Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಭಾರತದಲ್ಲಿ ನೊವಾವ್ಯಾಕ್ಸ್, ಕೋರ್ಬೆವ್ಯಾಕ್ಸ್‌ಗೆ ಅನುಮತಿ: ಇದರಿಂದ ಮಕ್ಕಳಿಗೆ ಸಿಗಲಿದೆ ಕೊರೊನಾ ಲಸಿಕೆ
ಕೊರೊನಾ ಆತಂಕ ಮುಗೀತು ಎಂದು ಒಂದೆರಡು ತಿಂಗಳು ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಈಗಾಗಲೇ ಒಮಿಕ್ರಾನ್ ಸಂಖ್ಯೆ 650 ದಾಟಿದೆ. ಒಮಿಕ್ರಾನ್ ಹೀಗೆ ಹೆಚ್ಚಾದರೆ ಕೊರೊನಾ 3ನೇ ಅಲೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ಇದನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ, ಬೂಸ್ಟರ್ ಲಸಿಕೆ ನೀಡಲು ಮುಂದಾಗಿದೆ ಅದಕ್ಕೆ ಪ್ರಿಕಾಷನ್ ಡೋಸ್ ಎಮದು ಕರೆಯಲಾಗಿದೆ. ಇದನ್ನು ಮೊದಲಿಗೆ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕರ್ಸ್ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು, ಅಲ್ಲದೆ15-18 ವರ್ಷದವರಿಗೆ ಕೂಡ 2022ರಿಂದ ಲಸಿಕೆ ಸಿಗಲಿದೆ. 15-18 ವರ್ಷದವರಿಗೆ ಕೊವಾಕ್ಸಿನ್ ಅಥವಾ ZyCoV-D ಲಸಿಕೆ ನೀಡಲಾಗುವುದು.
ಅದಕ್ಕಿಂತ ಚಿಕ್ಕ ಮಕ್ಕಳಿಗೆ ನೀಡಲು ಕೋವಾವ್ಯಾಕ್ಸ್ ಮತ್ತು ಕೋರ್ಬೆವ್ಯಾಕ್ಸ್ ಲಸಿಕೆಗಳ ಟ್ರಯಲ್ ನಡೆಯುತ್ತಿತ್ತು, ಆ ಔಷಧಗಳನ್ನು ಬಳಸಲು ಭಾರತದಲ್ಲಿ ಅನುಮತಿ ಸಿಕ್ಕಿದೆ ಎಂದು ಆರೋಗ್ಯ ಮಂತ್ರಿ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...
ನೊವಾವ್ಯಾಕ್ಸ್, ಕೋರ್ಬೆವ್ಯಾಕ್ಸ್‌ಗೆ ಅನುಮತಿ
7-11 ವರ್ಷದ ಮಕ್ಕಳಿಗೆ ಸೆರಮ್ ಇನ್ಸಿಟ್ಯೂಟ್‌ನ ನೊವಾವ್ಯಾಕ್ಸ್‌ಗೆ, 5 ವರ್ಷದ ಮೇಲಿನ ಮಕ್ಕಳಿಗೆ ಬಯೋಲಾಜಿಕಲ್ E's Corbevaxಗೆ ಸುರಕ್ಷಿತವಾದ ಲಸಿಕೆ ಎಂದು ಡ್ರಗ್ ಕಂಟ್ರೋಲರ್ (ಔಷಧ ನಿಯಂತ್ರಕ ಸಂಸ್ಥೆ) ಅನುಮತಿ ನೀಡಿತ್ತು. ಇದೀಗ ಈ ಔಷಧಗಳನ್ನು ಬಳಸಲು ಭಾರತದಲ್ಲಿ ಅನುಮತಿ ಸಿಕ್ಕಿದೆ.
ಕೊರೊನಾ ವಿರುದ್ಧ ಹೋರಾಡಲು ಭಾರತ ಮತ್ತಷ್ಟು ಶಕ್ತವಾಗಲಿದೆ
18 ವರ್ಷ ಮೇಲ್ಪಟ್ಟವರಲ್ಲಿ ಬಹುಪಾಲು ಜನರಿಗೆ ಎರಡು ಡೋಸ್ ಲಸಿಕೆ ಸಿಕ್ಕಾಗಿದೆ, ಎರಡು ಡೋಸ್ ಲಸಿಕೆ ಪಡೆದು 9 ತಿಂಗಳಾಗಿದ್ದರೆ ಅಂಥವರಿಗೆ ಪ್ರಿಕಾಷನ್ ಡೋಸ್ ಸಿಗಲಿದೆ, 15-18 ವರ್ಷದವರಿಗೆ ಲಸಿಕೆ ನೀಡಲಾಗುವುದು.
ಇದೀಗ ನೊವಾವ್ಯಾಕ್ಸ್ ಹಾಗೂ ಕೋರ್ಬೆವ್ಯಾಕ್ಸ್ ಬಳಸಲು ಅನುಮತಿ ಸಿಕ್ಕಿರುವುದರಿಂದ 5 ವರ್ಷದ ಮೇಲಿನ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ, ಹಾಗಾಗಿ ಭಾರತದ ಬಹುಪಾಲು ಜನಸಂಖ್ಯೆಗೆ ಲಸಿಕೆ ದೊರೆಯುವುದರಿಂದ ಕೊರೊನಾವನ್ನು ಶಕ್ತವಾಗಿ ಮಣಿಸಲು ಭಾರತಕ್ಕೆ ಸಾಧ್ಯವಾಗುವುದು ಎಂಬ ನಿರೀಕ್ಷೆ ಮೂಡಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
