Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಕೋವಿಡ್ 19 ಚುಚ್ಚುಮದ್ದಿನ ಅಡ್ಡಪರಿಣಾಮಗಳಿವು ಎನ್ನುತ್ತಿದ್ದಾರೆ ತಜ್ಞರು
ಕೊರೋನಾ ವೈರಸ್ ಇದುವರೆಗೂ ಹಲವು ಬಾರಿ ತನ್ನ ಸ್ವರೂಪ ಬದಲಿಸಿದ ಉದಾಹರಣೆಗಳಿವೆ. ವೈರಸ್ ಒಂದರಲ್ಲೇ ಹಲವಾರು ಪ್ರಭೇದಗಳಿವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದ ಸತ್ಯ. ರೋಗ - ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಒಂದು ಬಗೆಯ ರೋಗ - ಲಕ್ಷಣಗಳನ್ನು ಉಂಟು ಮಾಡಿದರೆ ದೇಹದಲ್ಲಿ ರೋಗ - ನಿರೋಧಕ ಶಕ್ತಿ ಬಲವಾಗಿರುವವರಿಗೆ ಯಾವುದೇ ರೋಗ - ಲಕ್ಷಣಗಳನ್ನು ಉಂಟು ಮಾಡದೆ ಕೊರೋನಾ ತನ್ನ ಇರುವಿಕೆಯನ್ನು ಸ್ಪಷ್ಟ ಪಡಿಸಿದೆ.
ಕೆಲವು ಜನರಲ್ಲಿ ಸಾಯುವ ಕೊನೆ ಕ್ಷಣದಲ್ಲಿ ಕೂಡ ಯಾವುದೇ ರೋಗ - ಲಕ್ಷಣಗಳನ್ನು ತೋರಿಸಿಲ್ಲ. ಸಂಶೋಧಕರಿಗೆ ಈ ವೈರಸ್ ಸರಿಯಾಗಿ ಅರ್ಥವಾಗಲು ಬರೋಬ್ಬರಿ ಒಂದು ವರ್ಷವೇ ಬೇಕಾಯಿತು. ಆದರೂ ಕೂಡ ಲಸಿಕೆಯನ್ನು ಪರಿಣಾಮಕಾರಿಯಾಗಿ ಸಿದ್ಧ ಪಡಿಸಿ ಜನರಿಗೆ ನೀಡುವಲ್ಲಿ ಇನ್ನು ಯೋಚನೆ ಮಾಡಬೇಕಾದಂತಹ ಪರಿಸ್ಥಿತಿ ಇದೆ.

ಸಿದ್ಧವಾಗುತ್ತಿದೆ ಕೊರೊನಾ ಲಸಿಕೆ
ಕೊರೋನಾ ವಿಚಾರಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ನಮ್ಮ ದೇಶವೂ ಸೇರಿದಂತೆ ಹೊರ ದೇಶಗಳು ಸಹ ಲಸಿಕೆ ಕಂಡು ಹಿಡಿಯುವಲ್ಲಿ ಕೈಜೋಡಿಸಿವೆ. ಕೆಲವು ಕಂಪೆನಿಗಳ ಲಸಿಕೆಗಳು ಈಗಾಗಲೇ ಕ್ಲಿನಿಕಲ್ ಟ್ರಯಲ್ ಹಂತವನ್ನೂ ದಾಟಿ ಮುಂದೆ ಸಾಗಿವೆ. ಇದರಲ್ಲಿ ಪ್ರಮುಖವಾಗಿ ನಮಗೆಲ್ಲ ಗೊತ್ತಿರುವ ಹಾಗೆ Moderna ಮತ್ತು Pfizer ಎಂಬ ಎರಡು ಸಂಸ್ಥೆಗಳು ಮುಂಚೂಣಿಯಲ್ಲಿವೆ. ಈ ಲಸಿಕೆ ತಯಾರಿಕಾ ಕಂಪನಿಗಳು ಹೇಳುತ್ತಿರುವ ಹಾಗೆ ಕೇವಲ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಕ್ಲಿನಿಕಲ್ ಟ್ರಯಲ್ ಹಂತ ಪೂರ್ಣಗೊಂಡ ಬಳಿಕ ತಕ್ಷಣವೇ ಸಾರ್ವಜನಿಕರ ಬಳಕೆಗೆ ಲಸಿಕೆಗಳು ಲಭ್ಯವಾಗಲಿವೆ ಮತ್ತು ತಮ್ಮ ಅಧ್ಯಯನದ ವರದಿ ಹೇಳುವ ಹಾಗೆ ಕೊರೋನಾ ವೈರಸ್ ಸೋಂಕಿನ ವಿರುದ್ಧ ಈ ಲಸಿಕೆಗಳು ಶೇಕಡ 95% ಪರಿಣಾಮಕಾರಿಯಾಗಿ ಜನರಲ್ಲಿ ರೋಗ - ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಆದರೆ ಆರೋಗ್ಯದ ಮೇಲೆ ಮಾರಕವಾದ ಕೆಟ್ಟ ಪರಿಣಾಮಗಳನ್ನು ಬೀರದೆ ಹೋದರೂ ತಾತ್ಕಾಲಿಕವಾಗಿ ಕೆಲವು ಅಡ್ಡ ಪರಿಣಾಮಗಳು ಲಸಿಕೆ ತೆಗೆದುಕೊಂಡ ಜನರ ಮೇಲೆ ಉಂಟಾಗುವುದು ಸತ್ಯ ಎಂದು ಲಸಿಕೆ ತಯಾರಿಕಾ ಕಂಪನಿಗಳೇ ಬಹಿರಂಗಪಡಿಸಿವೆ.

