸಿಟಿಯಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದ ಅಂಶವೆಂದರೆ ಗ್ರೀನ್ ಟೀ, ಡಾರ್ಕ್ ಚಾಕೋಲೇಟ್, ದ್ರಾಕ್ಷಿಯಲ್ಲಿ ಪೈಟೋನ್ಯೂಟ್ರಿಯಂಟ್ಸ್ ಅಂದರೆ flavanols ಮತ್ತು proanthocyanidins ಅಂಶವಿದ್ದು ಇದನ್ನು ನೋವೆಲ್ ಕೊರೊನಾವೈರಸ್‌ನಲ್ಲಿರು MPro ಚಟುವಟಿಕೆ ನಿಯಂತ್ರಿಸುವುದರಿಂದ ಕೊರೊನಾವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟುತ್ತದೆ.

ಕೊರೊನಾವೈರಸ್ ಚಟುವಟಿಕೆ ನಿಯಂತ್ರಿಸುವ ಆಹಾರಗಳು
* ಕೋಕೋ ಬೀಜದ ಪುಡಿ
* ಡಾರ್ಕ್ ಚಾಕೋಲೇಟ್
* ಗ್ರೀನ್ ಟೀ
* ದ್ರಾಕ್ಷಿ
* ಕ್ರ್ಯಾನ್‌ಬೆರ್ರಿ ಜ್ಯೂಸ್
* ದಾಳಿಂಬೆ ಜ್ಯೂಸ್
(ಈ ಜ್ಯೂಸ್‌ಗಳು ಕೊರೊನಾವೈರಸ್ ಚಟುವಟಿಕೆಯನ್ನು 10 ಪಟ್ಟು ನಿಯಂತ್ರಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ).

ಅಧ್ಯಯನ ವರದಿ
ಸಂಶೋಧನೆಗಾಗಿ ವಿಜ್ಞಾನಿಗಳು 5 ಸಸ್ಯಗಳ ಅಂಶವನ್ನು ಬೇರ್ಪಡಿಸಿ ಸಂಶೋಧನೆಗೆ ಒಳಪಡಿಸಲಾಯಿತು. ಕೋಕಾ ಬೀಜ ಪುಡಿ, ಡಾರ್ಕ್ ಚಾಕೋಲೇಟ್, ಗ್ರೀನ್ ಹಾಊ 2 ಬಗೆಯ ದ್ರಾಕ್ಷಿಯ ಬೀಜ ಹಾಗೂ ಅದರ ಸಿಪ್ಪೆಯನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಆಗ ಇವುಗಳಲ್ಲಿರುವ ಪೈಟೋನ್ಯೂಟ್ರಿಯಂಟ್ ಅಂಶ ಕೊರೊನಾವೈರಸ್ ಚಟುವಟಿಕೆ ನಿಯಂತ್ರಿಸುವುದು ತಿಳಿದು ಬಂತು.



Click it and Unblock the Notifications
