Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಭಾರತಕ್ಕೂ ಕಾಲಿಟ್ಟಿದೆ ಅಪಾಯಕಾರಿ ರೂಪಾಂತರ XE, ನಿರ್ಲಕ್ಷ್ಯ ಮಾಡಿದರೆ ಅಪಾಯ ತಪ್ಪಿದ್ದಲ್ಲ
ಈ ಕೊರೊನಾ ಕತೆ 'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ...' ಎಂಬಂತಿದೆ. ಈಗಷ್ಟೇ ಕೊರೊನಾ ಆತಂಕ ದೂರಾಗಿತ್ತು, ದೇಶದ ರಾಜ್ಯಗಳಲ್ಲಿ ಮಾಸ್ಕ್ ನಿಯಮವನ್ನು ಸಡಿಲಗೊಳಿಸಿತ್ತು. ಎಲ್ಲಾ ಕಡೆ ಊರ ಹಬ್ಬಗಳು, ಜಾತ್ರೆಗಳು, ಹೆಚ್ಚು ಜನ ಸೇರಿದ ಮದುವೆಗಳು ನಡೆಯುತ್ತಿವೆ. ಎಷ್ಟೋ ಕಂಪನಿಗಳು ವರ್ಕ್ ಫ್ರಂ ಹೋಂ ಇನ್ನಿಲ್ಲ, ಆಫೀಸ್‌ಗೆ ಬನ್ನಿ ಎಂದು ಕರೆದಿದೆ, ಹೀಗೆ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿರುವಾಗ ಮತ್ತೆ ಆತಂಕ ಪಡುವ ಸುದ್ದಿ ಕೇಳಿ ಬಂದಿದೆ. ಹೌದು ಯುಕೆಯಲ್ಲಿ ಪತ್ತೆಯಾಗಿದ್ದ ಅಪಾಯಕಾರಿ ಹೊಸ ಕೊರೊನಾ ರೂಪಾಂತರ XE ಇದೀಗ ಮುಂಬೈಯಲ್ಲಿ ಪತ್ತೆಯಾಗಿದೆ.

XE ಕೊರೊನಾ ರೂಪಾಂತರ
ಇದು ಹೈಬ್ರಿಡ್ ರೂಪಾಂತರ ತಳಿಯಾಗಿದ್ದು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕೊರೊನಾ ವೈರಸ್ ಉಂಟಾಗಿರುವ ಹೊಸ ಕೊರೊನಾ ರೂಪಾಂತರ ತಳಿ ಇದಾಗಿದೆ.
ಈ ವೈರಸ್ ತಗುಲಿರುವ ವ್ಯಕ್ತಿಯ ದೇಹದಲ್ಲಿ ಒಂದಕ್ಕಿಂತ ಹೆಚ್ಚಿನ ಕೊರೊನಾ ವೈರಸ್ ಪತ್ತೆಯಾಗಿದೆ.
ಇದರಿಂದಾಗಿ ಈ ಹೊಸ ರೂಪಾಂತರ ಮತ್ತೊಂದು ಸಾಂಕ್ರಾಮಿಕವಾಗುವ ಲಕ್ಷಣಗಳನ್ನು ಹೊಂದಿದೆ.

XE ರೂಪಾಂತರ ಇತರ ರೂಪಾಂತರಕ್ಕಿಂತ ಶೇ.10ರಷ್ಟು ವೇಗವಾಗಿ ಹರಡುವುದು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ XE ರೂಪಾಂತರ ಒಮಿಕ್ರಾನ್ ರೂಪಾಂತರಗಳಾದ BA.1 ಮತ್ತು BA.2 ತಳಿಗಳು ಸೇರಿ ಉಂಟಾಗಿದೆ.
ಈ ಹೊಸ ರೂಪಾಂತರ ತುಂಬಾ ವೇಗವಾಗಿ ಅಂದರೆ ಈ ಹಿಂದೆ ಕಂಡು ಬಂದ ಎಲ್ಲಾ ಕೊರೊನಾ ವೈರಸ್ ತಳಿಗಳಿಗಿಂತ ಶೇ.10ರಷ್ಟು ವೇಗವಾಗಿ ಹರಡುವುದು.

ಇದುವರೆಗೆ ಎಷ್ಟು ಕೇಸ್‌ಗಳು ಪತ್ತೆಯಾಗಿದೆ?
ಯುಕೆಯಲ್ಲಿ 2022 ಜನವರಿ 19ಕ್ಕೆ ಮೊದಲ ಕೇಸ್ ಪತ್ತೆಯಾಗಿತ್ತು. ಮಾರ್ಚ್ 25ಕ್ಕೆ 637 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಕಳೆದ ವಾರ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ ಮಾರ್ಚ್ ಕೊನೆಯ ವಾರ ಹಾಗೂ ಏಪ್ರಿಲ್ ಮೊದಲ ವಾರ ತಲುಪುವಷ್ಟರಲ್ಲಿ4.9 ಮಿಲಿಯನ್ ಜನರಲ್ಲಿ ಈ ಸೋಂಕು ಹರಡಬಹುದು ಎಂದು ಅಂದಾಜು ಮಾಡಲಾಗಿದೆ.

XE ರೂಪಾಂತರ ಏನಾದರೂ ಹೊಸ ಲಕ್ಷಣಗಳನ್ನು ಹೊಂದಿದೆಯೇ?
ಇದುವರೆಗೆ ಈ ಹೊಸ ರೂಪಾಂತರ ಯಾವುದೇ ಹೊಸ ಲಕ್ಷಣಗಳನ್ನು ಹೊಂದಿಲ್ಲ, ಇದರ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.
ಲಸಿಕೆ ಪಡೆದವರಲ್ಲಿ ಶೀತವಷ್ಟೇ ಕಾಣಿಸಿಕೊಂಡಿದೆ. ಕೆಲವರಲ್ಲಿ ಮೈಕೈ ನೋವು, ಉಸಿರಾಟದ ತೊಂದರೆ, ಮೈ ಬಿಸಿಯಾಗುವುದು, ರುಚಿ, ವಾಸನೆ ತಿಳಿಯದಿರುವುದು ಈ ಲಕ್ಷಣಗಳು ಕಂಡು ಬಂದಿದೆ.

ಹೊಸ ರೂಪಾಂತರ ತಡೆಗಟ್ಟುವುದು ಹೇಗೆ?
ನಿರ್ಲಕ್ಷ್ಯ ಮಾಡಬೇಡಿ, ಈ ಹಿಂದೆ ಪಾಲಿಸಿದ ಕೊರೊನಾ ನಿಯಮಗಳನ್ನು ಮುಂದುವರೆಸಿ, 2 ಡೋಸ್ ಲಸಿಕೆ ಪಡೆಯಿರಿ, ಬೂಸ್ಟರ್ ಕೂಡ ಪಡೆಯಿರಿ.



Click it and Unblock the Notifications