ಕೊರೊನಾ ಲಸಿಕೆ ಕುರಿತು ಜನರಲ್ಲಿ ಅರಿವು ಮೂಡಬೇಕಾಗಿದೆ
ಹಾಗಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ( ಸಿ ಡಿ ಸಿ ) ಸಂಸ್ಥೆಗಳು ಜನರಿಗೆ ಈ ಬಗ್ಗೆ ಮೊದಲೇ ಅರಿವು ಮೂಡಿಸಬೇಕಾಗಿದೆ. ಜನರೂ ಸಹ ಲಸಿಕೆಯನ್ನು ತೆಗೆದುಕೊಂಡ ಮೇಲೆ ಇಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ತಮ್ಮನ್ನು ತಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರು ಮಾಡಿಕೊಳ್ಳಬೇಕು.
ಈಗಾಗಲೇ ಸಂಶೋಧನೆಗೆ ಬಳಸಿಕೊಂಡ ಜನರಿಗೆ Moderna ಲಸಿಕೆ ನೀಡಿದ ಬಳಿಕ ಜನರೇ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಲಸಿಕೆ ಪಡೆದ ಬಳಿಕ ತಮಗೆ ಆದ ಅನುಭವಗಳನ್ನು ಒಂದೊಂದಾಗಿ ಹೇಳಿದ್ದಾರೆ. ಕೆಲವು ಜನರಿಗೆ ಮೊದಲನೇ ಡೋಸ್ ಲಸಿಕೆ ನೀಡಿದ ಸ್ಥಳದಲ್ಲಿ ಅಂದರೆ ಇಂಜೆಕ್ಷನ್ ಹಾಕಿದ ಜಾಗದಲ್ಲಿ ಹಲವು ದಿನಗಳವರೆಗೆ ನೋವು ಕಂಡು ಬಂದಿತ್ತು. ಎರಡನೇ ಬಾರಿಗೆ ಲಸಿಕೆ ಹಾಕಿದಾಗ ವಿಪರೀತ ಆಯಾಸ, ಮೈ ಕೈ ನೋವು, ಕೀಲು ನೋವು ಸಮಸ್ಯೆ ಸಾಮಾನ್ಯವಾಗಿತ್ತು. ಇನ್ನು ಕೆಲವರಿಗೆ ತಲೆ ನೋವು ವಿಪರೀತವಾಗಿ ಮೂರು ನಾಲ್ಕು ದಿನಗಳವರೆಗೆ ಕಾಡಿತ್ತು ಮತ್ತು ಕೆಲವರಿಗೆ ಎರಡನೇ ಬಾರಿಯ ಲಸಿಕೆ ಹಾಕಿದ್ದಾಗಲೂ ಕೂಡ ಇಂಜೆಕ್ಷನ್ ಚುಚ್ಚಿದ ಜಾಗದಲ್ಲಿ ದೀರ್ಘ ಕಾಲದ ನೋವು ಕಂಡು ಬಂದಿದೆ.

ಕೊರೊನಾ ಲಸಿಕೆಯಿಂದ ಕಂಡು ಬರುವ ಅಡ್ಡಪರಿಣಾಮಗಳು
ಕೆಲವು ವೈದ್ಯರು ಹೇಳುವಂತೆ ಲಸಿಕೆ ನೀಡಿದ ಬಳಿಕ ಜನರಲ್ಲಿ ಮತ್ತೊಮ್ಮೆ ವಿಪರೀತ ಜ್ವರ ಕಾಣಿಸಿಕೊಂಡ ಉದಾಹರಣೆಗಳು ಇವೆ. ಇದ್ದಕ್ಕಿದ್ದಂತೆ ಮೈ ಕೈ ನಡುಗುವುದು, ವಿಪರೀತ ಚಳಿ ಮತ್ತು ಚರ್ಮದ ಮೇಲೆ ಕೆಂಪು ಬಣ್ಣದ ಗುಳ್ಳೆಗಳು ಕಂಡು ಬಂದಿವೆ. ಆದರೆ ಸುಮಾರು 12 ಘಂಟೆಗಳು ಕಳೆದ ನಂತರ ಈ ಎಲ್ಲಾ ರೋಗ - ಲಕ್ಷಣಗಳು ತಾವಾಗಿಯೇ ಕಡಿಮೆಯಾಗಿವೆ. ಹಾಗಾಗಿ ಲಸಿಕೆ ತೆಗೆದುಕೊಳ್ಳುವ ಜನರಿಗೆ ಸರ್ಕಾರಗಳು ಮತ್ತು ಆರೋಗ್ಯ ಸಂಸ್ಥೆಗಳು ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ.
ಲಸಿಕೆ ತಯಾರಿಕಾ ಕಂಪನಿಗಳು ಹೇಳುವ ಹಾಗೆ ಯಾವುದೇ ಹೊಸದಾಗಿ ತಯಾರಾದ ಲಸಿಕೆಗಳು ಕೆಲವು ಅಡ್ಡ - ಪರಿಣಾಮಗಳನ್ನು ಹೊಂದಿರುತ್ತವೆ. ಆದರೆ ಇವು ತುಂಬಾ ವಿರಳವಾಗಿರುತ್ತವೆ. ಈಗ ಕೊರೋನಾದ ವಿಚಾರಕ್ಕೆ ಸಂಬಂಧ ಪಟ್ಟಂತೆ ತಯಾರಾಗಿ ಹೊರ ಬರುತ್ತಿರುವ ಲಸಿಕೆಗಳು ಕೂಡ ಜನರಿಗೆ ಕೆಲವೊಂದು ಅಡ್ಡ - ಪರಿಣಾಮಗಳನ್ನು ಉಂಟು ಮಾಡಬಹುದು. ಆದರೆ ಇವು ಅಷ್ಟೇನು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇಲ್ಲಿ ಕೊರೋನಾದ ವಿರುದ್ಧ ರಕ್ಷಣೆ ಪಡೆಯುವುದು ಮಾತ್ರ ಮುಖ್ಯವಾಗಿರುತ್ತದೆ. ಹಾಗಾಗಿ ಕೆಲವು ಆರೋಗ್ಯದ ಅಸ್ವಸ್ಥತೆಗಳು ಆರಂಭದಲ್ಲಿ ಎದುರಾದರೂ ಆನಂತರದಲ್ಲಿ ಮತ್ತೊಮ್ಮೆ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತದೆ.

ಹೆದರಬೇಕಾಗಿಲ್ಲ
Pfizer ಲಸಿಕೆಗೆ ಸಂಬಂಧ ಪಟ್ಟಂತೆ ಜರ್ಮನ್ ಕಂಪನಿ BioNtech ಹೇಳಿರುವ ಹಾಗೆ ಜನರಿಗೆ ಇದುವರೆಗೂ ಪ್ರಯೋಗ ಮಾಡಿದ ಲಸಿಕೆಗಳಲ್ಲಿ ಗಂಭೀರ ಸ್ವರೂಪದ ಆರೋಗ್ಯದ ಅಡ್ಡ - ಪರಿಣಾಮಗಳು ಎಲ್ಲೂ ಕಂಡು ಬಂದಿಲ್ಲ ಕೇವಲ ತಲೆ ನೋವು ಮತ್ತು ದೈಹಿಕ ಆಯಾಸ ಮಾತ್ರ ಕೆಲವರಲ್ಲಿ ಕಂಡು ಬಂದ ಬಗ್ಗೆ ವರದಿಯಾಗಿವೆ.
ಸಂಶೋಧನಾ ಸಂಸ್ಥೆಗಳು ಹೇಳುವ ಹಾಗೆ ಈ ಮೇಲಿನ ಎರಡು ಲಸಿಕೆಗಳು ಜನರಲ್ಲಿ ಆರೋಗ್ಯದ ಅಡ್ಡ - ಪರಿಣಾಮಗಳನ್ನು ಉಂಟು ಮಾಡುವುದಂತೂ ಸತ್ಯ. ಕೆಲವರಿಗೆ ಅಡ್ಡ - ಪರಿಣಾಮಗಳು ವಿಪರೀತವಾಗಿದ್ದರೆ ಇನ್ನು ಕೆಲವರಿಗೆ ಸೌಮ್ಯವಾಗಿರುತ್ತದೆ, ಆದರೆ ತಾತ್ಕಾಲಿಕವಾಗಿ ಮಾತ್ರ ಕಂಡು ಬರುತ್ತವೆ. ತಜ್ಞರು ಹೇಳುವ ಪ್ರಕಾರ ಜನರಿಗೆ ಲಸಿಕೆಗಳನ್ನು ನೇರವಾಗಿ ನೀಡುವ ಮುಂಚೆ ಈ ಎಲ್ಲಾ ವಿಚಾರಗಳನ್ನು ಮೊದಲು ಮನದಟ್ಟು ಮಾಡುವ ಪ್ರಯತ್ನ ಮಾಡಬೇಕು.



Click it and Unblock the Notifications











